Friday, July 22, 2016

ಅಕ್ರಮ ಜೂಜಾಟ, 8 ಮಂದಿ ಬಂಧನ:

     ಅಕ್ರಮ ಜೂಜಾಟ ವಾಡುತ್ತಿದ್ದ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಜಿಲ್ಲಾ ಡಿಸಿಐಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆದಾರದ ಮೇರೆಗೆ ದಿನಾಂಕ 21-7-2016 ರಂದು ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಕೂಡುಮಂಗಳೂರು ಗ್ರಾಮದ ನಿವಾಸಿ ಸಣ್ಣಪ್ಪ ಎಂಬವರ ದನದಕೊಟ್ಟಿಗೆಯಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದವರ ಮೇಲೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರ ನಿರ್ದೇಶನದ ಮೇರೆಗೆ ಜಿಲ್ಲಾ ಡಿ.ಸಿ.ಐ.ಬಿ. ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪನವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಜೂಜಾಟಕ್ಕೆ ಬಳಸಿದ ಹಣ ರೂ. 33,660/- ಗಳನ್ನು ಮತ್ತು ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಜೂಟಾಟದಲ್ಲಿ ಭಾಗಿಯಾದ ಆರೋಪಿಗಳಾದ (1) ಕೆ.ಎಸ್. ಮಂಜುನಾಥ, ಕೂಡ್ಲೂರು ನವಗ್ರಾಮ ಕುಶಾಲನಗರ, (2) ಕೆ.ವಿ. ರವಿ, ಕೂಡಿಗೆ ಗ್ರಾಮ, ಕುಶಾಲನಗರ, (3) ಮಾದಪ್ಪ, ಕೂಡಿಗೆ ಕುಶಾಲನಗರ, (4) ಕೆ.ಸಿ. ಧರ್ಮ, ಕೂಡ್ಲೂರು, ಕುಶಾಲನಗರ, (5) ಕೆ.ವಿ. ರಾಘವೇಂದ್ರ, ಕೂಡ್ಲೂರು ಗ್ರಾಮ, ಕುಶಾಲನಗರ, (6) ಕೆ.ಎ. ಸುರೇಶ, ಕೂಡ್ಲೂರು, ಕುಶಾಲನಗರ, (7) ಕೆ.ವಿ. ಸಣ್ಣಪ್ಪ, ಕೂಡುಮಂಗಳೂರು, ಕುಶಾಲನಗರ ಹತ್ತು (8) ಕುಟ್ಟಪ್ಪ, ಕೂಡುಮಂಗಳೂರು ಇವರುಗಳನ್ನು ಬಂಧಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.  

ಮನೆಯ ಬೀಗ ಮುರಿದು ನಗ ನಾಣ್ಯ ಕಳವು:
 
     ಸೋಮವಾರಪೇಟೆ ತಾಲೂಕು ಹೆಬ್ಬಾಲೆ ಗ್ರಾಮದ ನಿವಾಸಿ ವೈ.ಸಿ. ಸುಂದರ್ ಎಂಬವರು ದಿನಾಂಕ 21-07-2016ರಂದು ಸಮಯ 11:30 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದು, ಅದೇ ಸಮಯದಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಗಾಡ್ರೇಜ್ ನ ಬಾಗಿಲಿನ ಲಾಕರ್ ನ್ನು ಯಾವುದೋ ಆಯುದದಿಂದ ಮೀಟಿ ತೆಗೆದು ಲಾಕರ್ ನಲ್ಲಿ ಟ್ಟಿದ್ದ 20 ಗ್ರಾಂ ಚಿನ್ನದ ಚೈನ್ ,10 ಗ್ರಾಂ ಹ್ಯಾಂಗಿಗ್ಸ್ , ಹಾಗು 10,000/ರೂ ನಗದು ಮತ್ತು ಗೋಲಕದಲ್ಲಿ ಇಟ್ಟಿದ್ದ 1000/ರೂ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಫಿರ್ಯಾದಿ ವೈ.ಸಿ. ಸುಂದರ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅತ್ಯಾಚಾರ ಪ್ರಕರಣ ಹಿನ್ನಲೆ, ಯುವತಿಗೆ ಆರೋಪಿಗಳಿಂದ ಕೊಲೆ ಬೆದರಿಕೆ:

     ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಪೊನ್ನಂಪೇಟೆ ನಗರದ ಎಂ.ಜಿ. ನಗರದ ನಿವಾಸಿ ಪಿರ್ಯಾಧಿ ಸಿ.ಜಿ. ಸುನೀತ ಎಂಬವರ ಮೇಲೆ ಆರೋಪಿಗಳಾದ ಇಸ್ಮಾಯಿಲ್ ಮತ್ತು ಅಬ್ಬಾಸ್ ರವರು ಅತ್ಯಾಚಾರವೆಸಗಿದ್ದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಸದರಿ ಆರೋಪಿಗಳು ಜೈಲಿನಿಂದ ಹೊರ ಬಂದ ನಂತರ ಪಿರ್ಯಾದಿ ಸಿ.ಜೆ. ಸುನೀತರವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದು ಅಲ್ಲದೆ ಗಿರೀಶ್ ಎಂಬ ವ್ಯಕ್ತಿಯು ಕೂಡ ಫಿರ್ಯಾದಿಗೆ ಕೊಲೆ ಬೆದರಿಕೆ ಒಡ್ಡಿದ್ದು, ಅವರೊಂದಿಗೆ ಮುಳಿಯ ಕೇಶವಭಟ್ ಅಂಡ್ ಸನ್ಸ್ ಎಂ.ಡಿ.ಗುರುರಾಜ್ ಎಂಬುವವರು ದಿನಾಂಕ 16-6-2016 ರಂದು ಪಿರ್ಯಾದಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ “ನೀನು ಇಸ್ಮಾಯಿಲ್ ಮತ್ತು ಅಬ್ಬಾಸ್ ರವರ ಮೇಲೆ ಕೊಟ್ಟಿರುವ ಕೇಸನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ನಾನು ಮತ್ತೆ ನಿನ್ನ ಮೇಲೆ ಕಳ್ಳತನ ಕೇಸನ್ನು ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೇ , ಆರೋಪಿ ಕಡೆಯವರು ಸಹಾ ದಾರಿ ತಡೆದು ಅತ್ಯಾಚಾರ ಪ್ರಕರಣದ ಮೊಕದ್ದಮೆಯನ್ನು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕ್ಷುಲ್ಲಕ ಕಾರಣ ಪತಿಯಿಂದ ಪತ್ನಿ ಮೇಲೆ ಹಲ್ಲೆ:

    ಕೌಟುಂಬಿಕ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ವಿರಾಜಪೇಟೆ ತಾಲೂಕು ರುಧ್ರಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 20-7-2016 ರಂದು ರುಧ್ರಗುಪ್ಪೆ ಗ್ರಾಮದ ನಿವಾಸಿ ಪಂಜರಿ ಎರವರ ಬಾಬು ಎಂಬವರು ಮದ್ಯದ ಅಮಲಿನಲ್ಲಿ ತನ್ನ ಪತ್ನಿ ಕಾವೇರಿ ಯೊಂದಿಗೆ ಜಗಳ ಮಾಡಿ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಹೇಳಿ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಸದರಿ ಕಾವರಿಯವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ ಪ್ರಕರಣ ದಾಖಲು:
     ವಿರಾಜಪೇಟೆ ನಗರದ ನೆಹರೂ ನಗರದ ನಿವಾಸಿ ಆರ್. ಪಳನಿಸ್ವಾಮಿ @ ಪಳನಿ ಎಂಬವರು ದಿನಾಂಕ 20-7-2016 ರಂದು ತಮ್ಮ ಬಾಪ್ತು ಕೆಎ.12.ಎ.5041ರ ಲಾರಿಯಲ್ಲಿ ಬಿ.ಶೆಟ್ಟಿಗೇರಿ ಗ್ರಾಮದ ಕುರುಡುಪೊಳೆ ಎಂಬ ತೋಡಿನಿಂದ ಅಕ್ರಮವಾಗಿ ಸರಕಾರದ ಪರವಾನಗಿ ಇಲ್ಲದೇ ಮರಳನ್ನು ಲಾರಿಯಲ್ಲಿ ತುಂಬಿಸಿ ಮಾಟಾಟ ಮಾಡಲು ಸಾಗಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗ ಮರೂರು ಗ್ರಾಮದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ. ಹಾಗು ಸಿಬ್ಬಂದಿಗಳು ಪತ್ತೆಹಚ್ಚಿ ಆರೋಪಿಯನ್ನು ಲಾರಿ ಮತ್ತು ಮರಳು ತುಂಬಿಸಲು ಉಪಯೋಗಿಸಿದ ಸಾಮಾಗ್ರಿಗಳೊಂದಿಗೆ ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.  

ಜೀವನದಲ್ಲಿ ಜಿಗುಪ್ಸೆ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

      ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಅತ್ತೂರು ಗ್ರಾಮದ ದೇವಯ್ಯ ಎಂಬವರ ಲೈನು ಮನೆಯಲ್ಲಿ ವಾಸವಾಗಿದ್ದ ಶ್ರೀಮತಿ ಮೋಗನ, ಗಂಡ:ಎಲ್. ಸುಬ್ರಮಣಿ ಪ್ರಾಯ, 26 ವರ್ಷ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 21-7-2016 ರಂದು ತಾನು ವಾಸವಾಗಿದ್ದ ಮನೆಯೊಳಗೆ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತೆಯ ಅಣ್ಣ ಬಿ.ಸುಂದರ ಮೂರ್ತಿ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.