Saturday, July 2, 2016

ಜೀಪು ಕಳವು ಪ್ರಕರಣ ದಾಖಲು:

     ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಜೀಪೊಂದನ್ನು ಕಳ್ಳರು ಕಳವು ಮಾಡಿದ ಘಟನೆ ನಡೆದಿದೆ. ದಿನಾಂಕ 1/7/16 ರಂದು ಪಿರ್ಯಾದಿ ಎಂ.ಕೆ. ರಫೀಕ್ ಎಂಬವರ ಬಾವ ಹನೀಫ ಎಂಬವರು ತಾವು ಕೆಲಸ ಮಾಡುತ್ತಿರುವ ಬಿಳಿಗೇರಿಯ ಎ.ಜೆ. ಪ್ಲಾಂಟರ್ಸ್ ಎಸ್ಟೇಟಿನ ಬಾಪ್ತು ಕೆಎ 19 ಎನ್ 8402 ರ ಮಹೇಂದ್ರ ಡಿಐ ಜೀಪನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಪ್ರಾರ್ಥನೆಗೆಂದು ತೆರಳುವ ಮುನ್ನ ಮುಖ್ಯ ರಸ್ತೆಯ ಕೊನಿಕಾ ಲ್ಯಾಬ್ ಮುಂಭಾಗ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ನಂತರ 11.00 ಗಂಟೆ ರಾತ್ರಿ ಪ್ರಾರ್ಥನೆ ಮುಗಿಸಿ ಬಂದು ನೋಡಿದಾದ ನಿಲ್ಲಿಸಿದ್ದ ಜಾಗದಿಂದ ಯಾರೋ ಕಳ್ಳರು ಜೀಪನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ದೇವಾಲಯದಿಂದ ಕಳ್ಳತನಕ್ಕೆ ಯತ್ನ:

ಶ್ರೀ ಚೀನಾ ಸೋಮೇಶ್ ಎಂಬವರು ಶ್ರೀ ಓಂಕಾರೇಶ್ವರ ದೇವಸ್ಥಾನದ ಪಾರು ಪತ್ತೆಗಾರರಾಗಿದ್ದು ಇವರ ಆಡಳಿತಕ್ಕೆ ಒಳಪಡುವ ಮಡಿಕೇರಿ ನಗರದಲ್ಲಿರುವ ಶ್ರೀ ಕೋಟೆ ಮಹಾ ಗಣಪತಿ ದೇವಾಲಯದಲ್ಲಿ ಭಕ್ತರು ಕಾಣಿಕೆ ಹಾಕುವ ಹುಂಡಿಯ ಬಾಗಿಲು ಹಿಡಿಯನ್ನು ಮತ್ತು ಪೂಜಾ ಸಾಮಾಗ್ರಿ ಇರಿಸುವ ಬಾಗಿಲಿನ ಬೀಗವನ್ನು ದಿನಾಂಕ 29-06-2016 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಒಡೆದು ಕಳ್ಳತನಕ್ಕೆ ಪ್ರಯತ್ನಿಸಿ, ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರದಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ಗಾರಿಕೆ ಪತ್ತೆ:

     ಅಕ್ರಮವಾಗಿ ಮರಳನ್ನು ಹೊಳೆಯಿಂದ ತೆಗೆದು ಟ್ರಾಕ್ಟರ್ ನಲ್ಲಿ ಸಂಗ್ರಹಿಸುತ್ತಿದ್ದುದನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಈರಳವಳಮುಡಿ ಗ್ರಾಮದಲ್ಲಿ ಕೊಕ್ಕಲೆರ ಬೆಳ್ಯಪ್ಪ ಎಂಬವರ ಪಂಪ್ ಹೌಸ್ ನ ಹತ್ತಿರ ಇರುವ ಹೊಳೆಯಿಂದ ಈರಳವಳಮುಡಿ ಗ್ರಾಮದ ನಿವಾಸಿಗಳಾದ ಧನಂಜಯ ಶೇಷಗೀರಿ ಕೊಕ್ಕಲೇರ ಬೆಳ್ಳಿಯಪ್ಪ ಇವರುಗಳು ದಿನಾಂಕ 1-7-2016 ರಂದು ಅಕ್ರಮವಾಗಿ ಮರಳು ತೆಗೆದು ಟ್ರಾಕ್ಟರ್ ಗೆ ಲೋಡ್ ಮಾಡುತ್ತಿದ್ದುದನ್ನು ಮಡಿಕೇರಿ ಗ್ರಾಮಾಂತರ ಠಾಣಾ ಪಿ.ಎಸ್.ಐ. ಹಾಗು ಸಿಬ್ಬಂದಿಗಳು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 
Posted by P.Rajendra Prasad, IPS

Friday, July 1, 2016

 

 
ಸ್ಟಾಕ್ ಯಾರ್ಡ್ನಿಂದ ಮರಳು ಕಳವು:
 
     ಡಾ: ಎಂ.ಜೆ. ಮಹೇಶ ಭೂ ವಿಜ್ಞಾನಿ, ಗಣಿ/ಭೂ ವಿಜ್ಞಾನ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ. ಇವರು ಕೆಳಕೊಡ್ಲಿ ಗ್ರಾಮದಲ್ಲಿರುವ ಸರ್ಕಾರಿ ಮರಳು ಸ್ಟಾಕ್ ಯಾರ್ಡ ಗೆ ಬೇಟಿ ನೀಡಿ ಪರಿಶೀಲಿಸಿದಾಗ ಸರ್ಕಾರಿ ಕಾಮಗಾರಿಗೆ ಬಳಸಲು ಸರ್ಕಾರದ ವತಿಯಿಂದ ಮರಳನ್ನು ದಾಸ್ತಾನು ಮಾಡಿದ್ದು ಸದರಿ ಮರಳಿನಲ್ಲಿ ಆರೋಪಿಗಳಾದ ಕೆ.ಎ. ನಾಗೇಶ, ಕೆ.ಆರ್ ಲೋಕೇಶ ಮತ್ತು ಯೋಗಾನಂದ ಎಂಬವರು ಸರ್ಕಾರದ ಪರವಾನಗಿ ಇಲ್ಲದೆ 8 ರಿಂದ 10 ಲೋಡ್ ಗಳಷ್ಟು ಮರಳನ್ನು ಸ್ಟಾಕ್ ಯಾರ್ಡನಿಂದ ಅನಧಿಕೃತವಾಗಿ ಕಳ್ಳತನದಿಂದ ಸಾಗಾಣಿಕೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಅಂಗನವಾಡಿ ಕೇಂದ್ರದಿಂದ ಪಂಪ್ ಸೆಟ್ ಕಳವು:
     ಶ್ರೀಮಂಗಲ ಠಾಣಾ ಸರಹದ್ದಿನ ಹರಿಹರ ಗ್ರಾಮದ ಅಂಗನವಾಡಿ ಕೇಂದ್ರದ ಬಾವಿಗೆ ನೀರು ಸರಭರಾಜು ಮಾಡುವ ಸಲುವಾಗಿ ಅಳವಡಿಸಲಾದ ಸುಮಾರು 7,000/= ರೂ ಮೌಲ್ಯದ ಒಂದು ಹೆಚ್ ಪಿ ಯ ಸಬ್ ಮಾರ್ಸಿಬಲ್ ಮೋಟಾರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಫಿರ್ಯಾದಿ ಹರಿಹರ ಗ್ರಾಮದ ಅಂಗನವಾಡಿ ಶಿಕ್ಷಕಿ ಕುಮಾರಿ ಕೋಮಲರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ