Monday, July 11, 2016

ಕಾರಿಗೆ ಜೀಪು ಡಿಕ್ಕಿ ಇಬ್ಬರಿಗೆ ಗಾಯ:

     ಕಾರು ಮತ್ತು ಜೀಪು ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಗಾಯಗಳಾದ ಘಟನೆ ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆ ಗ್ರಾಮದಲ್ಲಿ ನಡೆದಿದೆ. ಡಾ: ಅರುಣ ಕುಮಾರ್ ತಂದೆ ಚಂದ್ರಶೇಖರ್ ,ಪ್ರಾಯ 48 ವೈ ದ್ಯ ವೃತ್ತಿ ವಾಸ #103,2ನೇ ಮುಖ್ಯ ರಸ್ತೆ ,ರೈಲ್ವೆ ಬಡಾವಣೆ ವಿಜಯನಗರ ,2ನೇ ಹಂತ ,ಮೈಸೂರು ಇವರು ದಿನಾಂಕ: 10-07-2016 ರಂದು ಸಮಯ 07.45 ಪಿಎಂ ಗೆ ತನ್ನ ಬಾಪ್ತು ಕಾರು ನಂ ಕೆ ಎ 18ಎನ್ 4049 ರಲ್ಲಿ ಸಂಸಾರದೊಂದಿಗೆ ಪುತ್ತೂರಿನಿಂದ ಮೈಸೂರಿಗೆ ಹೋಗುತ್ತಿರುವಾಗ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ 7ನೇ ಹೋಸಕೋಟೆ ಮುಖ್ಯರಸ್ತೆಯಲ್ಲಿ ಎದುರುನಿಂದ ಅಂದರೆ ಕುಶಾಲನಗರ ಕಡೆಯಿಂದ ಬಂದ ಮಹೇಂದ್ರ ಮ್ಯಾಕ್ಸ್ ಜೀಪು ಸಂ ಕೆಎ19ಎಬಿ7805 ರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಡಾ. ಅರುಣ ಕುಮಾರ್ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ಡಾ. ಅರುಣ ಕುಮಾರ್ ಮತ್ತು ಅವರ ಪತ್ನಿ ದಿವ್ಯಶ್ರೀ ಟಿ ಎಸ್ ರವರಿಗೂ ಗಾಯಗಳಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರಿಗೆ ಬೈಕ್ ಡಿಕ್ಕಿ ಗಾಯಗೊಂಡ ಸವಾರ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಹುದೂರು ಗ್ರಾಮದ ನಿವಾಸಿ ಎ.ಕೆ. ಭರತ್ ಎಂಬವರು ದಿನಾಂಕ:10.7.2016 ರಂದು ತನ್ನ ಇಬ್ಬರು ಮಕ್ಕಳೊಂದಿಗೆ ತಮ್ಮ ಬಾಪ್ತು ಕಾರು ಸಂಖ್ಯೆ KA.12.Z.4618 ರಲ್ಲಿ ಪೊನ್ನಂಪೇಟೆಯ ಕಡೆಗೆ ಹೋಗುತ್ತಿದ್ದು ಜೋಡುಬಿಟ್ಟಿ ಎಂಬಲ್ಲಿ ಪೊನ್ನಂಪೇಟೆ ಕಡೆಯಿಂದ ಒಬ್ಬ ಬೈಕ್ ಸವಾರನು ತನ್ನ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಎ.ಕೆ. ಭರತ್ ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದ್ದು ಅಲ್ಲದೆ ಬೈಕ್ ಸವಾರನು ರಸ್ತೆಗೆ ಬಿದ್ದು ಗಾಯಗೊಂಡಿದ್ದು,ಈ ಬಗ್ಗೆ ಕಾರು ಚಾಲಕ ಎ.ಕೆ.ಭರತ್ ಮತ್ತು ಬೈಕ್ ಸವಾರನ ತಾಯಿ ಸೋಮೆಯಂಡ ಸ್ವಾತಿ ರವರು ನೀಡಿದ ಪ್ರತ್ಯೇಕ ಎರಡು ಪ್ರಕರಣ ಗಳನ್ನು ಪೊನ್ನಂಪೇಟೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ದ್ವೇಷದ ಹಿನ್ನಲೆ ಮಹಿಳೆ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ವಿರಾಜಪೇಟೆ ತಾಲ್ಲೂಕು, ಐಮಂಗಲ ಗ್ರಾಮದ ನಿವಾಸಿ ಹೆಚ್.ಎ.ತಾರಾ ಎಂಬುವರು ದಿನಾಂಕ 10-07-16ರಂದು ಸಮಯ ಸಂಜೆ 5-45ಗಂಟೆಗೆ ತಮ್ಮ ಮನೆಗೆ ಬಂದು ಬಾಗಿಲಿನ ಬೀಗ ತೆಗೆಯುವ ಸಂದರ್ಭದಲ್ಲಿ ಪಕ್ಕದ ಮನೆಯಲ್ಲಿದ್ದ ಹೆಚ್.ಎ.ತಾರಾರವರ ತಂಗಿ ಹೆಚ್.ಎ. ಪ್ರೇಮ ಹಾಗೂ ಅವರ ಮಗಳಾದ ಆಶಿಕಾ ರವರು ಬಂದು ಹೆಚ್.ಎ.ತಾರಾರವರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೈಗೆ ಕಚ್ಚಿದ್ದು ಅಲ್ಲದೆ ದೊಣ್ಣೆಯಿಂದ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಬಸ್ಸು ಬೈಕಿಗೆ ಡಿಕ್ಕಿ, ಒಬ್ಬನ ಸಾವು, ಮತ್ತೊಬ್ಬನಿಗೆ ತೀವ್ರ ಗಾಯ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಕೆದಕಲ್ಲು ಗ್ರಾಮದ ಸಾರ್ವಜನಿರ ರಸ್ತೆಯಲ್ಲಿ ಶಿಬು ಮತ್ತು ಧರ್ಮೇಂದ್ರ ರವರುಗಳು ಬೈಕ್‌ ನಂ ಕೆಎ 09 ಇ 4894 ರಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎ 18 ಎಫ್ 493 ರ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿಬುರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಶಿಬು ರವರು ಸ್ಥಳದಲ್ಲೇ ಮೃತಪಟ್ಟು ಹಿಂಬದಿ ಸವಾರ ಧರ್ಮೇಂದ್ರರವರಿಗೆ ತೀವ್ರತರಹದ ಗಾಯಗಳಾಗಿ ಅವರನ್ನು ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿವಿವಾದ, ಮಹಿಳೆ ಮೇಲೆ ವ್ಯಕ್ತಿಗಳಿಂದ ಹಲ್ಲೆ, ಕೊಲೆ ಬೆದರಿಕೆ:

     ಸೋಮವಾರಪೇಟೆ ತಾಲೂಕು ಕೆರಗನ ಹಳ್ಳಿ ನಿವಾಸಿ ಶ್ರೀಮತಿ ಜ್ಯೋತಿ ಎಂಬವರ ಕಾಫಿ ತೋಟದಲ್ಲಿರುವ ಸೌದೆಯನ್ನು ಕಡಿದುಕೊಂಡು ಹೋಗುವ ವಿಚಾರದಲ್ಲಿ ಹಾಗೂ ಆಸ್ತಿಯ ವಿಚಾರದಲ್ಲಿ ರೇವೆಗೌಡ ಮತ್ತು ಅವನ ಹೆಂಡತಿ ಸವಿತ, ಪಾಲಾಕ್ಷ, ರಾಜು, ಮಂಜ ಸತೀಶ, ಸುನೀಲ್ ರವರುಗಳು ಸೇರಿಕೊಂಡು ಕತ್ತಿ ಮತ್ತು ದೊಣ್ಣೆಯನ್ನು ಹಿಡಿದುಕೊಂಡು ಫಿರ್ಯಾದಿ ಶ್ರೀಮತಿ ಜ್ಯೋತಿರವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಬಾಗಿಲನ್ನು ಒಡೆದು ಹಾಕಿ ಪಿರ್ಯಾದಿಯವರನ್ನು ಕುರಿತು ಅವ್ಯಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಪುಕಾರಿಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:
     ಸೋಮವಾರಪೇಟೆ ತಾಲೂಕು, ಸೂರ್ಲಬ್ಬಿ ಗ್ರಾಮದ ನಿವಾಸಿ ಶ್ರೀಮತಿ ಚೋಂದಮ್ಮ ಎಂಬವರು ದಿನಾಂಕ 09.07.2016 ರಂದು ಸಮಯ 9:00 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿ ಪಕ್ಕದ ಮನೆಯ ಕೆಲಸಕ್ಕೆ ಹೋಗಿ ಮದ್ಯಾಹ್ನ 1:45 ಗಂಟೆಗೆ ವಾಪಾಸ್ಸು ಮನೆಗೆ ಬಂದು ನೋಡಿದಾಗ ಮನೆಯ ಹಿಂದಿನ ಬಾಗಿಲ ಬೀಗ ಒಡೆದು ಯಾರೋ ಕಳ್ಳರು ಒಳ ನುಗ್ಗಿ ಮಲಗುವ ಕೋಣೆಯಲ್ಲಿ ಗಾಡ್ರೇಜ್ ಬೀರುವಿನಲ್ಲಿ ಬ್ಯಾಗ್ ನಲ್ಲಿ ಇಟ್ಟಿದ್ದ 1)24 ಗ್ರಾಂ ತೂಕದ ಮುತ್ತು ಇರುವ ಚಿನ್ನದ ಚೈನ್ 2) 6 ಗ್ರಾಂ ತೂಕದ ಕೆಂಪು ಹರಳು ಇರುವ ಉಂಗುರ 3) 4 ಗ್ರಾಂ ನ ಸಾದಾ ಉಂಗುರ 4) 4 ಗ್ರಾಂ ನ ಮದ್ಯದಲ್ಲಿ ಕೆಂಪು ಹರಳು ಇರುವ ಓಲೆ 5) 2 ಗ್ರಾಂ ತೂಕದ ಚಿನ್ನ ನಾಣ್ಯ ಮತ್ತು 50 ರೂಪಾಯಿ ನಗದು ಹಾಗೂ ಒಂದು ಟಾರ್ಚ್ ನ್ನು ಕಳುವು ಮಾಡಿಕೊಂಡು ಹೋಗಿದ್ದು, ಇವುಗಳ ಅಂದಾಜು ಮೌಲ್ಯ ರೂ 90000/- ಆಗಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.