Tuesday, June 28, 2016

ಅಕ್ರಮ ಮರಳು ಸಂಗ್ರಹ ಪತ್ತೆ, ಗಣಿಗಾರಿಕೆಗೆ ಬಳಸಿದ ಸಾಮಾಗ್ರಿ ಪೊಲೀಸ್  
ವಶಕ್ಕೆ:                                                                                                                  

     ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಲೆ ನಿಟ್ಟೂರು ಗ್ರಾಮದ ಲಕ್ಷ್ಮಣ ತೀರ್ಥ ನದಿ ದಡದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬಂದ ಖಚಿತ ಮಾಹಿತಿ ಮೇರೆ ಡಿ.ಸಿ.ಐ.ಬಿ. ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ 27.6.2016 ರಂದು ರಾತ್ರಿ ನಿಟ್ಟೂರು ಗ್ರಾಮದ ಲಕ್ಷ್ಮಣತೀರ್ಥ ನದಿ ದಡಕ್ಕೆ ದಾಳಿ ಮಾಡಿದಾಗ ಅಕ್ರಮ ಮರಳು ತೆಗೆ ಸಂಗ್ರಹಿಸುತ್ತಿದ್ದ 4 ಜನ ವ್ಯಕ್ತಿಗಳು ಕತ್ತಲಲ್ಲಿ ನದಿದಾಟಿ ತಪ್ಪಿಸಿಕೊಂಡಿದ್ದು, ತಪ್ಪಿಸಿಕೊಂಡವರ ಬಟ್ಟೆಗಳು ನದಿ ದಡದಲ್ಲಿದ್ದಲ್ಲದೇ ನದಿದಡದಲ್ಲಿ ಸುಮಾರು 5 ಲೋಡ್ ಗಳಷ್ಟು ಮರಳು ಸಂಗ್ರಹಿಸಿರುವುದು ಮತ್ತು ಮರಳು ತೆಗೆಯಲು ಬಳಸುವ 3 ಕಬ್ಬಿಣದ ಬೋಟ್ ಗಳು, 5 ಪ್ಲಾಸ್ಟಿಕ್‌ ಬುಟ್ಟಿಗಳು, 3 ಮರಳು ತುಂಬಿಸುವ ಗುದ್ದಲಿಗಳು, 4 ಮೊಬೈಲ್ ಗಳು ಮತ್ತು ನಗದು ಹಣ ರೂ.1200/- ಪತ್ತೆಯಾಗಿದ್ದು ಮರಳುಗಾರಿಕೆ ನಡೆಸುತ್ತಿದ್ದವರು ಬಾಳೆಲೆ ಗ್ರಾಮದ ರಘು @ ಸ್ವಾಮಿ ಎಂಬುವವನಾಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಕಾಯಾಚರಣೆಯಲ್ಲಿ ಡಿಸಿಐಬಿ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪ ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ವಿ.ಜಿ.  ವೆಂಕಟೇಶ್, ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್. ನಿರಂಜನ್, ಕೆ.ಆರ್, ವಸಂತ, ಕೆ.ಎಸ್. ಶಶಿಕುಮಾರ್ ಮತ್ತು    ಪೊನ್ನಂಪೇಟೆ ಠಾಣೆ ಪಿ.ಎಸ್.ಐ. ಎಸ್. ಎನ್. ಜಯರಾಮ್ ಮತ್ತು ಸಿಬ್ಬಂದಿಗಳು                                                            ಭಾಗಿಯಾಗಿದ್ದರು.                                                                                                   
            ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿರವರಿಗೆ ಮೊಬೈಲ್ ಸಂಖ್ಯೆ:9480804901 ಗೆ ಮಾಹಿತಿ ನೀಡಲು ಕೋರಿದೆ. 

ಕಾರು ಮತ್ತು ಬೈಕ್ ಗೆ ವ್ಯಕ್ತಿಗಳಿಂದ ಹಾನಿ:

     ಮನೆಯ ಮುಂದೆ ನಿಲ್ಲಿಸಿದ್ದ ಎರಡು ವಾಹನಗಳನ್ನು ಇಬ್ಬರು ವ್ಯಕ್ತಿಗಳು ಹಾನಿಗೊಳಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ರೇಂಜರ್ ಬ್ಲಾಕ್ ನಲ್ಲಿ ನಡೆದಿದೆ. ದಿನಾಂಕ 19-6-2016ರಂದು ರಾತ್ರಿ 10:30 ಗಂಟೆಗೆ ಸೋಮವಾರಪೇಟೆ ನಗರದ ರೇಂಜರ್ ಬ್ಲಾಕ್ ನಲ್ಲಿ ವಾಸವಾಗಿರುವ ಶಮ್ಮಿ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಕೆ ಎ 15 ಎಂ 2164ರ ಕಾರು ಮತ್ತು ಕೆ ಎ 12 ಇ 1936ರ ಬೈಕನ್ನು ಜನತಾ ಕಾಲೋನಿಯ ನಿವಾಸಿಗಳಾದ ವೀಕ್ಷಿತ್ ಮತ್ತು ಸಂತೋಷ್ ಎಂಬ ವ್ಯಕ್ತಿಗಳು ಸೇರಿ ಹಾನಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬಸ್ ಚಾಲಕನ ನಿರ್ಲಕ್ಷ್ಯ, ನಿರ್ವಾಹಕನ ಸಾವು:

     ಖಾಸಗಿ ಬಸ್ಸೊಂದದ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ನಿರ್ವಾಹಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ. ದಿನಾಂಕ 27-06-2016 ರಂದು ಬೆಳಿಗ್ಗೆ 9-20 ಗಂಟೆಗೆ ಲಕ್ಷ್ಮಿ ಪ್ರಕಾಶ್ ಎಂಬ ಖಾಸಗಿ ಬಸ್ಸು ಭಾಗಮಂಡಲದ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿರುವಾಗ ಕಾಟಗೆರಿಯ ತಾಳತ್ ಮನೆ ಮೇಕೆರಿ ಬೈಪಾಸ್ ಜಂಕ್ಷನ್ ನಲ್ಲಿ ಪ್ರಯಾಣಿಕರನ್ನು ಬಸ್ಸಿಗೆ ಹತ್ತಿಸಿ ನಿರ್ವಾಹಕ ಲೋಹಿತ್ ಎಂಬವರು ಮುಂದಿನ ಭಾಗಿಲಿನಿಂದ ಬಸ್ಸನ್ನು ಹತ್ತುತ್ತಿರುವಾಗ ಬಸ್ಸಿನ ಚಾಲಕ ಸುಕುಮಾರ್ ರವರು ಬಸ್ಸನ್ನು ಒಮ್ಮೆಲೆ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ಲೋಹಿತ್ ಬಸ್ಸಿನಿಂದ ಕೆಳಗೆ ಬಿದ್ದು ಹೋಗಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆಗಾಗಿ ಸುಳ್ಳದ ಕೆ.ವಿ.ಜಿ ಆಸ್ವತ್ರಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಗದೆ ಸದರಿಯವರು ಮೃತ ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಟೆಂಪೋ ಟ್ರಾವ್ಲರ್ ಮತ್ತು ಓಮ್ನಿ ಪರಸ್ಪರ ಡಿಕ್ಕಿ ಮೂವರಿಗೆ ಗಾಯ:
 
     ದಿನಾಂಕ 27-06-16ರಂದು ಮಡಿಕೇರಿ ತಾಲೂಕು ಕಾರುಗುಂದ ನಿವಾಸಿ ಪಿರ್ಯಾದಿ ಬಿ.ಎ. ದೇವಯ್ಯರವರು ತಮ್ಮ ಬಾಪ್ತು ಕೆಎ.12.ಎ. 9925ರ ಟೆಂಪೋ ಟ್ರಾವಲರ್ ವಾಹನದಲ್ಲಿ ಕುಟುಂಬಸ್ಥರೊಂದಿಗೆ ಚೇರಂಬಾಣೆಯಿಂದ ಗೋಣಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಬಿಟ್ಟಂಗಾಲ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ಬಳಿ ಎದುರುಗಡೆಯಿಂದ ಕೆಎ.05.ಎನ್.5122ರ ಓಮಿನಿ ವ್ಯಾನನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆ ಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯವರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಎರಡು ವಾಹನದ ಮುಂಭಾಗ ಜಖಂಗೊಂಡಿರುವುದಲ್ಲದೆ, ಓಮಿನಿಯಲ್ಲಿದ್ದ ಶಾಂತಿ, ಅನೀಲ್ ಮತ್ತು ಪ್ರೀತಿ ರವರಿಗೆ ಗಾಯಗಳಾಗಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ವ್ಯಾನ್ ಡಿಕ್ಕಿ, ನಾಲ್ವರಿಗೆ ಗಾಯ:

      ಸೋಮವಾರಪೇಟೆ ತಾಲೂಕು ಬಜೆಗುಂಡಿ ಗ್ರಾಮದ ನಿವಾಸಿ ಎಸ್. ಅಶ್ವತ್ ಎಂಬವರು ದಿನಾಂಕ 27-06-2016 ರಂದು ಪ್ರವೀಣ್ ಎಂಬವರ ಬಾಪ್ತು ಕೆಎ-12, 0827 ರ ಆಟೋ ರಿಕ್ಷಾದಲ್ಲಿ ಹೇಮಂತ್, ಜೀವನ್, ಕುಮಾರ್, ಶರತ್ ರವರನ್ನು ಕೂರಿಸಿಕೊಂಡು ಚಾಲನೆ ಮಾಡಿಕೊಂಡು ಬೇಳೂರು ಗಣಪತಿ ದೇವಸ್ಥಾನದ ಬಳಿ ಆಟೋ ರಿಕ್ಷಾವನ್ನು ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿಕೊಂಡಿರುವಾಗ್ಗೆ, ಸಮಯ 09.00 ಗಂಟೆಗೆ ಹಿಂದಿನಿಂದ ಬಂದ ಕೆಎ-12, ಎ-4867 ರ ಚಿನ್ನು ಎಂಬ ಹೆಸರಿನ ವ್ಯಾನ್ ಚಾಲಕ ಪ್ರಕಾಶ್ ರವರು ವ್ಯಾನನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಫಿರ್ಯಾದಿಯವರು ನಿಲ್ಲಿಸಿಕೊಂಡಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋರಿಕ್ಷಾದಲ್ಲಿ ಕುಳಿತ್ತಿದ್ದ 4 ಜನರಿಗೆ ರಕ್ತಗಾಯ ಹಾಗೂ ನೋವುಂಟಾಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.