Wednesday, June 15, 2016

ಅಕ್ರಮ ಜೂಜಾಟ, 6 ಜನರ ಬಂಧನ
              ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಪೊಲೀಸರು ಆರು ಜನರನ್ನು ಬಂಧಿಸಿರುವ ಘಟನೆ ಕುಶಾಲನಗರದ ಬಳಿಯ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 14/06/2016ರಂದು ಕುಶಾಲನಗರ ಬಳಿಯ ಶಿರಂಗಾಲ ಗ್ರಾಮದ ಬಳಿ ಅಕ್ರಮವಾಗಿ ಜೂಜಾಡುತ್ತಿರುವ ಕುರಿತು ದೊರೆತ ಮಾಹಿತಿಯ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣಾ ಪಿಎಸ್‌ಐ ಜೆ.ಇ.ಮಹೇಶ್‌ರವರು ಸಿಬ್ಬಂದಿಗಳೊಂದಿಗೆ ಶಿರಂಗಾಲ ಗ್ರಾಮಕ್ಕೆ ತೆರಳಿದಾಗ ಗ್ರಾಮದ ಬಸ್‌ ತಂಗುದಾಣದ ಹಿಂಭಾಗದ ಕಾಡು ಸ್ಥಳದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಶಿರಂಗಾಲ ಗ್ರಾಮದ ಮಧು, ಶಿವ, ರಾಜ, ಮಹೇಶ ಮತ್ತು ಕಂಟೇನಹಳ್ಳಿಯ ಭೈರೇಗೌಡ ಮತ್ತು ರವಿ ಎಂಬವರನ್ನು ಬಂಧಿಸಿ ಪಣವಾಗಿಟ್ಟಿದ್ದ ರೂ.2550/-ಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ 
                      ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಬಳಿಯ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚಳ್ಳಿ ಗ್ರಾಮದ ಅಜ್ಜಮಾಡ ಬೋಪಯ್ಯ ಎಂಬವರ ಲೈನು ಮನೆಯಲ್ಲಿ ವಾಸವಿರುವ ಜೇನುಕುರುಬರ ತಮ್ಮಯ್ಯ ಎಂಬವರು ದಿನಾಂಕ 13/06/2016ರಂದು ರಾತ್ರಿ ವೇಳೆ ಮನೆಯಿಂದ ಹೊರಗೆ ಬಂದು ಲೈನು ಮನೆಯ ಮಾಡಿನ ಕೌಕೋಲಿಗೆ  ನೇಣು  ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ತಮ್ಮಯ್ಯ ಅತೀವ ಮದ್ಯವ್ಯಸನಿಯಾಗಿದ್ದು ಮದ್ಯದ ಅಮಲಿನಲ್ಲಿ ಪತ್ನಿಯು ಆತನನ್ನು ಬಿಟ್ಟು ಮಗಳ ಮನೆಗೆ ಹೋಗುವ ವಿಚಾರದಲ್ಲಿ ಬೇಸರಗೊಂಡಿದ್ದೇ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.