Wednesday, July 6, 2016

ಮಗನಿಂದ ತಂದೆ ಮೇಲೆ ಹಲ್ಲೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕಿರುಗೂರು ಗ್ರಾಮದ ಪಂಜರಿ ಪೈಸಾರಿಯಲ್ಲಿ ವಾಸವಾಗಿರುವ ಹೆಚ್.ಕೆ.ಪುಟ್ಟಸ್ವಾಮಿ ಎಂಬವರ ಮಗ ರಾಜೇಶನು ಪ್ರತಿ ದಿನ ಮದ್ಯಪಾನ ಮಾಡಿ ಸಣ್ಣಪುಟ್ಟ ವಿಷಯದಲ್ಲಿ ಜಗಳ ಮಾಡುತ್ತಿದ್ದು, ದಿನಾಂಕ 4.7.16 ರಂದು ಮಧ್ಯಾಹ್ನ 1:45 ಗಂಟೆಗೆ ತಾಯಿ ಕುಸುಮರವರೊಂದಿಗೆ ವಿನಾ ಕಾರಣ ಜಗಳವಾಡುತ್ತಿದ್ದಾಗ ಹೆಚ್.ಕೆ. ಪುಟ್ಟಸ್ವಾಮಿ ಏಕೆ ಜಗಳವಾಡುತ್ತಿರುವೇ ಎಂದು ಕೇಳಿದ ಕಾರಣಕ್ಕೆ ಕೆರಳಿದ ಮಗ ರಾಜೇಶನು ತಂದೆ ಪುಟ್ಟಸ್ವಾಮಿಯವರ ಎಡ ಕಿವಿಗೆ ಕತ್ತಿಯಿಂದ ಕಡಿದು ಗಾಯಪಡಿದ್ದು ಚಿಕಿತ್ಸೆಗಾಗಿ ವೀರಾಜಪೇಟೆಗೆ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆ ವೈದ್ಯರ ಸಲಹೆ ಮೇರೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ದೇವಾಲಯದ ಬಾಗಿಲು ಮುರಿದು ಕಳವು:  

     ದೇವಸ್ಥಾನದ ಬಾಗಿಲನ್ನು ಮುರಿದು, ಬೆಲೆಬಾಳುವ ದೇವರ ವಿಗ್ರಹ, ಕಂಚಿನ ದೀಪಗಳನ್ನು ಕಳ್ಳರು ಕಳವು ಮಾಡಿದ ಘಟನೆ ಮೂರ್ನಾಡು ಸಮೀಪದ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಹೊದ್ದೂರು ಗ್ರಾಮದಲ್ಲಿರುವ ಮಾರಿಯಮ್ಮ ದೇವಸ್ಥಾನದ ಬಾಗಿಲಗೆ ಹಾಕಿದ ಬೀಗವನ್ನು ದಿನಾಂಕ 04.07.2016 ರ ರಾತ್ರಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಮುರಿದು ದೇವಸ್ಥಾನದ ಒಳಗಡೆ ಹೋಗಿ 1) ಅಂದಾಜು 5 ಕೆ.ಜಿ. ತೂಕದ ಹುಲಿಯ ಮೇಲೆ ದೇವಿ ಮೂರ್ತಿ ಕುಳಿಸಿರುವ ಪಂಚಲೋಹದ ಒಂದು ವಿಗ್ರಹ, 2) ಕಂಚಿನ ಸಣ್ಣ ಸಣ್ಣ 5 ಕತ್ತಿಗಳು (ಕಡತ್ತಲೆ), 3) ಕಂಚಿನ ವಿವಿಧ ಡಿಸೈನಿನ 20 ದೀಪಗಳು, 4) ಕಂಚಿನ ಸಣ್ಣ ಎರಡು ತ್ರಿಶೂಲ, 5) ಕಂಚಿನ ಸಣ್ಣ 5 ಗಂಟೆಗಳು. ಇದರ ಒಟ್ಟು ಮೌಲ್ಯ ಸುಮಾರು 60,000/- ಆಗಬಹುದೆಂದು ಹೆಚ್.ಆರ್. ಗಣೇಶ್, ಅಧ್ಯಕ್ಷರು, ಶ್ರೀ ಮಾರಿಯಮ್ಮ ದೇವಸ್ಥಾನ , ಭಗವತಿ ಕಾಲೋನಿ, ಹೊದ್ದೂರು ಇವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ:  
     ಕಾಲೇಜು ವಿದ್ಯಾರ್ಥಿನಿಯೊಬ್ಬಳು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೂಕು, ಹಾನಗಲ್ಲು ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಗೀತಾ ಎಂಬವರ ಮಗಳು ಪ್ರಾಯ 19 ವರ್ಷದ ಸಂದ್ಯಾ ಕುಶಾಲನಗರದಲ್ಲಿ 2 ನೇ ವರ್ಷದ ಬಿ.ಬಿ.ಎಂ ವ್ಯಾಸಂಗ ಮಾಡುತ್ತಿದ್ದು ಇಂದು ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದು, ಹಾನಗಲ್ ಗ್ರಾಮದ ನಿವಾಸಿ ನವೀನ್ ಎಂಬ ಹುಡುಗನ ಪಾತ್ರವಿದೆ ಎಂಬುದಾಗಿ ಮೃತೆ ಸಂದ್ಯಾಳ ತಾಯಿ ಶ್ರೀಮತಿ ಗೀತಾರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.