Thursday, June 9, 2016

ವಿನಾಕಾರಣ ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ:

     ವಿರಾಜಪೇಟೆ ತಾಲೂಕು ಶ್ರೀಮಂಗಲ ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಪಣಿಎರವರ ಬೊಳಚಿ ಎಂಬವರು ದಿನಾಂಕ 31-5-2016 ರಂದು ನಾಥಂಗಾಲ ಗ್ರಾಮದಲ್ಲಿ ವಾಸವಾಗಿರುವ ತನ್ನ ಮಗಳ ಮನೆಗೆ ಹೋಗಿದ್ದು, ಅಲ್ಲೇ ಪಕ್ಕದಲ್ಲಿ ವಾಸವಾಗಿರುವ ಫಿರ್ಯಾದಿಯ ಅಕ್ಕನ ಮಗ ಕರ್ಪ ಫಿರ್ಯಾದಿ ಮಗಳ ಮನೆಗೆ ಬಂದು ವಿನಾ ಕಾರಣ ಜಗಳ ಮಾಡಿ ಕತ್ತಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು, ದಿನಾಂಕ ನೋವು ಜಾಸ್ತಿಯಾದ ಕಾರಣ ಕುಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Posted by P.Rajendra Prasad, IPS at 6:19 PM
Wednesday, June 8, 2016
ಜೀವನದಲ್ಲಿ ಜಿಗುಪ್ಸೆ ವ್ಯಕ್ತಿ ಆತ್ಮಹತ್ಯೆ:

       ವಿರಾಜಪೇಟೆ ತಾಲೂಕು, ತೋರ ಗ್ರಾಮದ ನಿವಾಸಿ ಹೆಚ್.ಟಿ, ಕೃಷ್ಣಪ್ಪ ಎಂಬವರ ಸಹೋದರ ವಸಂತ ಸುಮಾರು 18 ವರ್ಷಗಳ ಹಿಂದೆ ತೋರ ಗ್ರಾಮದ ಲತ ಎಂಬುವವರನ್ನು ಮದುವೆಯಾಗಿದ್ದು ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದು ಈಗ್ಗೆ 8 ವರ್ಷಗಳ ಹಿಂದೆ ವಸಂತನ ಪತ್ನಿ ವಂಸತನನ್ನು ಬಿಟ್ಟು ಅವರ ತಂದೆ ಮನೆಯಲ್ಲಿ ಇದ್ದು ಇದೇ ವಿಚಾರದಲ್ಲಿ ತುಂಬಾ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 7-6-2016 ರಂದು ಅವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ ಒಬ್ಬರ ಸಾವು ಇಬ್ಬರಿಗೆ ಗಾಯ:

        ಚಾಲಕನ ನಿರ್ಲಕ್ಷ್ಯದಿಂದ ಕಾರು ಅಪಘಾತಕ್ಕೀಡಾಗಿ ವ್ಯಕ್ತಿಯೊಬ್ಬರು ಸಾವನಪ್ಪಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ವಿರಾಜಪೇಟೆ ತಾಲೂಕು ಕಡಂಗ ಮರೂರು ಗ್ರಾಮದ ನಿವಾಸಿ ಬಿ.ಎ. ಮಾದಯ್ಯ, ಸುಬ್ರಮಣಿ ಹಾಗು ಟಿಟು ಎಂಬವರು ದಿನಾಂಕ 7-6-2016 ರಂದು ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಕಾರಿನಲ್ಲಿ ಬರುತ್ತಿದ್ದಾಗ ಚಾಲಕ ಟಿಟುರವರು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮವಾಗಿ ಸಂಪಾಜೆ ಬಳಿ ಕಾರು ರಸ್ತೆಬದಿಯ ತಡೆಬೇಲಿಗೆ ಡಿಕ್ಕಿಯಾಗಿ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸುಬ್ರಮಣಿಯವರಿಗೆ ತೀವ್ರತರದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬಿ.ಎ. ಮಾದಯ್ಯ ಹಾಗು ಚಾಲಕ ಟಿಟು ರವರು ಸಹ ಗಾಯಗೊಂಡಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಗಾಂಜಾ ವಶ, ವ್ಯಕ್ತಿಯ ಬಂಧನ:

       
ಕುಶಾಲನಗರ ಗ್ರಾಮಾಂತರ ಠಾಣಾ ಸರದಹ್ದಿನ ತೊರೆನೂರು ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾವನ್ನು ವ್ಯಕ್ತಿಯೊಬ್ಬರು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿನ ಪೊಲೀಸರು, ತೊರೆನೂರು ಗ್ರಾಮದ ನಿವಾಸಿ ಆರೋಪಿ ಟಿ.ಕೆ. ಲಕ್ಷ್ಮಪ್ಪ ಎಂಬವರನ್ನು ವಶಕ್ಕೆ ಪಡೆದು ಅವರಿಂದ 12 ಗ್ರಾಂ ತೂಕದ 8 ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ:

         ಕೆಲವು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ಬಜೆಗುಂಡಿ ಗ್ರಾಮದ ನಿವಾಸಿ 56 ವರ್ಷ ಪ್ರಾಯದ ಮಣಿ ಎಂಬ ವ್ಯಕ್ತಿ ಕೆಲವು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡುಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಗೆ ಬಸ್ ಡಿಕ್ಕಿ, ಮೃತಪಟ್ಟ ಸವಾರ:

         ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮದೆನಾಡು ಗ್ರಾಮದ ನಿವಾಸಿ ಬಾಲಕೃಷ್ಣ ಎಂಬವರು ದಿನಾಂಕ 7-6-2016 ರಂದು ತಮ್ಮ ಮೋಟಾರ್ ಸೈಕಲ್ ನಲ್ಲಿ ಕಲ್ಲುಗುಂಡಿಯಲ್ಲಿರುವ ತನ್ನ ಅತ್ತೆ ಮನೆಗೆ ಹೋಗುತ್ತಿರುವಾಗ ಎದುರುಗಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ಸು ಮೋಟಾರ್ ಸೈಕಲ್ ಗೆ ಡಿಕ್ಕಿಯಾದ ಪರಿಣಾಮ, ಮೋಟಾರ್ ಸೈಕಲ್ ಸವಾರ ಬಾಲಕೃಷ್ಣ ರವರು ತೀವ್ರವಾಗಿ ಗಾಯಗೊಂಡು ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಪ್ರಾಪ್ತ ಹುಡುಗಿ ಕಾಣೆ ಅಪಹರಣ ಶಂಕೆ:

      ವಿರಾಜಪೇಟೆ ತಾಲೂಕು ಹೆಗ್ಗಳ ಗ್ರಾಮದ ನಿವಾಸಿ ಮೊಣ್ಣಪ್ಪ ಎಂಬವರ ಮಗಳಾದ ಜಮುನಾಳು ವಿರಾಜಪೇಟೆ ನಗರದ ಜ್ಯೂನಿಯರ್ ಕಾಲೇಜಿನಲ್ಲಿ 2ನೇ ಪಿಯುಸಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದು, ದಿನಾಂಕ 04-06-16ರಂದು ಸಮಯ ರಾತ್ರಿ 20-00ಗಂಟೆಗೆ ಪಿರ್ಯಾದಿಯವರು, ಅವರ ಹೆಂಡತಿ ವನಿತಾ, ಹಾಗೂ ಮಕ್ಕಳಾದ ಮೋಹನ್ ಮತ್ತು ಜಗಧೀಶ್ ರವರೊಂದಿಗೆ ಊಟ ಮಾಡುತ್ತಿರುವಾಗ ಜಮುನಾಳು ಬಾತ್ ರೂಂಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಸುಮಾರು 1/2 ಗಂಟೆಯಾದರೂ ವಾಪಾಸ್ಸು ಬಾರದೆ ಕಾಣೆಯಾಗಿದ್ದು ಈಕೆಯನ್ನು ಯಾರೋ ಅಪಹರಣ ಮಾಡಿರಬಹುದೆಂದು ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಗಂಡನಿಂದ ಹೆಂಡತಿಯ ಕೊಲೆ:

      ಕುಡಿದ ಅಮಲಿನಲ್ಲಿ ಗಂಡ ಹೆಂಡತಿ ಜಗಳವಾಡಿ ಗಂಡ ತನ್ನ ಹೆಂಡತಿಯನ್ನು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಹಾಲುಗುಂದ ಗ್ರಾಮದಲ್ಲಿ ನಡೆದಿದೆ. ಪಣಿಎರವರ ಬೊಳ್ಳಿ ಮತ್ತು ಪತ್ನಿ ಗೌರು ಎಂಬವರು ಹಾಲುಗುಂದ ಗ್ರಾಮದ ಪಂದಿಕಂಡ ಬೋಪಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದು, ದಿನಾಂಕ 7-6-2016 ರಂದು ಸಂಜೆ ಇಬ್ಬರು ಮದ್ಯ ಸೇವಿಸಿ ಪರಸ್ಪರ ಜಗಳವಾಡಿಕೊಂಡಿದ್ದು, ಗಂಡ ಬೊಳ್ಳಿ ದೊಣ್ಣೆಯಿಂದ ಪತ್ನಿ ಗೌರು ಮೇಲೆ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಗೌರು ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.