Thursday, June 2, 2016

ಕಾರಿಗೆ ಲಾರಿ ಡಿಕ್ಕಿ ನಾಲ್ವರಿಗೆ ಗಾಯ:


     ದಿನಾಂಕ 01.06.2016 ರಂದು ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ವಾಸವಾಗಿರುವ ಪಿರ್ಯಾದಿ ಎನ್. ಬಿ. ನಾಗೇಶ ಎಂಬವರು ಅವರ ಬಾಪ್ತು ಕಾರು ನಂ. ಕೆಎ-12ಎನ್-6977 ರ ಕಾರಿನಲ್ಲಿ ಮೈಸೂರಿನಿಂದ ಮಡಿಕೇರಿಗೆ ಬರುತ್ತಿದ್ದು ಬೋಯಿಕೇರಿ ಗ್ರಾಮದ ತಿರುವು ರಸ್ತೆಯಲ್ಲಿ ತಲುಪಿದಾಗ ಎದುರು ಗಡೆಯಿಂದ ಕೆಎ-05ಎಸಿ-4533 ರ ಲಾರಿ ಚಾಲಕನು ಲಾರಿಯನ್ನುಅದರ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ನಾಗೇಶ್, ಚಂದ್ರಕಲಾ, ನಿಶ್ಮ, ಕೌಶಿಕ್‌ ರವರಿಗೆ ಗಾಯಗಳಾಗಿ ಕಾರು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ನಗರ ಸಭಾ ಸದಸ್ಯೆಯ ದಾರಿ ತಡೆದು ಕೊಲೆ ಬೆದರಿಕೆ:

     ಮಡಿಕೇರಿ ನಗರದ ದೇಚೂರು ನಿವಾಸಿ ಪಿರ್ಯಾದಿ ಶ್ರೀಮತಿ ಲಕ್ಷ್ಮೀ ರವರು ನಗರ ಸಭೆ ಸದಸ್ಯರಾಗಿದ್ದು, ದಿನಾಂಕ 01-06-2016 ರಂದು ಸಮಯ ಬೆಳಿಗ್ಗೆ 10.45 ಗಂಟೆಗೆ ತಮ್ಮ 9ನೇ ವಾರ್ಡಿನ ಫಾತಿಮ ಎಂಬುವವರ ಮನೆ ಕೆಲಸವನ್ನು ನೋಡಲೆಂದು ಭಗವತಿ ನಗರಕ್ಕೆ ಹೋದಾಗ ಫಾತಿಮ ಎಂಬುವವರ ಮನೆಯ ಹಿಂಭಾಗದಲ್ಲಿ ವಾಸವಿರುವ ಆರೋಪಿಗಳಾದ ಶೇಕ್ ಅಬ್ದುಲ್ ರೆಹಮಾನ್ ಮತ್ತು ಅಸ್ಮತ್ ರವರು ಪಿರ್ಯಾದಿಯವರನ್ನು ದಾರಿ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕತ್ತಿಯಿಂದ ಕಡಿದು ಸಾಯಿಸುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರರಣ ದಾಖಲಾಗಿದೆ.