Wednesday, June 29, 2016

ಮಹಿಳೆಯ ಅಸ್ವಾಭಾವಿಕ ಸಾವು, ಪ್ರಕರಣ ದಾಖಲು:

      ನಾಪೋಕ್ಲು ಠಾಣಾ ಸರದಹ್ದಿನ ಕೋಕೇರಿ ಗ್ರಾಮದ ನಿವಾಸಿ ಪಿ.ಎ. ಪಳಂಗಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗರುವ ಚಂದ್ರ ಹಾಗು ಆತನ ಪತ್ನಿ ಜಯಾ ಎಂಬವರು ದಿನಾಂಕ 27-06-2016 ರಂದು ತಮ್ಮ ಸಾವುಕಾರ ಪಿ.ಎ.ಪಳಂಗಪ್ಪನವರೊಂದಿಗೆ ನಾಪೋಕ್ಲು ಸಂತೆಗೆ ಹೋಗಿ ಸಂತೆ ಮುಗಿಸಿ ವಾಪಾಸು ಮಧ್ಯಾಹ್ನ 2-00 ಗಂಟೆಗೆ ಲೈನುಮನೆಗೆ ಬಂದಿದ್ದು, ಮಾರನೇ ದಿನ ಬೆಳಗ್ಗೆ 7-30 ಗಂಟೆಯವರೆಗೆ ಚಂದ್ರ ಮತ್ತು ಜಯನವರು ಕೆಲಸಕ್ಕೆ ಬಾರದೇ ಇದ್ದುದರಿಂದ ಸಾವುಕಾರ ಪಿ.ಎ. ಪಳಂಗಪ್ಪನವರು ಲೈನುಮನೆಗೆ ಹೋಗಿ ರೂಮಿಗೆ ಹಾಕಿದ ಬಾಗಿಲನ್ನು ತಳ್ಳಿ ನೋಡಿದ್ದು, ಒಳಗಡೆ ಜಯ ಮಾತ್ರ ಮಲಗಿದ ಸ್ಥಿತಿಯಲ್ಲಿದ್ದುದು ಕಂಡು ಬಂದಿದ್ದು, ಆಕೆಯ ಗಂಡ ಚಂದ್ರ ಅಲ್ಲಿ ಇಲ್ಲದೇ ಇರುವ ಕಾರಣ ಪಳಂಗಪ್ಪನವರು ಜಳನ್ನು ಕರೆದು ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಒಳಗೆ ಹೋಗಿ ಜಯಳನ್ನು ಕರೆದು ಅಲ್ಲಾಡಿಸಿದಾಗ ಸತ್ತ ರೀತಿಯಲ್ಲಿರುವುದು ಕಂಡುಬಂದಿದ್ದು ಸದರಿಯಾಕೆಯ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಪಾದಚಾರಿಗೆ ಬೈಕ್ ಡಿಕ್ಕಿ, ಗಾಯ:

 ವಿರಾಜಪೇಟೆ ತಾಲೂಕು ಗೋಣಿಕೊಪ್ಪ ನಗರದ 1ನೇ ವಿಭಾಗದಲ್ಲಿ ವಾಸವಾಗಿರುವ ಫಿರ್ಯಾದಿ ಎಂ.ವಿ. ಶಾರುಣ್ ಎಂಬವರು ದಿನಾಂಕ 27-6-2016 ರಂದು ಅಪರಾಹ್ನ ಗೋಣಿಕೊಪ್ಪ ನಗರದ ಐ.ಪಿ. ಪೆಟ್ರೋಲ್ ಬಂಕ್ ನ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾದ ಹಿಂಬದಿಯಿಂದ ಬಂದ ಮೋಟಾರ್ ಸೈಕಲ್ ಸಂಖ್ಯೆ:ಕೆಎ-12-ಕೆ-6936 ನ್ನು ಅದರ ಸವಾರ ವೇಗ ಮತ್ತು ನಿರ್ಲಕ್ಷ್ಯತನದಿಂದ ಬಂದು ಡಿಕ್ಕಿಪಡಿಸಿದ ಪರಿಣಾಮವಾಗಿ ಎಂ.ವಿ. ಶಾರುಣ್ ರವರು ಗಾಯಗೊಂಡಿದ್ದು, ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ದ್ವಿಚಕ್ರವಾಹನಕ್ಕೆ ಲಾರಿ ಡಿಕ್ಕಿ, ಸವಾರನಿಗೆ ಗಾಯ:

     ಪಿ.ಮೊಹಮ್ಮದ್ ಆನ್ ಶಾದ್, ತಂದೆ: ಪಿ.ಕೆ. ಜಮಾಲ್, ಪ್ರಾಯ: 15ವರ್ಷ, ವಿದ್ಯಾರ್ಥಿ, ಪಟ್ಟಾನೂರು ಗ್ರಾಮ, ತಲಚೇರಿ ತಾಲ್ಲೂಕು, ಕೇರಳ ರಾಜ್ಯ ಇವರು ದಿನಾಂಕ 26-06-16ರಂದು ಕೇರಳದ ಆಯುಪುಯ ಗ್ರಾಮದ ತನ್ನ ಮನೆಯಿಂದ ಬೆಳಿಗ್ಗೆ ಸಮ 5-00 ಎ.ಎಂ.ಗೆ ತನ್ನ ತಂದೆಯವರ ಕುಟುಂಬದವರ ಮನೆಯಾದ ಕುಶಾಲನಗರಕ್ಕೆ ಸ್ಕೂಟಿ ನಂ. ಕೆಎಲ್.58.ಆರ್. 5820ರಲ್ಲಿ ಬರುತ್ತಿದ್ದು, ಮಾಕುಟ್ಟ ಅರಣ್ಯ ರಸ್ತೆಯಲ್ಲಿನ ಆಂಜನೇಯ ದೇವಸ್ಥಾನ ದಾಟಿ ಸುಮಾರು 2 ಕಿ.ಮೀ. ದೂರ ವಿರಾಜಪೇಟೆ ಕಡೆಗೆ ಅರಣ್ಯ ರಸ್ತೆಯಲ್ಲಿ ಬರುತ್ತಿರುವಾಗ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ.03.ಎಬಿ.4461ರ ಲಾರಿ ಚಾಲಕನು ಸದರಿ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿಯ ಸ್ಕೂಟಿಗೆ ಡಿಕ್ಕಿಪಡಿಸಿದ ಪಿರ್ಯಾದಿ ಪಿ.ಮೊಹಮ್ಮದ್ ಆನ್ ಶಾದ್ ಯವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಅವರ ದೂರಿನ ಮೇರೆಗೆ ದಿನಾಂಕ 28-6-2016 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಕತ್ತಿಯಿಂದ ಹಲ್ಲೆ:

     ದಿನಾಂಕ 25-06-16 ರಂದು ಸುಂಟಿಕೊಪ್ಪ ಠಾಣಾ ಸರಹದ್ದಿನ ಅತ್ತೂರು ನಲ್ಲೂರು ಗ್ರಾಮದ ನಿವಾಸಿ ಪಿರ್ಯಾದಿ ಜೆ.ಎಲ್ ಜಗದೀಶ ಎಂಬವರು ತಮ್ಮ ಪಕ್ಕದ ಮನೆಯಲ್ಲಿ ವಾಸವಿದ್ದ ತನ್ನ ಅಕ್ಕನ ಮನೆಗೆ ತೆರಳಿದಾಗ ಮನೆಯ ಮುಂದೆ ಅಂಗಳದಲ್ಲಿ ನಿಂತಿದ್ದ ಫಿರ್ಯಾದಿಯವರ ಬಾವ ಸಿದ್ದಾಪ್ಪಾಜಿ ಎಂಬವರು ಕೈಯಲ್ಲಿದ್ದ ಕತ್ತಿಯಿಂದ ನನ್ನ ಮನೆಗೆ ಯಾಕೆ ಕಾಫಿ ಕುಡಿಯಲು ಬಂದಿದ್ದಿಯಾ ಎಂದು ಏಕಾಏಕಿ ಪಿರ್ಯಾದಿಯವರ ಎಡ ಮಂಡಿಗೆ ಕತ್ತಿಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಒಡ್ಡಿದ್ದಾಗಿ ದಿನಾಂಕ 28-6-2016 ರಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬ್ಯಾರಿಕೇಡ್ ಕಳವು:
     ದಿನಾಂಕ: 24-06-16ರಂದು ಸಮಯ 8-45ಗಂಟೆಗೆ ಕೂರ್ಗ್ ಯತ್ನಿಕ್ ಹಾಲ್ ನ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿಟ್ಟಿದ್ದ ಒಂದು ಬ್ಯಾರಿಕಾಡನ್ನು ಯಾರೋ ಕಳ್ಳರು ವಾಹನದಲ್ಲಿ ಬಂದು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮದ ನಿವಾಸಿ ಕೆ. ಅಶೋಕ ಕುಟ್ಟಪ್ಪ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಸ್ತ್ರಚಿಕಿತ್ಸೆಗೊಳಗಾದ ಯುವತಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ:

     ಕುಶಾಲನಗರ ಠಾಣಾ ವ್ಯಾಪ್ತಿಯ ಕಣಿವೆ ಗ್ರಾಮದ ನಿವಾಸಿ ಪಿರ್ಯಾದಿ ಮೋಹನ ಎಂಬವರ ಮಗಳಾದ ಮಮತಾಳನ್ನು ಹೊಟ್ಟೆ ನೋವಿನ ಕಾರಣದಿಂದ ದಿ 01-06-2016 ರಂದು ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಮಮತಾಳಿಗೆ ವೈದ್ಯರು ಎರಡು ಬಾರಿ ಶಸ್ತ್ರ ಚಿಕಿತ್ಸೆ ನಡೆಸಿ, ಯಶಸ್ವಿಯಾಗದೆ ಗಂಭೀರ ಸ್ಥಿತಿಯಾಗಿದ್ದರಿಂದ ಪಿರ್ಯಾದಿಯವರು ಮಗಳನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು, ದಿನಾಂಕ 28-6-2016 ರಂದು ಚಿಕಿತ್ಸೆ ಫಲಕಾರಿಯಾಗದೆ ಮಮತಾಳು ಮೃತಪಟ್ಟಿದ್ದು, ಈಕೆಯ ಮರಣಕ್ಕೆ ಜಿಲ್ಲಾ ಆಸ್ಪತ್ರೆ ಮಡಿಕೇರಿಯ ವೈದ್ಯರಾದ ಪ್ರಕಾಶ ಮತ್ತು ಇತರರ ನಿರ್ಲಕ್ಷ್ಯವೆ ಕಾರಣವಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.