Wednesday, July 13, 2016

ಹುಡುಗಿ ಕಾಣೆ:

     ವಿರಾಜಪೇಟೆ ತಾಲೂಕು ಕಳತ್ಮಾಡು ಗ್ರಾಮದ ನಿವಾಸಿ ಶ್ರೀಮತಿ ಮೈಮುನ ಎಂಬವರ ಮಗಳಾದ 19 ವರ್ಷದ ಮುಫೀದಳು ದಿನಾಂಕ 11-07-2016 ರಂದು ಸಮಯ 07.00 ಎ.ಎಂ. ಗೆ ಕಳತ್ಮಾಡು ಗ್ರಾಮದಿಂದ ಗೋಣಿಕೊಪ್ಪಲಿನ ಕಾವೇರಿ ಕಾಲೇಜಿಗೆ ತೆರಳುವುದಾಗಿ ಮನೆಯಲ್ಲಿ ಹೇಳಿ ಹೋದವಳು ಇದುವರೆಗೂ ಮನೆಗೆ ಬಾರದೆ ಕಾಣೆಯಾಗಿದ್ದು, ಆಕೆಯ ತಾಯಿ ಶ್ರೀಮತಿ ಮೈಮುನರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾಣೆಯಾದ ಹುಡುಗಿಯ ವಿವರ:
ಹೆಸರು: ಮುಫೀದ ಎಂ. ಪ್ರಾಯ 19 ವರ್ಷ, ಎತ್ತರ 5 ಅಡಿ, ಬಣ್ಣ: ಎಣ್ಣೆಗೆಂಪು, ದಪ್ಪಗಿನ ಶರೀರ.
ಉಡುಪು: ನೀಲಿಬಣ್ಣದ ಸಮವಸ್ತ್ರ, ತಿಳಿದಿರುವ ಭಾಷೆಗಳು”: ಕನ್ನಡ ಮತ್ತು ಮಲೆಯಾಳ
ಈಕೆ ಇಲ್ಲಿಯಾದರು ಪತ್ತೆಯಾದಲ್ಲಿ ಈ ಕೆಳಕಾಣಿಸಿದ ದೂರವಾಣಿ ಸಂಖ್ಯೆಗಳ ಮೂಲಕ ಮಾಹಿತಿ ನೀಡಲು ಕೋರಿದೆ.
ಸಿದ್ದಾಪುರ ಪಿಎಸ್ಐ: 08274-258333, 9480804950
ಸಿಪಿಐ ಮಡಿಕೇರಿ ನಗರ: 0821-229149
ಡಿವೈಎಸ್ಪಿ : 08272-228725
ಎಸ್.ಪಿ. ಕೊಡಗು : 08272-229000.

ಹುಡುಗಿ ಕಾಣೆ, ಪ್ರಕರಣ ದಾಖಲು:

     ಮಡಿಕೇರಿ ತಾಲೂಕು ಬಲಮುರಿ ಗ್ರಾಮದ ನಿವಾಸಿ ಪಿ.ಬಿ. ಕಾವೇರಪ್ಪ ಎಂಬವರ ಮಗಳು 19 ವರ್ಷದ ಪ್ರಾಯದ ಗೌರಮ್ಮ @ ಆಶಿಕ್ ಬೆಂಗಳೂರಿನ ಪ್ಲೊರೆನ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎ ವ್ಯಾಸಂಗ ಮಾಡಿಕೊಂಡಿದ್ದು, 2ನೇ ವರ್ಷದ ಬಿಬಿಎ ತರಗತಿಗೆ ದಿನಾಂಕ 11-07-2016 ರಂದು ಮಡಿಕೇರಿಯ ಎಫ್ಎಂಸಿ ಕಾಲೇಜಿಗೆ ಸೇರಿರುತ್ತಾಳೆ. ದಿನಾಂಕ 12-07-2016 ರಂದು ಬೆಳಗ್ಗೆ 08-00 ಗಂಟೆಗೆ ಮನೆಯಿಂದ ಹೊರಟು ಮಡಿಕೇರಿ ಕಾಲೇಜಿಗೆ ಹೋದವಳು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು, ಫಿರ್ಯಾದಿ ಪಿ.ಬಿ. ಕಾವೇರಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿದ ಮುಂದಿನ ಕ್ರಮ ಕೈಗೊಂಡಿದ್ದಾರೆ.