Friday, June 17, 2016

ಜಾಗಕ್ಕೆ ಅಕ್ರಮ ಪ್ರವೇಶ, ಹಲ್ಲೆ:

         ದಿನಾಂಕ 16-6-2016ರಂದು ಬೆಳಿಗ್ಗೆ ಸಮಯ 8:30 ಗಂಟೆಗೆ ಆರೋಪಿಗಳಾದ ಬಾಣಾವರ ಗ್ರಾಮದ ನಿವಾಸಿಗಳಾದ ಶಿವಪ್ಪ, ಜಯಮ್ಮ, ನೀಲ, ಮತ್ತು ಮೀನಾಕ್ಷಿ ರವರು ಪಿರ್ಯಾದಿ ಪ್ರೇಮ ಎಂಬವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಉಳುಮೆ ಹಾಗೂ ಇತರೆ ಕೆಲಸಗಳನ್ನು ಮಾಡುತ್ತಿದ್ದು, ಅದನ್ನು ತಡೆಯಲು ಹೋದಾಗ ಆರೋಪಿಗಳೆಲ್ಲ ಸೇರಿ ಫಿರ್ಯಾದಿ ಪ್ರೇಮರವರ ಮೇಲೆ ಕೈಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದ್ದು, ಎಳೆದಾಡಿ ಬಟ್ಟೆಗಳನ್ನು ಹರಿದು ಹಾಕಿ ಕೆಳಗೆ ಬೀಳಿಸಿ ಒದ್ದು, ತಾಳಿ ಜೈನನ್ನು ಆರೋಪಿ ನೀಲರವರು ಕಿತ್ತು ತೆಗೆದು ಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೀವನದಲ್ಲಿ ಜಿಗುಪ್ಸೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

       ವಿರಾಜಪೇಟೆ ನಗರ ಠಾಣಾ ಸರಹದ್ದಿನ ನೆಹರು ನಗರ ನಿವಾಸಿ ಪಿರ್ಯಾದಿ ಎಂ.ಬಿ. ಬಾಬು ಎಂಬವರ ಮಗ ವಿಜು @ ವಿಷ್ಣು ಎಂಬುವರಿಗೆ ವಿಪರೀತ ಮದ್ಯ ಸೇವನೆ ಮಾಡುವ ಅಭ್ಯಾಸವಿದ್ದು, ಮದ್ಯಪಾನ ಮಾಡಿದರೆ ಮಾನಸಿಕ ಸ್ಥಿರತೆ ಇಲ್ಲದ ಸ್ಥಿತಿಯಲ್ಲಿ ವರ್ತಿಸುತ್ತಿದ್ದು, ಅದರಂತೆ ದಿನಾಂಕ 14-6-2016 ರಂದು ಪಿರ್ಯಾದಿಯವರ ಮಗ ವಿಜು @ ವಿಷ್ಣು ಎಂಬುವರು ಸೀತಾ ಲಕ್ಷ್ಮೀ ಲಾಡ್ಜ್ ನಲ್ಲಿ ರೂಮ್ ಮಾಡಿ ದಿನಾಂಕ 16-6-2016 ರಂದು 4-00 ಪಿಎಂ.ನಿಂದ 8-15 ಪಿ.ಎಂ.ನ ನಡುವಿನ ಅವಧಿಯ ಮಧ್ಯೆ ಮದ್ಯಪಾನ ಮಾಡಿ ಜೀವನದಲ್ಲಿ ಜಿಗುಪ್ಸೆಗೊಂಡು ಜೊತೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಮೃತಪಟ್ಟಿರು ವುದಾಗಿದೆ. ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.