Sunday, July 10, 2016

ದ್ವೇಷದ ಹಿನ್ನಲೆ, ವ್ಯಕ್ತಿಯನ್ನು ನಿಂದಿಸಿ ಹಲ್ಲೆ:

      ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮತ್ತೋರ್ವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಪಡಿಸಿದ ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೋಕಿನ ಹಾರನಹಳ್ಳಿ ಗ್ರಾಮದ ನಿವಾಸಿ ಕೃಷ್ಣೇಗೌಡರವರ ಮಗ ಸುನೀಲ್ ಎಂಬವರು ದಿನಾಂಕ 9-7-2016 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ಕೊಡ್ಲಿಪೇಟೆಯ ಕೆರಗನಹಳ್ಳಿ ಗ್ರಾಮದ ರೇವೇಗೌಡರವರ ಮನೆಗೆ ಶುಂಠಿಗೆ ಹೊಡೆಯುವ ಔಷಧಿಯನ್ನು ಕೊಡಲು ಬಂದಿದ್ದು ಸದರಿಯವರಿಗೆ ಹಳೆ ದ್ವೇಷವನ್ನಿಟ್ಟುಕೊಂಡು ಕೆ.ಎನ್ ಮಂಜುನಾಥ್ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿಯನ್ನು ನಿಂದಿಸಿ ಹಲ್ಲೆ:

 ವ್ಯಕ್ತಿಯೊಬ್ಬರು ಟ್ರಾಕ್ಟರ್ ನ್ನು ತಡೆದು ನಿಲ್ಲಿಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕೆರೆಗನಳ್ಳಿ ಗ್ರಾಮದಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ, ಪಿರಿಯಾಪಟ್ಟಣ ತಾಲ್ಲೂಕು, ಅಬ್ಬಳತ್ತಿ ಗ್ರಾಮದ ನಿವಾಸಿ ಎ.ಜಿ.ರಾಜು ರವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ದಿನಾಂಕ 09-07-2016 ರಂದು ಸಮಯ ಬೆಳಿಗ್ಗೆ 10-30 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಕೆರೆಗನಹಳ್ಳಿ ಗ್ರಾಮದ ಸ್ಮಶಾನದ ಬಳಿ ಸದರಿಯವರು ಸತೀಶ ಹಾಗೂ ಮಂಜುರವರೊಂದಿಗೆ ರೇವೇಗೌಡ ಎಂಬವರ ಕಾಫಿ ತೋಟದಿಂದ ಒಣಗಿದ ಮರಗಳನ್ನು ಟ್ರಾಕ್ಟರ್ ನಲ್ಲಿ ತುಂಬಿಸಿಕೊಂಡು ಬರುತ್ತಿರುವಾಗ ಆರೋಪಿ ಸತೀಶ್ ರವರು ಟ್ರಾಕ್ಟರ್ ಅನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿ ಎ.ಜಿ. ರಾಜು ಮತ್ತು ಮಂಜು ರವರ ಮೇಲೆ ಕಾಡು ಮರದ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದಲ್ಲದೆ ಅದೇ ದೊಣ್ಣೆಯಿಂದ ಟ್ರಾಕ್ಟರ್ ನ ಮುಂಭಾಗಕ್ಕೆ ಹೊಡೆದು ಜಖಂ ಪಡಿಸಿ ನಷ್ಟ ಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ:

     ಮೋಟಾರ್ ಸೈಕಲ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಪೊನ್ನಂಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 10/7/2016 ರಂದು ಪೊನ್ನಂಪೇಟೆ ನಗರದ ವಾಸಿ ಪಿ.ಡಿ. ಧರ್ಮಜ ಎಂಬವರು ತಮ್ಮ ಬಾಪ್ತು ಓಮಿನಿ ವ್ಯಾನ್ ನಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸದರಿ ಕ್ರೀಡಾ ವಸತಿ ಶಾಲೆಯ ಮುಂಭಾಗದ ಗೇಟಿನ ಬಳಿ ರಸ್ತೆಯ ಬಲಬದಿಯಲ್ಲಿ ಒಂದು ಮೋಟಾರ್ ಸೈಕಲ್ ಬಿದ್ದಿದ್ದು ಅಲ್ಲಿ ಪೊನ್ನಂಪೇಟೆ ಕೋ-ಆಪರೇಟಿವ್ ಬ್ಯಾಂಕಿನ ನೌಕರ ಪರಶುರಾಮರವರು ಬಿದ್ದಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿರದೇ ಇದ್ದು ಅವರನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ಪರಶುರಾಮರವರು ಮೋಟಾರ್ ಸೈಕಲ್ ನಲ್ಲಿ ಗೋಣಿಕೊಪ್ಪ ಕಡೆಯಿಂದ ಪೊನ್ನಂಪೇಟೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಯಾವುದೋ ಒಂದು ವಾಹನವು ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೇ ಹೋಗಿರುವ ಬಗ್ಗೆ ಅನುಮಾನವಿರುವುದಾಗಿ ನೀಡಿದ ದೂರಿನ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿರುತ್ತಾರೆ.