Thursday, July 7, 2016

ಗುಂಡು ಹೊಡೆದು ಮಗನನ್ನು ಕೊಂದ ತಂದೆ:

     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರು ತನ್ನ ಮಗನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕು ಇಬ್ನಿವಳವಾಡಿ ಗ್ರಾಮದ ನಿವಾಸಿ ರವಿಕುಮಾರ್‌ರವರು ದಿನಾಂಕ 4-7-2016ರಂದು ತಾನು ಮನೆಯ ಅಟ್ಟದಲ್ಲಿ ಇಟ್ಟಿದ್ದ ಹಳೆಯ ಕುಯ್ದ ಮರವನ್ನು ಮಂಚ ಮಾಡಿಸುವ ಸಲುವಾಗಿ ಅಟ್ಟದಿಂದ ಕೆಳಗಡೆ ಇಳಿಸುತ್ತಿದ್ದು ಒಂದು ಮರದ ತುಂಡನ್ನು ಮನೆಯ ಹಿಂಭಾಗದ ಅಂಗಳದಲ್ಲಿ ಇಡುತ್ತಿರುವಾಗ್ಗೆ ಆತನ ತಂದೆ ಆರೋಪಿ ವಾಸು ರವರು ರವಿಕುಮಾರ್ ರವರನ್ನು ಕುರಿತು ನೀನು ಮರವನ್ನು ಬೇರೆಯವರಿಗೆ ಮಾರಾಟ ಮಾಡಲು ಹೊರಟ್ಟಿದ್ದೀಯಾ ಎಂದು ಹೇಳಿಕೊಂಡು ಜಗಳ ತೆಗೆದು ತಂದೆ ವಾಸುರವರು ನಿನ್ನನ್ನು ಗುಂಡು ಹೊಡೆದು ಕೊಂದು ಬಿಡುತ್ತೇನೆಂದು ಹೇಳಿ ಕೋವಿಯಿಂದ ಗುಂಡು ಹಾರಿಸಿದ್ದು ಪರಿಣಾಮ ಗುಂಡು ರವಿಕುಮಾರ್ ರವರ ಎಡ ಕಾಲಿನ ತೊಡೆಗೆ ತಾಗಿ ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ಮಂಗಳೂರಿನ ವೆನ್ ಲಾಕ್ ಅಸ್ವತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ದಿನಾಂಕ 6-7-2016 ರಂದು ಮೃತಪಟ್ಟದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೊಟ್ಟಿಗೆಯಿಂದ ಗೋವುಗಳ ಕಳವು ಪ್ರಕರಣ ದಾಖಲು:

     ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಗೋವುಗಳನ್ನು ಕಳ್ಳತನ ಮಾಡಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ದಿನಾಂಕ 6-7-2016ರ ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ್ಗೆ ಆರೋಪಿಗಳಾದ ಪಿರಿಯಾಪಟ್ಟಣ ತಾಲೂಕು ಮುತ್ತೂರು ಗ್ರಾಮದ ನಿವಾಸಿಗಳಾದ ಎಂ.ಪಿ. ಮಧು, ನಾಗರಾಜು, ಮತ್ತು ವಿಜಯ ಎಂಬವರುಗಳು ವಿರಾಜಪೇಟೆ ತಾಲೂಕು ಮೈತಾಡಿ ಗ್ರಾಮದಿಂದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ 2 ಹಸು ಮತ್ತು ಒಂದು ಕರುವನ್ನು ಕಳ್ಳತನ ಮಾಡಿ ಟಾಟಾ ಏಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಯಚ್ಚಿದ್ದು, ಆರೋಪಿಗಳ ಸಮೇತ ಜಾನುವಾರು ಮತ್ತು ವಾಹನವನ್ನು ವಶಕ್ಕೆ ಪಡೆದ ಪೊಲೀಸರು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ:

     ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಅತ್ತೂರು ನಲ್ಲೂರು ಗ್ರಾಮದ ನಲ್ಲೂರು ಕಾಫಿತೋಟದ ಲೈನು ಮನೆಯಲ್ಲಿ ವಾಸವಾಗಿರುವ ಬಿ.ಇ. ದಿನೇಶ್ ಎಂಬವರ ತಂದೆ ಬಿ.ಸಿ. ಈರಪ್ಪ ಎಂಬವರು ದಿನಾಂಕ 4-7-2016 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಚಿಕಿತ್ಸೆಗಾಗಿ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಸಿಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ವ್ಯಕ್ತಿ ಈ ದಿನ ದಿನಾಂಕ 7-7-2016 ರಂದು ಸಾವನಪ್ಪಿದ್ದು, ಇವರು ದಮ್ಮು ಕಾಯಿಲೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಮೃತರ ಮಗ ಬಿ.ಇ. ದಿನೇಶ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾದಚಾರಿಗೆ ಕಾರು ಡಿಕ್ಕಿ,ಚಾಲಕನಿಂದ ಹಲ್ಲೆ ಕೊಲೆ ಬೆದರಿಕೆ:

     ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಶನಿವಾರಸಂತೆ ನಗರದ ನಂದೀಶ್ವರ ಕಲ್ಯಾಣ ಮಂಟಪದ ನೀಲಕಂಠಪ್ಪರವರ ಲೈನ್ ಮನೆಯಲ್ಲಿ ವಾಸವಾಗಿರುವ ಪಿರ್ಯಾದಿ ರಘು ಎಂಬವರು ಶನಿವಾರಸಂತೆ ನಗರದ ನಿವಾಸಿಯಾದ ಪಾಂಡುರವರ ಹಾರ್ಡ್ ವೇರ್ ಶಾಫ್ ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 6-7-2016 ರಂದು 02.00 ಪಿ.ಎಂಗೆ ಯಶಸ್ವಿ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಲ್ಲಿ ತಮ್ಮ ಸಾಹುಕಾರರ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಆರೋಪಿಯಯಾದ ಬಿಳಾಹ ಗ್ರಾಮದ ದಿನೇಶ ಹಿಂಭಾಗದಿಂದ ತನ್ನ 800ರ ಮಾರುತಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿ ರಘುರವರು ರಸ್ತೆ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ವಾಹನ ಚಾಲಕ ದಿನೇಶ ಎಂಬವನ್ನು ಏಕೆ ಈ ರೀತಿ ಕಾರನ್ನು ಚಾಲನೆ ಮಾಡಿಕೊಂಡು ಬರುತ್ತಿಯಾ ರಸ್ತೆಯಲ್ಲಿ ಎಂದು ಕೇಳುವಾಗ್ಗೆ ಆರೋಪಿ ಆತನ ಸ್ನೇಹಿತನೊಂದಿಗೆ ಕಾರಿನಿಂದ ಇಳಿದು ಪಿರ್ಯಾದಿಯವರ ಹತ್ತಿರ ಬಂದು ಅವಾಚ್ಯವಾಗಿ ಬೈದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗಲು ಆಗುವುದಿಲ್ಲ ಎಂದು ಹೇಳಿ ದಿನೇಶ ಮತ್ತು ಆತನ ಸ್ನೇಹಿತ ಕೈಯಿಂದ ಪಿರ್ಯಾದಿಯವರಿಗೆ ಶರೀರದ ಭಾಗಗಳಿಗೆ ಹೊಡೆದು ಗಾಯಪಡಿಸಿದ್ದು ಅಲ್ಲದೆ ಇನ್ನೊಮ್ಮೆ ರಸ್ತೆಯಲ್ಲಿ ನೀನು ಇದೇ ರೀತಿ ಸಿಕ್ಕದರೆ ಕಾರನ್ನು ಹತ್ತಿಸಿಕೊಂಡು ಹೋಗುತ್ತೇನೆ ಎಂದು ಜೀವ ಬೆದರಿಕೆಯನ್ನು ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೆಂಗಸು ಕಾಣೆ ಪ್ರಕರಣ ದಾಖಲು:

     ಹಾಲು ಮಾರಲು ಹೋದ ಮಹಿಳೆಯೊಬ್ಬರು ಕಾಣೆಯಾದ ಘಟನೆ ಮಡಿಕೇರಿ ಹತ್ತಿರದ ಗಾಳಿಬೀಡು ಗ್ರಾಮದಲ್ಲಿ ನಡೆದಿದೆ. ಫಿರ್ಯಾದಿ ಬಿ.ಎಸ್. ಸುಂದರ ಎಂಬವರು ಮಡಿಕೇರಿ ತಾಲೂಕು ಗಾಳಿಬೀಡು ಗ್ರಾಮದಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ವಾವಾಗಿದ್ದು, ಹಸುಗಳನ್ನು ಸಾಕಿಕೊಂಡು ಹಾಲನ್ನು ನವೋದಯ ಶಾಲೆಗೆ ಸೇರಿದ ವಸತಿ ಗೃಹಗಳಿಗೆ ಮಾರಾಟ ಮಾಡಿಕೊಂಡು ಜೀವನ ಮಾಡಿಕೊಂಡಿದ್ದು , ಫಿರ್ಯಾದಿಯವರಿಗೆ ಒಂದು ವಾರದಿಂದ ಆರೋಗ್ಯ ಸರಿ ಇಲ್ಲದ್ದರಿಂದ ಹೆಂಡತಿ ಚಂದ್ರಾವತಿಯು ಹಾಲು ಮಾರಾಟ ಮಾಡಿಕೊಂಡು ಬರುತ್ತಿದ್ದು ದಿ 4-07-2016 ರಂದು ಬೆಳಿಗ್ಗೆ 7-30 ಎಎಂಗೆ ಚಂದ್ರಾವತಿಯು ಹಾಲು ತೆಗೆದುಕೊಂಡು ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.