Monday, June 13, 2016

ವ್ಯಕ್ತಿಯ ಜಾತಿ ನಿಂದನೆ, ಕೊಲೆ ಬೆದರಿಕೆ:

     ದಿನಾಂಕ 12-06-16ರಂದು ಸಮಯ ರಾತ್ರಿ 8-00ಗಂಟೆಗೆ ಪಿರ್ಯಾದಿ ಹೆಚ್.ಬಿ. ಉಮೇಶ್, ಉಪವಲಯ ಅರಣ್ಯಾಧಿಕಾರಿ, ಮಾಕುಟ್ಟ ಇವರು ತನಿಖಾ ಠಾಣೆಯಲ್ಲಿ ಕರ್ತವ್ಯದ ಉಸ್ತುವಾರಿಯಲ್ಲಿರುವಾಗ್ಗೆ, ಜಗದೀಶ್, ದ್ವಿತೀಯ ದರ್ಜೆ ಸಹಾಯಕ ರವರು ವಿಪರೀತ ಮದ್ಯಪಾನ ಮಾಡಿ ಪಿರ್ಯಾದಿಯವರ ಮೇಲೆ ವಿನಾ ಕಾರಣ ಹಲ್ಲೆ ನಡೆಸಿ ಜಾತಿ ನಿಂದನೆಯನ್ನು ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಅಲ್ಲದೆ ಗುಂಡು ಹೊಡೆದು ಸಾಯಿಸುತ್ತೇನೆ ಮತ್ತು ಕೆಲಸದಿಂದ ಸಪ್ಪೆಂಡ್ ಮಾಡಿಸುತ್ತೇನೆ ಎಂಬುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಮೋಟಾರ್ ಸೈಕಲ್ ಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

     ಪರಿಯಾಪಟ್ಟಣ ತಾಲೂಕಿನ ಮುಮ್ಮುಕಾವಲು ಗ್ರಾಮದ ನಿವಾಸಿ ಎಂ. ಪ್ರಶಾಂತ್ ಎಂಬವರು ದಿನಾಂಕ 12/06/2016 ರಂದು ಅವರ ಸ್ನೇಹಿತ ಮಣಿಕಂಠರವರೊಂದಿಗೆ ಅವರ ಬಾಪ್ತು ನಂ. KA01EU2329 ರ ಮೋಟರು ಸೈಕಲ್ ನಲ್ಲಿ ಪಾಲಿಬೆಟ್ಟಕ್ಕೆ ಕಟ್ಟಡ ಕೆಲಸಕ್ಕೆ ಬಂದು ಕೆಲಸಮುಗಿಸಿಕೊಂಡು ವಾಪಾಸ್ಸು ಮನೆಗೆ ಹೋಗುತ್ತಿರುವಾಗ್ಗೆ ಮಾಲ್ದಾರೆ ಗ್ರಾಮದ ಗೂಡ್ಲೂರು ಜಂಕ್ಷನ್ ಬಳಿ ಸಮಯ 19.00 ಗಂಟೆಗೆ KA12-Z-4729 ರ ಕಾರಿನ ಚಾಲಕ ತನ್ನ ಕಾರನ್ನು ಅಜಾಗೂಕತೆಯಿಂದ ಚಾಲನೆ ಮಾಡಿಕೊಂಡು ಯಾವುದೇ ಸೂಚನೆ ನೀಡದೆ ಬಲಭಾಗಕ್ಕೆ ತಿರುಗಿಸಿ ಪಿರ್ಯಾದಿಯವರ ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿ ಹಾಗೂ ಮೋಟಾರ್ ಸೈಕಲ್ ನಲ್ಲಿಂದ ಮಣಿಕಂಠ ರವರಿಗೆ ಶರೀರದ ಭಾಗಗಳಿಗೆ ಗಾಯನೋವುಂಟಾಗಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.