Tuesday, July 12, 2016

ಗುದ್ದಲಿಯಿಂದ ಹಲ್ಲೆ, ವ್ಯಕ್ತಿಗೆ ತೀವ್ರ ಗಾಯ:
 
    ಕಾಲುದಾರಿಯಲ್ಲಿ ಬೆಳೆದಿದ್ದ ಪಾಣವಾಳ ಮರದ ಕೊಂಬೆಗಳನ್ನು ಕಡಿಯುವ ವಿಚಾರದಲ್ಲಿ ವ್ಯಕ್ತಿಯ ಮೇಲೆ ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 12-7-2016 ರಂದು ಸಮಯ 10-30 ಎ.ಎಂ.ಗೆ ಬೇಟೋಳಿ ಗ್ರಾಮದ ಕೆ.ಆರ್.ರಾಜೇಶ್ ಎಂಬವರು ಅವರ ಗದ್ದೆಗೆ ಹೋಗುವ ದಾರಿಯಲ್ಲಿ ಪಾಣವಾಳ ಮರದ ಕೊಂಬೆಗೆಳು ಎತ್ತರ ಬೆಳೆದಿದ್ದು, ಇದರಿಂದ ಕೃಷಿಗೆ ತೊಂದರೆಯಾಗುವ ಕಾರಣದಿಂದ ಪಾಣವಾಳ ಮರದ ಕೊಂಬೆಗಳನ್ನು ಪಿರ್ಯಾದಿ ಯವರು ಕಡಿಯುತ್ತಿರುವಾಗ್ಗೆ ಆರೋಪಿ ಅದೇ ಗ್ರಾಮದ ಭವಾನಿ ಶಂಕರ್ ರವರು ಗುದ್ದಲಿ ಸಮೇತ ಹತ್ತಿರ ಬಂದು ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಗುದ್ದಲಿಯ ಹಿಂಭಾಗದಿಂದ ಪಿರ್ಯಾದಿಯವರ ತಲೆಯ ಬಲಭಾಗಕ್ಕೆ ಹೊಡೆದು ಗಾಯ ಪಡಿಸಿದ್ದು ಅಲ್ಲದೆ ಫಿರ್ಯಾದಿ ಮತ್ತು ಅವರ ಪತ್ನಿಯನ್ನು ಕೊಲೆ ಮಾಡುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ನೀರಿನಲ್ಲಿ ಮುಳುಗಿ ವ್ಯಕ್ತಿಯ ಸಾವು:
   ಸೋಮವಾರಪೇಟೆ ತಾಲೋಕು, ಯಡವಾರೆ ಗ್ರಾಮದ ನಿವಾಸಿ ಶ್ರೀಮತಿ ಕೀಜನ ಪ್ರೇಮ ಎಂಬವರ ಗಂಡ ರಾಮಯ್ಯ ಪ್ರಾಯ 45 ವರ್ಷ ಎಂಬವರು ಗದ್ದೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು, ಗದ್ದೆ ಕೆಲಸ ಮಾಡಿ ಹಾರಂಗಿ ಹಿನ್ನಿರಿನಲ್ಲಿ ಕೈಕಾಲುಗಳನ್ನು ತೊಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿದ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಂಪೌಂಡ್ ಗೋಡೆ ಕುಸಿದು ಮೂವರು ಕಾರ್ಮಿಕರಿಗೆ ಗಾಯ:

     ದಿನಾಂಕ 12-7-2016ರಂದು ಸಮಯ 15:00 ಗಂಟೆಗೆ ಸೋಮವಾರಪೇಟೆ ನಗರದ ಎಂ.ಡಿ ಬ್ಲಾಕ್ ನಲ್ಲಿ ವಾಸವಾಗಿರುವ ಪಿರ್ಯಾದಿ ರಜೀಶ್ ರಾಮ್, ಮನೀಶ್, ವಿನೋದ್ ಪಂಡಿತ್, ಪಪ್ಪು ರವರುಗಳು ಪಿ.ಎಲ್. ಡಿ ಬ್ಯಾಂಕಿನ ಪಕ್ಕ ಕೆಲಸ ಮಾಡುತ್ತಿದ್ದಾಗ ಪಕ್ಕದಲ್ಲಿರುವ ಕರ್ನಾಟಕ ಬ್ಯಾಂಕಿನ ಹಿಂಭಾಗದ ಕಾಂಪೋಂಡ್ ಗೋಡೆ ಕೆಲಸ ಮಾಡುತ್ತಿದ್ದ ನಮಗಳ ಮೇಲೆ ಬಿದ್ದು ಗಾಯಗೊಂಡಿದ್ದು, ಗಾಯಗೊಂಡ ಸದರಿಯವರುಗಳು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.