Tuesday, June 14, 2016

ಕಾಡಾನೆ ದಾಳಿ ವ್ಯಕ್ತಿ ಸಾವು:

     ಕಾಫಿ ತೋಟದಲ್ಲಿ ಕಾಡಾನೆಯ ದಾಳಿಗೆ ಕಾರ್ಮಿಕನೋರ್ವ ಸಾವನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ನೋಕ್ಯ ತಿತಿಮತಿ ಗ್ರಾಮದಲ್ಲಿ ನಡೆದಿದೆ. ನೋಕ್ಯ ತಿತಿಮತಿ ಗ್ರಾಮದ ನಿವಾಸಿ ಕೋದಂಡ ಮುತ್ತಣ್ಣ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಕೂಲಿ ಕಾರ್ಮಿಕ 55 ವರ್ಷ ಪ್ರಾಯದ ಮೋಹನರಾಜು ಎಂಬವರು ದಿನಾಂಕ 13-6-2016 ರಂದು ಬೆಳಿಗ್ಗೆ ತಮ್ಮ ಯಜಮಾನರ ಕಾಫಿ ತೋಟದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವಾಗಿ ಸದರಿ ಮೋಹನ ರಾಜುರವರು ಸ್ಥಳದಲ್ಲಿ ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಸ್ವಸ್ಥ ಅಪರಿಚಿತ ವ್ಯಕ್ತಿಯ ಸಾವು: 

      ಶ್ರೀಮಂಗಲ ಠಾಣಾ ಸರಹದ್ದಿನ ಕುಮಟೂರು ಗ್ರಾಮದ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಒಬ್ಬ ಅಸ್ವಸ್ಥ 45-50 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರು ಬಿದ್ದಿದ್ದು, ಅವರನ್ನು ಅದೇ ಗ್ರಾಮದ ನಿವಾಸಿ ಫಿರ್ಯಾದಿ ಕೋಳೆರ ಮಹೇಶ ರವರು ಶ್ರೀಮಂಗಲ ಸರ್ಕಾರಿ ಆಸ್ಪತ್ರಗೆ ಕರೆತಂದು ಚಿಕಿತ್ಸೆಗಾಗಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆತ ಮೃತ ಪಟ್ಟಿದ್ದು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

 ಹಳೆ ದ್ವೇಷ, ಮಹಿಳೆಯ ಮಾನಭಂಗಕ್ಕೆ ಯತ್ನ, ಹಲ್ಲೆ:

      ದಿನಾಂಕ 12-06-2016 ರಂದು ಸಮಯ ಮದ್ಯಾಹ್ನ 02.30 ಗಂಟೆಗೆ ಮಡಿಕೇರಿ ನಗರದ ಕನಕದಾಸ ರಸ್ತೆ ವಿಳಾಸದಲ್ಲಿ ವಾಸವಾಗಿರುವ ಪಿರ್ಯಾದಿ ಶ್ರೀಮತಿ ಜಮೀಲರವರು ತನ್ನ ಮನೆಯಲ್ಲಿರುವಾಗ್ಗೆ ಅವರ ಗಂಡನ ತಮ್ಮನಾದ ನಿಸಾರ್ ಎಂಬುವವರು ಬಂದು ಹಳೆ ದ್ವೇಷದಿಂದ ಮತ್ತು ಪಿರ್ಯಾದಿಯವರ ಮಗಳನ್ನು ಕುಂಬ್ರದಲ್ಲಿನ ಕಾಲೇಜಿಗೆ ಸೇರಿಸಿದ ಬಗ್ಗೆ ತನ್ನ ಮಾವನ ಜೊತೆಯಲ್ಲಿ ಮಾತನಾಡಿದ ವಿಚಾರದಲ್ಲಿ ಅಸಮಧಾನಗೊಂಡು ಪಿರ್ಯಾದಿಯವರ ಮಗಳು ಸಲ್ಪತ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು ಅಲ್ಲದೆ ಪಿರ್ಯಾದಿಯವರ ತಲೆ ಕೂದಲನ್ನು ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದಲ್ಲದೆ, ಕೈಯಿಂದ ಕೆನ್ನೆಗೆ ಹೊಡೆದು, ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಯಿಂದ ಚಿನ್ನಾಭರಣ ಕಳವು:

     ಮಡಿಕೇರಿ ತಾಲೂಕು ಬೇತು ಗ್ರಾಮದ ನಿವಾಸಿ ಕೆ.ಸಿ. ಬೋಪಣ್ಣ ಎಂಬವರಿಗೆ ಸೇರಿದ ಬೇತು ಗ್ರಾಮದಲ್ಲಿವ ಮನೆಗೆ ದಿನಾಂಕ 10-06-2016 ರ ಬೆಳಗ್ಗೆ 09-00 ಗಂಟೆಯಿಂದ ಸಂಜೆ 6-00 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಮನೆಯ ಮಲಗುವ ಕೋಣೆಯಲ್ಲಿದ್ದ ಮರದ ಕಪಾಟಿನ ಬಾಗಿಲು ತೆರೆದು ಲಾಕರ್‌ನ ಬೀಗ ಮುರಿದು ಅದರೊಳಗಡೆಯಿಟ್ಟಿದ್ದ ಅಂದಾಜು ರೂ. 7,42,500/-(ರೂ. ಏಳು ಲಕ್ಷದ ನಲ್ವತ್ತೆರಡು ಸಾವಿರದ ಐನೂರು ಮಾತ್ರ) ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೈಕಾ ಡಿಕ್ಕಿ ಪಾದಚಾರಿ ಮಹಿಳೆ ಸಾವು:

     ಕುಶಾಲನಗರ ನಗರದ ಕಾಳಮ್ಮ ಕಾಲೋನಿಯಲ್ಲಿ ವಾಸವಾಗಿರುವ ಹೆಚ್.ಕೆ. ಲಕ್ಷ್ಮಯ್ಯ ಎಂಬವರು ತನ್ನ ಮೊಮ್ಮಗ ತೇಜಸ್ವಿ ಎಂಬವನೊಂದಿಗೆ ದಿನಾಂಕ 11-6-2016 ರಂದು ಸಂಜೆ 7-45 ಗಂಟೆಗೆ ಕುಶಾಲನಗರದ ಕೊಪ್ಪ ಗೇಟ್ ಬಳಿ ವಾಯು ವಿಹಾರಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಮೋಟಾರ್ ಸೈಕಲ್ ಸವಾರನೊಬ್ಬ ಸದರಿ ಮೋಟಾರ್ ಸೈಕಲ್ ನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಫಿರ್ಯಾದಿ ಲಕ್ಷ್ಮಯ್ಯ ಹಾಗು ತೇಜಸ್ವಿರವರಿಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಇಬ್ಬರು ಗಾಯಗೊಂಡು ತೀವ್ರವಾಗಿ ಗಾಯಗೊಂಡ ತೇಜಸ್ವಿಯವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಸದರಿಯವರು ಮೃತಪಟ್ಟಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.