Friday, July 8, 2016

ನೇಣು ಬಿಗಿದುಕೊಂಡು ಪೊಲೀಸ್ ಅಧಿಕಾರಿಯ ಆತ್ಮಹತ್ಯೆ:

     ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಡಿಕೇರಿ ನಗರದ ಲಾಡ್ಜ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡಗು ಜಲ್ಲೆಯ ಕುಶಾಲನಗರ ಸಮೀಪದ ರಂಗಸಮುದ್ರ ಗ್ರಾಮದ ನಿವಾಸಿ ಶ್ರೀ ಕುಶಾಲಪ್ಪ ಎಂಬವರ ಮಗ ಎಂ.ಕೆ.ಗಣಪತಿರವರು ಹಾಲಿ ಡಿವೈ.ಎಸ್.ಪಿ ಯಾಗಿ ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ದಿನಾಂಕ 7-7-2016 ರಂದು ಸಂಜೆ 7-30 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ವಿನಾಯಕ ಲಾಡ್ಜ್ ನ ಕೊಠಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮೃತರ ತಂದೆ ಕುಶಾಲಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

     ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕಲಲುಬಾಣೆ- ಆರ್ಜಿ ಗ್ರಾಮದ ನಿವಾಸಿ ಕೆ.ಸಿ. ಮೋಹನ್ ಎಂಬವರ ಮಗಳಾದ ಪ್ರಾಯ 19 ವರ್ಷದ ಶ್ರೀಮತಿ ಮೇಘನಾ ಎಂಬಾಕೆಯನ್ನು ಕೂತುಪರಂಬುವುನಲ್ಲಿ ವಾಸವಿರುವ ಸಾಜಿ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು ದಿನಾಂಕ 6-7-2016 ರಂದು ತನ್ನ ತಂದೆಯ ಮನೆಗೆ ತನ್ನ ಗಂಡನ ಜೊತೆಯಲ್ಲಿ ಬಂದಿದ್ದು ಮರುದಿನ ದಿನಾಂಕ 7-7-2016 ರಂದು ಮನೆಯಲ್ಲಿ ತನ್ನ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಸಿ. ಮೋಹನ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನೆ ಕಳವು ಪ್ರಕರಣ ದಾಖಲು:

     ವಿರಾಜಪೇಟೆ ನಗರ ಠಾಣಾ ಸರಹದ್ದಿನ ವಿರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿ ವಾಸವಾಗಿರುವ ಸಿ.ಕೆ. gÉ¥sÁì£ï ರವರು ದಿನಾಂಕ 5-7-2016 ರಂದು ತನ್ನ ಸಂಸಾರದೊಂದಿಗೆ ರಂಜಾನ್ ಹಬ್ಬಕ್ಕೆ ಕೇರಳದ ತಲಚೇರಿಗೆ ಹೋಗಿದ್ದು ಅದೇ ಸಂದರ್ಭದಲ್ಲಿ ಅವರ ಮನೆಗೆ ದಿನಾಂಕ 5-7-2016 ರಿಂದ 8-7-2016ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ನುಗ್ಗಿ ಗಾಡ್ರೇಜ್ ನಲ್ಲಿಟ್ಟಿದ್ದ 10 ಗ್ರಾಂ ಚಿನ್ನದ ಚೈನು, ಒಂದು ಲೆನೊವಾ ಕೆಂಪನಿಯ ಲ್ಯಾಪ್ ಟಾಪ್, ಹಾಗೂ ಒಂದು ಟ್ಯಾಬ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಫಿರ್ಯಾದಿ gÉ¥sÁì£ï ರವರಯ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಗಳಿಂದ ಮಹಿಳೆ ಮಾನಭಂಗಕ್ಕೆ ಯತ್ನ, ಹಲ್ಲೆ:
    ವಿರಾಜಪೇಟೆ ತಾಲೂಕು ಬೇಟೋಳಿ ಗ್ರಾಮದ ನಿವಾಸಿ ಫಿರ್ಯಾದಿ ಸಿ.ಎ. ಇಸ್ಮಾಯಿಲ್, ಎಂಬವರು ಶುಂಠಿ ಕೃಷಿ ಮಾಡಿದ ಜಾಗಕ್ಕೆ ಅದೇ ಗ್ರಾಮದ ನಿವಾಸಿಗಳಾದ ಅಬ್ದುಲ್ಲಾ, ಸಿಯಾಬ್, ಜಮೀಲಾ, ಜಮಾಲ್ ಮತ್ತು ಸೌದ ಎಂಬವರು ದಿನಾಂಕ 7-7-2016 ರಂದು ಸಮಯ 9-00 ಗಂಟೆಗೆ ಅಕ್ರಮ ಪ್ರವೇಶ ಮಾಡಿ, ಶುಂಠಿ ಕೃಷಿಯನ್ನು ಕೋಳಿಗಳು ಹಾನಿ ಮಾಡಿದ ಬಗ್ಗೆ ವಿಚಾರಿಸಿದ ಕಾರಣಕ್ಕೆ ಪಿರ್ಯಾದಿಯವರ ಹೆಂಡತಿ ರಮ್ಲಾ ರವರ ಬಟ್ಟೆಯನ್ನು ಎಳೆದು ಮಾನಭಂಗಕ್ಕೆ ಯತ್ನಿಸಿ ಹಲ್ಲೆ ಮಾಡಿರುವುದಲ್ಲದೆ, ಸಿಯಾಬ್ ಎಂಬಾತನು ಎಡಕೈಗೆ ಕತ್ತಿಯಿಂದ ಕಡಿದು ಗಾಯಪಡಿಸಿರು ವುದಾಗಿ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕೋಳಿಗಳು ಸತ್ತ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:

     ವಿರಾಜಪೇಟೆ ತಾಲೂಕು, ಬೇಟೋಳಿ ಗ್ರಾಮದ ಗುಂಡಿಗೆರೆಯಲ್ಲಿ ವಾಸವಾಗಿರುವ ಜಮೀಲಾ ಎಂಬವರು ದಿನಾಂಕ 7-7-2016 ರಂದು 8-30 ಗಂಟೆಗೆ ಅದೇ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್ ಮತ್ತು ರಮ್ಲಾ ರವರಲ್ಲಿ ತಮ್ಮ ಕೋಳಿಗಳನ್ನು ಔಷಧಿ ಹಾಕಿ ಸಾಯಿಸಿದ ವಿಚಾರವನ್ನು ಪ್ರಸ್ತಾಪಿಸಿದ್ದು ಇದರಿಂದ ಇಸ್ಮಾಯಿಲ್, ರಮ್ಲಾ ಮತ್ತು ಚಾಚು ರವರುಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು ಅಲ್ಲದೆ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮನುಷ್ಯಕಾಣೆ:

      ನಾಪೋಕ್ಲು ಠಾಣಾ ಸರಹದ್ದಿನ ಕಾರೆಕಾಡು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಬುಶ್ರಾ ಎಂಬವರ ಗಂಡ ಕುಂಞ್ಞಿ ಅಬ್ದುಲ್ಲ @ ಪತ್ತಾವು ಎಂಬವರು ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08-04-2016 ರಂದು ಮಡಿಕೇರಿಗೆ ಹೋಗಿ ಲೈಸೆನ್ಸ್ ನವೀಕರಿಸಿಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಅವರ ಪತ್ನಿ ಶ್ರೀಮತಿ ಬುಶ್ರಾ ರವರು ದಿನಾಂಕ 7-7-2016 ರಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಟಿಕೇಟ್ ಮಾರಾಟ, ಆರೋಪಿ ಬಂಧನ:

     ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಪಿ.ಕೆ. ರಾಜುರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ದಿನಾಂಕ 7-7-2016 ರಂದು ಪಾಲಿಬೆಟ್ಟ ಜಂಕ್ಷನ್ ನಲ್ಲಿ ಗೋಣಿಕೊಪ್ಪ ನಗರದ ನಿವಾಸಿ ಅಯ್ಯಪ್ಪ ಎಂಬವರು ಕೇರಳ ರಾಜ್ಯದ ಲಾಟರಿ ಟಿಕೇಟ್ ಗಳನ್ನು ಮಾರಾಟಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಆತನ ಬಳಿ ಇದ್ದ ವಿವಿಧ ಶ್ರೇಣಿಯ ರೂ 4250/- ಬೆಲೆಯ 85 ಲಾಟರಿ ಟಿಕೇಟ್ ಗಳನ್ನು ಮತ್ತು ರೂ 900/-ನಗದು ಹಣವನ್ನು ಮಹಜರು ಮೂಲಕ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮದುವೆಯಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ:

     ಕುಶಾಲನಗರ ಠಾಣಾ ಸರಹದ್ದಿನ ನಂಜರಾಯಪಟ್ಟಣ ನಿವಾಸಿ ಎರವರ ಸುಬ್ರಮಣಿ ಎಂಬವರ ತಂಗಿ ಭಾಗ್ಯಳನ್ನು ಆರೋಪಿ ರಾಜ ಎಂಬ ವ್ಯಕ್ತಿ ಸುಮಾರು 2 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಚ್ಚೆಯ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದು ಇದರ ಪರಿಣಾಮವಾಗಿ ಆಕೆ ದಿನಾಂಕ 7-7-2016 ರಂದು ಹೊಟ್ಟನೋವಿನಿಂದ ನರಳುತ್ತಿದ್ದು ಆಕೆಯನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಡಿಕೇರಿ ಹಾಗೂ ಮೈಸೂರಿಗೆ ಚಿಕಿತ್ಸೆಯ ಬಗ್ಗೆ ದಾಖಲಿಸಲಾಗಿ ಆಕೆಯು ಮಗುವಿಗೆ ಜನ್ಮ ನೀಡಿರುತ್ತಾಳೆ ಮತ್ತು ಆಕೆಯನ್ನು ಮದುವೆಯಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿ ಮಗುವಿಗೆ ಜನ್ಮನೀಡಲು ಕಾರಣನಾದ ಆರೋಪಿ ರಾಜನ ಮೇಲೆ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.