Tuesday, July 5, 2016

ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿ, ಗಾಯ:

     ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದಲ್ಲಿ ನೆಲೆಸಿರುವ ರೋಸಿ ಎಂಬವರು ದಿನಾಂಕ 4-7-2016 ರಂದು 3-15 ಪಿ.ಎಂಗೆ ಕುಶಾಲನಗರದಿಂದ ಗುಮ್ಮನಕೊಲ್ಲಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರ ಕಡೆಯಿಂದ ಕೂಡಿಗೆ ಕಡೆಗೆ ಬೈಕೊಂದನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರೋಸಿರವರಿಗೆ ಹಿಂಬದಿಯಿಂದ ಡಿಕ್ಕಿಪಡಿಸಿದ ಪರಿಣಾಮ ರೋಸಿಯವರು ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮನೆ ಕಳವು ಪ್ರಕರಣ ದಾಖಲು:

     ಪಿರ್ಯಾದಿ ಪಿ.ಎಸ್.ವಿಜಯ, ತಂದೆ; ಲೇಟ್ ಸೋಮಯ್ಯ, ಪ್ರಾಯ; 37ವರ್ಷ, ಕಡಂಗ ಗ್ರಾಮ, ವಿರಾಜಪೇಟೆ ತಾಲ್ಲೂಕು ಇವರು ಸುಮಾರು 9ವರ್ಷಗಳಿಂದ ಕಡಂಗಮರೂರು ಗ್ರಾಮದ ಚೋಳಂಡ ಕಸ್ತೂರಿ ಗಣಪತಿಯವರ ಮನೆ ಮತ್ತು ಆಸ್ತಿಯನ್ನು ನೋಡಿಕೊಂಡಿದ್ದು ಚೋಳಂಡ ಕಸ್ತೂರಿಯವರು ಮುಂಬೈನಲ್ಲಿ ವಾಸ ಮಾಡಿ ಕೊಂಡಿದ್ದು, ದಿನಾಂಕ: 04-07-16ರಂದು ಬೆಳಿಗ್ಗೆ 8-30ಗಂಟೆಗೆ ಪಿರ್ಯಾದಿಯವರ ಸಾಹುಕಾರರ ಮನೆಗೆ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಯಾವುದೋ ರಾಡ್ ನಿಂದ ಮೀಟಿ ಒಳಗೆ ಪ್ರವೇಶಿಸಿ ಎರಡು ಬೆಡ್ ರೂಂಗಳ ಬಾಗಿಲ ಬೀಗಗಳನ್ನು ಮುರಿದು ಒಳಗೆ ನುಗ್ಗಿ ಬೆಡ್ ರೂಂ ನಲ್ಲಿದ್ದ ಗಾಡ್ರೇಜ್ ಗಳನ್ನು ರಾಡಿನಿಂದ ಮೀಟಿ ಅದರೊಳಗಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಯಾಗಿ ಹೊರಗೆ ಬಿಸಾಡಿ ಗಾಡ್ರೇಜ್ ನಲ್ಲಿದ್ದ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ನಗದು ಚಿನ್ಮಾಭರಣ ಕಳವು:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ದೊಡ್ಡಕುಂದ ಗ್ರಾಮದ ನಿವಾಸಿಯಾದ ಸುರೇಶ್ ಕುಮಾರ್ ರವರು ತಮ್ಮ ಪತ್ನಿಯ ಆರೋಗ್ಯ ಸರಿಯಿಲ್ಲದ ಕಾರಣ ದಿನಾಂಕ 02.07.2016ರಂದು ಬೆಳಿಗ್ಗೆ ಮನೆಗೆ ಬೀಗವನ್ನು ಹಾಕಿಕೊಂಡು ಕುಶಾಲನಗರದ ತಮ್ಮ ಸಂಬಂಧಿಕರ ಮನೆಗೆ ಹೋಗಿ ದಿನಾಂಕ 03.07.2016ರಂದು ಮಡಿಕೇರಿಯ ಆಸ್ಪತ್ರೆಗೆ ಹೋಗಿ ಕುಶಾಲನಗರದಲ್ಲಿ ಉಳಿದುಕೊಂಡು ದಿನಾಂಕ 04.07.2016 ರಂದು ಬೆಳಿಗ್ಗೆ 08.30 ಗಂಟೆಗೆ ಬಂದು ನೋಡುವಾಗ್ಗೆ ಅವರ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಮನೆಯೊಳಗೆ ಹೋಗಿ ಮನೆಯಲ್ಲಿ ಇಟ್ಟಿದ್ದ ಗಾಡ್ರೇಜ್ ನ ಬಾಗಿಲನ್ನು ತೆಗೆದು ಗಾಡ್ರೇಜ್ ನಲ್ಲಿ ಇಟ್ಟಿದ್ದ ನಗದು ರೂ 10,000/- ಹಣ ಮತ್ತು 6 ಗ್ರಾಂ ತೂಕದ 2 ಉಂಗುರ, 4 ಗ್ರಾಂ ತೂಕದ ಒಂದು ಜೊತೆ ವಾಲೆ, ಮತ್ತು 8ಗ್ರಾಂ ತೂಕದ ಚೈನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಚಿನ್ನದ ಒಟ್ಟು ಮೌಲ್ಯ ರೂ 36,000/- ಮತ್ತು ರೂ 10,000/- ನಗದು ಹಣ ಒಟ್ಟು 46,000/-ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಕಳವು:

     ನಾಪೋಕ್ಲು ಠಾಣಾ ಸರಹದ್ದಿನ ಇಂದಿರಾನಗರದ ನಿವಾಸಿ ಬಿ.ಇ. ಮೊಹಮ್ಮದ್ ಹನೀಫ್, ಇವರು ದಿನಾಂಕ 01-07-2016 ರಂದು ಶುಕ್ರವಾರ ರಾತ್ರಿ ಪ್ರಾರ್ಥನೆ ಮುಗಿಸಿ ರಾತ್ರಿ 10-00 ಗಂಟೆಯ ವೇಳೆಗೆ ಕೆಎ-11-ಹೆಚ್-3670 ರ ಯಮಹಾ ಬೈಕ್‌ನ್ನು ಇಂದಿರಾನಗರದಲ್ಲಿರುವ ಮದರಸಾದ ಕಾಂಪೌಂಡ್‌ನ ಒಳಗಡೆ ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಯಾರೋ ಕಳ್ಳರು ಸದರಿ ಬೈಕ್‌ನ್ನು ಕಳುವು ಮಾಡಿಕೊಂಡು ಹೋಗಿದ್ದು, ಬಿ.ಇ. ಮೊಹಮ್ಮದ್ ಹನೀಫ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ಗಂಡಸು ಮೃತದೇಹ ಪತ್ತೆ:

    ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ವರದಿಯಾಗಿದೆ. ಈ ದಿನ ದಿನಾಂಕ 5-7-2016 ರಂದು ಕೋತೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಹಳೆಯ ಕಟ್ಟಡದ ಜಗುಲಿ ಮೇಲೆ ಸುಮಾರು 50-55 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಶ್ರೀಮತಿ ಲತಾಕುಮಾರಿ ಗ್ರಾಮ ಪಂಚಾಯಿತಿ ಅದ್ಯಕ್ಷರು ಕಾನೂರು ಗ್ರಾಮ ಇವರು ನೀಡಿದ ದೂರಿನನ್ವಯ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.