Saturday, July 30, 2016


ಅಕ್ರಮ ಮರಳು ಸಾಗಾಟ ಪತ್ತೆ
                  ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 30/07/2016ರಂದು ಮುಂಜಾನೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಪರಶೀವಮೂರ್ತಿರವರು ಗಸ್ತು ಕರ್ತವ್ಯದಲ್ಲಿರುವಾಗ ಚಿಕ್ಕತೋಳೂರು ಗ್ರಾಮದ ಬಳಿ ಕೆಎಲ್‌-73-272ರ ಟಿಪ್ಪರ್‌ ಲಾರಿಯನ್ನು ಪರಿಶೀಲಿಸುವ ಸಂಬಂಧ ನಿಲ್ಲಿಸಿದಾಗ ಲಾರಿಯ ಚಾಲಕ ಲಾರಿಯನ್ನು ಚಾಲನಾ ಸ್ಥಿತಿಯಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು, ಸಿಪಿಐ ಮತ್ತು ಸಿಬ್ಬಂದಿಗಳು ಹೋಗಿ ನೋಡಿದಾಗ ಲಾರಿಯಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ಇದ್ದಿರುವುದಾಗಿದೆ. ಅಲ್ಲದೆ ಚಾಲನಾ ಸ್ಥಿತಿಯಲ್ಲಿದ್ದ ಲಾರಿ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಅಲ್ಲಿಯೇ ಸುಬ್ರಮಣಿ ಎಂಬವರ ಮನೆಯ ಆವರಣ ಗೋಡೆಗೆ ಡಿಕ್ಕಿಯಾಗಿ ನಷ್ಟವುಂಟಾಗಿದ್ದು, ಸಿಪಿಐ ಪರಶಿವಮೂರ್ತಿರವರು ಲಾರಿಯನ್ನು ಮರಳು ಸಮೇತ ವಶಪಡಿಸಿಕೊಂಡು ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆಯ ಬೀಗ ಮುರಿದು ಚಿನ್ನಾಭರಣ ಕಳವು
                      ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಶನಿವಾರಸಂತೆ ಬಳಿಯ ಬಡುಬನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/07/2016ರಂದು ಬಡುಬನಹಳ್ಳಿ ನಿವಾಸಿ ಎ.ಸಿ.ಜಯಮ್ಮ ಎಂಬವರು ಅವರ ತಮ್ಮ ವಿಶ್ವೇಶ್ವರರವರ ಗದ್ದೆ ನಾಟಿಯ ಸಲುವಾಗಿ ತಮ್ಮನ ಮನೆಗೆ ಹೋಗಿದ್ದು ಕೆಲಸ ಮುಗಿಸಿ ಮಾರನೇ ದಿನ ಸಂಜೆ ಮನೆಗೆ ಬಂದಾಗ ಮನೆಯ ಎದುರಿನ ಬಾಗಿಲನ್ನು ಮುರಿದಿರುವುದು ಕಂಡುಬಂದಿದ್ದು, ಒಳಗೆ ಹೋಗಿ ನೋಡಿದಾಗ ಮನೆಯೊಳಗಿದ್ದ ಆಲ್ಮೆರಾವನ್ನು ಮುರಿದು ಯಾರೋ ಕಳ್ಳರು ಅದರೊಳಗಿದ್ದ ಸುಮಾರು ರೂ.21,500/- ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಬಗ್ಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ
                 ಪರಸ್ಪರ ಕಾರು ಡಿಕ್ಕಿಯಾದ ಘಟನೆ ಶನಿವಾರಸಂತೆ ಬಳಿಯ ದೊಡ್ಡಕೊಡ್ಲಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28/07/2016ರಂದು ಚಾಮರಾಜನಗರ ನಿವಾಸಿ ತುಬಶೀರ್‌ ಹುಸೇನ್‌ ಎಂಬವರು ಅವರ ಪತ್ನಿ ಫರ್ಜಾನ್‌ ಯಾಸ್ಮಿನ್‌ ಮತ್ತು ಸುರೈಯಾ ಭಾನು ಎಂಬವರೊಂದಿಗೆ ಅವರ ಕೆಎ55-ಎಂ-7583ರ ಮಾರುತಿ ಓಮ್ನಿ ವ್ಯಾನಿನಲ್ಲಿ ಚಾಮರಾಜನಗರದಿಂದ ಕೊಡ್ಲಿಪೇಟೆಗೆ ಬರುತ್ತಿರುವಾಗ ದೊಡ್ಡಕೊಡ್ಲಿ ಗ್ರಾಮದ ಬಳಿ ಸಾರ್ವಜನಿಕ ರಸ್ತೆಯಲ್ಲಿ ತುಶೀರ್‌ ಹುಸೇನ್‌ರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಯ ಬದಿಗೆ ಮಗುಚಿಬಿದ್ದು ಕಾರಿನಲ್ಲಿದ್ದ ಫರ್ಜಾನ್‌ ಯಾಸ್ಮಿನ್‌ ಮತ್ತು ಸುರೈಯಾ ಭಾನುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕ ಕಾಣೆ, ಅಪಹರಣ ಶಂಕೆ
                 ಶಾಲಾ ಬಾಲಕನೋರ್ವ ಕಾಣೆಯಾಗಿರುವ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 28/07/2016ರಂದು ನಗರದ ಐಟಿಐ ಹಿಂಭಾಗದ ವಿವೇಕಾನಂದ ಬಡಾವಣೆ ನಿವಾಸಿ ಹೆಚ್‌.ಎನ್‌.ಲೋಕೇಶ ಎಂಬವರ ಮಗ 14 ವರ್ಷ ಪ್ರಾಯದ ಸೂರ್ಯ ಎಂಬಾತನು ರಾತ್ರಿ 11:30 ಗಂಟೆಯಿಂದ ಮನೆಯಲ್ಲಿ ಕಾಣೆಯಾಗಿದ್ದು ಈತನನ್ನು ಯಾರೋ ಪುಸಲಾಯಿಸಿ ಕರೆದೊಯ್ದಿರಬಹುದೆಂದು ಶಂಕಿಸಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, July 29, 2016ಹೊಳೆಯಲ್ಲಿ ಕೊಚ್ಚಿ ಬಾಲಕನ ದುರ್ಮರಣ
                ಹರಿಯುತ್ತಿರುವ ಹೊಳೆಯಲ್ಲಿ ಕೊಚ್ಚಿಹೋದ ಬಾಲಕನೋರ್ವ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ಹಾರಂಗಿಯ ಮಾವಿನಹಳ್ಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-07-2016 ರಂದು ಹಾರಂಗಿ ಗ್ರಾಮದ ನಿವಾಸಿ ಹಿತೇಶ್‌ ರಂಬವರ  ಅಮ್ಮ ಸುಶೀಲರವರು  ಬಟ್ಟೆ ಒಗೆಯಲು  ನಾಲೆಗೆ ಹೋದಾಗ ಹಿತೇಶ್‌ರವರ ಅಕ್ಕ ಧರಣಿ ಎಂಬವರ 5 ವರ್ಷ ಪ್ರಾಯದ ಮಗ ಶಶಾಂಕ್ ಕೂಡ ಅವರೊಂದಿಗೆ ಹೋಗಿದ್ದು, ಸುಶೀಲರವರು  ಬಟ್ಟೆ ಒಗೆಯುವ ಸಂದರ್ಭದಲ್ಲಿ ಶಶಾಂಕ್ ಕೂಡ ಅವರ ಪಕ್ಕದಲ್ಲಿ ಕುಳಿತಿದ್ದು  ರಭಸವಾಗಿ ಬಂದ ನೀರಿನಲ್ಲಿ ಬಾಲಕ ಶಶಾಂಕ್‌ ಕೊಚ್ಚಿ ಹೋಗಿದ್ದು, ನಂತರ ಸಾರ್ವಜನಿಕರ ಸಹಾಯದಿಂದ ಹುಡುಕಾಡಲಾಗಿ ರಾತ್ರಿ 10-00 ಗಂಟೆಗೆ ಮೃತ ಶರೀರವು ದೊರೆತಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ನುಗ್ಗಿ ಚಿನ್ನಾಭರಣ ಕಳವು
                 ಮನೆಯ ಹಿಂಬಾಗಿಲು ತೆರೆದು ಮನೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರ ಬಳಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ  28-07-2017 ರಂದು ಚಿಕ್ಕಬೆಟ್ಟಗೇರಿ ನಿವಾಸಿ ಕೆ.ಕೆ.ಗಣೇಶ ಎಂಬವರು ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಹೋಗಿದ್ದು, ಸಂಜೆ ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬಂದು ಮುಂಭಾಗಿಲು ತೆರೆದು ನೋಡಿದಾಗ  ಮನೆಯ ಹಿಂಬಾಗಿಲು ತೆರೆದಿದ್ದು, ಮನೆಯ ಮಲಗುವ ಕೋಣೆಯಲ್ಲಿ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದುದನ್ನು ಕಂಡು ಗಣೇಶರವರಿಗೆ  ಫೋನ್ ಮುಖಾಂತರ ತಿಳಿಸಿದ್ದು ಗಣೇಶರವರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಬಾಗಿಲಿನ ಚಿಲಕವನ್ನು ಮೀಟಿ ಮುರಿದು ಒಳ ಪ್ರವೇಶಿಸಿ  ಮನೆಯ ಮಲಗುವ ಕೋಣೆಯಲ್ಲಿದ್ದ ಆಲ್ಮೆರಾದ  ಲಾಕರನ್ನು ಮುರಿದು ಅದರೊಳಗೆ ಇದ್ದ ಸುಮಾರು ರೂ. 24,000/-  ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ
                 ಅಪರಾತ್ರಿಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 29-07-2016 ರ  ಮುಂಜಾನೆ  3.00 ಗಂಟೆಗೆ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಹೆಚ್‌.ಕೆ.ಪಾರ್ಥರವರು ನಗರ ಗಸ್ತು ಕರ್ತವ್ಯದಲ್ಲಿದ್ದಾಗ ಸುಂಟಿಕೊಪ್ಪದ  ವಂದನಾ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡದ ಎಡ ಭಾಗದ ಗಲ್ಲಿಯಲ್ಲಿ ಒಬ್ಬ ವ್ಯಕ್ತಿಯು  ಅನುಮಾನಾಸ್ಪದ ರೀತಿಯಲ್ಲಿ  ನಿಂತಿದ್ದು,  ಎಎಸ್‌ಐರವರು ಆತನನ್ನು ವಿಚಾರಿಸಿದಾಗ ಆತನು ಕುಶಾಲನಗರದ ಮುಳ್ಳುಸೋಗೆ ಗ್ರಾಮದ ಕೆ.ಎಂ.ರಾಜ ಎಂಬುದಾಗಿ ತಿಳಿಸಿದ್ದು, ಆತನ ಇರುವಿಕೆಯ ಬಗ್ಗೆ ಯಾವುದೇ ಸೂಕ್ತ ಮಾಹಿತಿಯನ್ನು ನೀಡದಿದ್ದುರಿಂದ ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಕೆರೆಗೆ ಬಿದ್ದು ವೃದ್ದನ ಸಾವು
                      ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವೃದ್ದನೋರ್ವ ಸಾವಿಗೀಡಾಗಿರುವ ಘಟನೆ ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/07/2016ರಂದು ಕುಕ್ಲೂರು ನಿವಾಸಿ ಗಿರಿಜಾ ಎಂಬಾಕೆಯ ಗಂಡ 75 ವರ್ಷ ಪ್ರಾಯದ ಮಾಣು ಎಂಬವರು ಮೊಣ್ಣಂಡ ಕಾರ್ಯಪ್ಪನವರ ಕೆರೆಯ ಬದಿಗಾಗಿ ಕೂಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, July 28, 2016

ಬೈಕ್‌ ಮಗುಚಿ ಓರ್ವ ಸಾವು
                    ಮೋಟಾರು ಬೈಕೊಂದು ಮಗುಚಿ ಬಿದ್ದು ಹಿಂಬದಿ ಸವಾರ ಸಾವಿಗೀಡಾದ ಘಟನೆ ಪೊನ್ನಂಪೇಟೆ ಬಳಿಯ ತಿತಿಮತಿಯಲ್ಲಿ ನಡೆದಿದೆ. ದಿನಾಂಕ 27/07/2016ರಂದು ಹುಣಸೂರು ತಾಲೂಕಿನ ಕೋಣನಹೊಸಹಳ್ಳಿ ಗ್ರಾಮದ ನಿವಾಸಿ ಪ್ರದೀಪ್‌ ಮತ್ತು ಆತನ ಗೆಳೆಯ ಸುಹಾಸ್‌ ಎಂಬವರು ಜಾನ್ಸನ್‌ ಎಂಬವರ ಮೋಟಾರು ಬೈಕು ಸಂಖ್ಯೆ ಕೆಎ-45-ಕ್ಯು-6412ರಲ್ಲಿ ಕೆಲಸದ ನಿಮಿತ್ತ ಗೋಣಿಕೊಪ್ಪದಿಂದ ಪಂಚವಳ್ಳಿಗೆ ಬಂದು ಕೆಲಸ ಮುಗಿಸಿಕೊಂಡು ಗೋಣಿಕೊಪ್ಪಕ್ಕೆ ಬರುತ್ತಿರುವಾಗ ಮೋಟಾರು ಬೈಕನ್ನು ಚಾಲಿಸುತ್ತಿದ್ದ ಸುಹಾಸನು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ತಿತಿಮತಿಯ ಮಜ್ಜಿಗೆ ಹಳ್ಳ ಎಂಬಲ್ಲಿ ಬೈಕು ಸುಹಾಸನ ನಿಯಂತ್ರಣ ತಪ್ಪಿ ಮಗುಚಿಬಿದ್ದು ರಸ್ತೆಯನ್ನು ಉಜ್ಜಿಕೊಂಡು ಎಳೆದುಕೊಂಡು ಹೋದ ಪರಿಣಾಮ ಬೈಕಿನಲ್ಲಿದ್ದ ಹಿಂಬದಿ ಸವಾರ ಪ್ರದೀಪನು ಕೆಳಗೆ ಬಿದ್ದು ತೀವ್ರತರ ಗಾಯಗಳಿಂದ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವತಿಯ ಮಾನಭಂಗ ಯತ್ನ
                     ಬುದ್ದಿ ಮಾಂದ್ಯ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕುಶಾಲನಗರ ಬಳಿಯ ನಂಜರಾಯಪಟ್ನ ಗ್ರಾಮದಲ್ಲಿ ನಡೆದಿದೆ. ದಿನಾಂಕ 27-07-2016 ರಂದು ನಂಜರಾಯಪಟ್ನ ನಿವಾಸಿ ರಾಮಕೃಷ್ಣರವರು ಅದೇ ಗ್ರಾಮದ ನಿವಾಸಿ ರತೀಶ್ ಎಂಬವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಗೋಡೆಗೆ ನೀರು ಹಾಕುವ ಸಲುವಾಗಿ ಮದ್ಯಾಹ್ನ 02:00 ಗಂಟೆಗೆ ಹೋಗಿ ನೀರು ಹಾಕಿ ನಂತರ ಅವರ ತಮ್ಮ ಮಾಧವರವರ ಮನೆಯ ಬಳಿ ಹೋದಾಗ ಬಾಗಿಲು ತೆರೆದಿರುವುದನ್ನು ಕಂಡು ಒಳಗೆ ಹೋದಾಗ ಪಕ್ಕದ ಹಾಡಿಯ ವಾಸಿ ಜಗದೀಶ ಎಂಬಾತನು ಮಾಧವರರವರ ಬುದ್ದಿ ಮಾಂದ್ಯ ಮಗಳು ದಿಲ್ ಶಾ ಎಂಬ ಯುವತಿಯನ್ನು ಮಾನಭಂಗ ಮಾಡುವ ಉದ್ದೇಶದಿಂದ ಎಳೆದಾಡುತ್ತಿದ್ದುದನ್ನು ಕಂಡಾಗ ಜಗದೀಶನು ರಾಮಕೃಷ್ಣರವರನ್ನು ಕಂಡು ಮನೆಯ ಹಿಂಭಾಗಿಲಿನಿಂದ ಓಡಿ ಹೋಗಿರುವುದಾಗಿದೆ. ನಂತರ ಈ ವಿಷಯವನ್ನು ರಾಮಕೃಷ್ಣರವರು ಅವರ ತಮ್ಮನ ಹೆಂಡತಿ ಕೋಮಲಾರವರಿಗೆ ತಿಳಿಸಿ ಅಕ್ಕಪಕ್ಕದಲ್ಲಿ ಹುಡುಕಾಡಿ ಜಗದೀಶನನ್ನು ಹುಡುಕಿ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಾಯಿ ಮಗ ನಾಪತ್ತೆ.
                         ತಾಯಿ ಹಾಗೂ ಮಗ ಇಬ್ಬರೂ ಮನೆಯಿಂದ ನಾಪತ್ತೆಯಾದ ಘಟನೆ ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆಯಲ್ಲಿ ನಡೆದಿದೆ. ದಿನಾಂಕ : 18-07-22016 ರಂದು ಹಾನಗಲ್ಲು ಬಾಣೆ ನಿವಾಸಿ ಶಾಂತಮ್ಮ ಎಂಬವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಸಂಜೆ 3:00 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅವರ ಸೊಸೆ ಲಕ್ಷ್ಮಿಯು ಶಾಂತಮ್ಮನವರ ಮಗಳು ಲಲಿತಾ ಎಂಬಾಕೆಯು ಆಕೆಯ ಮಗ ಜೀವನ್‌ನನ್ನು ಕರೆದುಕೊಂಡು ಬೆಳಿಗ್ಗೆ 9:00 ಗಂಟೆಗೆ ಮನೆಯಲ್ಲಿ ಹೇಳದೆ ಎಲ್ಲಿಗೋ ಹೋಗಿರುತ್ತಾಳೆ ಈ ವರೆಗೂ ವಾಪಸ್ಸು ಬಂದಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಆಕ ಹಾಗೂ ಮಗ ಜೀವನ್‌ನನ್ನು ಎಲ್ಲಾ ಕಡೆ ಹುಡುಕಿ ಪತ್ತೆಯಾಗದ ಕಾರಣ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಅಪರಿಚಿತ ಶವ ಪತ್ತೆ.
                    ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಬೇತ್ರಿ ಬಳಿ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿದೆ. ದಿನಾಂಕ: 27-07-16ರಂದು ಬೇತ್ರಿ ಬಳಿಯ ನಾಲ್ಕೇರಿ ನಿವಾಸಿ ಮಣಿ ಎಂಬವರು ಕರಿಮೆಣಸು ಬಳ್ಳಿಗೆ ಔಷಧಿ ಸಿಂಪಡಿಸುವ ಸಲುವಾಗಿ ಬೇತ್ರಿಯ ಕಾವೇರಿ ನದಿಯಿಂದ ನೀರನ್ನು ತಂದು ಡ್ರಮ್ ಗೆ ಹಾಕಿ ಔಷಧಿ ಮಿಶ್ರಣ ಮಾಡುತ್ತಿರುವಾಗ ಹೊಳೆ ಯಲ್ಲಿ ಯಾವುದೋ ದುರ್ವಾಸನೆ ಬರುತ್ತಿದ್ದು, ಮಣಿರವರು ತನ್ನೊಂದಿಗೆ ಜೊತೆಯಲ್ಲಿದ್ದ ಕೆಲಸದ ಆಳುಗಳಾದ ಅಯ್ಯಪ್ಪ ಮತ್ತು ವಿಶ್ವನಾಥ್‌ರವರನ್ನು ಜೊತೆಯಲ್ಲಿ ಕರೆದುಕೊಂಡು ನೀರು ತೆಗೆಯುವ ಸ್ಥಳದ ಸುತ್ತಮುತ್ತ ನೋಡಲಾಗಿ ನೀರು ತೆಗೆಯುವ ಸ್ಥಳದಿಂದ ಸುಮಾರು 50 ಅಡಿ ಹೊಳೆಯ ಮೇಲು ಬದಿಗೆ ನೀರಿನಲ್ಲಿ ಒಂದು ಗಂಡಸಿನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿ ಹರಿದು ಪಾದಚಾರಿ ಸಾವು
                       ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬನ ಮೇಲೆ ಲಾರಿ ಹರಿದು ಸಾವಿಗೀಡಾದ ಘಟನೆ ಕುಶಾಳನಗರ ಬಳಿಯ ಹಕ್ಕೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 26-07-2016 ರಂದು ಸಂಜೆ ಹಕ್ಕೆ ಗ್ರಾಮದ ನಿವಾಸಿ ನಟರಾಜು ಎಂಬವರ ತಂದೆ ಪುಟ್ಟರಾಜುರವರು ಕಣಿವೆಗೆ ಬಂದು ವಾಪಾಸ್ಸು ಮನೆಗೆ ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರ ಕಡೆಯಿಂದ ಕೆಎ-12-ಬಿ-2641 ರ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಅದರ ಚಾಲಕ ಗೋಣಿಮರೂರಿನ ರವಿ ಎಂಬವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಓಡಿಸಿಕೊಂಡು ಬಂದು ದಾರಿಯ ಎಡಬದಿಯಲ್ಲಿ ನಡೆದುಕೊಂಡ ಹೋಗುತ್ತಿದ್ದ ಪುಟ್ಟರಾಜುರವರಿಗೆ ಡಿಕ್ಕಿಪಡಿಸಿದ ಪರಿಣಾಮ ನೆಲಕ್ಕೆ ಕುಸಿದ ಪುಟ್ಟರಾಜುರವರ ಮೇಲೆ ವಾಹನವು ಹರಿದುಹೋಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ದಾರಿ ಮದ್ಯೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, July 27, 2016

ಪಾದಚಾರಿಗೆ ಬಸ್‌ ಡಿಕ್ಕಿ.
                  ಪಾದಚಾರಿಯೊಬ್ಬನಿಗೆ ಬಸ್‌ ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 27/07/2016ರಂದು ಚೆಯ್ಯಂಡಾಣೆಯ ನಿವಾಸಿ ಜೇನುಕುರುಬರ ಗಣೇಶ ಎಂಬವರು ಅವರ ಪತ್ನಿ  ಜಯ  ಎಂಬವರೊಡನೆ ವಿರಾಜಪೇಟೆ ನಗರದ ಬ್ಲೂಬೆಲ್‌  ಮಿಠಾಯಿ  ಅಂಗಡಿಯ ಮುಂದೆ ನಡೆದುಕೊಂಡು ಹೋಗುತ್ತಿರುವಾಗ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಕೆಎ-12-ಎ-7722ರ ಖಾಸಗಿ ಬಸ್ಸನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್‌ನ ಟೈರು ಗಣೇಶರವರನ್ನು ಒರೆಸಿಕೊಂಡು ಹೋಗಿದ್ದು ಗಣೇಶರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಗೆ ಕೊಲೆ ಬೆದರಿಕೆ
                      ಪರಿಶಿಷ್ಠ ಪಂಗಡಕ್ಕೆ ಸೇರಿದ ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವ ಘಟನೆ ವಿರಾಜಪೇಟೆ ಬಳಿಯ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ. ಕಣ್ಣಂಗಾಲ ನಿವಾಸಿ ಎರವರ ಎನ್‌ ಈಶ್ವರಿ ಎಂಬವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಕಣ್ಣಂಗಾಲ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವ ಅವರು ಕಣ್ಣಂಗಾಲ ಗ್ರಾಮದ ಗೋಪಾಲಕೃಷ್ಣ ಎಂಬವರ ಲೈನು ಮನೆಯಲ್ಲಿ ವಾಸವಿರುತ್ತಾರೆ. ದಿನಾಂಕ 30/06/2016ರಂದು ಗೋಪಾಲಕೃಷ್ಣರವರು ಈಶ್ವರಿರವರನ್ನು ಕುರಿತು ಈಶ್ವರಿರವರಿಗೆ ವಿದ್ಯಾಭ್ಯಾಸ ಕಡಿಮೆ ಇರುವುದರಿಂದ ಪಂಚಾಯಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೆಂದೂ, ಆಕೆಯು ಪರಿಶಿಷ್ಠ ಪಂಗಡಕ್ಕೆ ಸೇರಿರುವುದರಿಂದ ಗೋಪಾಲಕೃಷ್ಣರವರು ಹೇಳಿದ ಹಾಗೆ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸಬೇಕೆಂದೂ ಇಲ್ಲದಿದ್ದರೆ ಆಕೆಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮವಾಗಿ ಶುಂಠಿ ಕಳವು
                         ಅಕ್ರಮವಾಗಿ  ತೋಟಕ್ಕೆ ಪ್ರವೇಶಿಸಿ ಶುಂಠಿ ಕಳವು ಮಾಡಿರುವ ಪ್ರಕರಣ ಸೋಮವಾರಪೇಟೆ ಬಳಿಯ ಹಚ್ಚಿನಾಡು ಗ್ರಾಮದಲ್ಲಿ ನಡೆದಿದೆ.ಹಚ್ಚಿನಾಡು ಗ್ರಾಮದ ನಿವಾಸಿ ಪಿ.ಎ.ಪೆಮ್ಮಯ್ಯ  ಎಂಬವರು ಗ್ರಾಮದಲ್ಲಿ ಅವರಿಗೆ ಸೇರಿದ 6.5 ಏಕರೆ ಜಾಗದಲ್ಲಿ 2014ನೇ ಸಾಲಿನಲ್ಲಿ ಶುಂಠಿ ಕೃಷಿ ಮಾಡಿದ್ದು, ಅದೇ ಗ್ರಾಮದ ನಿವಾಸಿಗಳಾದ ಪಿ.ಪೂವಮ್ಮ,  ಪಿ.ಎ.ದೇವಯ್ಯ ಮತ್ತು ಪೈಲೆಟ್‌ ಸುಂದರ ಎಂಬವರು ಸೇರಿಕೊಂಡು ಪೆಮ್ಮಯ್ಯನವರಿಗೆ ತಿಳಿಸದೆ ಅವರ ಶುಂಠಿ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಮಾರು ರೂ.10,00,000/- ದಷ್ಟು ಶುಂಠಿಯನ್ನು ಕಳವು ಮಾಡಿ ಪೆಮ್ಮಯ್ಯನವರಿಗೆ ನಷ್ಟ ಪಡಿಸಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮವಾಗಿ ಮರಳು ಸಾಗಾಟ ಪ್ರಕರಣ ಪತ್ತೆ.
                   ಅಕ್ರಮವಾಗಿ ಮರಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊನ್ನಂಪೇಟೆ ಪೊಲೀಸರು ಪತ್ತೆಹಚ್ಚಿದ್ದಾರೆ.  ದಿನಾಂಕ 26/07/2016ರಂದು ರಾತ್ರಿ ವೇಳೆ ಬಾಳೆಲೆ ಗ್ರಾಮದ ಗಣಪತಿ ದೇವಸ್ಥಾನದ ಬಳಿ ಕಳ್ಳಿಚಂಡ ಬ್ರಿಜೇಶ್‌ ಎಂಬವರು ಕೆ-12-ಎ-6533ರ ಲಾರಿಯಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದುದನ್ನು ಪೊನ್ನಂಪೇಟೆ ಪಿಎಸ್‌ಐ ಎಸ್‌.ಎನ್‌.ಜಯರಾಂರವರು ಪತ್ತೆ ಹಚ್ಚಿ ಲಾರಿ ಹಾಗೂ ಮರಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, July 26, 2016

ದೇವಸ್ಥಾನ ಕಳವು
                      ದೇವಸ್ಥಾನದ ಬಾಗಿಲು ಮುರಿದು ಪ್ರವೇಶಿಸಿ ಹಣ ಹಾಗೂ ಸೀರೆ ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಸೋಮೇಶ್ವರ ದೇವಾಲಯಕ್ಕೆ ದಿನಾಂಕ 25/07/2016ರ ರಾತ್ರಿ ವೇಳೆ ಯಾರೋ ಕಳ್ಳರು ದೇವಳದ ಬಾಗಿಲಿನ ಬೀಗವನ್ನು ಮೀಟಿ ಒಳ ಪ್ರವೇಶಿಸಿ ದೇವಾಲಯದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು ರೂ. 1000 - 1500 ರಷ್ಟು ಹಣ ಹಾಗೂ ಒಂದು ಸೀರೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೇವಾಲಯ ಸಮಿತಿ ಅಧ್ಯಕ್ಷರಾದ ಸೋಮೇಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ
                       ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 26/07/2016ರ ಬೆಳಗಿನ ಜಾವ ಸೋಮವಾರ ಪೇಟೆ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಆರ್‌. ಮಂಚಯ್ಯನವರು ಸಿಬ್ಬಂದಿಯೊಂದಿಗೆ ನಗರ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಕಾರ್ಪೋರೇಷನ್‌ ಬ್ಯಾಂಕ್ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಹಿಡಿದು ನಿಲ್ಲಿಸಿ ಪರಿಶೀಲಿಸಿದಾಗ ಓರ್ವನ ಬಳಿ ಒಂದು ಕಬ್ಬಿಣದ ರಾಡ್‌ ಇದ್ದು, ಇಬ್ಬರ ಹೆಸರು ವಿಳಾಸ ಕೇಳಲಾಗಿ ಒಬ್ಬ ಅಜಯ್‌ ಕುಮಾರ್‌, ಬಿಹಾರ ರಾಜ್ಯ ಎಂದೂ ಮತ್ತೊಬ್ಬ ಬ್ರಿಜೇಶ್‌ ಕುಮಾರ್‌, ಬಿಹಾರ ರಾಜ್ಯ ಎಂದು ತಿಳಿಸಿದ್ದು, ರಾತ್ರಿ ವೇಲೆಯಲ್ಲಿ ಆಯುಧ ಸಮೇತರಾಗಿ ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಲ್ಲಿರುವುದಾಗಿ ಶಂಕಿಸಿ ಅವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಾಗಿರುತ್ತದೆ. 

ಮಹಿಳೆಯ ಶಂಕಾಸ್ಪದ ಸಾವು
                     ಮಹಿಳೆಯೊಬ್ಬರು  ಶಂಕಾಸ್ಪದವಾಗಿ ಸಾವನ್ನಪ್ಪರುವ ಘಟನೆ ಸಿದ್ದಾಪುರ ಬಳಿಯ ಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/07/2016ರಂದು ಹೊಸೂರು ಗ್ರಾಮದ ನಿವಾಸಿ ಎಂ.ಎನ್‌.ಮುತ್ತಣ್ಣ ಎಂಬವರ ಲೈನು ಮನೆಯಲ್ಲಿರುವ ಕಾರ್ಮಿಕ ಮಹಿಳೆ ಪಾರ್ವತಿ ಎಂಬವರು ಮನೆಯೊಳಗೆ ಬಿದ್ದು ಹೋಗಿರುವುದಾಗಿ ಪಕ್ಕದ  ಮನೆಯ ಚೋಮಿ ಎಂಬವರು ಮುತ್ತಣ್ಣನವರಿಗೆ ತಿಳಿಸಿದ್ದು, ಕೂಡಲೇ ಮುತ್ತಣ್ಣನವರು ಪಾರ್ವತಿಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತೆಯು ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹಾ ಆಕೆಯ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಕಾಣೆ ಪ್ರಕರಣ
                      ಆಸ್ಪತ್ರೆಗೆಂದು ಹೋದ ಮಹಿಳೆ ಕಾಣೆಯಾದ ಪ್ರಕರಣ ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮದಲ್ಲಿ ನಡೆದಿದೆ. ಕಂಬಿಬಾಣೆ ನಿವಾಸಿ ಜೆ.ನಾಗರಾಜು ಎಂಬವರ ನಾದಿನಿ ವಿದ್ಯಾ ಎಂಬವರ ಮಗು ಆಕಸ್ಮಿಕವಾಗಿ ಸೀಮೆಣ್ಣೆಯನ್ನು ಕುಡಿದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗುವನ್ನು ನೋಡಲೆಂದು ನಾಗರಾಜುರವರ ಪತ್ನಿ ಸವಿತಾ ಎಂಬವರು ದಿನಾಂಖ 03/07/2016ರಂದು ಮನೆಯಿಂದ ತೆರಳಿದ್ದು ಇದುವರೆಗೂ ಮನೆಗೆ ತಿರುಗಿ ಬಾರದಿದ್ದು, ಆಕೆಯನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಮಡಿಕೇರಿ ಬಳಿಯ ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ  23/07/2016ರಂದು ಹೊಸ್ಕೇರಿ ನಿವಾಸಿ ಎಂ.ಡಿ.ಯತಿನ್‌ಎಂಬವರುಅವರ ತಂದೆ ದೇವಯ್ಯ ಮತ್ತು ತಾಯಿ ಭಾರತಿರವರೊಂದಿಗೆ ಬೆಂಗಳೂರಿಗೆ ಹೋಗಿ ದಿನಾಂಕ  25/07/2016ರಂದು ಮನೆಗೆ ಮರಳಿ ಬಂದಾಗ ಮನೆಯ ಗೇಟಿನ ಬೀಗವನ್ನು ಯಾರೊ ಒಡೆದು ಹಾಕಿರುವುದು ಕಂಡು ಬಂದು ಈ ಬಗ್ಗೆ ಅಲ್ಲೇ ಹತ್ತಿರದಲ್ಲಿ ಟ್ರ್ಯಾಕ್ಟರ್‌ನಿಂದ ಕಾಫಿ ಗಿಡಗಳನ್ನು ಇಳಿಸುತ್ತಿದ್ದ ಯತಿನ್‌ರವರ ಚಿಕ್ಕಪ್ಪ ಭುವನೇಶ್ವರರವರನ್ನು ವಿಚಾರಿಸಿದಾಗ ಭುವನೇಶ್ವರ್‌, ಅವರ ಮಗ ವಿಕ್ರಂ ಮತ್ತು ಭುವನೇಶ್ವರ್‌ರವರ ಪತ್ನಿ ಕಮಲರವರು ಏಕಾ ಏಕಿ ಯತಿನ್‌ರವರ ಮೇಲೆ ಕಬ್ಬಿಣದ ಜಾಕಿ ಲಿವರ್‌ನಿಂದ ಹಲ್ಲೆ ಮಾಡಿದ್ದು, ಯತಿನ್‌ರವರ ಮೊಬೈಲನ್ನು ಸಹಾ ನೆಲಕ್ಕೆ ಎಸೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯಾರ್ಥಿ ನಾಪತ್ತೆ 
                   ಕಾಲೇಜಿಗೆಂದು  ಹೋದ ಯುವಕನೋರ್ವ  ನಾಪತ್ತೆಯಾದ  ಘಟನೆ ಸಿದ್ದಾಪುರ ಬಳಿಯ ಇಂಜಿಲಗೆರೆ ಎಂಬಲ್ಲಿ ನಡೆದಿದೆ. ಪುಲಿಯೇರಿ ಗ್ರಾಮದ ಇಂಜಿಲಗೆರೆ ನಿವಾಸಿ ಕೆ.ಯು.ಶಂಕರ ಎಂಬವರ ಅಣ್ಣ ಶಶಿಧರ ಎಂಬವರ ಮಗ ನಿತಿನ್‌ ಎಂಬಾತನು ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಂಕರರವರ ಮನೆಯಿಂದ ಕಾಲೇಜಿಗೆ ಹೋಗುತ್ತದ್ದು ದಿನಾಂಕ 21/07/2016ರಂದು ಎಂದಿನಂತೆ ಕಾಲೇಜಿಗೆ ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರಳು ಕಳವು ಪ್ರಕರಣ 
                          ಅಕ್ರಮವಾಗಿ ನದಿಯಿಂದ ಮರಳು ಕಳ್ಳತನ ಮಾಡುತ್ತದ್ದ ಪ್ರಕರಣವನ್ನು ನಾಪೋಕ್ಲು ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 25/07/2016ರಂದು ನಾಪೋಕ್ಲು ಠಾಣಾ ಪಿಎಸ್‌ಐ ವೆಂಕಟೇಶ್‌ರವರು ಕುಂಜಿಲ ಗ್ರಾಮದ ಕಕ್ಕಬೆ ಹೊಳೆಯ ಕಡೆ ಗಸ್ತಿನಲ್ಲಿರುವಾಗ ಕಕ್ಕಬೆ ಹೊಳೆಯಲ್ಲಿ ದೋಣಿಯನ್ನುಪಯೋಗಿಸಿ  ಯಾರೋ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡು ಬಂದಿದ್ದು, ಪಿಎಸ್‌ಐ ವೆಂಕಟೇಶ್‌ರವರು ಸ್ಥಳಕ್ಕೆ ತೆರಳಿದಾಗ ಅಲ್ಲಿದ್ದ ಇಬ್ಬರು ವ್ಯಕ್ತಿಗಳೂ ಇವರನ್ನು ಕಂಡು ಓಡಿ ಹೋಗಿದ್ದು, ಪಿಎಸ್‌ಐರವರು ಅಕ್ರಮವಾಗಿ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಕಬ್ಬಿಣದ ದೋಣಿಯನ್ನು ವಶಪಡಿಸಿಕೊಂಡು ಮೊಕದದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ, ಏಳು ಜನರ ಬಂಧನ
                      ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ದಿನಾಂಕ 25/07/2016ರಂದು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಶನಿವಾರಸಂತೆ ಠಾಣೆ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿನ ಖಾಲಿ ಜಾಗಕ್ಕೆ ಧಾಳಿನಡೆಸಿ ಅಲ್ಲಿ ಅಕ್ರಮವಾಗಿ ಇಸ್ಪೇಟು  ಎಲೆಗಳಿಂದ  ಜೂಜಾಡುತ್ತಿದ್ದ ಶಿವರಾಜ್‌, ಪರಮೇಶ್‌, ತೇಜೇಶ್‌, ರಾಜ, ಸಂತೋಶ್‌, ಸತೀಶ್‌ ಮತ್ತು ವೀರಭದ್ರಪ್ಪ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಹಣ.ರೂ.5200/-ನ್ನು ಅಮಾನತ್ತುಪಡಿಸಿಕೊಂಡು ಮೊಕದ್ದಮೆ ಧಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ
                      ಕೆಲಸಕ್ಕೆಂದು ಹೋದ ಮಹಿಳೆಯೊಬ್ಬರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/07/2016ರಂದು ಹೆಗ್ಗಳ ಗ್ರಾಮದ ಕೊರತಿಕಾಡು ಪೈಸಾರಿ ನಿವಾಸಿ ದಿಲೀಪ್‌ ಎಂಬವರ ಪತ್ನಿ ಭವ್ಯ ಎಂಬಾಕೆಯು ಎಂದಿನಂತೆ ಕೂಲಿ ಕೆಲಸಕ್ಕೆ ಹೋದವರು ಮನೆಗೆ ತಿರುಗಿ ಬಾರದೆ ನೆಂಟರಿಷ್ಟರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                     ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 20/07/2016ರಂದು ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಅಜಿತ್‌ ಕುಮಾರ್‌ರವರನ್ನು ರಾಜು ಎಂಬವರು ಕುಶಾಲನಗರದ ಅಬಕಾರಿ ಕಚೇರಿಗೆ ಅಬಕಾರಿ ನಿರೀಕ್ಷಕರು ಕರೆಯುತ್ತಿರುವುದಾಗಿ ಹೇಳೆ ಕರೆಸಿಕೊಂಡು ಅಬಕಾರಿ ಕಚೇರಿಯಲ್ಲಿ ಅಜಿತ್‌ಕುಮಾರ್‌ರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಅಜಿತ್‌ ಕುಮಾರ್‌ರವರು ಅಬಕಾರಿ ನಿರೀಕ್ಷಕರಾದ ಚೈತ್ರಾರವರ ಮೇಲೆ ಈ ಹಿಂದೆ ದೂರು ನೀಡಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ದೇವಸ್ಥಾನ ಕಳವು
                      ದೇವಸ್ಥಾನದ ಬಾಗಿಲು ಮುರಿದು ಪ್ರವೇಶಿಸಿ ಹಣ ಹಾಗೂ ಸೀರೆ ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಸೋಮೇಶ್ವರ ದೇವಾಲಯಕ್ಕೆ ದಿನಾಂಕ 25/07/2016ರ ರಾತ್ರಿ ವೇಳೆ ಯಾರೋ ಕಳ್ಳರು ದೇವಳದ ಬಾಗಿಲಿನ ಬೀಗವನ್ನು ಮೀಟಿ ಒಳ ಪ್ರವೇಶಿಸಿ ದೇವಾಲಯದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು ರೂ. 1000 - 1500 ರಷ್ಟು ಹಣ ಹಾಗೂ ಒಂದು ಸೀರೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೇವಾಲಯ ಸಮಿತಿ ಅಧ್ಯಕ್ಷರಾದ ಸೋಮೇಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ
                       ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 26/07/2016ರ ಬೆಳಗಿನ ಜಾವ ಸೋಮವಾರ ಪೇಟೆ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಆರ್‌. ಮಂಚಯ್ಯನವರು ಸಿಬ್ಬಂದಿಯೊಂದಿಗೆ ನಗರ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಕಾರ್ಪೋರೇಷನ್‌ ಬ್ಯಾಂಕ್ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಹಿಡಿದು ನಿಲ್ಲಿಸಿ ಪರಿಶೀಲಿಸಿದಾಗ ಓರ್ವನ ಬಳಿ ಒಂದು ಕಬ್ಬಿಣದ ರಾಡ್‌ ಇದ್ದು, ಇಬ್ಬರ ಹೆಸರು ವಿಳಾಸ ಕೇಳಲಾಗಿ ಒಬ್ಬ ಅಜಯ್‌ ಕುಮಾರ್‌, ಬಿಹಾರ ರಾಜ್ಯ ಎಂದೂ ಮತ್ತೊಬ್ಬ ಬ್ರಿಜೇಶ್‌ ಕುಮಾರ್‌, ಬಿಹಾರ ರಾಜ್ಯ ಎಂದು ತಿಳಿಸಿದ್ದು, ರಾತ್ರಿ ವೇಲೆಯಲ್ಲಿ ಆಯುಧ ಸಮೇತರಾಗಿ ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಲ್ಲಿರುವುದಾಗಿ ಶಂಕಿಸಿ ಅವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಾಗಿರುತ್ತದೆ. 

ಮಹಿಳೆಯ ಶಂಕಾಸ್ಪದ ಸಾವು
                     ಮಹಿಳೆಯೊಬ್ಬರು  ಶಂಕಾಸ್ಪದವಾಗಿ ಸಾವನ್ನಪ್ಪರುವ ಘಟನೆ ಸಿದ್ದಾಪುರ ಬಳಿಯ ಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/07/2016ರಂದು ಹೊಸೂರು ಗ್ರಾಮದ ನಿವಾಸಿ ಎಂ.ಎನ್‌.ಮುತ್ತಣ್ಣ ಎಂಬವರ ಲೈನು ಮನೆಯಲ್ಲಿರುವ ಕಾರ್ಮಿಕ ಮಹಿಳೆ ಪಾರ್ವತಿ ಎಂಬವರು ಮನೆಯೊಳಗೆ ಬಿದ್ದು ಹೋಗಿರುವುದಾಗಿ ಪಕ್ಕದ  ಮನೆಯ ಚೋಮಿ ಎಂಬವರು ಮುತ್ತಣ್ಣನವರಿಗೆ ತಿಳಿಸಿದ್ದು, ಕೂಡಲೇ ಮುತ್ತಣ್ಣನವರು ಪಾರ್ವತಿಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತೆಯು ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹಾ ಆಕೆಯ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಕಾಣೆ ಪ್ರಕರಣ
                      ಆಸ್ಪತ್ರೆಗೆಂದು ಹೋದ ಮಹಿಳೆ ಕಾಣೆಯಾದ ಪ್ರಕರಣ ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮದಲ್ಲಿ ನಡೆದಿದೆ. ಕಂಬಿಬಾಣೆ ನಿವಾಸಿ ಜೆ.ನಾಗರಾಜು ಎಂಬವರ ನಾದಿನಿ ವಿದ್ಯಾ ಎಂಬವರ ಮಗು ಆಕಸ್ಮಿಕವಾಗಿ ಸೀಮೆಣ್ಣೆಯನ್ನು ಕುಡಿದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗುವನ್ನು ನೋಡಲೆಂದು ನಾಗರಾಜುರವರ ಪತ್ನಿ ಸವಿತಾ ಎಂಬವರು ದಿನಾಂಖ 03/07/2016ರಂದು ಮನೆಯಿಂದ ತೆರಳಿದ್ದು ಇದುವರೆಗೂ ಮನೆಗೆ ತಿರುಗಿ ಬಾರದಿದ್ದು, ಆಕೆಯನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಮಡಿಕೇರಿ ಬಳಿಯ ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ  23/07/2016ರಂದು ಹೊಸ್ಕೇರಿ ನಿವಾಸಿ ಎಂ.ಡಿ.ಯತಿನ್‌ಎಂಬವರುಅವರ ತಂದೆ ದೇವಯ್ಯ ಮತ್ತು ತಾಯಿ ಭಾರತಿರವರೊಂದಿಗೆ ಬೆಂಗಳೂರಿಗೆ ಹೋಗಿ ದಿನಾಂಕ  25/07/2016ರಂದು ಮನೆಗೆ ಮರಳಿ ಬಂದಾಗ ಮನೆಯ ಗೇಟಿನ ಬೀಗವನ್ನು ಯಾರೊ ಒಡೆದು ಹಾಕಿರುವುದು ಕಂಡು ಬಂದು ಈ ಬಗ್ಗೆ ಅಲ್ಲೇ ಹತ್ತಿರದಲ್ಲಿ ಟ್ರ್ಯಾಕ್ಟರ್‌ನಿಂದ ಕಾಫಿ ಗಿಡಗಳನ್ನು ಇಳಿಸುತ್ತಿದ್ದ ಯತಿನ್‌ರವರ ಚಿಕ್ಕಪ್ಪ ಭುವನೇಶ್ವರರವರನ್ನು ವಿಚಾರಿಸಿದಾಗ ಭುವನೇಶ್ವರ್‌, ಅವರ ಮಗ ವಿಕ್ರಂ ಮತ್ತು ಭುವನೇಶ್ವರ್‌ರವರ ಪತ್ನಿ ಕಮಲರವರು ಏಕಾ ಏಕಿ ಯತಿನ್‌ರವರ ಮೇಲೆ ಕಬ್ಬಿಣದ ಜಾಕಿ ಲಿವರ್‌ನಿಂದ ಹಲ್ಲೆ ಮಾಡಿದ್ದು, ಯತಿನ್‌ರವರ ಮೊಬೈಲನ್ನು ಸಹಾ ನೆಲಕ್ಕೆ ಎಸೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯಾರ್ಥಿ ನಾಪತ್ತೆ 
                   ಕಾಲೇಜಿಗೆಂದು  ಹೋದ ಯುವಕನೋರ್ವ  ನಾಪತ್ತೆಯಾದ  ಘಟನೆ ಸಿದ್ದಾಪುರ ಬಳಿಯ ಇಂಜಿಲಗೆರೆ ಎಂಬಲ್ಲಿ ನಡೆದಿದೆ. ಪುಲಿಯೇರಿ ಗ್ರಾಮದ ಇಂಜಿಲಗೆರೆ ನಿವಾಸಿ ಕೆ.ಯು.ಶಂಕರ ಎಂಬವರ ಅಣ್ಣ ಶಶಿಧರ ಎಂಬವರ ಮಗ ನಿತಿನ್‌ ಎಂಬಾತನು ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಂಕರರವರ ಮನೆಯಿಂದ ಕಾಲೇಜಿಗೆ ಹೋಗುತ್ತದ್ದು ದಿನಾಂಕ 21/07/2016ರಂದು ಎಂದಿನಂತೆ ಕಾಲೇಜಿಗೆ ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರಳು ಕಳವು ಪ್ರಕರಣ 
                          ಅಕ್ರಮವಾಗಿ ನದಿಯಿಂದ ಮರಳು ಕಳ್ಳತನ ಮಾಡುತ್ತದ್ದ ಪ್ರಕರಣವನ್ನು ನಾಪೋಕ್ಲು ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 25/07/2016ರಂದು ನಾಪೋಕ್ಲು ಠಾಣಾ ಪಿಎಸ್‌ಐ ವೆಂಕಟೇಶ್‌ರವರು ಕುಂಜಿಲ ಗ್ರಾಮದ ಕಕ್ಕಬೆ ಹೊಳೆಯ ಕಡೆ ಗಸ್ತಿನಲ್ಲಿರುವಾಗ ಕಕ್ಕಬೆ ಹೊಳೆಯಲ್ಲಿ ದೋಣಿಯನ್ನುಪಯೋಗಿಸಿ  ಯಾರೋ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡು ಬಂದಿದ್ದು, ಪಿಎಸ್‌ಐ ವೆಂಕಟೇಶ್‌ರವರು ಸ್ಥಳಕ್ಕೆ ತೆರಳಿದಾಗ ಅಲ್ಲಿದ್ದ ಇಬ್ಬರು ವ್ಯಕ್ತಿಗಳೂ ಇವರನ್ನು ಕಂಡು ಓಡಿ ಹೋಗಿದ್ದು, ಪಿಎಸ್‌ಐರವರು ಅಕ್ರಮವಾಗಿ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಕಬ್ಬಿಣದ ದೋಣಿಯನ್ನು ವಶಪಡಿಸಿಕೊಂಡು ಮೊಕದದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ, ಏಳು ಜನರ ಬಂಧನ
                      ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ದಿನಾಂಕ 25/07/2016ರಂದು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಶನಿವಾರಸಂತೆ ಠಾಣೆ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿನ ಖಾಲಿ ಜಾಗಕ್ಕೆ ಧಾಳಿನಡೆಸಿ ಅಲ್ಲಿ ಅಕ್ರಮವಾಗಿ ಇಸ್ಪೇಟು  ಎಲೆಗಳಿಂದ  ಜೂಜಾಡುತ್ತಿದ್ದ ಶಿವರಾಜ್‌, ಪರಮೇಶ್‌, ತೇಜೇಶ್‌, ರಾಜ, ಸಂತೋಶ್‌, ಸತೀಶ್‌ ಮತ್ತು ವೀರಭದ್ರಪ್ಪ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಹಣ.ರೂ.5200/-ನ್ನು ಅಮಾನತ್ತುಪಡಿಸಿಕೊಂಡು ಮೊಕದ್ದಮೆ ಧಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ
                      ಕೆಲಸಕ್ಕೆಂದು ಹೋದ ಮಹಿಳೆಯೊಬ್ಬರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/07/2016ರಂದು ಹೆಗ್ಗಳ ಗ್ರಾಮದ ಕೊರತಿಕಾಡು ಪೈಸಾರಿ ನಿವಾಸಿ ದಿಲೀಪ್‌ ಎಂಬವರ ಪತ್ನಿ ಭವ್ಯ ಎಂಬಾಕೆಯು ಎಂದಿನಂತೆ ಕೂಲಿ ಕೆಲಸಕ್ಕೆ ಹೋದವರು ಮನೆಗೆ ತಿರುಗಿ ಬಾರದೆ ನೆಂಟರಿಷ್ಟರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                     ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 20/07/2016ರಂದು ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಅಜಿತ್‌ ಕುಮಾರ್‌ರವರನ್ನು ರಾಜು ಎಂಬವರು ಕುಶಾಲನಗರದ ಅಬಕಾರಿ ಕಚೇರಿಗೆ ಅಬಕಾರಿ ನಿರೀಕ್ಷಕರು ಕರೆಯುತ್ತಿರುವುದಾಗಿ ಹೇಳೆ ಕರೆಸಿಕೊಂಡು ಅಬಕಾರಿ ಕಚೇರಿಯಲ್ಲಿ ಅಜಿತ್‌ಕುಮಾರ್‌ರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಅಜಿತ್‌ ಕುಮಾರ್‌ರವರು ಅಬಕಾರಿ ನಿರೀಕ್ಷಕರಾದ ಚೈತ್ರಾರವರ ಮೇಲೆ ಈ ಹಿಂದೆ ದೂರು ನೀಡಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, July 25, 2016

ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆ
               ಕತ್ತಿಯಿಂದ ಕಡಿದು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಸಿದ್ದಾಪುರ ಬಳಿಯ ವಾಲ್ನೂರು ಗ್ರಾಮದ ಬಾಳೆಗುಂಡಿ ಹಾಡಿಯಲ್ಲಿ ನಡೆದಿದೆ. ದಿನಾಂಕ 24/07/2016ರ ರಾತ್ರಿ ವೇಳೆ ಬಾಳೆಗುಮಡಿ ಹಾಡಿಯ ನಿವಾಸಿಗಳಾದ ಜೇನುಕುರುಬರ ಜಾನಕಿ ಹಾಗೂ ಆಕೆಯ ಪತಿ ರಾಮುರವರು ಪರಸ್ಪರ ಬಾಯಿ ಮಾತಿನಲ್ಲಿ ಜಗಳವಾಡುತ್ತಿರುವ ಸಮಯದಲ್ಲಿ ಪಕ್ಕದ ಮನೆಯ ನಿವಾಸಿ ಸುರೇಶ ಎಂಬವರು ರಾಮರವರ ಬಳಿ ಬಂದು ರಾಮರವರು ಆತನನ್ನು ಬೈಯುತ್ತಿರುವುದಾಗಿ ಆಕ್ಷೇಪಿಸಿ ಏಕಾ ಏಕಿ ಆತನ ಕೈಲ್ಲಿದ್ದ ಕತ್ತಿಯಿಂದ ರಾಮರವರ ತಲೆಗೆ ತೀವ್ರತರವಾಗಿ ಕಡಿದು ಹಲ್ಲೆ ಮಾಡಿದ ಪರಿಣಾಮ ರಾಮರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಆರೋಪಿ ಸುರೇಶ ನಾಪತ್ತೆಯಾಗಿದ್ದು ಶೋಧಕ್ಕೆ ಕ್ರಮ ಕೈಗೊಳ್ಳಲಾಗಿದೆ. 

ಅಕ್ರಮ ಲಾಟರಿ ಮಾರಾಟ, ಓರ್ವನ ಬಂಧನ
                 ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಸಿದ್ದಾಪುರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ದಿನಾಂಕ 24/07/2016ರ ಸಂಜೆ ವೇಳೆ ಪಾಳಿಬೆಟ್ಟದ ಚೆನ್ನಯ್ಯನಕೋಟೆ ರಸ್ತೆಯಲ್ಲಿರುವ ಅಂಗಡಿಯೊಂದರ ಬಳಿ ಓರ್ವ ವ್ಯಕ್ತಿಯು ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ  ಸಿದ್ದಾಪುರ  ಠಾಣೆಯ ಪಿಎಸ್‌ಐ ಬಿ.ಜಿ.ಕುಮಾರ್‌ರವರು ಸಿಬ್ಬಂದಿಗಳೊಂದಿಗೆ ತೆರಳಿ ಪಾಲಿಬೆಟ್ಟದ ಚೆನ್ನಯ್ಯನಕೋಟೆ ರಸ್ತೆಯಲ್ಲಿರುವ ಕುಟ್ಟಂಡ ಸಾಬು ಎಂಬವರಿಗೆ ಸೇರಿದ ಅಂಗಡಿಯಲ್ಲಿ ಚೆನ್ನಯ್ಯನ ಕೋಟೆ ನಿವಾಸಿ ವಿ.ಆರ್‌. ಹರೀಶ ಎಂಬಾತನು ಕರ್ನಾಟಕ ರಾಜ್ಯದಲ್ಲಿ ನಿಷೇಧಿಸಿರುವ ಕೇರಳ ರಾಜ್ಯದ ಲಾಟರಿ ಟಿಕೆಟುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆತನಿಂದ 20 ಕೇರಳ ರಾಜ್ಯದ ವಿವಿವಧ ಲಾಟರಿಗಳು ಮತ್ತು ಹಣ ರೂ.13,300 ಮತ್ತು ಮೊಬೈಲ್‌ಗಳನ್ನು ಅಮಾನತ್ತುಪಡಿಸಿಕೊಂಡು ಆತನನ್ನು ಬಂಧಿಸಿ ಸಿದ್ದಾಪುರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೇಲಿ ಮುರಿದು ಅಕ್ರಮ ಪ್ರವೇಶ, ಹಾನಿ
                        ಅಕ್ರಮವಾಗಿ ತಂತಿ ಬೇಲಿಯನ್ನು ಕಿತ್ತು ಹಾನಿಗೊಳಿಸಿದ ಪ್ರಕರಣ ವಿರಾಜಪೇಟೆ ನಗರದಲ್ಲಿ ನಡೆದಿದೆ. ವಿರಾಜಪೇಟೆ ಬಳಿಯ ಕದನೂರು ನಿವಾಸಿ ಕುಟ್ಟಪ್ಪ ಎಂಬವರು ವಿರಾಜಪೇಟೆ ನಗರದ ಪಂಜರುಪೇಟೆಯ ಅಂಬಟ್ಟಿ ಎಂಬಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ವ್ಯವಸಾಯ ಮಾಡುತ್ತಿದ್ದು, ಭೂಮಿಯ ಸುತ್ತಲೂ ತಂತಿ ಬೇಲಿಯನ್ನು ಹಾಕಿದ್ದರು. ದಿನಾಂಕ 24/07/2016ರಂದು ಕುಟ್ಟಪ್ಪನವರು ಕೆಲಸದ ಬಗ್ಗೆ ಕಾರ್ಮಿಕರನ್ನು ಕರೆದುಕೊಂಡು ಬಂದು ನೋಡಿದಾಗ ಆರೋಪಿಗಳಾದ ಆನಂದ, ತಿಲಕ್ ಮತ್ತು ಪವನ್‌ ಎಂಬವರು ಕುಟ್ಟಪ್ಪನವರು ಹಾಕಿದ್ದ ತಂತಿ ಬೇಲಿಯನ್ನು ಹಾನಿಗೊಳಿಸಿ ಕುಟ್ಟಪ್ಪನವರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ ಅವರ ಜೀಪನ್ನು ನಿಲ್ಲಿಸಿದ್ದು ಕುಟ್ಟಪ್ಪನವರಿಗೆ ಸುಮಾರು ರೂ.3000/- ದಷ್ಟು ನಷ್ಟ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, July 24, 2016

 ದಿ.24/07/2016ರಿಂದ ಅನಿರ್ದಿಷ್ಟ ಕಾಲ ಪ್ರತಿಬಂಧಕಾಜ್ಞೆ 
          ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳು ವೇತನ ಪರಿಷ್ಕರಣೆ ಕುರಿತು ದಿನಾಂಕ 24/07/2016ರಿಂದ ರಾಜ್ಯಾದ್ಯಂತ  ಅನಿರ್ದಿಷ್ಟ ಕಾಲ ಮುಷ್ಕರ ಹಮ್ಮಿಕೊಂಡಿದ್ದು, ಮುಷ್ಕರದ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸ್ಥಳೀಯ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು ದಿನಾಂಕ 24/07/2016ರ ರಾತ್ರಿ 11:00 ಗಂಟೆಯಿಂದ ಅನ್ವಯವಾಗುವಂತೆ ದಂಡ ಪ್ರಕ್ರಿಯಾ ಸಂಹಿತೆ 1973 ರ ವಿಧಿ 144ರನ್ವಯ ಮಡಿಕೇರಿ ನಗರದ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ವಿಧಿಸಿ ಆದೇಶಿಸಿರುತ್ತಾರೆ. ಈ ಪ್ರತಿಬಂಧಕಾಜ್ಞೆಯು ಮುಂದಿನ ಆದೇಶದ ವರೆಗೆ ಜಾರಿಯಲ್ಲಿದ್ದು, ಪ್ರತಿಬಂಧಕಾಜ್ಞೆಯ ಸಮಯದಲ್ಲಿ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಅಕ್ರಮ ಕೂಟ ಸೇರುವುದು, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಕಂಡ ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಬೈಕಿಗೆ ಕಾರು ಡಿಕ್ಕಿ, ಇಬ್ಬರಿಗೆ ಗಾಯ
                ಬೈಕಿಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಇಬ್ಬರು ಗಾಯಾಳುಗಳಾದ ಘಟನೆ ಶನಿವಾರಸಂತೆ ಬಳಿಯ ಗುಡುಗಳಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/07/2016ರಂದು ಕಾಜೂರು ಗ್ರಾಮದ ನಿವಾಸಿ ಲೋಕೇಶ ಎಂಬವರು ಒಡೆಯನಪುರದಲ್ಲಿರುವ ಅವರ ಮಾವನ ಮನೆಗೆ ಹೋಗಿ ವಾಪಾಸು ಅವರ ಭಾವ ಮಹೇಶ ಎಂಬವರೊಂದಿಗೆ ಲೋಕೇಶರವರ ಮೋಟಾರು ಬೈಕು ಸಂಖ್ಯೆ ಕೆಎ-04-ಹೆಚ್‌ಡಿ-4808ರಲ್ಲಿ ಬರುತ್ತಿರುವಾಗ ಗುಡುಗಳಲೆಯ ಸಾರ್ವಜನಿಕ ರಸ್ತೆಯಲ್ಲಿ ಎದುರಿನಂದ ಒಂದು ಕಾರು ಸಂಖ್ಯೆ ಕೆಎ-12-ಪಿ-7927ನ್ನು ಅದರ ಚಾಲಕ ಜಗದೀಶ್‌ ಎಂಬವರು ಅತಿ ವೇಗ ಮತ್ತು ಅಜಾಗೂಕತೆಯಿಂದ ಚಾಲಿಸಿಕೊಂಡು ಬಂದು ಲೋಕೇಶರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಲೋಕೇಶ ಮತ್ತು ಮಹೇಶ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಪಿಕ್‌ಅಪ್‌ ಡಿಕ್ಕಿ
                    ಸ್ಕೂಟರೊಂದಕ್ಕೆ ಪಿಕ್‌ಅಪ್‌ ಜೀಪು ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರನಿಗೆ ಗಾಯಗಳಾದ ಘಟನೆ ವಿರಾಜಪೇಟೆ ಬಳಿಯ ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 23/07/2016ರಂದು ಕೊಟ್ಟೋಳಿ ಗ್ರಾಮದ ಧಾರಾ ಮಹೇಶ್ವರ ದೇವಾಲಯದ ಅರ್ಚಕರಾದ ಕೆ. ಗೋಪಾಲ ತೋಟತ್ತಿಲ್‌ ಲಾಯ ಎಂಬವರು ಪೂಜೆ ಮುಗಿಸಿ ದೇವಾಲಯದ ಸಮೀಪವಿರುವ ಚಂಗಚಂಡ ಸುಬ್ರಮಣಿ ಎಂಬವರಿಗೆ ಪ್ರಸಾದವನ್ನು ಕೊಟ್ಟು ಬರುವುದಕ್ಕೆಂದು ಅವರ ಸ್ಕೂಟರ್‌ ಸಂಖ್ಯೆ ಕೆಎ-12-ಎಲ್‌-2184ರಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಕೆಎ-12-ಎ-0858ರ ಪಿಕ್‌ಅಪ್‌ ಜೇಪನ್ನು ಅದರ ಚಾಲಕನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕೆ.ಗೋಪಾಲ ತೋಟತ್ತಿಲ್‌ ಲಾಯರವರು ಚಾಲಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೋಪಾಲರವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಸಾಗಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಶಂಕಾಸ್ಪದ ವ್ಯಕ್ತಿಯ ಬಂಧನ
                   ಅನುಮಾನಾಸ್ಪದವಾಗಿ ರಾತ್ರಿ ವೇಳೆ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 23/07/2016ರ ಮುಂಜಾನೆ 04:00 ಗಂಟೆಯ ವೇಳೆಯಲ್ಲಿ ವಿರಾಜಪೇಟೆ ನಗರ ಠಾನೆಯ ಅಪರಾಧ ವಿಭಾಗದ ಪಿಎಸ್‌ಐ ಎಂ.ಡಿ.ಅಪ್ಪಾಜಿರವರು ಸಿಬ್ಬಂದಿಗಳೊಂದಿಗೆ ನಗರ ಗಸ್ತು ನಡೆಸುವ ಸಮಯುದಲ್ಲಿ ನಗರದ ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣದ ಬಳಿಯ ಮೊಗರಗಲ್ಲಿ ಮಸೀದಿಯ ಪಕ್ಕದಲ್ಲಿ ಓರ್ವ ವ್ಯಕ್ತಿಯು ಅನುಮಾನಾಸ್ಪದವಾಗಿ ಸುತ್ತಾಡುತ್ತರುವುದನ್ನು ಕಂಡು ಆತನನ್ನು ವಿಚಾರಿಸಿದಾಗ ಆತನು ಮಂಡ್ಯ ಜಿಲ್ಲೆಯ ಚಂದಗಾಲ ಬಳಿಯ ಬಿಳುಗುಂದ ಗ್ರಾಮದ ನಿವಾಸಿ ಚಂದ್ರಪ್ಪ ಎಂಬುದಾಗಿ ತಿಳಿಸಿದ್ದು ಯಾವುದೇ ಉದ್ದೇಶವಿಲ್ಲದೆ ತಿರುಗಾಡುತ್ತಿದ್ದು ಯಾವುದೋ ಅಪರಾಧ ಎಸಗುವ ಉದ್ದೇಶದಿಂದ ತಿರುಗಾಡುತ್ತಿರಬಹುದಾಗಿ ಶಂಕಿಸಿ ಆತನನ್ನು ಬಂಧಿಸಿ ವಿರಾಜಪೇಟೆ ನಗರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, July 23, 2016

ರಸ್ತೆ ಅಪಘಾತ, ಕಾರು ಚಾಲಕನಿಗೆ ಗಾಯ:

     ವಿರಾಜಪೇಟೆ ತಾಲೋಕು ಕದನೂರು ಗ್ರಾಮದ ನಿವಾಸಿ ಹೆಚ್.ಕೆ. ವೇಣುಕುಮಾರ್ ರವರು ದಿನಾಂಕ 22-7-2016 ರಂದು ಕದನೂರಿನಿಂದ ವಿರಾಜಪೇಟೆ ಕಡೆಗೆ ತಮ್ಮ ಬಾಪ್ತು ಕಾರಿನಲ್ಲಿ ಹೋಗುತ್ತಿದ್ದಾಗ ವಿರಾಜಪೇಟೆ ಪಟ್ಟಣದ ಸಮೀಪ ತಲುಪುವಾಗ್ಯೆ ಎದುರುಗಡೆಯಿಂದ ಕೆಎ-12-ಝಡ್-2165 ರ ಹುಂಡೈ ಎಸ್ಸೆಂಟ್ ಕಾರು ಚಾಲಕ ತನ್ನ ಬಾಪ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಓಡಿಸಿ ಕೊಂಡು ಬಂದು, ಪಿರ್ಯಾದಿ ಹೆಚ್.ಕೆ. ವೇಣುಕುಮಾರ್ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿ ಯವರಿಗೆ ಮತ್ತು ಅವರ ಜೊತೆಯಲ್ಲಿದ್ದ ಮೋಹನ್ ರವರಿಗೆ ಗಾಯಗಳಾಗಿದ್ದು ವಿರಾಜಪೇಟೆ ನಗರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ಧಾಖಲಿಸಿದ್ದಾರೆ. 

ಬೀಗ ಮುರಿದು ಕರಿಮೆಣಸು ಕಳವು:

     ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದ ನಿವಾಸಿ ತೀತೀರ ನರೇನ್ ಎಂಬವರು ತಮ್ಮ ಮನೆಯವರೊಂದಿಗೆ ಮನೆಗೆ ಬೀಗ ಹಾಕಿ ದಿನಾಂಕ; 15.07.2016 ರಂದು ಬೆಳಿಗ್ಗೆ 11.00 ಗಂಟೆಗೆ ಸ್ವಂತ ಕೆಲಸದ ಮೇರೆ ಮೈಸೂರಿಗೆ ಹೋಗಿದ್ದು ದಿನಾಂಕ 21-7-2016 ರಂದು ಮರಳಿ ಮನೆಗೆ ಬಂದಾಗ ತಮ್ಮ ಮನೆಯ ಹತ್ತಿರದ ಗೋದಾಮಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಇಟ್ಟಿದ್ದ 30 ಕೆ.ಜಿ ಯಷ್ಟು ಒಳ್ಳೆ ಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಅದರ ಅಂದಾಜು ಮೌಲ್ಯ 20,000/- ರೂ ಆಗಬಹುದಾಗಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಜಾನುವಾರುಗಳ ಸಾಗಣೆ:

     ಅಕ್ರಮವಾಗಿ ಗೂವುಗಳನ್ನು ವಾಹನದಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಶನಿವಾರಸಂತೆ ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಿನಾಂಕ 22-7-2016 ರಂದು 14-00 ಗಂಟೆಗೆ ಆಲೂರು ಸಿದ್ದಾಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳು ಕೆಎ-12 ಬಿ-9927ರ ಅಶೋಕ್ ಲೈಲ್ಯಾಂಡ್ ಪಿಕ್ಅಫ್ ವಾಹನದಲ್ಲಿ 6 ಜಾನುವಾರುಗಳನ್ನು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ವ್ಯವಸ್ಥಿತವಾಗಿ ಸಾಗಿಸದೇ ಕ್ರೂರ ರೀತಿಯಲ್ಲಿ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪಾದಚಾರಿಗೆ ಆಟೋ ರಿಕ್ಷಾ ಡಿಕ್ಕಿ:

     ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ವಾಸವಾಗಿರುವ ಎಜಾಜ್ ಅಹಮ್ಮದ್ ಎಂಬವರು ದಿನಾಂಕ 22-7-2016 ರಂದು 11-15 ಎಎಂ.ಗೆ ಮಡಿಕೇರಿನಗರದ ಗಣಲಿ ಬೀದಿ ರಸ್ತೆಯಲ್ಲಿ ನಡೆದುಕೊಂಡು ಐ.ಜಿ. ವೃತ್ತದ ಕಡೆಗೆ ಹೋಗುತ್ತಿದ್ದಾಗ ೈ.ಜಿ. ವೃತ್ತದ ಕಡೆಯಿಂದ ಬಂದ ಕೆಎ-12 ಎ-7421ರ ಆಟೋ ಚಾಲಕ ಸದರಿ ವಾಹನವನ್ನು ದುಡುಕು ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಎಜಾಜ್ ಅಹಮ್ಮದ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಎಜಾಜ್ ಅಹಮ್ಮದ್ ರವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, July 22, 2016

ಅಕ್ರಮ ಜೂಜಾಟ, 8 ಮಂದಿ ಬಂಧನ:

     ಅಕ್ರಮ ಜೂಜಾಟ ವಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ಡಿಸಿಐಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆದಾರದ ಮೇರೆಗೆ ದಿನಾಂಕ 21-7-2016 ರಂದು ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡುಮಂಗಳೂರು ಗ್ರಾಮದ ನಿವಾಸಿ ಸಣ್ಣಪ್ಪ ಎಂಬವರ ದನದಕೊಟ್ಟಿಗೆಯಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದವರ ಮೇಲೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದ ಮೇರೆಗೆ ಜಿಲ್ಲಾ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪನವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ಹಣ ರೂ. 33,660/- ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಜೂಟಾಟದಲ್ಲಿ ಭಾಗಿಯಾದ ಆರೋಪಿಗಳಾದ (1) ಕೆ.ಎಸ್. ಮಂಜುನಾಥ, ಕೂಡ್ಲೂರು ನವಗ್ರಾಮ ಕುಶಾಲನಗರ, (2) ಕೆ.ವಿ. ರವಿ, ಕೂಡಿಗೆ ಗ್ರಾಮ, ಕುಶಾಲನಗರ, (3) ಮಾದಪ್ಪ, ಕೂಡಿಗೆ ಕುಶಾಲನಗರ, (4) ಕೆ.ಸಿ. ಧರ್ಮ, ಕೂಡ್ಲೂರು, ಕುಶಾಲನಗರ, (5) ಕೆ.ವಿ. ರಾಘವೇಂದ್ರ, ಕೂಡ್ಲೂರು ಗ್ರಾಮ, ಕುಶಾಲನಗರ, (6) ಕೆ.ಎ. ಸುರೇಶ, ಕೂಡ್ಲೂರು, ಕುಶಾಲನಗರ, (7) ಕೆ.ವಿ. ಸಣ್ಣಪ್ಪ, ಕೂಡುಮಂಗಳೂರು, ಕುಶಾಲನಗರ ಹತ್ತು (8) ಕುಟ್ಟಪ್ಪ, ಕೂಡುಮಂಗಳೂರು ಇವರುಗಳನ್ನು ಬಂಧಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಮನೆಯ ಬೀಗ ಮುರಿದು ನಗ ನಾಣ್ಯ ಕಳವು:
 
     ಸೋಮವಾರಪೇಟೆ ತಾಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ವೈ.ಸಿ. ಸುಂದರ್ ಎಂಬವರು ದಿನಾಂಕ 21-07-2016ರಂದು ಸಮಯ 11:30 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಅದೇ ಸಮಯದಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಗಾಡ್ರೇಜ್ ನ ಬಾಗಿಲಿನ ಲಾಕರ್ ನ್ನು ಯಾವುದೋ ಆಯುದದಿಂದ ಮೀಟಿ ತೆಗೆದು ಲಾಕರ್ ನಲ್ಲಿ ಟ್ಟಿದ್ದ 20 ಗ್ರಾಂ ಚಿನ್ನದ ಚೈನ್ ,10 ಗ್ರಾಂ ಹ್ಯಾಂಗಿಗ್ಸ್ , ಹಾಗು 10,000/ರೂ ನಗದು ಮತ್ತು ಗೋಲಕದಲ್ಲಿ ಇಟ್ಟಿದ್ದ 1000/ರೂ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಫಿರ್ಯಾದಿ ವೈ.ಸಿ. ಸುಂದರ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅತ್ಯಾಚಾರ ಪ್ರಕರಣ ಹಿನ್ನಲೆ, ಯುವತಿಗೆ ಆರೋಪಿಗಳಿಂದ ಕೊಲೆ ಬೆದರಿಕೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಪೊನ್ನಂಪೇಟೆ ನಗರದ ಎಂ.ಜಿ. ನಗರದ ನಿವಾಸಿ ಪಿರ್ಯಾಧಿ ಸಿ.ಜಿ. ಸುನೀತ ಎಂಬವರ ಮೇಲೆ ಆರೋಪಿಗಳಾದ ಇಸ್ಮಾಯಿಲ್ ಮತ್ತು ಅಬ್ಬಾಸ್ ರವರು ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸದರಿ ಆರೋಪಿಗಳು ಜೈಲಿನಿಂದ ಹೊರ ಬಂದ ನಂತರ ಪಿರ್ಯಾದಿ ಸಿ.ಜೆ. ಸುನೀತರವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದು ಅಲ್ಲದೆ ಗಿರೀಶ್ ಎಂಬ ವ್ಯಕ್ತಿಯು ಕೂಡ ಫಿರ್ಯಾದಿಗೆ ಕೊಲೆ ಬೆದರಿಕೆ ಒಡ್ಡಿದ್ದು, ಅವರೊಂದಿಗೆ ಮುಳಿಯ ಕೇಶವಭಟ್ ಅಂಡ್ ಸನ್ಸ್ ಎಂ.ಡಿ.ಗುರುರಾಜ್ ಎಂಬುವವರು ದಿನಾಂಕ 16-6-2016 ರಂದು ಪಿರ್ಯಾದಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ “ನೀನು ಇಸ್ಮಾಯಿಲ್ ಮತ್ತು ಅಬ್ಬಾಸ್ ರವರ ಮೇಲೆ ಕೊಟ್ಟಿರುವ ಕೇಸನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ನಾನು ಮತ್ತೆ ನಿನ್ನ ಮೇಲೆ ಕಳ್ಳತನ ಕೇಸನ್ನು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೇ , ಆರೋಪಿ ಕಡೆಯವರು ಸಹಾ ದಾರಿ ತಡೆದು ಅತ್ಯಾಚಾರ ಪ್ರಕರಣದ ಮೊಕದ್ದಮೆಯನ್ನು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣ ಪತಿಯಿಂದ ಪತ್ನಿ ಮೇಲೆ ಹಲ್ಲೆ:

    ಕೌಟುಂಬಿಕ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ವಿರಾಜಪೇಟೆ ತಾಲೂಕು ರುಧ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-7-2016 ರಂದು ರುಧ್ರಗುಪ್ಪೆ ಗ್ರಾಮದ ನಿವಾಸಿ ಪಂಜರಿ ಎರವರ ಬಾಬು ಎಂಬವರು ಮದ್ಯದ ಅಮಲಿನಲ್ಲಿ ತನ್ನ ಪತ್ನಿ ಕಾವೇರಿ ಯೊಂದಿಗೆ ಜಗಳ ಮಾಡಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಹೇಳಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಸದರಿ ಕಾವರಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು:
     ವಿರಾಜಪೇಟೆ ನಗರದ ನೆಹರೂ ನಗರದ ನಿವಾಸಿ ಆರ್. ಪಳನಿಸ್ವಾಮಿ @ ಪಳನಿ ಎಂಬವರು ದಿನಾಂಕ 20-7-2016 ರಂದು ತಮ್ಮ ಬಾಪ್ತು ಕೆಎ.12.ಎ.5041ರ ಲಾರಿಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮದ ಕುರುಡುಪೊಳೆ ಎಂಬ ತೋಡಿನಿಂದ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೇ ಮರಳನ್ನು ಲಾರಿಯಲ್ಲಿ ತುಂಬಿಸಿ ಮಾಟಾಟ ಮಾಡಲು ಸಾಗಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗ ಮರೂರು ಗ್ರಾಮದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ. ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ಆರೋಪಿಯನ್ನು ಲಾರಿ ಮತ್ತು ಮರಳು ತುಂಬಿಸಲು ಉಪಯೋಗಿಸಿದ ಸಾಮಾಗ್ರಿಗಳೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

      ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಅತ್ತೂರು ಗ್ರಾಮದ ದೇವಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಮೋಗನ, ಗಂಡ:ಎಲ್. ಸುಬ್ರಮಣಿ ಪ್ರಾಯ, 26 ವರ್ಷ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-7-2016 ರಂದು ತಾನು ವಾಸವಾಗಿದ್ದ ಮನೆಯೊಳಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತೆಯ ಅಣ್ಣ ಬಿ.ಸುಂದರ ಮೂರ್ತಿ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, July 21, 2016


                     ಕೊಡಗು ಜಿಲ್ಲಾ ಪೊಲೀಸ್ 
                                             ಪ್ರ ಕ ಟ ಣೆ                       
=========================================
APC Recruitment -2016
Mandya District

     ಮಂಡ್ಯ ಜಿಲ್ಲಯಲ್ಲಿ APC Recruitment -2016 ಪರೀಕ್ಷೆಯಲ್ಲಿ ಭಾಗವಹಿಸಿ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ APC Recruitment -2016 ನ್ನು ಮಂಡ್ಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಾಗು Medical Examination ನ್ನು ಮಿಮ್ಸ್ (ಮಂಡ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್), ಜಿಲ್ಲಾ ಆಸ್ಪತ್ರೆ, ಎಂ.ಸಿ. ರಸ್ತೆ ಮಂಡ್ಯದಲ್ಲಿ ದಿನಾಂಕ 26-7-2016 ಮತ್ತು 27-7-2016 ರಂದು ನಡೆಸಲಾಗುತ್ತಿದ್ದು, ಕೊಡಗು ಜಿಲ್ಲೆಯ ಅಭ್ಯರ್ಥಿಗಳು ಮಂಡ್ಯ ಜಿಲ್ಲೆಯಲ್ಲಿ ಆಯ್ಕೆಯಾಗಿದ್ದಲ್ಲಿ ಸದರಿ ಅಭ್ಯರ್ಥಿಗಳು  ದಿನಾಂಕ 26-7-2106 ಮತ್ತು 27-7-2016 ರಂದು ಮೇಲ್ಕಾಣಿಸಿದ ವಿಳಾಸದಲ್ಲಿ ಹಾಜಗಾಗಲು ಸೂಚಿಸಲಾಗಿದೆ. 

(ತಾತ್ಕಾಲಿಕಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿವರಗಳನ್ನು ಮಂಡ್ಯ ಜಿಲ್ಲೆಯ ವೆಬ್ ಸೈಟ್ spmandya.blogspot.in ರಲ್ಲಿ ಅಪ್ ಲೋಡ್ ಮಾಡಲಾಗಿರುತ್ತದೆ.) 
===============================================

ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ವಿವರ:

 ಅಕ್ರಮ ಮದ್ಯ ಮಾರಾಟ, ಪ್ರಕರಣ ದಾಖಲು:

      ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದ ನಿವಾಸಿ ಚೊಟ್ಟೆಯಂಗಡ ಸಿ. ಬಿದ್ದಪ್ಪ ಎಂಬವರು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 90 ಎಂ.ಎಲ್ ನ ಸುಮಾರು 38 AMRUTS SILVER CUP RARE BRANDY ಪ್ಯಾಕೇಟ್ ಗಳನ್ನು ಶ್ರೀಮಂಗಲ ಠಾಣಾಧಿಕಾರಿ ಶ್ರೀ ಶ್ರೀಧರ್ ಮತ್ತು ಸಿಬ್ಬಂದಿಯವರು
ದಿನಾಂಕ 20-7-2016 ರಂದು ದಾಳಿ ಮಾಡುವ ಮೂಲಕ ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಶಾಲಾ ಮಕ್ಕಳಿದ್ದ ವಾಹನ ತಡೆದು ಚಾಲಕನ ಮೇಲೆ ಹಲ್ಲೆ:

     ದಿನಾಂಕ 18.07.2016 ರಂದು 19.45 ಗಂಟೆಗೆ ಸೋಮವಾರಪೇಟೆ ತಾಲೂಕು ಐಗೂರು ಗ್ರಾಮದ ನಿವಾಸಿ ಎಂ. ರಶೀದ್ ಎಂಬವರು ತಮ್ಮ ಜೀಪಿನಲ್ಲಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದು ಹೊಸತೋಟದ ಬಸ್‌ ನಿಲ್ದಾಣದ ಹತ್ತಿರ ತಲುಪುವಾಗ ಎಡವಾರೆ ಗ್ರಾಮದ ನಿವಾಸಿಗಳಾದ ಜೀವನ್, ನವೀನ್, ದರ್ಶನ್ ಮತ್ತು ನಯನ ಎಂಬವರು ವಿನಾ ಕಾರಣ ಜೀಪನ್ನು ತಡೆದು ಜೀಪಿನಲ್ಲಿದ್ದ ಹೆಣ್ಣು ಮಕ್ಕಳಿಗೆ ಬೈಯ್ದು ಎಂ. ರಶೀದ್ರವರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಸುಂಟಿಕೊಪ್ಪ ಪೊಲೀಸರು ಫಿರ್ಯಾದಿ ಎಂ. ರಶೀದ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕ್ಷುಲ್ಲಕ ಕಾರಣಕ್ಕೆ ಬಟ್ಟೆ ವ್ಯಾಪಾರಿ ಮೇಲೆ ವ್ಯಕ್ತಿಯಿಂದ ಹಲ್ಲೆ:

     ಬಟ್ಟೆಯಂಗಡಿಗೆ ಬಂದ ವ್ಯಕ್ತಿಯೋರ್ವ ಪ್ಲಾಸ್ಟಿಕ್ ಕವರ್ ನೀಡಿಲಿಲ್ಲ ಎಂಬ ಕಾರಣಕ್ಕೆ ವ್ಯಾಪಾರಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ಗೋಣಿಕೊಪ್ಪ ನಗರದಲ್ಲಿ ಫಿರ್ಯಾದಿ ಎಂ,ನ್. ಸವರಾಮ್ ಎಂಬವರು ನವರಂಗ್ ಪ್ಯಾಷನ್ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದು ಸದರಿ ಅಂಗಡಿಗೆ ಆರೋಪಿ ಬಾಸುಕೀ ರಾಮ್ ಎಂಬಾತನು ದಿನಾಂಕ 20/07/016 ರಂದು ಸಮಯ ಸಂಜೆ 06-00 ಘಂಟೆಗೆ ಬಂದು ಕರಿಮೆಣಸು ತುಂಬಲು ಪ್ಲಾಸ್ಟಿಕ್ ಕವರ್‌ನ್ನು ಕೇಳಿದ್ದು, ಕವರ್ ಇಲ್ಲಾ ಎಂದು ಹೇಳಿದ ಕಾರಣಕ್ಕೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾಧಿಯವರ ಮುಖಕ್ಕೆ ಕೈಯಿಂದ ಗುದ್ದಿ ಮೂಗಿಗೆ ತುಟಿಗೆ,ಗಾಯಪಡಿಸಿ ಬಲ ಕೈನ ಕಿರು ಬೆರಳನ್ನು ಹಿಡಿದು ಎಳೆದು ಮುರಿದುಹಾಕಿ ಕೊಲೆಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ವಶ ಆರೋಪಿ ಬಂಧನ :

ವ್ಯಕ್ತಿಯೊಬ್ಬರು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಪತ್ತೆ ಹಚ್ಚಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದಲ್ಲಿ ಮಂಜು ಎಂಬವರು ಅವರ ಅಂಗಡಿಯ ಮುಂದುಗಡೆ ಕಾರ್ಡ್ ಬೋರ್ಡ್ ಬಾಕ್ಸ್ ನಲ್ಲಿ ಸುಮಾರು 90 ಎಂ.ಎಲ್.ನ 50 ಓರಿಜಿನಲ್ ಚಾಯ್ಸ್ ಬ್ರಾಂದಿ ಪ್ಯಾಕೇಟ್ಗಳನ್ನು ಸರಕಾರದ ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದು , ಕುಶಾಲನಗರ ಠಾಣಾ ಪಿ.ಎಸ್.ಐ ಹಾಗು ಸಿಬ್ಬಂದಿಯವರು ದಿನಾಂಕ 19-07-2016 ರಂದು 12-30 ಗಂಟೆಗೆ ಸದರಿ ಅಂಗಡಿಗೆ ದಾಳಿ ಮಾಡಿ ಆರೋಪಿಯನ್ನು ಮತ್ತು ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Wednesday, July 20, 2016

ಮನುಷ್ಯ ಕಾಣೆ: 

     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ. ರೋಜಿ ಎಂಬವರ ಪತಿ ಸ್ಟಾಲಿನ್, ಪ್ರಾಯ 37 ವರ್ಷ ಎಂಬವರು ದಿನಾಂಕ 14-07-2016 ರಂದು ಸಮಯ 05.00 ಪಿ.ಎಂ.ಗೆ ನೆಲ್ಲಿಹುದಿಕೇರಿ ಗ್ರಾಮದಲ ತಮ್ಮ ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದರಿ ವ್ಯಕ್ತಿಯ ಚಹರೆ ಈ ಕೆಳಗಿನಂತಿದ್ದು, ಎಲ್ಲಿಯಾದರೂ ಪತ್ತೆಯಾದಲ್ಲಿ ಈ ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಕೋರಿದೆ. 

ಹೆಸರು : ಸ್ಟಾಲಿನ್, ಎತ್ತರ- 5 ½ ಅಡಿ , ಸಾದಾರಣ ಮೈಕಟ್ಟು,
            ಉಡುಪು: ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರಟು
           ಮಾತನಾಡುವ ಭಾಷೆ: ಕನ್ನಡ, ತಮಿಳು, ಮಲೆಯಾಳಂ


ಅಣ್ಣ-ತಮ್ಮನ ನಡುವೆ ಜಗಳ:

      ವಿರಾಜಪೇಟೆ ತಾಲೂಕು ನಲ್ವತ್ತೊಕ್ಲು ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಿನಾಂಕ 19-07-16ರಂದು ಪೂರ್ವಾಹ್ನ 11-30ಎ.ಎಂ.ಗೆ ನಲ್ವತ್ತೊಕ್ಲು ಗ್ರಾಮದಲ್ಲಿ ತಾನು ಮತ್ತು ಅಣ್ಣನಾದ ಹುಸೇನ್ ರವರು ಕಟ್ಟಿಸಿದ ಮನೆಗೆ ಬಂದಾಗ ಹುಸೇನ್ ರವರು ತನ್ನ ತಮ್ಮನಾದ ಅಬ್ದುಲ್ ರಹಿಮಾನ್ ನೊಂದಿಗೆ ಮನೆಗೆ ಬಂದ ವಿಚಾರದಲ್ಲಿ ಜಗಳ ವಾಗೊ ಹುಸೇನ್ ನವರು ಕೈಯಿಂದ ಹಾಗೂ ಕೋವಿಯ ಹಿಡಿಯಿಂದ ಅಬ್ದುಲ್ ರಹಿಮಾನ್ ಮುಖಕ್ಕೆ ಹಾಗೂ ಎದೆಯ ಭಾಗಕ್ಕೆ ಚುಚ್ಚಿ ನೋವನ್ನುಂಟುಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, July 19, 2016

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ:

    ಪೊನ್ನಂಪೇಟೆ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದ ನಿವಾಸಿ ಎಲ್.ಪಿ. ನಾರಾಯಣ ಎಂಬವರ ಮಗ ಕುಮಾರ ಎಂಬವರು ಕೆಲ ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16-7-2016 ರಂದು ಕ್ರಿಮಿನಾಶಕವನ್ನು ಸೇವಿಸಿ ಅಸ್ವಸ್ಥಗೊಂಡು ಜಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 18-7-2016 ರಂದು ಸದರಿ ವ್ಯಕ್ತಿ ಕುಮಾರ್ ಮೃತಪಟ್ಟಿದ್ದು, ಪೊನ್ನಂಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಕಸ್ಮಿಕ ವಿದ್ಯುತ್ ಸ್ಪರ್ಷ ವ್ಯಕ್ತಿ ಸಾವು:
    ವಿರಾಜಪೇಟೆ ನಗರ ಠಾಣಾ ಸರಹದ್ದಿನ ವಿಜಯನಗರದಲ್ಲಿ ವಾಸವಾಗಿರುವ ಪಿರ್ಯಾದಿ ಶ್ರೀಮತಿ ಮಾಧವಿ ಎಂಬವರ ಗಂಡ ಬಸವೇಗೌಡ ಈಗ್ಗೆ 2 ವರ್ಷಗಳಿಂದ ವಿಜಯನಗರದ ಜಾನ್ ಎಂಬುವರ ಲೈನ್ ಮನೆಯಲ್ಲಿ ವಾಸವಿದ್ದು, ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ದಿನಾಂಕ 18-7-2016 ರಂದು 10.00 ಎ.ಎಂ ಗೆ ಮನೆಯಲ್ಲಿ ವೈಟ್ ವಾಸ್ ಮಾಡುತ್ತಿರುವಾಗ್ಗೆ ಮನೆಯ ಪಕ್ಕ ಬಿದ್ದ ವಿದ್ಯುತ್ ವೈರನ್ನು ಆಕಸ್ಮಿಕವಾಗಿ ಮುಟ್ಟಿ ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಮೂವರಿಂದ ಹಲ್ಲೆ:

     ಸೋಮವಾರಪೇಟೆ ಠಾಣಾ ಸರಹದ್ದಿನ ಯಡವಾರೆ ಗ್ರಾಮದ ನಿವಾಸಿ ಬಿ.ಹೆಚ್. ಯೋಗೇಶ ಎಂಬವರ ಸಹೋದರ ಮಹೇಶ ಎಂಬವರು ದಿನಾಂಕ 18-07-2016 ರಂದು ಸಮಯ ಸಂಜೆ 17:00 ಗಂಟೆಗೆ ತನ್ನ ಬಾಪ್ತು ಮೋಟಾರು ಸೈಕಲ್ ನಲ್ಲಿ ಸುದರ್ಶನ್ ರವರೊಂದಿಗೆ ಮಾದಾಪುರಕ್ಕೆ ಹೋಗಿ ವಾಪಾಸ್ಸು ಬರುತ್ತಿರುವಾಗ್ಗೆ ಆರೋಪಿಗಳಾದ ಶೌಕತ್, ಮಸೂದ್, ಇಬ್ರಾಹಿಂ, ಅಶ್ರಪ್ ಹಾಗು ರಶೀದ್ ಎಂಬವರು ಮಹೇಶನವರಿಗೆ ಹಲ್ಲೆ ಮಾಡುತ್ತಿದ್ದು ಅದನ್ನು ವಿಚಾರಸಿದ ಫಿರ್ಯಾದಿ ಯೋಗೇಶ್ ಮೇಲೆ ಸದರಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣದ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡಿಗೆ ಗ್ರಾಮದ ನಿವಾಸಿ ರವರು ದಿನಾಂಕ 18-7-2016 ರಂದು ಸಂಜೆ ತಮ್ಮ ಅಂಗಡಿಯಲ್ಲಿದ್ದಾಗ ಕೋಟೆ ಗ್ರಾಮದ ನಿವಾಸಿ ಮೋಹನ್ ಅಂಗಡಿಗೆ ಬಂದು 100=00 ರೂ ಕೊಟ್ಟು ಸಿಗರೇಟು ಕೇಳಿದ್ದು, ತಾನು ಸಿಗರೇಟು ಕೊಟ್ಟು ಉಳಿದ ಹಣ ವಾಪಾಸ್ಸು ಕೊಡುವ ಸಂದರ್ಭದಲ್ಲಿ ಆರೋಪಿ ಮೋಹನ ತಾನು ರೂ. 500=00 ನ್ನು ಕೊಟ್ಟಿರುವುದಾಗಿ ಜಗಳ ಮಾಡಿ ಆರೋಪಿ ಮೋಹನ, ಸಂತೋಷ ಮತ್ತು ಚಂದ್ರ ರವರುಗಳ ಸೇರಿ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, July 18, 2016

ಜಾನುವಾರು ಕಳವು, ಪ್ರಕರಣ ದಾಖಲು:

    ದಿನಾಂಕ 17-07-2016 ರಂದು ಬೆಳಿಗ್ಗೆ ಸಮಯ 06-00 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕುಟ್ಟ ಕಡೆಯಿಂದ ಹಳೇ ಚೆಕ್ ಪೋಸ್ಟ್ ನ ಮೂಲಕ ಅಕ್ರಮವಾಗಿ ಜಾನುವಾರನ್ನು ಕಳ್ಳತನ ಮಾಡಿಕೊಂಡು ಜೀಪಿನಲ್ಲಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ ಸಿ.ಎನ್. ದಿವಾಕರ ರವರಿಗೆ ಸಿಕ್ಕಿದ ಮಾಹಿತಿಯ ಮೇರೆ ಸದರಿಯವರು ಸಿಬ್ಬಂಧಿಗಳೊಂದಿಗೆ ಮೇಲ್ಕಾಣಿಸಿದ ಸ್ಥಳಕ್ಕೆ ದಾಳಿ ಮಾಡಿ ಒಂದು ಹೋರಿಕರುವನ್ನು ವಾಹನ ಸಮೇತ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಪತಿಯಿಂದಲೇ ಪತ್ನಿಯ ಕೊಲೆ ತನಿಖೆಯಿಂದ ಬಹಿರಂಗ:
     ಅಸ್ವಾಭಾವಿಕವಾಗಿ ಸಾವನಪ್ಪಿದ ಮಹಿಳೆಯ ಪ್ರಕರಣದಲ್ಲಿ ಪತಿಯಿಂದಲೇ ಪತ್ನಿಯ ಕೊಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಾಪೋಕ್ಲು ಠಾಣಾ ಸರಹದ್ದಿನ ಕೋಕೇರಿ ಗ್ರಾಮದ ನಿವಾಸಿ ಪಿ.ಎ. ಪಳಂಗಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಚಂದ್ರರವರ ಪತ್ನಿ ಶ್ರೀಮತಿ ಜಯ ಎಂಬವರು ದಿನಾಂಕ 28-7-2016 ರಂದು ತನ್ನ ವಾಸದ ಮನೆಯಲ್ಲಿ ಮೃತಪಟ್ಟಿದ್ದು ಇದರ ಬಗ್ಗೆ ಪೊಲೀಸರು ಅಸ್ವಾಭಾವಿಕ ಸಾವಿನ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು, ತನಿಖೆ ವೇಳೆ ಸದರಿ ಮಹಿಳೆ ಜಯ ರವರನ್ನು ಆಕೆಯ ಪತಿ ಚಂದ್ರ ಎಂಬಾತನು ತನ್ನನ್ನು ಗಂಡಸುತನದ ಬಗ್ಗೆ ಅವಮಾನ ಮಾಡಿದ ಎಂಬ ವಿಚಾರದಲ್ಲಿ ಕೋಪಗೊಂಡು ಸೌದೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಸದರಿ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ದಾಖಲಿ ತನಿಖೆ ಕೈಗೊಂಡಿರುತ್ತಾರೆ. 

ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ:
     ವ್ಯಕ್ತಿಯೊಬ್ಬರು ಹೊಸದಾಗಿ ಕಟ್ಟಿದ ಮನೆಗೆ 5-6 ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಪಿರ್ಯಾದಿ ಸಂತೋಷ ಎಂಬವರು ದಿನಾಂಕ 17-7-2-16 ರಂದು ತಮ್ಮ ಮನೆಯಲ್ಲಿದ್ದ ಸಂದರ್ಬ ಅವರು ನಿರ್ಮಿಸಿರುವ ಹೊಸಮನೆಗೆ ಸಮಯ ಬೆಳಿಗ್ಗೆ 11:30 ಗಂಟೆಗೆ ಆರೋಪಿಗಳಾದ ನೇತ್ರಾವತಿ, ರೇಖಾ, ನಟೇಶ್ ಹಾಗೂ ಅವರ ತಾಯಿ ಹಾಗೂ ಅವರ ಗೆಳೆಯರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಪಾತ್ರೆಗಳನ್ನು ಇಟ್ಟು ವಾಸಕ್ಕೆ ಸಜ್ಜಾಗಿದ್ದು, ಪಿರ್ಯಾದಿಯ ಪತ್ನಿ ಗೀತಾರವರು ಹೋಗಿ ವಿಚಾರ ಮಾಡುವ ಸಂದರ್ಭ ಗೀತಾಳನ್ನು ನೇತ್ರಾವತಿ ಮತ್ತು ರೇಖಾ, ಹಾಗೂ ಅವರ ತಾಯಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈದು ಕೊಲೆ ಬೆದರಿಕೆ ಒಡ್ಡಿದ್ದು ಅಲ್ಲದೆ ಕೈಯಿಂದ ರೇಖಾರವರು ಗೀತಾರವರನ್ನು ಹಿಡಿದು ಎಳೆದು ಹೊರಗೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 17-7-2016 ರಂದು ಸಮಯ 21:45 ಗಂಟೆ ವೇಳೆಗೆ ತಿತಿಮತಿ ಗ್ರಾಮದ ಬಾಳೆಲೆ ಜಂಕ್ಷನ್ ನಲ್ಲಿ ಆರೋಪಿ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಪಿ.ಎಸ್. ಹರೀಶ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ಮಾರಾಟ ಮಾಡಲು ಕೆಎ.21.ಎ.3674 ರ ಮಜ್ದಾ ಟಿಪ್ಪರ್‌ ಮಿನಿ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಗಳು ಪತ್ತೆ ಹಚ್ಚಿ ಆರೋಪಿ ಹಾಗೂ ಸೊತ್ತನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ, ಪ್ರಕರಣ ದಾಖಲು:

ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಎಂ.ಕೆ. ಕಸ್ತೂರಿ ಎಂಬವರ ಗಂಡ 62 ವರ್ಷ ಪ್ರಾಯದ ಕರುಂಬಯ್ಯ ಎಂಬವರು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಕಸ್ತೂರಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿ ವಿವರ ಈ ರೀತಿ ಇದೆ: ಹೆಸರು : ಕರುಂಬಯ್ಯ, 62 ವರ್ಷ ಎತ್ತರ ಅಂದಾಜು 5’6” , ಕೋಲು ಮುಖ, ಗೋದಿ ಮೈಬಣ್ಣ , ಪ್ಯಾಂಟ್ ಮತ್ತು ಶರಟು ಧರಿಸುತ್ತಾರೆ.

ಇವರು ಪತ್ತೆಯಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದೆ.

1) ಪೊಲೀಸ್ ವರಿಷ್ಠಾಧಿಕಾರಿಕಗಳು : 08272-229000
2) ಪೊಲೀಸ್ ಉಪಾಧೀಕ್ಷಕರು, ವಿರಾಜಪೇಟೆ : 08274 – 257488
3) ಕುಟ್ಟ ವೃತ್ತ ನಿರೀಕ್ಷಕರು : 08272-207209
4) ಪಿಎಸ್ಐ ಶ್ರೀಮಂಗಲ ಠಾಣೆ: 08272-246246, 9480804960

ಮಸೀದಿ ವಿಚಾರದಲ್ಲಿ ವ್ಯಕ್ತಿಮೇಲೆ ಗುಂಪಿನಿಂದ ಹಲ್ಲೆ:
     ದಿನಾಂಕ 17-07-2016 ರಂದು ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದ ನಿವಾಸಿ ಪಿರ್ಯಾದಿ ಅಬ್ದುಲ್ ಅಜೀಜ್ ಎಂಬವರು ಎಮ್ಮೆಮಾಡು ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಸಂಜೆ 07-30 ಗಂಟೆಗೆ ವಾಪಾಸ್ಸು ಉಮ್ಮರ್ ಕಾಳೇರ, ಸಯೀದ್, ಜವ್‌ಹರ್, ರಜಾಕ್, ಮೂಸಾ, ಮೊಯ್ದು ಕುಂಞ್ಞರವರೊಂದಿಗೆ ಬರುತ್ತಿರುವಾಗ್ಗೆ ಮಸೀದಿಯ ಕಾಂಪೌಂಡ್‌ನ ಹತ್ತಿರ ಆರೋಪಿಗಳಾದ ಬಷೀರ್, ಇಬ್ರಾಹಿಂ, ಮೊಯ್ದು, ಜಕಾರಿಯಾ, ಅಶ್ರಫ್, ಸಾದುಲಿ, ಹುಸೇನ್ ಸಕಾಫಿ, ಉಸ್ಮಾನ್ ಹಾಜಿ ಎಂಬುವವರುಗಳು ಅಕ್ರಮ ಕೂಟ ಕಟ್ಟಿಕೊಂಡು ಕೆಎ-12-ಕೆ-5097 ರ ಬೈಕ್ ಹಾಗೂ ಕೆಎ-12-ಎ-8407 ರ ಪಿಕಪ್ ಜೀಪಿನಲ್ಲಿ ಬಂದು ಪಿರ್ಯಾದಿ ಹಾಗೂ ಜೊತೆಗಿದ್ದವರನ್ನು ತಡೆದು ನಿಲ್ಲಿಸಿ ಮಸೀದಿಯ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿ, ದೊಣ್ಣೆಗಳಿಂದ ಉಮ್ಮರ್‌ನನ್ನು ಕುರಿತು ನಿನ್ನನ್ನು ಇವತ್ತು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆಬೆದರಿಕೆ ಹಾಕಿ, ಬಶೀರ್‌ನು ಆತನ ಕೈಯಲ್ಲಿದ್ದ ಕತ್ತಿಯಿಂದ ಉಮರ್‌ನ ಎಡಕೈಯ ರಟ್ಟೆಗೆ ಕಡಿದು ತೀವ್ರ ಸ್ವರೂಪದ ಗಾಯಪಡಿಸಿರುತ್ತಾನೆ. ಮೊಯ್ದು ಹಾಗೂ ಇಬ್ರಾಹಿಂರವರು ಬೀಸಿದ ಕತ್ತಿಯು ಜವಹರ್ ಹಾಗೂ ಸಯೀದ್‌ರವರ ಕೈಬೆರಳುಗಳಿಗೆ ತಾಗಿ ಗಾಯವಾಗಿದ್ದು, ಹಾಗೂ ರಜಾಕ್‌ನನ್ನು ಮೊಯ್ದು ಪಿಕಪ್‌ನಿಂದ ಗುದ್ದಿ ಬೀಳಿಸಿ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ಗಾಯಾಳುಗಳಾದ ಉಮ್ಮರ್, ರಜಾಕ್, ಸಯೀದ್ ಹಾಗೂ ಜವಹರ್‌ರವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಆಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.