Saturday, July 9, 2016

ಕತ್ತಿಯಿಂದ ಕಡಿದು ವ್ಯಕ್ತಿಯ ಕೊಲೆ
                       ಕತ್ತಿಯಿಂದ  ಕಡಿದು ವ್ಯಕ್ತಿಯೊಬ್ಬನನ್ನು  ಕೊಲೆ ಮಾಡಿದ ಘಟನೆ ಶ್ರೀಮಂಗಲ ಬಳಿಯ ಬಾಡಗರಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 27/05/2016ರಂದು ಬಾಡಗರಕೇರಿ ನಿವಾಸಿ ಬಲ್ಯಮೀದೇರಿರ ಪೊನ್ನಪ್ಪ ಎಂಬವರನ್ನು ಮತ್ತು ಅವರ ಪತ್ನಿಯನ್ನು ಅದೇ ಗ್ರಾಮದ ನಿವಾಸಿ ಬಲ್ಯಮೀದೇರಿರ ಅಮೇಶ್‌ ಎಂಬಾತನು ಕ್ಷುಲ್ಲಕ ಕಾರಣಕ್ಕಾಗಿ ಅಶ್ಲೀಲ ಶಬ್ದಗಳಿಂದ ಬೈಯುತ್ತಿದ್ದುದನ್ನು ಪೊನ್ನಪ್ಪನವರು ಪ್ರಶ್ನಿಸಿದ ಕಾರಣಕ್ಕೆ ಅಮೇಶನು ಪೊನ್ನಪ್ಪನವರ ಮೇಲೆ ಕತ್ತಿಯಿಂದ  ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಗಾಯಾಳು ಪೊನ್ನಪ್ಪನವರನ್ನು ಚಿಕಿತ್ಸೆಗಾಗಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಕೊಲೆಯತ್ನದ ಪ್ರಕರಣ ದಾಖಲಿಸಿ ಶ್ರೀಮಂಗಲ ಠಾಣೆಯಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಇದೀಗ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊನ್ನಪ್ಪನವರು ಚಿಕಿತ್ಸೆ ಫಲಿಸದೆ ಮೃತರಾಗಿದ್ದು ಶ್ರೀಮಂಗಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.