Monday, June 6, 2016

ಕಾರು ಮತ್ತು ಮಾರುತಿ ವ್ಯಾನ್ ಪರಸ್ಪರ ಡಿಕ್ಕಿ ಮೂವರಿಗೆ ಗಾಯ:
 
     ಮೈಸೂರು ನಗರದ ರಾಜೀವ ನಗರದ ನಿವಾಸಿಗಳಾದ ಫಿರ್ಯಾದಿ ಅಸ್ಲಂ ಪಾಷಾ ರವರು ತಮ್ಮ ಸಹೋದರ ಅಜಾಂ, ನಿಗಾರ್‌ ಸುಲ್ತಾನ, ಅಪ್ಸ ಮತ್ತು ಗುಲ್ನಾಸ್‌ ರವರುಗಳೊಂದಿಗೆ ಕೆಎ.13.ಸಿ.9696 ರ ಕಾರಿನಲ್ಲಿ ದಿನಾಂಕ 5-6-2016 ರಂದು ಮೈಸೂರಿನ ಕಡೆಗೆ ಹೋಗುತ್ತಿದ್ದಾಗ ತಿತಿಮತಿಯ ಮತ್ತಿಗೋಡು ಆನೆ ಕ್ಯಾಂಪ್‌ ಬಳಿ ಒಂದು ಮಾರುತಿ ಓಮಿನಿ ವ್ಯಾನ್‌ನ್ನು ಅದರ ಚಾಲಕ ಅಡ್ಡಾದಿಡ್ಡಿಯಾಗಿ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ಅಸ್ಲಂ ಪಾಷಾರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡು ಕಾರಿನಲ್ಲಿದ್ದ ನಿಗಾರ್‌ ಸುಲ್ತಾನ ಮತ್ತು ಅಪ್ಸರವರಿಗೆ ಗಂಭೀರ ಗಾಯಗಳಾಗಿದ್ದು, ಅಲ್ಲದೆ ಕಾರನ್ನು ಚಾಲನೆ ಮಾಡುತ್ತಿದ್ದ ಅಜಾಂ ಮತ್ತು ಫಿರ್ಯಾದಿಗೆ ಸಣ್ಣಪುಟ್ಟ ಪೆಟ್ಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿಯ ಜಾಗಕ್ಕೆ ಅಕ್ರಮ ಪ್ರವೇಶ, ಗೇಟ್ ಕಿತ್ತುಹಾಕಿ ಹಾನಿ:

     ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಚೇರಂಗಾಲ ಗ್ರಾಮದ ನಿವಾಸಿ ಫಿರ್ಯಾದಿ ಮಂದಪಂಡ ಮಂದಣ್ಣರವರ ಜಾಗಕ್ಕೆ ದಿನಾಂಕ 4-6-2016 ರಂದು ಆರೋಪಿಗಳಾದ ಪಾಪಯ್ಯ ಹಾಗು ಇತರೆ 10 ಜನ ಕುಟುಂಬಸ್ತರು ಅಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಕಬ್ಬಿಣದ ಗೇಟನ್ನು ಕಿತ್ತು ಬಿಸಾಕಿ ಸುಮಾರು 3,000/- ರೂ. ಗಳನ್ನು ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕೆಲಸಕ್ಕೆ ಹೋದ ವ್ಯಕ್ತಿ ಕಾಣೆ:

     ಗಾರೆ ಕೆಲಸಕ್ಕೆಂದು ಹೋದ ವ್ಯಕ್ತಿಯೊಬ್ಬರು ಕಾಣೆಯಾದ ಘಟನೆ ನಡೆದಿದೆ. ವಿರಾಜಪೇಟೆ ನಗರ ಠಾಣಾ ಸರಹದ್ದಿನ ಸುಂಕದಕಟ್ಟೆ, ಐಮಂಗಲ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಅನಿತ ಎಂಬವರ ಪತಿ ಸಂತೋಷ್ (29) ರವರು ದಿನಾಂಕ 1-6-2016 ರಂದು ಬೆಳಗ್ಗೆ ಗಾರೆ ಕೆಲಸಕ್ಕೆ ಹೋಗಿದ್ದು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅನಾರೋಗ್ಯದ ಹಿನ್ನಲೆ ವ್ಯಕ್ತಿ ಆತ್ಮಹತ್ಯೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಗರಗಂದೂರು ಗ್ರಾಮದ ನಿವಾಸಿ ರುಕುಮಯ್ಯ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ನೊಂದು ದಿನಾಂಕ 4-6-2016 ರಂದು ತಮ್ಮ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
Posted by P.Rajendra Prasad, IPS at 5:14 PM
Sunday, June 5, 2016
 
ಅಕ್ರಮ ಪ್ರವೇಶ, ಕೊಲೆ ಬೆದರಿಕೆ:

     ಸಿದ್ದಾಪುರ ಠಾಣಾ ಸರಹದ್ದಿನ ಯಡೂರು ಗ್ರಾಮದ ನಿವಾಸಿ ಡಾ:ಐಯ್ಯಂಡ ಬೋಪಣ್ಣ ನವರಿಗೆ ಸೇರಿದ ಜಾಗಕ್ಕೆ ಆರೋಪಿಗಳಾದ ಬಿ.ಟಿ. ಕುಟ್ಟಪ್ಪ ಎಂಬವರು ಅಕ್ರಮ ಪ್ರವೇಶ ಮಾಡಿ ಜಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅದೇ ಸಮಯದಲ್ಲಿ ಫಿರ್ಯಾದಿ ಡಾ: ಐಯ್ಯಂಡ ಬೋಪಣ್ಣನವರು ಅಲ್ಲಿಗೆ ಹೋದಾಗ ಅವರಿಗೂ ಬೈದು ಜಾಗಕ್ಕೆ ನಿರ್ಮಿಸಿದ್ದ ಸಿಮೆಂಟ್ ಕಂಬಗಳನ್ನು ಕಿತ್ತು ನಷ್ಟ ಪಡಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

     ಗೋಣಿಕೊಪ್ಪ ಠಾಣಾ ಸರಹದ್ದಿನ ಬೆಮ್ಮತ್ತಿ ಧನುಗಾಲ ಗ್ರಾಮದ ನಿವಾಸಿ ಫಿರ್ಯಾದಿ ಯು.ಸಮೀನಾ ರವರು ದಿನಾಂಕ 26/05/2011 ರಂದು ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ಮದರಸದಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ಅಜೀಜ್ ಎಂಬವರನ್ನು ವಿವಾಹವಾಗಿದ್ದು ವಿವಾಹದ ಸಮಯದಲ್ಲಿ ಪಿರ್ಯಾದಿಯವರ ಪೋಷಕರು ಅಜೀಜ್ ಮತ್ತು ಆತನ ತಂದೆಯ ಬೇಡಿಕೆಯಂತೆ ವರದಕ್ಷಿಣೆ ರೂಪದಲ್ಲಿ 3 ಲಕ್ಷ ಹಣ, ಹಾಗೂ 200 ಗ್ರಾಂ ಚಿನ್ನವನ್ನು ನೀಡಿದ್ದು ಸ್ವಲ್ಪ ದಿನಗಳ ನಂತರ ಪುನಃ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾಗ 1.50 ಲಕ್ಷ ರೂಗಳನ್ನು ಪಿರ್ಯಾದಿಯವರ ತಂದೆಯವರು ನೀಡಿದ್ದು ನಂತರ ಪಿರ್ಯಾದಿಯವರೊಂದಿಗೆ ಅಜೀಜ್ ರವರು ಸ್ವಲ್ಪ ದಿನ ಚೆನ್ನಾಗಿದ್ದು ಇವರಿಗೆ ಒಂದು ಗಂಡು ಮಗು ಇರುತ್ತದೆ. ನಂತರ ದಿನಗಳಲ್ಲಿ ಪಿರ್ಯಾದಿಯವರ ಮಾವ ಅಬ್ದುಲ್ಲಾ ರವರು ಪಿರ್ಯಾದಿಯವರಿಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಬಿಸಿದ್ದು ಇದಕ್ಕೆ ಪಿರ್ಯಾದಿಯವರು ಪ್ರತಿರೋಧ ವ್ಯಕ್ತ ಪಡಿಸಿದ್ದಾಗ ಪಿರ್ಯಾದಿಯವರ ಮಾವ ಮತ್ತು ಗಂಡ ಒಂದೆರಡು ಬಾರಿ ಹಲ್ಲೆ ಮಾಡಿದ್ದು ಮತ್ತು ಅತ್ತೆ ಖತೀಜ, ನಾದಿನಿ ಸಮೀರಾ, ಮತ್ತು ಸಮೀರಾತರವರ ಗಂಡ ಹ್ಯಾರೀಸ್ ರವರು ಮಾನಸಿಕ ಹಿಂಸೆ ನೀಡುತ್ತಿದ್ದು ಇದರಿಂದ ನೊಂದು ತವರು ಮನೆಗೆ ಬಂದ ಫಿರ್ಯಾದಿಯನ್ನು ದಿನಾಂಕ 30/04/2016 ರಂದು ಫಿರ್ಯಾದಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ನೀನು ನನ್ನ 2ನೆಯ ಮದುವೆಗೆ ತಡೆಯೊಡ್ಡಿದರೆ ನಿನ್ನನ್ನು ಆಕ್ಸಿಡೆಂಟ್ ಮುಖಾಂತರ ಮುಗಿಸುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 
ಯುವತಿ ಮೇಲೆ ಅತ್ಯಾಚಾರ: 

     ಸೋಮವಾರಪೇಟೆ ಠಾಣಾ ಸರಹದ್ದಿನ ವಳಗುಂದ ಗ್ರಾಮದ ನಿವಾಸಿ ಚಂದ್ರಶೇಖರ್ ಎಂಬವರ 20 ವರ್ಷ ಪ್ರಾಯದ ಮಗಳಾದ ವಿ.ಸಿ. ಪವಿತ್ರ ಎಂಬಾಕೆಯು ದಿನಾಂಕ 31.05.2016 ರಂದು ಸಮಯ ರಾತ್ರಿ 10:00 ಗಂಟೆಗೆ ತನ್ನ ತಾಯಿಯೊಂದಿಗೆ ಮದುವೆಯ ವಿಚಾರದಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದು ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಸೋಮವಾರಪೇಟೆಗೆ ಬಂದು ಹೊನ್ನಮ್ಮನ ಕೆರೆಗೆ ಆಟೋದಲ್ಲಿ ಹೋಗುವಾಗ ಆಟೋ ಚಾಲಕ ತೇಜು ಎಂಬುವನು ನೀನು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಂದು ಹೇಳಿ ನೀನು ನನ್ನೊಂದಿಗೆ ಬಾ ಎಂದು ಆಟೋವನ್ನು ಸೋಮವಾರಪೇಟೆಯ ಮಡಿಕೇರಿ ರಸ್ತೆಯ ಬಳಿ ಇರುವ ತೋಟದ ಹತ್ತಿರ ಕರೆದುಕೊಂಡು ಹೋಗಿ ಮೈ ಮೇಲಿದ್ದ ಬಟ್ಟೆಯನ್ನು ಬಿಚ್ಚಿ, ಅತ್ಯಾಚಾರ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.