Wednesday, July 20, 2016

ಮನುಷ್ಯ ಕಾಣೆ: 

     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ. ರೋಜಿ ಎಂಬವರ ಪತಿ ಸ್ಟಾಲಿನ್, ಪ್ರಾಯ 37 ವರ್ಷ ಎಂಬವರು ದಿನಾಂಕ 14-07-2016 ರಂದು ಸಮಯ 05.00 ಪಿ.ಎಂ.ಗೆ ನೆಲ್ಲಿಹುದಿಕೇರಿ ಗ್ರಾಮದಲ ತಮ್ಮ ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸದರಿ ವ್ಯಕ್ತಿಯ ಚಹರೆ ಈ ಕೆಳಗಿನಂತಿದ್ದು, ಎಲ್ಲಿಯಾದರೂ ಪತ್ತೆಯಾದಲ್ಲಿ ಈ ಕೆಳಗೆ ನಮೂದಿಸಿದ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಕೋರಿದೆ. 

ಹೆಸರು : ಸ್ಟಾಲಿನ್, ಎತ್ತರ- 5 ½ ಅಡಿ , ಸಾದಾರಣ ಮೈಕಟ್ಟು,
            ಉಡುಪು: ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಶರಟು
           ಮಾತನಾಡುವ ಭಾಷೆ: ಕನ್ನಡ, ತಮಿಳು, ಮಲೆಯಾಳಂ


ಅಣ್ಣ-ತಮ್ಮನ ನಡುವೆ ಜಗಳ:

      ವಿರಾಜಪೇಟೆ ತಾಲೂಕು ನಲ್ವತ್ತೊಕ್ಲು ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬವರು ದಿನಾಂಕ 19-07-16ರಂದು ಪೂರ್ವಾಹ್ನ 11-30ಎ.ಎಂ.ಗೆ ನಲ್ವತ್ತೊಕ್ಲು ಗ್ರಾಮದಲ್ಲಿ ತಾನು ಮತ್ತು ಅಣ್ಣನಾದ ಹುಸೇನ್ ರವರು ಕಟ್ಟಿಸಿದ ಮನೆಗೆ ಬಂದಾಗ ಹುಸೇನ್ ರವರು ತನ್ನ ತಮ್ಮನಾದ ಅಬ್ದುಲ್ ರಹಿಮಾನ್ ನೊಂದಿಗೆ ಮನೆಗೆ ಬಂದ ವಿಚಾರದಲ್ಲಿ ಜಗಳ ವಾಗೊ ಹುಸೇನ್ ನವರು ಕೈಯಿಂದ ಹಾಗೂ ಕೋವಿಯ ಹಿಡಿಯಿಂದ ಅಬ್ದುಲ್ ರಹಿಮಾನ್ ಮುಖಕ್ಕೆ ಹಾಗೂ ಎದೆಯ ಭಾಗಕ್ಕೆ ಚುಚ್ಚಿ ನೋವನ್ನುಂಟುಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.