Monday, July 18, 2016

ಜಾನುವಾರು ಕಳವು, ಪ್ರಕರಣ ದಾಖಲು:

    ದಿನಾಂಕ 17-07-2016 ರಂದು ಬೆಳಿಗ್ಗೆ ಸಮಯ 06-00 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕುಟ್ಟ ಕಡೆಯಿಂದ ಹಳೇ ಚೆಕ್ ಪೋಸ್ಟ್ ನ ಮೂಲಕ ಅಕ್ರಮವಾಗಿ ಜಾನುವಾರನ್ನು ಕಳ್ಳತನ ಮಾಡಿಕೊಂಡು ಜೀಪಿನಲ್ಲಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ಕುಟ್ಟ ವೃತ್ತ ನಿರೀಕ್ಷಕರಾದ ಶ್ರೀ ಸಿ.ಎನ್. ದಿವಾಕರ ರವರಿಗೆ ಸಿಕ್ಕಿದ ಮಾಹಿತಿಯ ಮೇರೆ ಸದರಿಯವರು ಸಿಬ್ಬಂಧಿಗಳೊಂದಿಗೆ ಮೇಲ್ಕಾಣಿಸಿದ ಸ್ಥಳಕ್ಕೆ ದಾಳಿ ಮಾಡಿ ಒಂದು ಹೋರಿಕರುವನ್ನು ವಾಹನ ಸಮೇತ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಪತಿಯಿಂದಲೇ ಪತ್ನಿಯ ಕೊಲೆ ತನಿಖೆಯಿಂದ ಬಹಿರಂಗ:
     ಅಸ್ವಾಭಾವಿಕವಾಗಿ ಸಾವನಪ್ಪಿದ ಮಹಿಳೆಯ ಪ್ರಕರಣದಲ್ಲಿ ಪತಿಯಿಂದಲೇ ಪತ್ನಿಯ ಕೊಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ನಾಪೋಕ್ಲು ಠಾಣಾ ಸರಹದ್ದಿನ ಕೋಕೇರಿ ಗ್ರಾಮದ ನಿವಾಸಿ ಪಿ.ಎ. ಪಳಂಗಪ್ಪ ಎಂಬವರ ಲೈನು ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕರಾದ ಚಂದ್ರರವರ ಪತ್ನಿ ಶ್ರೀಮತಿ ಜಯ ಎಂಬವರು ದಿನಾಂಕ 28-7-2016 ರಂದು ತನ್ನ ವಾಸದ ಮನೆಯಲ್ಲಿ ಮೃತಪಟ್ಟಿದ್ದು ಇದರ ಬಗ್ಗೆ ಪೊಲೀಸರು ಅಸ್ವಾಭಾವಿಕ ಸಾವಿನ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು, ತನಿಖೆ ವೇಳೆ ಸದರಿ ಮಹಿಳೆ ಜಯ ರವರನ್ನು ಆಕೆಯ ಪತಿ ಚಂದ್ರ ಎಂಬಾತನು ತನ್ನನ್ನು ಗಂಡಸುತನದ ಬಗ್ಗೆ ಅವಮಾನ ಮಾಡಿದ ಎಂಬ ವಿಚಾರದಲ್ಲಿ ಕೋಪಗೊಂಡು ಸೌದೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಾಪೋಕ್ಲು ಪೊಲೀಸರು ಸದರಿ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ದಾಖಲಿ ತನಿಖೆ ಕೈಗೊಂಡಿರುತ್ತಾರೆ. 

ಮನೆಗೆ ಅಕ್ರಮ ಪ್ರವೇಶ, ಕೊಲೆ ಬೆದರಿಕೆ:
     ವ್ಯಕ್ತಿಯೊಬ್ಬರು ಹೊಸದಾಗಿ ಕಟ್ಟಿದ ಮನೆಗೆ 5-6 ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡ್ಲೂರು ಗ್ರಾಮದ ನಿವಾಸಿ ಪಿರ್ಯಾದಿ ಸಂತೋಷ ಎಂಬವರು ದಿನಾಂಕ 17-7-2-16 ರಂದು ತಮ್ಮ ಮನೆಯಲ್ಲಿದ್ದ ಸಂದರ್ಬ ಅವರು ನಿರ್ಮಿಸಿರುವ ಹೊಸಮನೆಗೆ ಸಮಯ ಬೆಳಿಗ್ಗೆ 11:30 ಗಂಟೆಗೆ ಆರೋಪಿಗಳಾದ ನೇತ್ರಾವತಿ, ರೇಖಾ, ನಟೇಶ್ ಹಾಗೂ ಅವರ ತಾಯಿ ಹಾಗೂ ಅವರ ಗೆಳೆಯರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಪಾತ್ರೆಗಳನ್ನು ಇಟ್ಟು ವಾಸಕ್ಕೆ ಸಜ್ಜಾಗಿದ್ದು, ಪಿರ್ಯಾದಿಯ ಪತ್ನಿ ಗೀತಾರವರು ಹೋಗಿ ವಿಚಾರ ಮಾಡುವ ಸಂದರ್ಭ ಗೀತಾಳನ್ನು ನೇತ್ರಾವತಿ ಮತ್ತು ರೇಖಾ, ಹಾಗೂ ಅವರ ತಾಯಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೈದು ಕೊಲೆ ಬೆದರಿಕೆ ಒಡ್ಡಿದ್ದು ಅಲ್ಲದೆ ಕೈಯಿಂದ ರೇಖಾರವರು ಗೀತಾರವರನ್ನು ಹಿಡಿದು ಎಳೆದು ಹೊರಗೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ, ಪ್ರಕರಣ ದಾಖಲು:

     ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 17-7-2016 ರಂದು ಸಮಯ 21:45 ಗಂಟೆ ವೇಳೆಗೆ ತಿತಿಮತಿ ಗ್ರಾಮದ ಬಾಳೆಲೆ ಜಂಕ್ಷನ್ ನಲ್ಲಿ ಆರೋಪಿ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಪಿ.ಎಸ್. ಹರೀಶ ಎಂಬವರು ಸರ್ಕಾರಿ ಸೊತ್ತಾದ ಮರಳನ್ನು ಕದ್ದು ಮಾರಾಟ ಮಾಡಲು ಕೆಎ.21.ಎ.3674 ರ ಮಜ್ದಾ ಟಿಪ್ಪರ್‌ ಮಿನಿ ಲಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದದನ್ನು ಪೊನ್ನಂಪೇಟೆ ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಗಳು ಪತ್ತೆ ಹಚ್ಚಿ ಆರೋಪಿ ಹಾಗೂ ಸೊತ್ತನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ, ಪ್ರಕರಣ ದಾಖಲು:

ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಎಂ.ಕೆ. ಕಸ್ತೂರಿ ಎಂಬವರ ಗಂಡ 62 ವರ್ಷ ಪ್ರಾಯದ ಕರುಂಬಯ್ಯ ಎಂಬವರು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದು, ಕಸ್ತೂರಿಯವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿ ವಿವರ ಈ ರೀತಿ ಇದೆ: ಹೆಸರು : ಕರುಂಬಯ್ಯ, 62 ವರ್ಷ ಎತ್ತರ ಅಂದಾಜು 5’6” , ಕೋಲು ಮುಖ, ಗೋದಿ ಮೈಬಣ್ಣ , ಪ್ಯಾಂಟ್ ಮತ್ತು ಶರಟು ಧರಿಸುತ್ತಾರೆ.

ಇವರು ಪತ್ತೆಯಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಿದೆ.

1) ಪೊಲೀಸ್ ವರಿಷ್ಠಾಧಿಕಾರಿಕಗಳು : 08272-229000
2) ಪೊಲೀಸ್ ಉಪಾಧೀಕ್ಷಕರು, ವಿರಾಜಪೇಟೆ : 08274 – 257488
3) ಕುಟ್ಟ ವೃತ್ತ ನಿರೀಕ್ಷಕರು : 08272-207209
4) ಪಿಎಸ್ಐ ಶ್ರೀಮಂಗಲ ಠಾಣೆ: 08272-246246, 9480804960

ಮಸೀದಿ ವಿಚಾರದಲ್ಲಿ ವ್ಯಕ್ತಿಮೇಲೆ ಗುಂಪಿನಿಂದ ಹಲ್ಲೆ:
     ದಿನಾಂಕ 17-07-2016 ರಂದು ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದ ನಿವಾಸಿ ಪಿರ್ಯಾದಿ ಅಬ್ದುಲ್ ಅಜೀಜ್ ಎಂಬವರು ಎಮ್ಮೆಮಾಡು ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಸಂಜೆ 07-30 ಗಂಟೆಗೆ ವಾಪಾಸ್ಸು ಉಮ್ಮರ್ ಕಾಳೇರ, ಸಯೀದ್, ಜವ್‌ಹರ್, ರಜಾಕ್, ಮೂಸಾ, ಮೊಯ್ದು ಕುಂಞ್ಞರವರೊಂದಿಗೆ ಬರುತ್ತಿರುವಾಗ್ಗೆ ಮಸೀದಿಯ ಕಾಂಪೌಂಡ್‌ನ ಹತ್ತಿರ ಆರೋಪಿಗಳಾದ ಬಷೀರ್, ಇಬ್ರಾಹಿಂ, ಮೊಯ್ದು, ಜಕಾರಿಯಾ, ಅಶ್ರಫ್, ಸಾದುಲಿ, ಹುಸೇನ್ ಸಕಾಫಿ, ಉಸ್ಮಾನ್ ಹಾಜಿ ಎಂಬುವವರುಗಳು ಅಕ್ರಮ ಕೂಟ ಕಟ್ಟಿಕೊಂಡು ಕೆಎ-12-ಕೆ-5097 ರ ಬೈಕ್ ಹಾಗೂ ಕೆಎ-12-ಎ-8407 ರ ಪಿಕಪ್ ಜೀಪಿನಲ್ಲಿ ಬಂದು ಪಿರ್ಯಾದಿ ಹಾಗೂ ಜೊತೆಗಿದ್ದವರನ್ನು ತಡೆದು ನಿಲ್ಲಿಸಿ ಮಸೀದಿಯ ವಿಚಾರದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿ, ದೊಣ್ಣೆಗಳಿಂದ ಉಮ್ಮರ್‌ನನ್ನು ಕುರಿತು ನಿನ್ನನ್ನು ಇವತ್ತು ಕೊಲ್ಲದೇ ಬಿಡುವುದಿಲ್ಲವೆಂದು ಕೊಲೆಬೆದರಿಕೆ ಹಾಕಿ, ಬಶೀರ್‌ನು ಆತನ ಕೈಯಲ್ಲಿದ್ದ ಕತ್ತಿಯಿಂದ ಉಮರ್‌ನ ಎಡಕೈಯ ರಟ್ಟೆಗೆ ಕಡಿದು ತೀವ್ರ ಸ್ವರೂಪದ ಗಾಯಪಡಿಸಿರುತ್ತಾನೆ. ಮೊಯ್ದು ಹಾಗೂ ಇಬ್ರಾಹಿಂರವರು ಬೀಸಿದ ಕತ್ತಿಯು ಜವಹರ್ ಹಾಗೂ ಸಯೀದ್‌ರವರ ಕೈಬೆರಳುಗಳಿಗೆ ತಾಗಿ ಗಾಯವಾಗಿದ್ದು, ಹಾಗೂ ರಜಾಕ್‌ನನ್ನು ಮೊಯ್ದು ಪಿಕಪ್‌ನಿಂದ ಗುದ್ದಿ ಬೀಳಿಸಿ ಎಲ್ಲರೂ ಅಲ್ಲಿಂದ ಹೊರಟು ಹೋಗಿದ್ದು, ಗಾಯಾಳುಗಳಾದ ಉಮ್ಮರ್, ರಜಾಕ್, ಸಯೀದ್ ಹಾಗೂ ಜವಹರ್‌ರವರನ್ನು ಚಿಕಿತ್ಸೆಯ ಬಗ್ಗೆ ಮಡಿಕೇರಿ ಆಗೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.