Saturday, July 16, 2016

ಹೊಳೆಗೆ ಬಿದ್ದು ಮಹಿಳೆಯ ಸಾವು
                   ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮಹಿಳೆಯೊಬ್ಬರು ಸಾವಿಗೀಡಾಗಿರುವ ಘಟನೆ ವಿರಾಜಪೇಟೆ ಬಳಿಯ ಕಾಕೋಟುಪರಂಬುವಿನಲ್ಲಿ ನಡೆದಿದೆ. ದಿನಾಂಕ 12-07-16ರಂದು ರಾತ್ರಿ 9-30ಗಂಟೆಗೆ ಕಾಕೋಟುಪರಂಬು ನಿವಾಸಿ ಪಣಿ ಎರವರ ಸುರೇಶ, ಅವರ ಹೆಂಡತಿ ಬೋಜಿ ಮತ್ತು ಅಳಿಯ ರವಿರವರೊಂದಿಗೆ ಅಂಗಡಿಗೆ ಹೋಗಿ ಸಾಮಾನು ತೆಗೆದುಕೊಂಡು ವಾಪಾಸ್ ಲೈನ್ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಬೊಳ್ಳುಮಾಡು ಹೊಳೆಯ ಮಂಡೇಟಿರ ಕಡವು ಹತ್ತಿರ ಹಿಂದೆ ಬರುತ್ತಿದ್ದ ಸುರೇಶರವರ ಪತ್ನಿ ಭೋಜಿ ಕಾಣೆಯಾಗಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ನಂತರ ಈ ದಿವಸ ದಿನಾಂಕ 16-07-16ರಂದು ಬೆಳಿಗ್ಗೆ 7-35 ಗಂಟೆಗೆ ಸುರೇಶರವರು ಕೆಲಸ ಮಾಡುತ್ತಿದ್ದ ಅವರ ತೋಟದ ರೈಟರ್ ಲವ ಮುತ್ತಣ್ಣರವರು ಸುರೇಶರವರ ಪತ್ನಿ ಬೋಜಿಯ ಮೃತ ದೇಹ ಬೊಳ್ಳುಮಾಡು ಹೊಳೆಯಲ್ಲಿ ತೇಲುತ್ತಿದೆ ಎಂದು ತಿಳಿಸಿದ ಮೇರೆ ಅವರು ಹೋಗಿ ನೋಡಲಾಗಿ ಅವರ ಪತ್ನಿ ಬೋಜಿರವರ ಮೃತ ದೇಹ ಹೊಳೆಯಲ್ಲಿ ತೇಲುತ್ತಿರುವುದು ಕಂಡು ಬಂದಿದ್ದು ಬೋಜಿರವರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಂಶಯಾಸ್ಪದ ವ್ಯಕ್ತಿಯ ಬಂಧನ
               ಸಂಶಯಾಸ್ಪದವಾಗಿ ರಾತ್ರಿ ವೇಳೆ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 15/7/2016ರಂದು ಪೊನ್ನಂಪೇಟೆ ಠಾಣೆಯ ಸಿಬ್ಬಂದಿಗಳಾದ ಸಿ.ಯು.ಸಾದಲಿ ಮತ್ತು ಎಂ.ಡಿ. ಮನುರವರು ಪೊನ್ನಂಪೇಟೆ ನಗರದಲ್ಲಿ ರಾತ್ರಿಗಸ್ತು ಕರ್ತವ್ಯದಲ್ಲಿರುವಾಗ ಸಮಯ ಮುಂಜಾನೆ 2-00 ಗಂಟೆಗೆ ಪೊನ್ನಂಪೇಟೆ ನಗರದ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ ಗಲ್ಲಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಮುಖವನ್ನು ಮರೆಮಾಚಿಕೊಂಡು ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದಾಗ ಅವನನ್ನು ಸುತ್ತುವರಿದು ಹಿಡಿದುಕೊಂಡು ಅವನ ಹೆಸರು ವಿಳಾಸ ಕೇಳುವಾಗ ಕೆ.ವಿ ರಘು , ಚಂದಗಾಲ ಗ್ರಾಮ ಮೈಸೂರು ಜಿಲ್ಲೆ ಎಂಬುದಾಗಿಯೂ ಮಗದೊಮ್ಮೆ ಪೊನ್ನಂಪೇಟೆ ಎಂಬುದಾಗಿಯೂ ಹೇಳಿ ಸ್ಪಷ್ಟವಾಗಿ ಉತ್ತರಿಸದೆ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದು ಯಾವುದೋ ಅಪರಾಧವೆಸಗುವ ಉದ್ದೇಶದಿಂದ ಆತನು ಅಲ್ಲಿಗೆ ಬಂದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ಮೊಕದ್ದಮೆ ದಾಖಲಿಸಿ ಪೊನ್ನಂಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾಡಾನೆ ಧಾಳಿ, ಮಹಿಳೆ ಸಾವು
                  ಕಾಡಾನೆಯೊಂದು ಧಾಳಿ ನಡೆಸಿದ ಪರಿಣಾಮ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಸಿದ್ದಾಪುರ ಬಳಿಯ ಟಾಟಾ ಸಂಸ್ಥೆಯ ಎಮ್ಮೆಗುಂಡಿ ತೋಟದಲ್ಲಿ ನಡೆದಿದೆ. ದಿನಾಂಕ 15-07-2016 ರಂದು ಟಾಟಾ ಸಂಸ್ಥೆಯ ಎಮ್ಮೆಗುಂಡಿ ಎಸ್ಟೇಟ್ ಸಿದ್ಧಾಪುರ ಡಿವಿಷನ್ ಕಾಫಿತೋಟದಲ್ಲಿ ತೋಟದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿರುವ ನಾಗರಾಜ್‌ ಎಂಬವರು ತೋಟದ ಕಾರ್ಮಿಕರನ್ನು ಕರೆದುಕೊಂಡು ಬಂದು ಕಾಫಿ ತೋಟದಲ್ಲಿ ಕಚ್ಚಡ ತೆಗೆಯುವ ಕೆಲಸವನ್ನು ಕೂಲಿ ಕಾರ್ಮಿಕರಿಂದ ಮಾಡಿಸಿಕೊಂಡಿದ್ದಾಗ ಸಮಯ 09.15 ಎ.ಎಂ.ಗೆ ಪಕ್ಕದ ಬಿ.ಬಿ.ಟಿ.ಸಿ. ತೋಟದಿಂದ ಒಂದು ಕಾಡಾನೆಯು ನುಗ್ಗಿ ಬಂದಾಗ ಅದನ್ನು ಕಂಡು ಎಲ್ಲರೂ ಓಡಿಹೋಗಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದ ಪ್ರಾಯ 54 ವರ್ಷದ ಸೂಫಿಯಾ ಎಂಬ ಕಾರ್ಮಿಕ ಮಹಿಳೆಯನ್ನು ಕಾಡಾನೆಯು ತನ್ನ ಸೊಂಡಿಲಿನಿಂದ ತಲೆಯ ಕೂದಲನ್ನು ಹಿಡಿದು ದೇಹವನ್ನು ಮೇಲೆತ್ತಿ ಬೀಳಿಸಿದ ಪರಿಣಾಮ ಸೂಫಿಯಳು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.