Friday, July 15, 2016

ಬೀಗ ಮುರಿದು 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:

      ಪೊನ್ನಂಪೇಟೆ ಠಾಣಾ ಸರಹದ್ದಿನ ಮುಗುಟಗೇರಿ ಗ್ರಾಮದ ನಿವಾಸಿ ಉತ್ತಪ್ಪ ಎಂಬವರ ಪತ್ನಿ ಶ್ರೀಮತಿ ಕಾವ್ಯಶ್ರೀ ಎಂಬವರು ದಿನಾಂಕ 3-7-2016 ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ತಾಯಿ ಹಾಗೂ ಮಗುವಿನೊಂದಿಗೆ ಅಕ್ಕನ ಮನೆ ಬೆಂಗಳೂರಿಗೆ ಹೋಗಿದ್ದು ದಿನಾಂಕ 14/07/2016 ರಂದು ತಮ್ಮ ಮನೆಗೆ ಕಳ್ಳರು ನುಗ್ಗಿದ ವಿಚಾರ ತಿಳಿದು ದಿನಾಂಕ 14-7-2016 ರಂದು ತಮ್ಮ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಇರುವ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣವನ್ನು ನೋಡಲಾಗಿ ಸುಮಾರು ವಿವಿಧ ಮಾದರಿಯ 290 ಗ್ರಾಂ ಚಿನ್ನಾಭರಣನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು, ಸದ್ರಿ ಚಿನ್ನಾಭರಣಗಳ ಅಂದಾಜು ಮೌಲ್ಯ ರೂ. 6,00,000/- ಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್ ಸೈಕಲ್ ಗೆ ವ್ಯಾನ್ ಡಿಕ್ಕಿ, ಒಬ್ಬನ ಮರಣ ಮತ್ತೊಬ್ಬನಿಗೆ ಗಾಯ:

      ಸೋಮವಾರಪೇಟೆ ತಾಲೋಕು ಕಿರಿಕೊಡ್ಲಿ ಗ್ರಾಮದ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಅಮಿತ್ ಎಂಬಾತ ತನ್ನ ಸ್ನೇಹಿತ ಕೊಡ್ಲಿಪೇಟೆ ನಿವಾಸಿ ಸೋಮೇಶ ಎಂಬವನೊಂದಿಗೆ ತನ್ನ ಮೋಟಾರ್ ಸೈಕಲ್ ನಲ್ಲಿ ತಾನು ಅರಕಲಗೋಡುವಿನಿಂದ ಶನಿವಾರಸಂತೆ ಕಡೆಗೆ ಬರುತ್ತಿರುವಾಗ ನಿಲುವಾಗಿಲು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆಎ-06 ಬಿ-7428ರ ಟೆಂಪೋ ಟ್ರಾಕ್ಸ್ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಮ್ಮ ಅಮಿತ್ ಚಾಲಿಸುತ್ತಿದ್ದ ಮೋಟಾರ್ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಅಮಿತ್ ಸ್ಥಳದಲ್ಲಿ ಮೃತ ಪಟ್ಟು, ಸೋಮೇಶನು ಗಾಯಗೊಂಡಿದ್ದು ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಮಾನಭಂಗಕ್ಕೆ ಯತ್ನ ಪ್ರಕರಣ ದಾಖಲು:

     ಶ್ರೀಮಂಗಲ ಠಾಣಾ ಸರಹದ್ದಿನ ಕಳಕೂರು ಬಿರುನಾಣಿ ಗ್ರಾಮದ ನಿವಾಸಿ ಶ್ರೀಮತಿ ಅಲೆಮಾಡ ಮೀನಾ ಎಂಬವರ ಮನೆಗೆ ದಿನಾಂಕ 13/06/2016 ರಂದು ಅಪರಾಹ್ನ 1-30 ಗಂಟೆಯ ವೇಳೆಗೆ ಅದೇ ಗ್ರಾಮದ ಕುಪ್ಪಣಮಾಡ ದೀಪು ಬೋಪಣ್ಣ ಎಂಬುವವರ ಮನೆಯಲ್ಲಿರುವ ಕೇರಳ ಮೂಲದ ಶಶಿ ಎಂಬಾತ ಮನೆಗೆ ಬಂದು ನನ್ನನ್ನು ಹಿಡಿದು ಸೀರೆ ಎಳೆದು ಅತ್ಯಾಚಾರಕ್ಕೆ ಪ್ರಯತ್ನಪಟ್ಟಿರುವುದಲ್ಲದೆ, ಆತನಿಂದ ತಪ್ಪಿಸಿಕೊಂಡು ಫಿರ್ಯಾದಿ ಮೀನಾರವರು ತಮ್ಮ ಗಂಡನ ಅಣ್ಣನ ಮನೆಗೆ ಓಡಿ ಹೋಗಿ ಸಹಾಯ ಕೇಳಿದ್ದು, ಅಲ್ಲಿಯವರೆಗೆ ಹಿಂಬಾಲಿಸಿಕೊಂಡು ಬಂದ ಶಶಿ ಎಂಬಾತ ಚಾಕು ತೋರಿಸಿ ಪುಕಾರು ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುತ್ತಾನೆ. ಅದಕ್ಕೆ ಆತ ಕೆಲಸಕ್ಕೆ ಇರುವ ಸಾಹುಕಾರ ಬೋಪಣ್ಣ ನವರು ಪ್ರಚೋದನೆ ನೀಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮನುಷ್ಯ ಕಾಣೆ:

     ಶ್ರೀಮಂಗಲ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದ ನಿವಾಸಿ ಶ್ರೀಮತಿ ಕಸ್ತೂರಿ ಎಂಬವರ ಪತಿ ಕರುಂಬಯ್ಯ, ಪ್ರಾಯ 62 ವರ್ಷ ಇವರು 30-6-2016 ರಂದು ಬೆಳಿಗ್ಗೆ 7-30 ಗಂಟೆಗೆ ಮನೆಯಿಂದ ಹೋದವರು ಇಲ್ಲಿಯ ತನಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂದು ಫಿರ್ಯಾದಿ ಶ್ರೀಮತಿ ಕಸ್ತೂರಿಯವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.