Thursday, July 28, 2016

ಬೈಕ್‌ ಮಗುಚಿ ಓರ್ವ ಸಾವು
                    ಮೋಟಾರು ಬೈಕೊಂದು ಮಗುಚಿ ಬಿದ್ದು ಹಿಂಬದಿ ಸವಾರ ಸಾವಿಗೀಡಾದ ಘಟನೆ ಪೊನ್ನಂಪೇಟೆ ಬಳಿಯ ತಿತಿಮತಿಯಲ್ಲಿ ನಡೆದಿದೆ. ದಿನಾಂಕ 27/07/2016ರಂದು ಹುಣಸೂರು ತಾಲೂಕಿನ ಕೋಣನಹೊಸಹಳ್ಳಿ ಗ್ರಾಮದ ನಿವಾಸಿ ಪ್ರದೀಪ್‌ ಮತ್ತು ಆತನ ಗೆಳೆಯ ಸುಹಾಸ್‌ ಎಂಬವರು ಜಾನ್ಸನ್‌ ಎಂಬವರ ಮೋಟಾರು ಬೈಕು ಸಂಖ್ಯೆ ಕೆಎ-45-ಕ್ಯು-6412ರಲ್ಲಿ ಕೆಲಸದ ನಿಮಿತ್ತ ಗೋಣಿಕೊಪ್ಪದಿಂದ ಪಂಚವಳ್ಳಿಗೆ ಬಂದು ಕೆಲಸ ಮುಗಿಸಿಕೊಂಡು ಗೋಣಿಕೊಪ್ಪಕ್ಕೆ ಬರುತ್ತಿರುವಾಗ ಮೋಟಾರು ಬೈಕನ್ನು ಚಾಲಿಸುತ್ತಿದ್ದ ಸುಹಾಸನು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ತಿತಿಮತಿಯ ಮಜ್ಜಿಗೆ ಹಳ್ಳ ಎಂಬಲ್ಲಿ ಬೈಕು ಸುಹಾಸನ ನಿಯಂತ್ರಣ ತಪ್ಪಿ ಮಗುಚಿಬಿದ್ದು ರಸ್ತೆಯನ್ನು ಉಜ್ಜಿಕೊಂಡು ಎಳೆದುಕೊಂಡು ಹೋದ ಪರಿಣಾಮ ಬೈಕಿನಲ್ಲಿದ್ದ ಹಿಂಬದಿ ಸವಾರ ಪ್ರದೀಪನು ಕೆಳಗೆ ಬಿದ್ದು ತೀವ್ರತರ ಗಾಯಗಳಿಂದ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಯುವತಿಯ ಮಾನಭಂಗ ಯತ್ನ
                     ಬುದ್ದಿ ಮಾಂದ್ಯ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕುಶಾಲನಗರ ಬಳಿಯ ನಂಜರಾಯಪಟ್ನ ಗ್ರಾಮದಲ್ಲಿ ನಡೆದಿದೆ. ದಿನಾಂಕ 27-07-2016 ರಂದು ನಂಜರಾಯಪಟ್ನ ನಿವಾಸಿ ರಾಮಕೃಷ್ಣರವರು ಅದೇ ಗ್ರಾಮದ ನಿವಾಸಿ ರತೀಶ್ ಎಂಬವರು ಹೊಸದಾಗಿ ನಿರ್ಮಿಸುತ್ತಿರುವ ಮನೆಯ ಗೋಡೆಗೆ ನೀರು ಹಾಕುವ ಸಲುವಾಗಿ ಮದ್ಯಾಹ್ನ 02:00 ಗಂಟೆಗೆ ಹೋಗಿ ನೀರು ಹಾಕಿ ನಂತರ ಅವರ ತಮ್ಮ ಮಾಧವರವರ ಮನೆಯ ಬಳಿ ಹೋದಾಗ ಬಾಗಿಲು ತೆರೆದಿರುವುದನ್ನು ಕಂಡು ಒಳಗೆ ಹೋದಾಗ ಪಕ್ಕದ ಹಾಡಿಯ ವಾಸಿ ಜಗದೀಶ ಎಂಬಾತನು ಮಾಧವರರವರ ಬುದ್ದಿ ಮಾಂದ್ಯ ಮಗಳು ದಿಲ್ ಶಾ ಎಂಬ ಯುವತಿಯನ್ನು ಮಾನಭಂಗ ಮಾಡುವ ಉದ್ದೇಶದಿಂದ ಎಳೆದಾಡುತ್ತಿದ್ದುದನ್ನು ಕಂಡಾಗ ಜಗದೀಶನು ರಾಮಕೃಷ್ಣರವರನ್ನು ಕಂಡು ಮನೆಯ ಹಿಂಭಾಗಿಲಿನಿಂದ ಓಡಿ ಹೋಗಿರುವುದಾಗಿದೆ. ನಂತರ ಈ ವಿಷಯವನ್ನು ರಾಮಕೃಷ್ಣರವರು ಅವರ ತಮ್ಮನ ಹೆಂಡತಿ ಕೋಮಲಾರವರಿಗೆ ತಿಳಿಸಿ ಅಕ್ಕಪಕ್ಕದಲ್ಲಿ ಹುಡುಕಾಡಿ ಜಗದೀಶನನ್ನು ಹುಡುಕಿ ಕರೆದುಕೊಂಡು ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ತಾಯಿ ಮಗ ನಾಪತ್ತೆ.
                         ತಾಯಿ ಹಾಗೂ ಮಗ ಇಬ್ಬರೂ ಮನೆಯಿಂದ ನಾಪತ್ತೆಯಾದ ಘಟನೆ ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆಯಲ್ಲಿ ನಡೆದಿದೆ. ದಿನಾಂಕ : 18-07-22016 ರಂದು ಹಾನಗಲ್ಲು ಬಾಣೆ ನಿವಾಸಿ ಶಾಂತಮ್ಮ ಎಂಬವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು, ಸಂಜೆ 3:00 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಅವರ ಸೊಸೆ ಲಕ್ಷ್ಮಿಯು ಶಾಂತಮ್ಮನವರ ಮಗಳು ಲಲಿತಾ ಎಂಬಾಕೆಯು ಆಕೆಯ ಮಗ ಜೀವನ್‌ನನ್ನು ಕರೆದುಕೊಂಡು ಬೆಳಿಗ್ಗೆ 9:00 ಗಂಟೆಗೆ ಮನೆಯಲ್ಲಿ ಹೇಳದೆ ಎಲ್ಲಿಗೋ ಹೋಗಿರುತ್ತಾಳೆ ಈ ವರೆಗೂ ವಾಪಸ್ಸು ಬಂದಿರುವುದಿಲ್ಲ ಎಂದು ತಿಳಿಸಿದ ಮೇರೆಗೆ ಆಕ ಹಾಗೂ ಮಗ ಜೀವನ್‌ನನ್ನು ಎಲ್ಲಾ ಕಡೆ ಹುಡುಕಿ ಪತ್ತೆಯಾಗದ ಕಾರಣ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 
ಅಪರಿಚಿತ ಶವ ಪತ್ತೆ.
                    ಹೊಳೆಯಲ್ಲಿ ಅಪರಿಚಿತ ಗಂಡಸಿನ ಶವವೊಂದು ಬೇತ್ರಿ ಬಳಿ ಕಾವೇರಿ ಹೊಳೆಯಲ್ಲಿ ಪತ್ತೆಯಾಗಿದೆ. ದಿನಾಂಕ: 27-07-16ರಂದು ಬೇತ್ರಿ ಬಳಿಯ ನಾಲ್ಕೇರಿ ನಿವಾಸಿ ಮಣಿ ಎಂಬವರು ಕರಿಮೆಣಸು ಬಳ್ಳಿಗೆ ಔಷಧಿ ಸಿಂಪಡಿಸುವ ಸಲುವಾಗಿ ಬೇತ್ರಿಯ ಕಾವೇರಿ ನದಿಯಿಂದ ನೀರನ್ನು ತಂದು ಡ್ರಮ್ ಗೆ ಹಾಕಿ ಔಷಧಿ ಮಿಶ್ರಣ ಮಾಡುತ್ತಿರುವಾಗ ಹೊಳೆ ಯಲ್ಲಿ ಯಾವುದೋ ದುರ್ವಾಸನೆ ಬರುತ್ತಿದ್ದು, ಮಣಿರವರು ತನ್ನೊಂದಿಗೆ ಜೊತೆಯಲ್ಲಿದ್ದ ಕೆಲಸದ ಆಳುಗಳಾದ ಅಯ್ಯಪ್ಪ ಮತ್ತು ವಿಶ್ವನಾಥ್‌ರವರನ್ನು ಜೊತೆಯಲ್ಲಿ ಕರೆದುಕೊಂಡು ನೀರು ತೆಗೆಯುವ ಸ್ಥಳದ ಸುತ್ತಮುತ್ತ ನೋಡಲಾಗಿ ನೀರು ತೆಗೆಯುವ ಸ್ಥಳದಿಂದ ಸುಮಾರು 50 ಅಡಿ ಹೊಳೆಯ ಮೇಲು ಬದಿಗೆ ನೀರಿನಲ್ಲಿ ಒಂದು ಗಂಡಸಿನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾರಿ ಹರಿದು ಪಾದಚಾರಿ ಸಾವು
                       ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬನ ಮೇಲೆ ಲಾರಿ ಹರಿದು ಸಾವಿಗೀಡಾದ ಘಟನೆ ಕುಶಾಳನಗರ ಬಳಿಯ ಹಕ್ಕೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 26-07-2016 ರಂದು ಸಂಜೆ ಹಕ್ಕೆ ಗ್ರಾಮದ ನಿವಾಸಿ ನಟರಾಜು ಎಂಬವರ ತಂದೆ ಪುಟ್ಟರಾಜುರವರು ಕಣಿವೆಗೆ ಬಂದು ವಾಪಾಸ್ಸು ಮನೆಗೆ ಕುಶಾಲನಗರ ಹಾಸನ ರಾಜ್ಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕುಶಾಲನಗರ ಕಡೆಯಿಂದ ಕೆಎ-12-ಬಿ-2641 ರ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಅದರ ಚಾಲಕ ಗೋಣಿಮರೂರಿನ ರವಿ ಎಂಬವರು ಅತಿವೇಗ ಮತ್ತು ಅಜಾಗೂರೂಕತೆಯಿಂದ ಓಡಿಸಿಕೊಂಡು ಬಂದು ದಾರಿಯ ಎಡಬದಿಯಲ್ಲಿ ನಡೆದುಕೊಂಡ ಹೋಗುತ್ತಿದ್ದ ಪುಟ್ಟರಾಜುರವರಿಗೆ ಡಿಕ್ಕಿಪಡಿಸಿದ ಪರಿಣಾಮ ನೆಲಕ್ಕೆ ಕುಸಿದ ಪುಟ್ಟರಾಜುರವರ ಮೇಲೆ ವಾಹನವು ಹರಿದುಹೋಗಿದ್ದು, ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ದಾರಿ ಮದ್ಯೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.