Tuesday, July 26, 2016

ದೇವಸ್ಥಾನ ಕಳವು
                      ದೇವಸ್ಥಾನದ ಬಾಗಿಲು ಮುರಿದು ಪ್ರವೇಶಿಸಿ ಹಣ ಹಾಗೂ ಸೀರೆ ಕಳವು ಮಾಡಿದ ಪ್ರಕರಣ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಸೋಮೇಶ್ವರ ದೇವಾಲಯಕ್ಕೆ ದಿನಾಂಕ 25/07/2016ರ ರಾತ್ರಿ ವೇಳೆ ಯಾರೋ ಕಳ್ಳರು ದೇವಳದ ಬಾಗಿಲಿನ ಬೀಗವನ್ನು ಮೀಟಿ ಒಳ ಪ್ರವೇಶಿಸಿ ದೇವಾಲಯದ ಹುಂಡಿಯನ್ನು ಒಡೆದು ಅದರಲ್ಲಿದ್ದ ಸುಮಾರು ರೂ. 1000 - 1500 ರಷ್ಟು ಹಣ ಹಾಗೂ ಒಂದು ಸೀರೆಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೇವಾಲಯ ಸಮಿತಿ ಅಧ್ಯಕ್ಷರಾದ ಸೋಮೇಶರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ
                       ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 26/07/2016ರ ಬೆಳಗಿನ ಜಾವ ಸೋಮವಾರ ಪೇಟೆ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಆರ್‌. ಮಂಚಯ್ಯನವರು ಸಿಬ್ಬಂದಿಯೊಂದಿಗೆ ನಗರ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಕಾರ್ಪೋರೇಷನ್‌ ಬ್ಯಾಂಕ್ ಬಳಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ನಿಂತಿದ್ದು ಪೊಲೀಸರನ್ನು ಕಂಡು ಓಡಲು ಪ್ರಯತ್ನಿಸಿದವರನ್ನು ಹಿಡಿದು ನಿಲ್ಲಿಸಿ ಪರಿಶೀಲಿಸಿದಾಗ ಓರ್ವನ ಬಳಿ ಒಂದು ಕಬ್ಬಿಣದ ರಾಡ್‌ ಇದ್ದು, ಇಬ್ಬರ ಹೆಸರು ವಿಳಾಸ ಕೇಳಲಾಗಿ ಒಬ್ಬ ಅಜಯ್‌ ಕುಮಾರ್‌, ಬಿಹಾರ ರಾಜ್ಯ ಎಂದೂ ಮತ್ತೊಬ್ಬ ಬ್ರಿಜೇಶ್‌ ಕುಮಾರ್‌, ಬಿಹಾರ ರಾಜ್ಯ ಎಂದು ತಿಳಿಸಿದ್ದು, ರಾತ್ರಿ ವೇಲೆಯಲ್ಲಿ ಆಯುಧ ಸಮೇತರಾಗಿ ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಲ್ಲಿರುವುದಾಗಿ ಶಂಕಿಸಿ ಅವರನ್ನು ಬಂಧಿಸಿ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಾಗಿರುತ್ತದೆ. 

ಮಹಿಳೆಯ ಶಂಕಾಸ್ಪದ ಸಾವು
                     ಮಹಿಳೆಯೊಬ್ಬರು  ಶಂಕಾಸ್ಪದವಾಗಿ ಸಾವನ್ನಪ್ಪರುವ ಘಟನೆ ಸಿದ್ದಾಪುರ ಬಳಿಯ ಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/07/2016ರಂದು ಹೊಸೂರು ಗ್ರಾಮದ ನಿವಾಸಿ ಎಂ.ಎನ್‌.ಮುತ್ತಣ್ಣ ಎಂಬವರ ಲೈನು ಮನೆಯಲ್ಲಿರುವ ಕಾರ್ಮಿಕ ಮಹಿಳೆ ಪಾರ್ವತಿ ಎಂಬವರು ಮನೆಯೊಳಗೆ ಬಿದ್ದು ಹೋಗಿರುವುದಾಗಿ ಪಕ್ಕದ  ಮನೆಯ ಚೋಮಿ ಎಂಬವರು ಮುತ್ತಣ್ಣನವರಿಗೆ ತಿಳಿಸಿದ್ದು, ಕೂಡಲೇ ಮುತ್ತಣ್ಣನವರು ಪಾರ್ವತಿಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆನ್ನಲಾಗಿದೆ. ಮೃತೆಯು ಸುಮಾರು ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಯಾವುದೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹಾ ಆಕೆಯ ಸಾವಿನ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಕಾಣೆ ಪ್ರಕರಣ
                      ಆಸ್ಪತ್ರೆಗೆಂದು ಹೋದ ಮಹಿಳೆ ಕಾಣೆಯಾದ ಪ್ರಕರಣ ಸುಂಟಿಕೊಪ್ಪ ಬಳಿಯ ಕಂಬಿಬಾಣೆ ಗ್ರಾಮದಲ್ಲಿ ನಡೆದಿದೆ. ಕಂಬಿಬಾಣೆ ನಿವಾಸಿ ಜೆ.ನಾಗರಾಜು ಎಂಬವರ ನಾದಿನಿ ವಿದ್ಯಾ ಎಂಬವರ ಮಗು ಆಕಸ್ಮಿಕವಾಗಿ ಸೀಮೆಣ್ಣೆಯನ್ನು ಕುಡಿದು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಗುವನ್ನು ನೋಡಲೆಂದು ನಾಗರಾಜುರವರ ಪತ್ನಿ ಸವಿತಾ ಎಂಬವರು ದಿನಾಂಖ 03/07/2016ರಂದು ಮನೆಯಿಂದ ತೆರಳಿದ್ದು ಇದುವರೆಗೂ ಮನೆಗೆ ತಿರುಗಿ ಬಾರದಿದ್ದು, ಆಕೆಯನ್ನು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂಬುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಮಡಿಕೇರಿ ಬಳಿಯ ಹೊಸ್ಕೇರಿ ಗ್ರಾಮದಲ್ಲಿ ನಡೆದಿದೆ.  ದಿನಾಂಕ  23/07/2016ರಂದು ಹೊಸ್ಕೇರಿ ನಿವಾಸಿ ಎಂ.ಡಿ.ಯತಿನ್‌ಎಂಬವರುಅವರ ತಂದೆ ದೇವಯ್ಯ ಮತ್ತು ತಾಯಿ ಭಾರತಿರವರೊಂದಿಗೆ ಬೆಂಗಳೂರಿಗೆ ಹೋಗಿ ದಿನಾಂಕ  25/07/2016ರಂದು ಮನೆಗೆ ಮರಳಿ ಬಂದಾಗ ಮನೆಯ ಗೇಟಿನ ಬೀಗವನ್ನು ಯಾರೊ ಒಡೆದು ಹಾಕಿರುವುದು ಕಂಡು ಬಂದು ಈ ಬಗ್ಗೆ ಅಲ್ಲೇ ಹತ್ತಿರದಲ್ಲಿ ಟ್ರ್ಯಾಕ್ಟರ್‌ನಿಂದ ಕಾಫಿ ಗಿಡಗಳನ್ನು ಇಳಿಸುತ್ತಿದ್ದ ಯತಿನ್‌ರವರ ಚಿಕ್ಕಪ್ಪ ಭುವನೇಶ್ವರರವರನ್ನು ವಿಚಾರಿಸಿದಾಗ ಭುವನೇಶ್ವರ್‌, ಅವರ ಮಗ ವಿಕ್ರಂ ಮತ್ತು ಭುವನೇಶ್ವರ್‌ರವರ ಪತ್ನಿ ಕಮಲರವರು ಏಕಾ ಏಕಿ ಯತಿನ್‌ರವರ ಮೇಲೆ ಕಬ್ಬಿಣದ ಜಾಕಿ ಲಿವರ್‌ನಿಂದ ಹಲ್ಲೆ ಮಾಡಿದ್ದು, ಯತಿನ್‌ರವರ ಮೊಬೈಲನ್ನು ಸಹಾ ನೆಲಕ್ಕೆ ಎಸೆದು ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯಾರ್ಥಿ ನಾಪತ್ತೆ 
                   ಕಾಲೇಜಿಗೆಂದು  ಹೋದ ಯುವಕನೋರ್ವ  ನಾಪತ್ತೆಯಾದ  ಘಟನೆ ಸಿದ್ದಾಪುರ ಬಳಿಯ ಇಂಜಿಲಗೆರೆ ಎಂಬಲ್ಲಿ ನಡೆದಿದೆ. ಪುಲಿಯೇರಿ ಗ್ರಾಮದ ಇಂಜಿಲಗೆರೆ ನಿವಾಸಿ ಕೆ.ಯು.ಶಂಕರ ಎಂಬವರ ಅಣ್ಣ ಶಶಿಧರ ಎಂಬವರ ಮಗ ನಿತಿನ್‌ ಎಂಬಾತನು ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಂಕರರವರ ಮನೆಯಿಂದ ಕಾಲೇಜಿಗೆ ಹೋಗುತ್ತದ್ದು ದಿನಾಂಕ 21/07/2016ರಂದು ಎಂದಿನಂತೆ ಕಾಲೇಜಿಗೆ ಹೋದವನು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರಳು ಕಳವು ಪ್ರಕರಣ 
                          ಅಕ್ರಮವಾಗಿ ನದಿಯಿಂದ ಮರಳು ಕಳ್ಳತನ ಮಾಡುತ್ತದ್ದ ಪ್ರಕರಣವನ್ನು ನಾಪೋಕ್ಲು ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 25/07/2016ರಂದು ನಾಪೋಕ್ಲು ಠಾಣಾ ಪಿಎಸ್‌ಐ ವೆಂಕಟೇಶ್‌ರವರು ಕುಂಜಿಲ ಗ್ರಾಮದ ಕಕ್ಕಬೆ ಹೊಳೆಯ ಕಡೆ ಗಸ್ತಿನಲ್ಲಿರುವಾಗ ಕಕ್ಕಬೆ ಹೊಳೆಯಲ್ಲಿ ದೋಣಿಯನ್ನುಪಯೋಗಿಸಿ  ಯಾರೋ ಅಕ್ರಮವಾಗಿ ಮರಳು ತೆಗೆಯುತ್ತಿರುವುದು ಕಂಡು ಬಂದಿದ್ದು, ಪಿಎಸ್‌ಐ ವೆಂಕಟೇಶ್‌ರವರು ಸ್ಥಳಕ್ಕೆ ತೆರಳಿದಾಗ ಅಲ್ಲಿದ್ದ ಇಬ್ಬರು ವ್ಯಕ್ತಿಗಳೂ ಇವರನ್ನು ಕಂಡು ಓಡಿ ಹೋಗಿದ್ದು, ಪಿಎಸ್‌ಐರವರು ಅಕ್ರಮವಾಗಿ ಮರಳು ತೆಗೆಯಲು ಉಪಯೋಗಿಸುತ್ತಿದ್ದ ಕಬ್ಬಿಣದ ದೋಣಿಯನ್ನು ವಶಪಡಿಸಿಕೊಂಡು ಮೊಕದದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ, ಏಳು ಜನರ ಬಂಧನ
                      ಅಕ್ರಮವಾಗಿ ಜೂಜಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ದಿನಾಂಕ 25/07/2016ರಂದು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿ ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಶನಿವಾರಸಂತೆ ಠಾಣೆ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ಕೊಡ್ಲಿಪೇಟೆಯ ಕಲ್ಲಳ್ಳಿ ಎಂಬಲ್ಲಿನ ಖಾಲಿ ಜಾಗಕ್ಕೆ ಧಾಳಿನಡೆಸಿ ಅಲ್ಲಿ ಅಕ್ರಮವಾಗಿ ಇಸ್ಪೇಟು  ಎಲೆಗಳಿಂದ  ಜೂಜಾಡುತ್ತಿದ್ದ ಶಿವರಾಜ್‌, ಪರಮೇಶ್‌, ತೇಜೇಶ್‌, ರಾಜ, ಸಂತೋಶ್‌, ಸತೀಶ್‌ ಮತ್ತು ವೀರಭದ್ರಪ್ಪ ಎಂಬವರನ್ನು ಬಂಧಿಸಿ ಜೂಜಾಡಲು ಉಪಯೋಗಿಸಿದ್ದ ಹಣ.ರೂ.5200/-ನ್ನು ಅಮಾನತ್ತುಪಡಿಸಿಕೊಂಡು ಮೊಕದ್ದಮೆ ಧಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಕಾಣೆ ಪ್ರಕರಣ
                      ಕೆಲಸಕ್ಕೆಂದು ಹೋದ ಮಹಿಳೆಯೊಬ್ಬರು ಮನೆಗೆ ಬಾರದೆ ನಾಪತ್ತೆಯಾದ ಘಟನೆ ವಿರಾಜಪೇಟೆ ಬಳಿಯ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 22/07/2016ರಂದು ಹೆಗ್ಗಳ ಗ್ರಾಮದ ಕೊರತಿಕಾಡು ಪೈಸಾರಿ ನಿವಾಸಿ ದಿಲೀಪ್‌ ಎಂಬವರ ಪತ್ನಿ ಭವ್ಯ ಎಂಬಾಕೆಯು ಎಂದಿನಂತೆ ಕೂಲಿ ಕೆಲಸಕ್ಕೆ ಹೋದವರು ಮನೆಗೆ ತಿರುಗಿ ಬಾರದೆ ನೆಂಟರಿಷ್ಟರ ಮನೆಗೂ ಹೋಗದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ  ವಿರಾಜಪೇಟೆ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                     ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 20/07/2016ರಂದು ಕುಶಾಲನಗರದ ಗುಮ್ಮನಕೊಲ್ಲಿ ಗ್ರಾಮದ ನಿವಾಸಿ ಅಜಿತ್‌ ಕುಮಾರ್‌ರವರನ್ನು ರಾಜು ಎಂಬವರು ಕುಶಾಲನಗರದ ಅಬಕಾರಿ ಕಚೇರಿಗೆ ಅಬಕಾರಿ ನಿರೀಕ್ಷಕರು ಕರೆಯುತ್ತಿರುವುದಾಗಿ ಹೇಳೆ ಕರೆಸಿಕೊಂಡು ಅಬಕಾರಿ ಕಚೇರಿಯಲ್ಲಿ ಅಜಿತ್‌ಕುಮಾರ್‌ರವರನ್ನು ಕುರಿತು ಅಶ್ಲೀಲ ಶಬ್ದಗಳಿಂದ ಬೈದು ಬಾಟಲಿಯಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು, ಅಜಿತ್‌ ಕುಮಾರ್‌ರವರು ಅಬಕಾರಿ ನಿರೀಕ್ಷಕರಾದ ಚೈತ್ರಾರವರ ಮೇಲೆ ಈ ಹಿಂದೆ ದೂರು ನೀಡಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.