Wednesday, June 1, 2016

ತಂದೆಯಿಂದಲೇ ಮಗನ ಹತ್ಯೆ:
        
     ವ್ಯಕ್ತಿಯೊಬ್ಬರು ತನ್ನ ಮಡದಿಯೊಂದಿಗೆ ಜಗಳ ಮಾಡುತ್ತಿದ್ದುದನ್ನು ಬಿಡಿಸಲು ಹೋದ ಮಗನನ್ನು ತಂದೆಯೇ ಹತ್ಯೆ ಮಾಡಿದ ಘಟನೆ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ಶಾಂತಳ್ಳಿ ಗ್ರಾಮದಲ್ಲಿ ಪಿರ್ಯಾದಿ ಶ್ರೀಮತಿ ಎಸ್.ಎಲ್. ಲಲಿತ ರವರು ಗಂಡ ಲೊಕೇಶ ಮತ್ತು ಮಗ ಕಿರಣ್ ನೊಂದಿಗೆ ವಾಸವಾಗಿದ್ದು ಫಿರ್ಯಾದಿ ಗಂದ ಲೋಕೇಶನಿಗೆ ಕುಡಿಯುವ ಚಟವಿದ್ದು ಪ್ರತಿ ದಿನ ಮದ್ಯಪಾನ ಮಾಡಿ ಮನೆಯಲ್ಲಿ ಜಗಳ ಮಾಡುತ್ತಿದ್ದು, ದಿನಾಂಕ 29.05.2016 ರಂದು ರಾತ್ರಿ ಸದರಿ ವ್ಯಕ್ತಿ ಮದ್ಯಪಾನ ಮಾಡಿ ತನ್ನ ಪತ್ನಿ ಫಿರ್ಯಾದಿಯೊಂದಿಗೆ ಜಗಳ ಮಾಡುತ್ತಿದ್ದುದನ್ನು ತಡೆಲು ಹೋದ ಮಗ ಕಿರಣ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಕುಸುಬೂರು ಗ್ರಾಮದ ನಿವಾಸಿ ಕಾರ್ಯಪ್ಪ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 30-5-2016 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಮಹಿಳೆ ಸಾವು:

     ದಿನಾಂಕ 31-05-16ರಂದು ಪಿರ್ಯಾದಿ ಸೈಜು ಮ್ಯಾಥ್ಯು ಹಾಗೂ ಅವರ ಹೆಂಡತಿ ರೇವತಿ ರವರು ಬಾಳುಗೋಡು ಗ್ರಾಮದ ಬಿ.ಆರ್ ಗಂಗಾಧರ ರವರ ತೋಟದಲ್ಲಿ ಕಾಫಿ ಗಿಡಕ್ಕೆ ಗೊಬ್ಬರ ಹಾಕಲೆಂದು ಕಾಫಿ ಗಿಡದ ಬುಡ ಕ್ಲೀನ್ ಮಾಡುತ್ತಿರುವಾಗ ಸಮಯ ಸುಮಾರು 1-30ಪಿ.ಎಂ.ಗೆ ದಿಢೀರನೇ ವಿಪರೀತ ಮಳೆ ಗಾಳಿ ಬಂದು ದೊಡ್ಡದಾಗಿ ಸಿಡಿಲು ಹೊಡೆದಾಗ ಪಿರ್ಯಾದಿಯವರ ಪತ್ನಿ ರೇವತಿಗೆ ತಾಗಿ ಮೃತಪಟ್ಟಿದ್ದು ಈ ಸಂಬಂಧ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.