Friday, June 3, 2016

ಮಹಿಳೆ ಮಾನಭಂಗಕ್ಕೆ ಯತ್ನ: 

      ಸೋಮವಾರಪೇಟೆ ತಾಲೂಕು ಹಾನಗಲ್ಲು ಗ್ರಾಮದ ನಿವಾಸಿ ವಿಶ್ವನಾಥ ಎಂಬವರ ಪತ್ನಿ ಶ್ರೀಮತಿ ತುಳಸಿ ಯವರು ದಿನಾಂಕ 02-06-2016 ರಂದು ಸಮಯ 11.00 ಗಂಟೆಗೆ ತನ್ನ ಮನೆಯಲ್ಲಿರುವಾಗ್ಗೆ ಅದೇ ಗ್ರಾಮದ ನಿವಾಸಿ ಸುರೇಶ ಎಂಬ ವ್ಯಕ್ತಿ ಮನೆಯ ಒಳಗೆ ಬಂದು ಮನೆಯೊಳಗೆ ಆಟವಾಡಿಕೊಂಡಿದ್ದ ಪಕ್ಕದ ಮನೆಯ ರೀತು ಎಂಬ ಬಾಲಕಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಮನೆಯ ಮುಂದಿನ ಬಾಗಿಲು ಹಾಕಿ ಶ್ರೀಮತಿ ತುಳಸಿಯವರ ಕೈಯನ್ನು ಹಿಡಿದು ಮಲಗುವ ಕೋಣೆಗೆ ಎಳೆದು ಕೊಂಡು ಹೋಗಿ ಬಟ್ಟೆಗಳನ್ನು ಎಳೆದು ಹಾಕಿ ಎದೆಯ ಭಾಗಕ್ಕೆ ಕೈ ಹಾಕಿ ಪರಚಿ ಕೈಯಿಂದ ಫಿರ್ಯಾದಿಯವರ ಎಡ ಕೆನ್ನೆಗೆ ಹೊಡೆದು ಕೂದಲನ್ನು ಹಿಡಿದು ಎಳದಾಡಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪ್ರಾಪ್ತ ವಯಸ್ಸಿನ ಹುಡುಗಿ ಕಾಣೆ: 

     ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೆಗ್ಗಳ ಗ್ರಾಮದ ಬೂದಿಮಾಳ ಎಂಬಲ್ಲಿ ವಾಸವಾಗಿರುವ ಫಿರ್ಯಾದಿ ಹೆಚ್.ಎ ರಾಯ್ ಎಂಬವರ ಮಗಳು ಧಾಮಿನಿಯು 9ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 31-05-16ರಂದು ಪಿರ್ಯಾದಿ, ಅವರ ಹೆಂಡತಿ ಶಾಲಿನಿ, ಮಗಳು ಧಾಮಿನಿ ಹಾಗೂ ಮಗ ಪೂವಣ್ಣ, ರವರು ರಾತ್ರಿ ಊಟ ಮಾಡಿ ಮಲಗಿದ್ದು, ದಿನಾಂಕ 01-06-16ರಂದು ಬೆಳಿಗ್ಗೆ 06-00ಗಂಟೆಗೆ ಎದ್ದು ನೋಡುವಾಗ ಪಿರ್ಯಾದಿಯವರ ಮಗಳು ಧಾಮಿನಿಯು ಮನೆಯಲ್ಲಿ ಇಲ್ಲದೆ ಕಾಣೆಯಾಗಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂಗತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬುದ್ದಿ ಭ್ರಮಣೆಗೊಂದ ವ್ಯಕ್ತಿ ಆತ್ಮಹತ್ಯೆ: 

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದ ನಿವಾಸಿ ಸಿ.ಟಿ. ಸುಬ್ಬಯ್ಯ ಎಂಬವರ ಮಗ ಭೀಮಯ್ಯ@ ಬಿಪಿನ್ ನು ದಿನಾಂಕ 01-06-16 ರಂದು ಊರಿನಲ್ಲಿ ಬೇಡು ಪಾರಣ ಹಬ್ಬದಲ್ಲಿ ದೇವರ ವೇಷವನ್ನು ಹಾಕಿದ್ದು, ಹಬ್ಬ ಮುಗಿದು ರಾತ್ರಿ ಸಮಯ ಸುಮಾರು 8-00ಪಿ.ಎಂ.ಗೆ ಮನೆಗೆ ಬಂದು ಬುದ್ದಿ ಭ್ರಮಣೆ ಯಾದಂತೆ ವರ್ತಿಸುತ್ತಿದ್ದು ನಂತರ ಅಂದು ರಾತ್ರಿ ಸಮಯ 9-30ಪಿ.ಎಂ.ಗೆ ಮನೆಯಿಂದ ಹೊರಗಡೆ ಓಡಿ ಹೋಗಿ ಪಿರ್ಯಾದಿಯವರ ಗದ್ದೆಯಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ: 

     ಸೋಮವಾರಪೇಟೆ ತಾಲೂಕು ಬಾಣವಾರ ಗ್ರಾಮದ ನಿವಾಸಿ ಅನಿಲ ಎಂಬವರು ದಿನಾಂಕ 01-06-2016 ರಂದು ಮೊಟಾರ್ ಸೈಕಲಿನಲ್ಲಿ ಹಿಂಬದಿಯಲ್ಲಿ ತನ್ನ ತಮ್ಮ ಸುನಿಲ ನನ್ನು ಕೂರಿಸಿಕೊಂಡು ಸೋಮವಾರಪೇಟೆ ನಗರದಿಂದ ಬಾಣವಾರ ರಸ್ತೆಯಲ್ಲಿ ಹೋಗುತ್ತಿರುವಾಗ ಆರೋಪಿಗಳಾದ ಸಂತೋಷ ಹಾಗು ಆತನ ಗೆಳೆಯ ಕೆಎ-46 ಇ-6722 ರ ಮೋಟಾರ್ ಸೈಕಲಿನಲ್ಲಿ ಬಂದು ಅನಿಲ್ ರವರ ಬೈಕನ್ನು ಅಡ್ಡಗಟ್ಟಿ ಬೈಕಿನ ಡೂಮ್ ಹೊಡೆದು ಹಾಕಿ ಅನಿಲ್ ರವರ ತಮ್ಮನ ಮೇಲೆ ಕೈಯಿಂದ ಹಲ್ಲೆ ನಡೆಸಿ ಮೊಬೈಲನ್ನು ಒಡೆದು 6,000 ನಷ್ಟ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಖಾಸಗಿ ಬಸ್ಸಿಗೆ ಸರ್ಕಾರಿ ಬಸ್ಸು ಡಿಕ್ಕಿ, 

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಿಟ್ಟಂಗಾಲ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಫಿರ್ಯಾದಿಯವರು ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಬಸ್ಸನ್ನು ವಿರಾಜಪೇಟೆ ಕಡೆಯಿಂದ ಬೆಂಗಳೂರು ಕಡೆಗೆ ಚಾಲಿಸಿಕೊಂಡು ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಡಿಕ್ಕಿಯಾಗಿದ್ದು, ಎರಡೂ ಬಸ್ಸುಗಳು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.