Saturday, July 23, 2016

ರಸ್ತೆ ಅಪಘಾತ, ಕಾರು ಚಾಲಕನಿಗೆ ಗಾಯ:

     ವಿರಾಜಪೇಟೆ ತಾಲೋಕು ಕದನೂರು ಗ್ರಾಮದ ನಿವಾಸಿ ಹೆಚ್.ಕೆ. ವೇಣುಕುಮಾರ್ ರವರು ದಿನಾಂಕ 22-7-2016 ರಂದು ಕದನೂರಿನಿಂದ ವಿರಾಜಪೇಟೆ ಕಡೆಗೆ ತಮ್ಮ ಬಾಪ್ತು ಕಾರಿನಲ್ಲಿ ಹೋಗುತ್ತಿದ್ದಾಗ ವಿರಾಜಪೇಟೆ ಪಟ್ಟಣದ ಸಮೀಪ ತಲುಪುವಾಗ್ಯೆ ಎದುರುಗಡೆಯಿಂದ ಕೆಎ-12-ಝಡ್-2165 ರ ಹುಂಡೈ ಎಸ್ಸೆಂಟ್ ಕಾರು ಚಾಲಕ ತನ್ನ ಬಾಪ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆ ಯಿಂದ ಓಡಿಸಿ ಕೊಂಡು ಬಂದು, ಪಿರ್ಯಾದಿ ಹೆಚ್.ಕೆ. ವೇಣುಕುಮಾರ್ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿ ಯವರಿಗೆ ಮತ್ತು ಅವರ ಜೊತೆಯಲ್ಲಿದ್ದ ಮೋಹನ್ ರವರಿಗೆ ಗಾಯಗಳಾಗಿದ್ದು ವಿರಾಜಪೇಟೆ ನಗರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ಧಾಖಲಿಸಿದ್ದಾರೆ. 

ಬೀಗ ಮುರಿದು ಕರಿಮೆಣಸು ಕಳವು:

     ಕುಟ್ಟ ಠಾಣಾ ಸರಹದ್ದಿನ ಬಾಡಗ ಗ್ರಾಮದ ನಿವಾಸಿ ತೀತೀರ ನರೇನ್ ಎಂಬವರು ತಮ್ಮ ಮನೆಯವರೊಂದಿಗೆ ಮನೆಗೆ ಬೀಗ ಹಾಕಿ ದಿನಾಂಕ; 15.07.2016 ರಂದು ಬೆಳಿಗ್ಗೆ 11.00 ಗಂಟೆಗೆ ಸ್ವಂತ ಕೆಲಸದ ಮೇರೆ ಮೈಸೂರಿಗೆ ಹೋಗಿದ್ದು ದಿನಾಂಕ 21-7-2016 ರಂದು ಮರಳಿ ಮನೆಗೆ ಬಂದಾಗ ತಮ್ಮ ಮನೆಯ ಹತ್ತಿರದ ಗೋದಾಮಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದು ಒಳಗೆ ಇಟ್ಟಿದ್ದ 30 ಕೆ.ಜಿ ಯಷ್ಟು ಒಳ್ಳೆ ಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು ಅದರ ಅಂದಾಜು ಮೌಲ್ಯ 20,000/- ರೂ ಆಗಬಹುದಾಗಿದ್ದು, ಈ ಸಂಬಂಧ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಜಾನುವಾರುಗಳ ಸಾಗಣೆ:

     ಅಕ್ರಮವಾಗಿ ಗೂವುಗಳನ್ನು ವಾಹನದಲ್ಲಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಶನಿವಾರಸಂತೆ ಪೊಲೀಸರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪೊಲೀಸರು ದಿನಾಂಕ 22-7-2016 ರಂದು 14-00 ಗಂಟೆಗೆ ಆಲೂರು ಸಿದ್ದಾಪುರ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಆರೋಪಿಗಳು ಕೆಎ-12 ಬಿ-9927ರ ಅಶೋಕ್ ಲೈಲ್ಯಾಂಡ್ ಪಿಕ್ಅಫ್ ವಾಹನದಲ್ಲಿ 6 ಜಾನುವಾರುಗಳನ್ನು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ವ್ಯವಸ್ಥಿತವಾಗಿ ಸಾಗಿಸದೇ ಕ್ರೂರ ರೀತಿಯಲ್ಲಿ ಸಾಗಿಸುತ್ತಿದ್ದುದನ್ನು ಪತ್ತೆಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಪಾದಚಾರಿಗೆ ಆಟೋ ರಿಕ್ಷಾ ಡಿಕ್ಕಿ:

     ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ವಾಸವಾಗಿರುವ ಎಜಾಜ್ ಅಹಮ್ಮದ್ ಎಂಬವರು ದಿನಾಂಕ 22-7-2016 ರಂದು 11-15 ಎಎಂ.ಗೆ ಮಡಿಕೇರಿನಗರದ ಗಣಲಿ ಬೀದಿ ರಸ್ತೆಯಲ್ಲಿ ನಡೆದುಕೊಂಡು ಐ.ಜಿ. ವೃತ್ತದ ಕಡೆಗೆ ಹೋಗುತ್ತಿದ್ದಾಗ ೈ.ಜಿ. ವೃತ್ತದ ಕಡೆಯಿಂದ ಬಂದ ಕೆಎ-12 ಎ-7421ರ ಆಟೋ ಚಾಲಕ ಸದರಿ ವಾಹನವನ್ನು ದುಡುಕು ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಎಜಾಜ್ ಅಹಮ್ಮದ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಎಜಾಜ್ ಅಹಮ್ಮದ್ ರವರು ಗಾಯಗೊಂಡಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.