Friday, July 29, 2016ಹೊಳೆಯಲ್ಲಿ ಕೊಚ್ಚಿ ಬಾಲಕನ ದುರ್ಮರಣ
                ಹರಿಯುತ್ತಿರುವ ಹೊಳೆಯಲ್ಲಿ ಕೊಚ್ಚಿಹೋದ ಬಾಲಕನೋರ್ವ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ಹಾರಂಗಿಯ ಮಾವಿನಹಳ್ಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-07-2016 ರಂದು ಹಾರಂಗಿ ಗ್ರಾಮದ ನಿವಾಸಿ ಹಿತೇಶ್‌ ರಂಬವರ  ಅಮ್ಮ ಸುಶೀಲರವರು  ಬಟ್ಟೆ ಒಗೆಯಲು  ನಾಲೆಗೆ ಹೋದಾಗ ಹಿತೇಶ್‌ರವರ ಅಕ್ಕ ಧರಣಿ ಎಂಬವರ 5 ವರ್ಷ ಪ್ರಾಯದ ಮಗ ಶಶಾಂಕ್ ಕೂಡ ಅವರೊಂದಿಗೆ ಹೋಗಿದ್ದು, ಸುಶೀಲರವರು  ಬಟ್ಟೆ ಒಗೆಯುವ ಸಂದರ್ಭದಲ್ಲಿ ಶಶಾಂಕ್ ಕೂಡ ಅವರ ಪಕ್ಕದಲ್ಲಿ ಕುಳಿತಿದ್ದು  ರಭಸವಾಗಿ ಬಂದ ನೀರಿನಲ್ಲಿ ಬಾಲಕ ಶಶಾಂಕ್‌ ಕೊಚ್ಚಿ ಹೋಗಿದ್ದು, ನಂತರ ಸಾರ್ವಜನಿಕರ ಸಹಾಯದಿಂದ ಹುಡುಕಾಡಲಾಗಿ ರಾತ್ರಿ 10-00 ಗಂಟೆಗೆ ಮೃತ ಶರೀರವು ದೊರೆತಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ನುಗ್ಗಿ ಚಿನ್ನಾಭರಣ ಕಳವು
                 ಮನೆಯ ಹಿಂಬಾಗಿಲು ತೆರೆದು ಮನೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ ಘಟನೆ ಕುಶಾಲನಗರ ಬಳಿಯ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ  28-07-2017 ರಂದು ಚಿಕ್ಕಬೆಟ್ಟಗೇರಿ ನಿವಾಸಿ ಕೆ.ಕೆ.ಗಣೇಶ ಎಂಬವರು ಹಾಗೂ ಅವರ ಪತ್ನಿ ಮನೆಗೆ ಬೀಗ ಹಾಕಿ ಕೆಲಸದ ನಿಮಿತ್ತ ಹೋಗಿದ್ದು, ಸಂಜೆ ಶಾಲೆಗೆ ಹೋಗಿದ್ದ ಮಕ್ಕಳು ಮನೆಗೆ ಬಂದು ಮುಂಭಾಗಿಲು ತೆರೆದು ನೋಡಿದಾಗ  ಮನೆಯ ಹಿಂಬಾಗಿಲು ತೆರೆದಿದ್ದು, ಮನೆಯ ಮಲಗುವ ಕೋಣೆಯಲ್ಲಿ ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದುದನ್ನು ಕಂಡು ಗಣೇಶರವರಿಗೆ  ಫೋನ್ ಮುಖಾಂತರ ತಿಳಿಸಿದ್ದು ಗಣೇಶರವರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಬಾಗಿಲಿನ ಚಿಲಕವನ್ನು ಮೀಟಿ ಮುರಿದು ಒಳ ಪ್ರವೇಶಿಸಿ  ಮನೆಯ ಮಲಗುವ ಕೋಣೆಯಲ್ಲಿದ್ದ ಆಲ್ಮೆರಾದ  ಲಾಕರನ್ನು ಮುರಿದು ಅದರೊಳಗೆ ಇದ್ದ ಸುಮಾರು ರೂ. 24,000/-  ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯ ಬಂಧನ
                 ಅಪರಾತ್ರಿಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸುಂಟಿಕೊಪ್ಪ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 29-07-2016 ರ  ಮುಂಜಾನೆ  3.00 ಗಂಟೆಗೆ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಹೆಚ್‌.ಕೆ.ಪಾರ್ಥರವರು ನಗರ ಗಸ್ತು ಕರ್ತವ್ಯದಲ್ಲಿದ್ದಾಗ ಸುಂಟಿಕೊಪ್ಪದ  ವಂದನಾ ಬಾರ್ ಮತ್ತು ರೆಸ್ಟೋರೆಂಟ್ ಕಟ್ಟಡದ ಎಡ ಭಾಗದ ಗಲ್ಲಿಯಲ್ಲಿ ಒಬ್ಬ ವ್ಯಕ್ತಿಯು  ಅನುಮಾನಾಸ್ಪದ ರೀತಿಯಲ್ಲಿ  ನಿಂತಿದ್ದು,  ಎಎಸ್‌ಐರವರು ಆತನನ್ನು ವಿಚಾರಿಸಿದಾಗ ಆತನು ಕುಶಾಲನಗರದ ಮುಳ್ಳುಸೋಗೆ ಗ್ರಾಮದ ಕೆ.ಎಂ.ರಾಜ ಎಂಬುದಾಗಿ ತಿಳಿಸಿದ್ದು, ಆತನ ಇರುವಿಕೆಯ ಬಗ್ಗೆ ಯಾವುದೇ ಸೂಕ್ತ ಮಾಹಿತಿಯನ್ನು ನೀಡದಿದ್ದುರಿಂದ ಆತನು ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಸಂಶಯಿಸಿ ಆತನನ್ನು ಬಂಧಿಸಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಕೆರೆಗೆ ಬಿದ್ದು ವೃದ್ದನ ಸಾವು
                      ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ವೃದ್ದನೋರ್ವ ಸಾವಿಗೀಡಾಗಿರುವ ಘಟನೆ ವಿರಾಜಪೇಟೆ ಸಮೀಪದ ಕುಕ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 28/07/2016ರಂದು ಕುಕ್ಲೂರು ನಿವಾಸಿ ಗಿರಿಜಾ ಎಂಬಾಕೆಯ ಗಂಡ 75 ವರ್ಷ ಪ್ರಾಯದ ಮಾಣು ಎಂಬವರು ಮೊಣ್ಣಂಡ ಕಾರ್ಯಪ್ಪನವರ ಕೆರೆಯ ಬದಿಗಾಗಿ ಕೂಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.