Thursday, July 14, 2016

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು: 

     ದಿನಾಂಕ 13-7-2016 ರಂದು ಸಮಯ 15-30 ಗಂಟೆಗೆ ಪಿರ್ಯಾದಿ ಶಿವಪ್ಪ, ರೆವಿನ್ಯೂ ಇನ್ಸ್ ಪೆಕ್ಟರ್, ವಿರಾಜಪೇಟೆ ರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಅವರು ತಮ್ಮ ಕಚೇರಿ ಗ್ರಾಮ ಸಹಾಯಕ ರವರೊಂದಿಗೆ ವಿರಾಜಪೇಟೆ ನಗರದ ಗಾಂಧಿನಗರ ಜಂಕ್ಷನ್ ಬಳಿ ಕೆಎ-12-ಬಿ-1960 ರ ಟಿಪ್ಪರ್ ಲಾರಿಯಲ್ಲಿ ಸರಕಾರ ಸೊತ್ತಾದ ಮರಳನ್ನು ಕದ್ದು ಮಾರಾಟ ಮಾಡುವ ಬಗ್ಗೆ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಚಾಲ್ಸ್, ತಂದೆ ಲಾರೆನ್ಸ್, ಟಿಪ್ಪರ್ ಚಾಲಕ, ಹೆಗ್ಗಳ ಗ್ರಾಮ ಇವರನ್ನು ಲಾರಿ ಸಮೇತವಾಗಿ ವಶಕ್ಕೆ ಪಡೆದು ವಿರಾಜಪೇಟೆ ನಗರ ಠಾಣೆಗೆ ಹಾಜರುಪಡಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಜೀವನದಲ್ಲಿ ಜಿಗುಪ್ಸೆ ಯುವಕನ ಆತ್ಮಹತ್ಯೆ:

      ಯುವಕನೋರ್ವ ಮದುವೆ ವಿಳಂಬವಾದ ವಿಚಾರದಲ್ಲಿ ನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಂಜಮ್ಮಯ್ಯ ಕಾಲೋನಿಯಲ್ಲಿ ನಡೆದಿದೆ. ಕೋತೂರು ಗ್ರಾಮದ ಹೆಚ್.ಆರ್. ರಾಣಿ ಎಂಬವರ ಮಗ 23 ವರ್ಷ ಪ್ರಾಯದ ಪೃಥ್ವಿ @ ಮಧು ಎಂಬಾತ ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದವನ್ನು ಕೆಲಸ ಬಿಟ್ಟು ಮನೆಗೆ ಬಂದಿದ್ದು ಆತ ಯಾವುದೋ ಒಂದು ಹುಡುಗಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ಅವರ ತಾಯಿ ರಾಣಿಯವರು ಈಗಲೇ ಮದುವೆ ಬೇಡ ಸ್ವಲ್ಪ ಸಮಯದ ನಂತರ ಮಾಡುವ ಎಂದು ಹೇಳಿದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ದಿನಾಂಕ; 10.07.2016 ರಂದು ಮನೆಯಲ್ಲಿದ್ದ ಇಲಿಗೆ ಹಾಕುವ ವಿಷ ಔಷದಿಯನ್ನು ಸೇವಿಸಿ ಅಸ್ವಸ್ಥನಾದ ಪೃಥ್ವಿ ರವರನ್ನು ಚಿಕಿತ್ಸೆಗೆ ಮೈಸೂರಿನ ಜೆ ಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ; 13-07-2016 ರಂದು ಆತ ಮೃತಪಟ್ಟಿದ್ದು, ಕುಟ್ಟ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ದ್ವಿಚಕ್ರವಾಹನ ಡಿಕ್ಕಿ ಪಾದಚಾರಿಯ ದುರ್ಮರಣ:
     ಕುಶಾಲನಗರ ಠಾಣಾ ಸರಹದ್ದಿನ ಕಾರ್ಯಪ್ಪ ವೃತ್ತದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ವ್ಯಕ್ತಿ ಇಬ್ರಾಹಿಂ ಎಂಬವರಿಗೆ ಕುಶಾಲನಗರದ ಬಸವೇಶ್ವರ ಬಡಾವಣೆ ನಿವಾಸಿ ಎಸ್. ಚಂದ್ರಶೇಖರ್ ಎಂಬವರು ತಮ್ಮ ಬಾಪ್ತು ಟಿ.ಆರ್.ಕೆಎ 09 ಎನ್.ಪಿ 005088ರ ಹೋಂಡಾ ಆಕ್ಟೀವಾ ಸ್ಕೂಟರ್ ನ್ನು ಅತೀ ವೇಗ ಮತ್ತು ಅನಾಜರೂಕತೆಯಿಂದ ಚಾಲಿಸಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡ ಇಬ್ರಾಹಿಂ ರವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ಸದರಿ ವ್ಯಕ್ತಿ ಮೃತಪಟ್ಟಿದ್ದು, ಈ ಸಂಬಂಧ ಟಿ.ಡಿ. ದನಾನಂದ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಟೋ ರಿಕ್ಷಾ ಅಪಘಾತ, ಚಾಲಕನ ದುರ್ಮರಣ:
      ವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ಕಳಡದುಕೊಂಡ ಆಟೋ ರಿಕ್ಷಾ ರಸ್ತೆಮೇಲೆ ಮಗುಚಿಬಿದ್ದು ಚಾಲಕನು ಮೃತಪಟ್ಟ ಘಟನೆ ಕುಶಾಲನಗರದ ಹತ್ತಿರದ ಸಿದ್ದಲಿಂಗಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 13-7-2016 ರಂದು ಮಹೇಶ ಎಂಬ ವ್ಯಕ್ತಿ ತನ್ನ ಆಟೋ ರಿಕ್ಷಾವನ್ನು ಹೆಬ್ಬಾಲೆ ಯಿಂದ ಬಾಣಾವರ ಹೋಗುವ ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋದ ಪರಿಣಾಮ ರಸ್ತೆಗೆ ಅಡ್ಡಲಾಗಿ ಬಂದ ಪಶುವಿಂದ ತಪ್ಪಿಸಿಕೊಳ್ಳಲು ಹೋಗಿ ವಾಹನದ ನಿಯಂತ್ರಣ ಕಳೆದುಕೊಂಡ ಪರಿಣಾಮವಾಗಿ ಆಟೋ ರಿಕ್ಷಾ ರಸ್ತೆಯ ಮೇಲೆ ಮಗುಚಿ ಬಿದ್ದು, ಚಾಲಕ ಮಹೇಶನಿಗೆ ತೀವ್ರ ತರಹದ ಗಾಯಗಳಾಗಿ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ಆತ ಸಾವನಪ್ಪಿದ್ದು, ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ