Monday, July 4, 2016

ಜೀಪು ಅಪಘಾತ, ಮಹಿಳೆ ಸಾವು, ನಾಲ್ವರಿಗೆ ಗಾಯ:
     ದಿನಾಂಕ 3/7/2016 ರಂದು ವಿರಾಜಪೇಟೆ ತಾಲೂಕು ಪರಗಟಗೇರಿ ಗ್ರಾಮದ ನಿವಾಸಿ ಅಣ್ಣಾಳಮಾಡ ಪಿ. ದೇವಯ್ಯ ಎಂಬವರು ಅವರ ತಮ್ಮ ಚಿಟ್ಯಪ್ಪ @ ಅರಸು ರವರ ಬಾಪ್ತು ಜೀಪು ನಂ ಕೆಎ-12-ಜೆಡ್-3826 ರಲ್ಲಿ ತಮ್ಮ ಚಿಟ್ಯಪ್ಪ, ನಂಜಪ್ಪ, ಅಣ್ಣನ ಮಗ ಮಧು, ಅಣ್ಣನ ಹೆಂಡತಿ ಗೌರಮ್ಮ, ತಮ್ಮ ಚಿಟ್ಯಪ್ಪನ ಹೆಂಡತಿ ಗ್ರೇಸಿ, ಚಿಕ್ಕಪ್ಪನ ಮಗನ ತಾಯಿ ಸುಮತಿ ಎಂಬವರೊಂದಿಗೆ ಗೋಣಿಕೊಪ್ಪದಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಬರುತ್ತಿರುವಾಗ ಜೀಪನ್ನು ಚಾಲನೆ ಮಾಡುತ್ತಿದ್ದ ಚಿಟ್ಯಪ್ಪ ರವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮವಾಗಿ ಹುದಿಕೇರಿ ಕಡೆಯಿಂದ ಬರುತ್ತಿದ್ದ ಹೊಂಡೈ ಎಕ್ಸೆಂಟ್ ಕಾರು ನಂ ಕೆಎ-05-ಎಂಸಿ-3483 ರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪು ರಸ್ತೆಬದಿ ಮಗುಚಿ ಬಿದ್ದು ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಗ್ರೇಸಿರವರಿಗೆ ತೀವ್ರ ಸ್ವರೂಪದ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಅಲ್ಲದೆ ಜೀಪಿನಲ್ಲಿದ್ದ ಪಿರ್ಯಾದಿ ಎ.ಪಿ. ದೇವಯ್ಯ, ನಂಜಪ್ಪ, ಸುಮತಿ ಮತ್ತು ಗೌರಮ್ಮನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧವಾಗಿ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ ಪ್ರಕರಣ ದಾಖಲು:

     ಸುಂಟಿಕೊಪ್ಪ ಠಾಣಾ ಸರಹದ್ದಿನ 7ನೇ ಹೊಸಕೋಟೆ ಗ್ರಾಮದಲ್ಲಿ ವಾಸವಾಗಿರುವ ವಿ.ಆರ್. ಸದಾನಂದ ಎಂಬವರ ಪತ್ನಿ ಶ್ರೀಮತಿ ಓಮನ (32) ಇವರು ದಿನಾಂಕ 17.06.2016 ರಂದು ಆರೋಗ್ಯ ಸರಿ ಇಲ್ಲದ್ದರಿಂದ ಸುಂಟಿಕೊಪ್ಪ ಆಸ್ಪತ್ರೆಗೆ ತೆರಳಿದ್ದು ಸಂಜೆಯಾದರೂ ವಾಪಾಸ್ಸು ಬಾರದಿದ್ದು ಅಕ್ಕಪಕ್ಕದಲ್ಲಿ ಎಲ್ಲಾ ಕಡೆ ವಿಚಾರಿಸಿ ಕಳೆದ 15 ದಿನಗಳಿಂದ ಹುಡುಕಾಡಿದರೂ ಪತ್ತೆಯಾಗಿರುವುದಲ್ಲ ಎಂಬುದಾಗಿ ಫಿರ್ಯಾದಿ ವಿ.ಆರ್. ಸದಾನಂದನವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಖಾಸಗಿ ಬಸ್ಸ್ ಮತ್ತು ಕಾರು ನಡುವೆ ಅಪಘಾತ, ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು:
     ದಿನಾಂಕ 28-06-16ರಂದು ಸಂಜೆ ಕೆಎ.19.ಬಿ.5969ರ ಲಕ್ಷ್ಮಿ ಗಣೇಶ ಬಸ್ ಪೊನ್ನಂಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುತ್ತಿರುವಾಗ ಸಮಯ ಸುಮಾರು 5-45ಪಿ.ಎಂ.ಗೆ ಕೊಳ್ತೋಡು ಬೈಗೋಡು ಗ್ರಾಮದ ಕೊಕ್ಕಂಡ ಧೀರಜ್ ರವರ ತೋಟದ ಮುಂದೆ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಅಂದರೆ ವಿರಾಜಪೇಟೆ ಕಡೆಯಿಂದ ಕೆಎಲ್.13.ಎಸ್.5848ರ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ಆಲ್ಟೋ ಕಾರಿನ ಚಾಲಕನಾದ ಅಬ್ದುಲ್ ಲತೀಫ್ ಎಂಬವರು ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೇರಳ ರಾಜ್ಯದ ಕ್ಯಾಲಿಕಟ್ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ದಾಖಲಿಸಿದ್ದು, ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 2-7-2016 ರಂದು ಸಾವನಪ್ಪಿದ್ದು, ಈ ಸಂಬಂಧವಾಗಿ ವಿರಾಜಪೇಟೆ ಗ್ರಾಮಾಂತರ ಪೊಲೀಸರ ಘೋರ ಅಪಘಾತ ಪ್ರಕರಣವನ್ನಾಗಿ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿರುತ್ತಾರೆ. 

ಬೈಕ್ ಅಪಘಾತ, ಇಬ್ಬರಿಗೆ ಗಾಯ:

     ಸೋಮವಾರಪೇಟೆ ತಾಲೂಕು ಬ್ಯಾಡಗೊಟ್ಟ ಗ್ರಾಮದ ನಿವಾಸಿ ಬಿ.ವೈ. ಇಸ್ಮಾಯಿಲ್ ಎಂಬವರು ದಿನಾಂಕ 1-7-2016 ರಂದು ಕಿರುಕೊಡ್ಲಿ ಗ್ರಾಮದ ನಿವಾಸಿ ನಿಸಾರ್ ಎಂಬವರ ಮೋಟಾರ್ ಸೈಕಲಿನಲ್ಲಿ ಬ್ಯಾಡಗೊಟ್ಟ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಬೈಕ್ ಸವಾರ ನಿಸಾರ್ ರವರು ಬೈಕನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಬೈಕ್ ಅಪಘಾತಕ್ಕೀಡಾದ ಪರಿಣಾಮ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಫಿರ್ಯಾದಿ ಬಿ.ವೈ. ಇಸ್ಮಾಯಿಲ್ ಹಾಗು ಬೈಕ್ ಸವಾರ ನಿಸಾರ್ ರವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಕಾರು ಮತ್ತು ಈಚರ್ ಲಾರಿ ಪರಸ್ಪರ ಡಿಕ್ಕಿ, ಇಬ್ಬರಿಗೆ ಗಾಯ:

     ದಿನಾಂಕ 3-7-2016 ರಂದು ಬಂಟ್ವಾಳ ತಾಲೂಕಿನ ತುಂಬೆಯ ವಾಸಿ ಇರ್ಫಾನ್ ಎಂಬವರು ತಮ್ಮ ಬಾಪ್ತು ಈಚರ್ ಲಾರಿಯಲ್ಲಿ ಮಡಿಕೇರಿ ನಗರದ ಸಂಪಿಗೆ ಕಟ್ಟೆಯಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿದ್ದಾದ ಎದುರುಗಡೆಯಿಂದ ಕೆ.ಎ-27 ಬಿ699ರ ಕಾರಿನ ನಡುವೆ ಅಪಘಾತ ಸಂಭವಿಸಿ ಲಾರಿ ಮತ್ತು ಕಾರು ಜಖಂ ಗೊಂಡಿದ್ದು ಅಲ್ಲದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಪ್ರೀತಮ್ ಮತ್ತು ಮಧು ಎಂಬವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.