Tuesday, August 30, 2016

ಅಕ್ರಮ ಗೋವುಗಳ ಸಾಗಾಟ:

     ಅಕ್ರಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸ್ ದಾಳಿ ನಡೆಸಿದ್ದಾರೆ.
ದಿನಾಂಕ 30-08-16ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ.ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಬೊಳ್ಳುಮಾಡು ಗ್ರಾಮದಲ್ಲಿ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ರಾಸುಗಳನ್ನು ಒಂದು ಒಂದು ಪಿಕ್ ಅಪ್ ಜೀಪಿನಲ್ಲಿ ತುಂಬಿಸಿಕೊಂಡು ಕಸಾಯಿ ಖಾನೆಗೆ ಸಾಗಾಟ ಮಾಡುತ್ತಿದ್ದ ಆರೋಪಿಗಳಾದ ಕಡಂಗ ಅರಪಟ್ಟು ಗ್ರಾಮದ ನಿವಾಸಿ ಸಿ.ಇ. ಇರ್ಷಾದ್ ಎಂಬವರನ್ನು ಹಾಗು ರಾಸುಗಳನ್ನು ಸಾಗಾಟಕ್ಕೆ ಬಳಸಿದ ಪಿಕ್ ಅಪ್ ವಾಹನವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ವ್ಯಕ್ತಿ ಸಾವು:

     ಚಲಿಸುತ್ತಿದ್ದ ಬಸ್ಸಿನಿಂದ ವ್ಯಕ್ತಿಯೊಬ್ಬರು ಬಾಗಿಲಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ದಿನಾಂಕ 29-8-2016 ರಂದು ವಿರಾಜಪೇಟೆ ತಾಲೋಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ತಿಮ್ಮಯ್ಯ ಎಂಬವರು ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ವಿರಾಜಪೇಟೆ ಕಡೆಯಿಂದ ಚೆಂಬೆಬೆಳ್ಳೂರು ಕಡೆಗೆ ಪ್ರಯಾಣಿಸುತ್ತಿದ್ದಾಗ ಹಿಂಬದಿ ಬಾಗಿಲಿನಿಂದ ಅಕಸ್ಮಿಕವಾಗಿ ಹೊರಗಡೆ ಬಿದ್ದು ತೀವ್ರವಾಗಿ ಗಾಯಗೊಂಡು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನಪ್ಪಿದ್ದು, ಬಸ್ಸು ಚಾಲಕನ ವಿರುದ್ದ ಪ್ರಕರಣ ದಾಖಲಿಸಿದ ವಿರಾಜಪೇಟೆ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಸಾರಾಯಿ ತಯಾರಿಕೆ, ಪ್ರಕರಣ ದಾಖಲು:

     ಈ ದಿನ ದಿನಾಂಕ 29.08.2016ರಂದು ಸಮಯ 11.00 ಪಿ.ಎಂಗೆ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಎಸ್. ಪರಶಿವ ಮೂರ್ತಿಯವರು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ್ಗೆ ಕೊಡ್ಲಿಪೇಟೆ ದೊಡ್ಡಕೊಡ್ಲಿ ಗ್ರಾಮದ ಕಲ್ಲಾರೆಯ ರಾಜೇಗೌಡರವರ ಮಗನಾದ ಎಂ.ಆರ್ ನಾಗೇಶರವರ ಮನೆಯ ಹಿಂಭಾಗದ ವಾಸರೆಯಲ್ಲಿ ಕಳ್ಳಭಟ್ಟಿಯನ್ನು ಕಾಯಿಸುತ್ತಿರುವುದಾಗಿದೆ ಎಂದು ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ದಾಳಿ ಮಾಡಿ ಕಳ್ಳಭಟ್ಟಿಯನ್ನು ತಯಾರಿಸಲು ಪುಳಗಂಜಿಯನ್ನು ಕಾಯಿಸುತ್ತಿರುವುದು ಮತ್ತು ಬಿಂದಿಗೆಯಲ್ಲಿ ಶೇಖರಿಸಿರುವುದನ್ನು ಪತ್ತೆ ಹಚ್ಚಿ ಸಾರಾಯಿ ತಯಾರಿಸಲು ಉಪಯೋಗಿಸಿದ ಸಾಮಾಗ್ರಿಗಳನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, August 29, 2016

ಸ್ಕೂಟಿಗೆ ಬಸ್ಸು ಡಿಕ್ಕಿ, ಸವಾರನಿಗೆ ಗಾಯ:
     ದಿನಾಂಕ 28-8-2016 ರಂದು ಕುಶಾಲನಗರ ಠಾಣಾ ಸರದಹದ್ದಿನ ಕೊಪ್ಪಗ್ರಾಮದ ನಿವಾಸಿ ಪ್ರಭು ಎಂಬುವರು ತಮ್ಮ ಸ್ಕೂಟಿಯಲ್ಲಿ ಕುಶಾಲನಗರದಿಂದ ಕೊಪ್ಪ ಕಡೆ ಹೋಗುತ್ತಿದ್ದಾಗ ಕುಶಾಲನಗರ ಪಟ್ಟಣಕಡೆಗೆ ಹೋಗುತ್ತಿದ್ದ ಬಸ್ಸೊಂದು ಡಿಕ್ಕಿ ಯಾದ ಪರಿಣಾಮ ಪ್ರಭುರವರು ಗಾಯಗೊಂಡಿದ್ದು, ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಬಗ್ಗೆ ಮಡಿಕೇರಿಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ, ಪ್ರಕರಣ ದಾಖಲು:
     ದಿನಾಂಕ 28-8-2016 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ನಗರದ ನಿವಾಸಿ ಸಾದಿಕ್ ರವರ ತಂಗಿಯಾದ ರಜಿಯಾಸುಲ್ತಾನ್ @ ಚಾಂದು @ ಚಾಂದಿನಿ ಪ್ರಾಯ 24 ವರ್ಷರವರು ಮನೆಯಲ್ಲಿ ಯಾರಿಗೂ ಹೇಳದೇ ಎಲ್ಲಿಗೋ ಹೊರಟು ಹೋಗಿದ್ದು ನಂತರ ಕಾಣೆಯಾಗಿದ್ದು, ಫಿರ್ಯಾದಿ ಸಾದಿಕ್ ರವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಬಸ್ಸಿಗೆ ಕಾರು ಡಿಕ್ಕಿ:

     ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಕೆ.ಜೆ ಅನಂತ ಕುಮಾರ್ ರವರು ದಿನಾಂಕ 28-08-2016 ರಂದು ಕೆ.ಎಸ್.ಆರ್.ಟಿ.ಸಿ.ಯ ಕೆಎ-09-ಎಫ್-5247 ರಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ಬೋಯಿಕೇರಿಯಲ್ಲಿ ಸಮಯ 6.20 ಪಿ.ಎಂ ಗೆ ಎದುರಿನಿಂದ ಒಂದು ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಬಂದು ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರು ಜಖಂಗೊಂಡು ಕಾರಿನಲ್ಲಿ ಇದ್ದವರಿಗೆ ರಕ್ತಗಾಯವಾಗಿದ್ದು, ಈ ಸಂಬಂಧ ಫಿರ್ಯಾದಿ ಕೆ.ಜೆ. ಅನಂತಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಡಾನೆ ದಾಳಿ ವ್ಯಕ್ತಿ ಬಲಿ:

     ಸಿದ್ಧಾಪುರ ಠಾಣಾ ಸರಹದ್ದಿಗೆ ಸೇರಿದ ಕರಡಿಗೋಡು ಗ್ರಾಮದ ಅವರೆಗುಂದ ಬಸವನಹಳ್ಳಿಯಿಂದ 1 ಕಿ.ಮೀ ದೂರದಲ್ಲಿ ಮಾಲ್ದಾರೆ ಕಡೆಗೆ ಹೋಗುವ ರಸ್ತೆಯ ಅರಣ್ಯದ ಬಳಿ ಕರಡಿಗೋಡು ಗ್ರಾಮದ ನಿವಾಸಿ ಮಾದ, ಅವರ ದೊಡ್ಡಪ್ಪನ ಮಗ ಪಂಜರಿ ಎರವರ ಚೆಲುವ, ಪ್ರಾಯ 35 ವರ್ಷ ಹಾಗೂ ಪಕ್ಕದ ನಿವಾಸಿ ಪಾಪುರವರೊಂದಿಗೆ ಸಿದ್ಧಾಪುರಕ್ಕೆ ಸಂತೆಗೆಂದು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾಡಿನೊಳಗಿಂದ ದಿಢೀರನೆ ಬಂದ ಒಂದು ಕಾಡಾನೆಯು ಏಕಾಏಕಿ ಅವರ ಮೇಲೆ ಧಾಳಿ ಮಾಡಿದ್ದು, ಆ ದಾಳಿಯಲ್ಲಿ ಕಾಡಾನೆಯು ಚೆಲುವನನ್ನು ಕಾಲಿನಿಂದ ಮೆಟ್ಟಿ ತೀವ್ರವಾಗಿ ಗಾಯಗೊಂಡ ಚೆಲುವನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Sunday, August 28, 2016

ಅಕ್ರಮ ಗೋಮಾಂಸ ಮಾರಾಟ ಪ್ರಕರಣ
                        ಅಕ್ರಮವಾಗಿ ಗೋಮಾಂಸ ಸಾಗಾಟ ಪ್ರಕರಣವೊಂದು ಮಡಿಕೇರಿ ನಗರದಲ್ಲಿ ದಾಖಲಾಗಿದೆ. ದಿನಾಂಕ 27/08/2016ರಂದು ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಅಬ್ದುಲ್‌ ಖಾದರ್‌ ಎಂಬವರು ಬಸ್ಸಿನಿಂದ ಎರಡು ಚೀಲಗಳನ್ನು ಇಳಿಸುತ್ತಿದ್ದುದನ್ನು ಕಡಗದಾಳು ನಿವಾಸಿ ಗಣೇಶ ಎಂಬವರು ಕಂಡು ಅನುಮಾನಗೊಂಡು ವಿಚಾರಿಸಿದಾಗ ಚೀಲಗಳಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿದ್ದು, ಮಡಿಕೇರಿ ನಗರ ಠಾಣೆಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಸುಮಾರು 40 ಕೆಜಿಯಷ್ಟು ಗೋಮಾಂಸವನ್ನು ವಶಪಡಿಸಿಕೊಂಡು, ಅಬದುಲ್‌ ಖಾದರ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. 

ಹೊಳೆಗೆ ಬಿದ್ದು ವ್ಯಕ್ತಿಯ ಆಕಸ್ಮಿಕ ಸಾವು
                          ಸ್ನಾನ ಮಾಡಲೆಂದು ಹೊಳೆಗೆ ಇಳಿದ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಬಾಳೆಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 26/08/2016ರಂದು ಹೆಚ್‌.ಡಿ.ಕೋಟೆ ನಿವಾಸಿ ಕೆಂಪಾಚಾರಿ ಎಂಬವರು ಬಾಳೆಲೆ ಬಳಿ ಲಕ್ಷ್ಮಣ ತೀರ್ಥ ನದಿಯಲ್ಲಿ ಸ್ನಾನ ಮಾಡಲೆಂದು ಇಳಿದು ಸ್ನಾನ ಮಾಡುವ ಸಮಯದಲ್ಲಿ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ದಿನಾಂಕ 27/08/2016ರಂದು ಕೆಂಪಾಚಾರಿಯವರ ಮೃತದೇಹ ದೊರೆತಿದ್ದು ಈ ಬಗ್ಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

Saturday, August 27, 2016

ವ್ಯಕ್ತಿಯಿಂದ ತಾಯಿ, ತಂಗಿ ಮೇಲೆ ಹಲ್ಲೆ:

      ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ತಾಯಿ ಮತ್ತು ತಂಗಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಅಳಿಲುಗುಪ್ಪೆ ಸಿದ್ದಲಿಂಗಪುರ ಗ್ರಾಮದ ನಿವಾಸಿ ಕವಿತರವರು ದಿನಾಂಕ 25-8-2016 ರಂದು ತನ್ನ ತಾಯಿಯವರ ಮನೆಯಲ್ಲಿ ಇರುವಾಗ್ಗೆ ತನ್ನ ಅಣ್ಣನಾದ ಗಣೇಶ ಅಲ್ಲಿಗೆ ಬಂದು ಕವಿತ ಮತ್ತು ತಾಯಿ ಕಾಮವ್ವನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಗಾಯ:

     ವ್ಯಕ್ತಿಯೊಬ್ಬರು ಮರ ಕೆಲಸ ಮಾಡುತ್ತಿದ್ದ ವೇಳೆ ಮರವು ಎದೆಯ ಮೇಲೆ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ, ದೊಡ್ಡನಗರ ಗ್ರಾಮದ ನಿವಾಸಿ ಪ್ರದೀಪ ಎಂಬವರು ಸುಂಟಿಕೊಪ್ಪ ಗ್ರಾಮದ ನಿವಾಸಿ ತಿಮ್ಮಯ್ಯ ನವರಿಗೆ ಸೇರಿದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿರುವ ಕಾಫಿ ತೋಟದ ಟಿಂಬರ್ ಸಾಗಿಸುವ ಕೆಲಸಕ್ಕೆ ಹೋಗಿದ್ದು ಮರ ಸಾಗಿಸುವ ವೇಳೆ ಪ್ರದೀಪನವರ ಎದೆಗೆ ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Friday, August 26, 2016

ಕುಶಾಲನಗರ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು:

      ದಿನಾಂಕ 14-8-2016 ರಂದು ಕುಶಾಲನಗರದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಪಂಜಿನ ಮೆರವಣಿಗೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರವೀಣ್ ಪೂಜಾರಿ ಎಂಬ ವ್ಯಕ್ತಿ ತನ್ನ ಆಟೋದಲ್ಲಿ ಹೋಗುತ್ತಿದ್ದಾಗ ಗುಡ್ಡೆಹೊಸೂರು-ಬೆಟಗೇರಿ ರಸ್ತೆಯ ಬಳಿ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸಿ ಆರೋಪಿಗಳನ್ನು ಬಂಧಿಸಿರುತ್ತಾರೆ. ಕೊಲೆ ಪ್ರಕರಣದಲ್ಲಿ ಭಾಗಿಯಾದ (1)ಎಂ.ಹೆಚ್. ತುಪೈಲ್, 20 ವರ್ಷ, ಗದ್ದಿಗೆ, ಮಡಿಕೇರಿ, (2)ನಯಾಜ್,32 ವರ್ಷ, ರಾಣಿಪೇಟೆ, ಮಡಿಕೇರಿ (ಸ್ವಂತ ಊರು ಹುಣಸೂರು), (3) ಮಹಮ್ಮದ್ ಮುಸ್ತಾಫ, 34 ವರ್ಷ, ಮಡಿಕೇರಿ ನಗರ, (4)ಇಲಿಯಾಸ್ 35 ವರ್ಷ, ಗೊಂದಿಬಸವನಳ್ಳಿ, ಕುಶಾಲನಗರ, (5) ಇರ್ಪಾನ್ ಅಹಮ್ಮದ್,29 ವರ್ಷ, ಎನ್.ಎಸ್. ಕಾಲೋನಿ, ಹುಣಸೂರು, (6) ಟಿ.ಎ. ಹ್ಯಾರೀಸ್,30 ವರ್ಷ, ವಾಸ ತಣ್ಣೀರ್ ಹಳ್ಳ, ಹಾಲಿ ವಾಸ ಗೊಂದಿಬಸವನಳ್ಳಿ ಗ್ರಾಮ ಕುಶಾಲನಗರ, (7) ಮುಜೀಬ್ ರೆಹಮಾನ್, 22 ವರ್ಷ, ಮಾದಾಪಟ್ನ, ಕುಶಾಲನಗರ, (8) ಷರೀಫ್, ಪ್ರಾಯ 30 ವರ್ಷ, ಗೊಂದಿಬಸವನಳ್ಳಿ, ಕುಶಾಲನಗರ ಮತ್ತು (9) ಮಹಮ್ಮದ್ ಅಪ್ರೀನ್ @ ಅಮ್ರಾನ್ ಖಾನ್, 22 ವರ್ಷ, ಮಡಿಕೇರಿ ನಗರದ ಮೊಬೈಲ್ ಟ್ರ್ಯಾಕ್ ಮೊಬೈಲ್ ಅಂಗಡಿಯಲ್ಲಿ ಕೆಲಸ, ಇವರುಗಳನ್ನು ಪೊಲೀಸರು ಬಂಧಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

          ಪ್ರಕರಣದ ತನಿಖೆಯು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕುಶಾಲನಗರ ಡಿಎಸ್ ಪಿ ರವರ ಮಾರ್ಗದರ್ಶನದ ಮೇರೆಗೆ ನಡೆದಿದ್ದು, ಕಾರ್ಯಾಚರಣೆಯಲ್ಲಿ ಜಿಲ್ಲಾ ಡಿಸಿಐಬಿ ವಿಭಾಗದ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಆರ್. ಲಿಂಗಪ್ಪನವರು ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ, ಕುಶಾಲನಗರ ಸಿಪಿಐ ಕ್ಯಾತೇಗೌಡ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ. ಮಹೇಶ ಹಾಗು ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗಿಯಾಗಿ ಪ್ರಕರಣವನ್ನು ಬೇಧಿಸಿರುತ್ತಾರೆ.

ಪತಿಯಿಂದ ಪತ್ನಿ-ಮಕ್ಕಳ ಮೇಲೆ ಹಲ್ಲೆ:
   
      ಸೋಮವಾರಪೇಟೆ ತಾಲೋಕು ಹಾಡಗೇರಿ ಗ್ರಾಮದ ನಿವಾಸಿ ಸಫಿಯಾ ರವರು ದಿನಾಂಕ 26-08-2016 ರಂದು ಬೆಳಗ್ಗೆ 9.00 ಗಂಟೆಗೆ ಮನೆಯಲ್ಲಿರುವಾಗ್ಗೆ ಆಕೆಯ ಗಂಡ ಅಬ್ದುಲ್ ರೆಹಮಾನ್ ರವರು ಮನೆಯ ಒಳಗಡೆ ಬಂದು ನಿನಗೆ ಮತ್ತು ನಿನ್ನ ಮಕ್ಕಳಿಗೆ ಈ ಮನೆಯಲ್ಲಿ ಇರಲು ಹಕ್ಕಿಲ್ಲ ಎಂಬುದಾಗಿ ಹೇಳಿಕೊಂಡು ಕೈಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ನೋವುಂಟು ಪಡಿಸಿದ್ದು ಕೂಗಿಕೊಂಡಾಗ ಮನೆಯ ಹೊರಗೆ ಇದ್ದ ಮಕ್ಕಳು ಓಡಿ ಬಂದಾಗ ಹೊರಗೆ ಹೋಗಲು ಬಿಡದೆ ಅಡ್ಡಗಟ್ಟಿ ಬಿಡಿಸಲು ಬಂದ ಮಗ ಜಮೀರನ ಬಲ ಕೈ ತೋರು ಬೆರಳಿಗೆ ಬಾಯಿಯಿಂದ ಕಚ್ಚಿ ರಕ್ತಗಾಯಪಡಿಸಿದಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದು, ಇದೇ ವಿಚಾರವಾಗಿ ಅಬ್ದುಲ್ ರೆಹಮಾನ್ ರವರು ತಮ್ಮ ಪತ್ನಿ ಮತ್ತು ಮಕ್ಕಳು ತನ್ನ ಮೇಲೆ ಹಲ್ಲೆ ನಡೆಸಿರುತ್ತಾರೆಂದು ದೂರು ನೀಡಿದ್ದು ಇಬ್ಬರ ದೂರಿನನ್ವಯ ಪ್ರತ್ಯೇಕ ದೂರುಗಳನ್ನು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, August 25, 2016

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ: 

     ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ವಿಷ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಬಸವನಳ್ಳಿ ಗ್ರಾಮದ ನಿವಾಸಿ ಜೆ.ಕೆ. ಧನು ಎಂಬವರ ತಂಗಿ ಚಿಮ್ಮಿ @ ಪಾರ್ವತಿ (35) ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ದಿನಾಂಕ 24-8-2016 ರಂದು ವಿಷ ಸೇವಿಸಿದ್ದು, ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ: 

     ಕೇರಳ ರಾಜ್ಯದ ಕಣ್ಣನೂರು ಜಿಲ್ಲೆಯ ಕಾಂಞ್ಞರಕೊಲ್ಲಿಯ ನಿವಾಸಿ ಪೌತಿ ತಂಗಪ್ಪನ್ ವೇಲು ರವರ ಹೆಂಡತಿ ಶ್ರೀಮತಿ ಭಾನುಮತಿ ಎಂಬವರ ಮಗ ಪ್ರಾಯ 42 ವರ್ಷದ ಚಂದ್ರಬಾಬು ರವರು ದಿನಾಂಕ 25-8-2016 ರಂದು ವಿರಾಜಪೇಟೆ ನಗರದಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದು ಸಾಯುವ ಮುಂಚೆ ತನ್ನ ಸಾವಿಗೆ ಕೋಕೇರಿಯಲ್ಲಿ ತನಗೆ ಸಂತೋಷ್, ಉಣ್ಣಿ, ವಿನಿತ್ ರವರು ಸೇರಿ ಕಾಫಿ ದೊಣ್ಣೆಯಿಂದ ಬಲ ಕೈಗೆ ಹೊಡೆದು, ಹೊಟ್ಟೆಭಾಗಕ್ಕೆ ಹೊಡೆದು ನೋವುಪಡಿಸಿ ಕೆಲಸ ಮಾಡಲು ಆಗದೇಇದ್ದು ಅಲ್ಲದೆ ತನ್ನ ಪೋನ್ ಸಹ ಒಡೆದು ಹಾಕಿದ್ದು, ಈ ಎಲ್ಲಾ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಬರೆದಿದ್ದು, ಈ ಸಂಬಂಧ ವಿರಾಜಪೇಟೆ ನಗರ ಪೊಲೀಸರು ಸಂತೋಷ್, ಉಣ್ಣಿ, ವಿನಿತ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ಕಳವು ಪ್ರಕರಣ ದಾಖಲು: 

     ಶನಿವಾರಸಂತೆ ಠಾಣಾ ಸರದಹ್ದಿನ ನಾಗಾವಾರ ಗ್ರಾಮದ ನಿವಾಸಿ ಎನ್.ವಿ. ಕುಮಾರ್ ಎಂಬವರು ದಿನಾಂಕ 23-08-2016 ರಂದು ಬೆಳಿಗ್ಗೆ 09.00 ಗಂಟೆಗೆ ತಮ್ಮ ಮನೆಗೆ ಬೀಗ ಹಾಕಿಕೊಂಡು ಬಾಬುರವರ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದು ಕೆಲಸ ಮುಗಿಸಿಕೊಂಡು ಸಂಜೆ 05.30 ಗಂಟೆಗೆ ಪಿರ್ಯಾದಿಯವರ ಪತ್ನಿ ಚಂದ್ರಿಕಾ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆ ಹಿಂಬದಿಯ ಬಾಗಿಲನ್ನು ತೆಗೆದು ಮನೆಯ ಗಾಡ್ರೇಜ್‌ನ್ನು ಮುರಿದು ಅದರಲ್ಲಿದ್ದ ಒಂದು ಕೆಂಪು ಹರಳನ್ನು ಒಳಗೊಂಡಿರುವ ಅಂದಾಜು 14 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್‌ ಹಾಗು 3 ಗ್ರಾಂ ತೂಕದ ಒಂದು ಜೊತೆ ಚಿನ್ನದ ಹ್ಯಾಂಗಿಗ್ಸ್‌ ಹಾಗು ಅಂದಾಜು 4 ಗ್ರಾಂ ತೂಕದ ಒಂದು ಜೊತೆ ಚಿನ್ನದ ಹ್ಯಾಂಗಿಗ್ಸ್‌ ಹಾಗು ಅಂದಾಜು 3 ಗ್ರಾಂ ತೂಕದ ಒಂದು ಚಿನ್ನದ ಉಂಗುರ ಇತ್ಯಾದಿಗಳನ್ನು ಕಳವು ಮಾಡಿಕೊಂಡು ಹೋಗಿದ್ದು,ಈ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, August 24, 2016

ನೀರಿನ ವಿಚಾರದಲ್ಲಿ ಜಗಳ:

     ಸೋಮವಾರಪೇಟೆ ತಾಲೋಕು, ತೊರೆನೂರು ಗ್ರಾಮದ ನಿವಾಸಿ ಟಿ.ಕೆ. ವಸಂತ ಎಂಬವರು ದಿನಾಂಕ 24-8-2016 ರಂದು ತಮ್ಮ ಜಮೀನಿಗೆ ಹೋಗಿದ್ದು, ಪಕ್ಕದ ಜಮೀನಿನವರಾದ ರುದ್ರಪ್ಪ ಹಾಗೂ ಅವರ ಮಗ ಮಧು, ಬಸವರಾಜಪ್ಪ ಇವರು ಟಿ.ಕೆ ವಸಂತರವರ ಅಣ್ಣ ಸುರೇಶನವರೊಂದಿಗೆ ನೀರಿನ ವಿಚಾರದಲ್ಲಿ ಜಗಳವಾಗಿದ್ದು ಅವರನ್ನು ಸಮಾಧಾನ ಪಡಿಸಲು ಹೋದಾಗ ಆಪೋಪಿಗಳಾದ ರುದ್ರಪ್ಪ, ಮಧು, ಬಸವರಾಜಪ್ಪ ಮತ್ತು ವನಜಾಕ್ಷಿರವರುಗಳು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಮತ್ತು ಗುದ್ದಲಿ ಕಾವಿನಿಂದ ಹಲ್ಲೆನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀಪು-ಬೈಕ್ ನಡುವೆ ಅಪಘಾತ, ಸವಾರನ ದುರ್ಮರಣ: 

     ಬೈಕ್ ಮತ್ತು ಪಿಕ್ ಅಪ್ ಜೀಪಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೂಡು ಎಂಬಲ್ಲಿ ನಡೆದಿದೆ. ಈ ದಿನ ಬೆಳಗ್ಗೆ 9-15 ಗಂಟೆಯ ಸಮಯದಲ್ಲಿ ಮಾಲ್ದಾರೆ ಗ್ರಾಮದ ನಿವಾಸಿ ಎಸ್.ಜೆ. ಮಂಜು ಎಂಬವರು ತನ್ನ ಮೋಟಾರ್ ಸೈಕಲ್ ನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಕರಡಿಗೋಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಇ.ಸಿ. ಭಾಸ್ಕರ ಎಂಬವರು ಚಾಲಿಸಿಕೊಂಡು ಬರುತ್ತಿದ್ದ ಪಿಕ್ ಜೀಪು ಡಿಕ್ಕಿಯಾದ ಪರಿಣಾಮ ಎಸ್.ಜೆ. ಮಂಜುರವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೂಡ್ಸ್ ಆಟೋ ಬೈಕಿಗೆ ಡಿಕ್ಕಿ:

     ಗೂಡ್ಸ್ ಆಟೋ ಬೈಕಿಗೆ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡು ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಜಾಗೇನಹಳ್ಳಿಯಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ನಿವಾಸಿ ಶಾಂತರಾಜು ಎಂಬವರ ಪುತ್ರ ಪ್ರತಾಪ ಎಂಬ ವ್ಯಕ್ತಿ ತನ್ನ ಸ್ನೇಹಿತ ಸಂಜಯನೊಂದಿಗೆ ಗುಡುಗಳಲೆ ಕಡೆಗೆ ಹೋಗುತ್ತಿದ್ದಾಗ ಗೂಡ್ಸ್ ಆಟೋವೊಂದರ ಚಾಲಕ ನೋರ್ವ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರಿಬ್ಬರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಕಳವು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ನೀರುಗುಂದ ಗ್ರಾಮದ ವಾಸಿ ಶ್ರೀ. ಎನ್.ಆರ್ ಸಣ್ಣಪ್ಪ ರವರು ದಿನಾಂಕ 23-08-2016 ರಂದು ಸಮಯ ಬೆಳಿಗ್ಗೆ 09-30 ಗಂಟೆಗೆ ಎಂದಿನಂತೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದು, ಅವರ ಪತ್ನಿಯು ತಮ್ಮ ಮಗಳ ಮನೆಗೆ ಹೋಗಿದ್ದು, ಫಿರ್ಯಾದಿಯವರು ಮಧ್ಯಾಹ್ನ 01-30 ಗಂಟೆಗೆ ಊಟಕ್ಕೆ ಮನೆಗೆ ಬಂದು ನೋಡುವಾಗ್ಗೆ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮೀಟಿ ತೆಗೆದು ಒಳ ನುಗ್ಗಿ ಮನೆಯ ಅಟ್ಟದ ಮೇಲೆ ಇಟ್ಟಿದ್ದ ಕಬ್ಬಿಣದ ಟ್ರಂಕ್ ನ ಬೀಗವನ್ನು ಸಹ ಮುರಿದು ಅದರೊಳಗಿದ್ದ ಚಿನ್ನದ ಎರಡು ಉಂಗುರ ಅಂದಾಜು 6 ಗ್ರಾಂ , 2 ಜೊತೆ ಚಿನ್ನದ ಓಲೆ, ಅಂದಾಜು 8 ಗ್ರಾಂ ಇದ್ದು, ನಗದು ಹಣ 2000 ರೂಗಳು ಹಾಗೂ ಕೊಡ್ಲಿಪೇಟೆ ಕೆನರಾ ಬ್ಯಾಂಕಿನ 2 ಎಫ್.ಡಿ ಬಾಂಡ್ ಹಾಗೂ ಕೊಡ್ಲಿಪೇಟೆ ಕರ್ನಾಟಕ ಬ್ಯಾಂಕಿನ 1 ಎಫ್.ಡಿ ಬಾಂಡ್ , ಪುತ್ತೂರು ಕರ್ನಾಟಕ ಬ್ಯಾಂಕಿನ 1 ಎಫ್.ಡಿ ಬಾಂಡ್ ಹಾಗೂ 8861850898 ನಂಬರಿನ ಮೊಬೈಲ್ ಫೋನ್ ಮತ್ತು ಸಿಮ್ ಕಳವು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಲಕ ಕಾಣೆ:

     ಕುಶಾಲನಗರದ ಜನತಾ ಕಾಲೋನಿ ನಿವಾಸಿ ಆರ್. ರಾಮಚಂದ್ರ ಎಂಬವರ ಮೊಮ್ಮಗ 12 ವರ್ಷ ಪ್ರಾಯದ ಶಶಾಂಕ್ ನು ದಿನಾಂಕ 21-8-2016 ರಂದು ಬೆಳಿಗ್ಗೆ ಯಿಂದ ಸಂಜೆಯವರೆಗೂ ಮನೆಯಲ್ಲೆ ಇದ್ದು ನಂತರ ಸಮಯ 5-30 ಪಿ.ಎಂಗೆ ಅಡುಗೆ ಮನೆಯಲ್ಲಿ ಡಬ್ಬಿಯಲ್ಲಿದ್ದ 500/- ರೂಗಳನ್ನು ತೆಗೆದುಕೊಂಡು ಮನೆಯಿಂದ ಹೋದವನು ರಾತ್ರಿಯಾದರು ಮನೆಗೆ ಬಾರದೆ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಆರ್. ರಾಮಚಂದ್ರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, August 23, 2016

ಅಕ್ರಮ ಮರಳು ಸಾಗಾಟ:

     ಅಕ್ರಮವಾಗಿ ಲಾರಿಗಳಲ್ಲಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಠಾಣಾಧಿಕಾರಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಪಾಲಿಬೆಟ್ಟ-ತಿತಿಮತಿಯ ರಸ್ತೆಯ ಕೋಟೆಬೆಟ್ಟ ಕಾಫಿ ತೋಟದ ಬಳಿ ಒಂದು ಟಿಪ್ಪರ್ ಮತ್ತು ಒಂದು ಸ್ವರಾಜ್ ಮಜ್ದಾ ವಾಹನಗಳಲ್ಲಿ ಅಕ್ರಮವಾಗಿ ಮರಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಸುರೇಶ್, ಮತ್ತು ಮಣಿ ಎಂಬವರು ಬಂಧಿಸಿ ಮರಳು ತುಂಬಿದ 2 ಲಾರಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

    ಚಲಿಸುತ್ತಿದ್ದ ಕಾರಿಗೆ ಹೋಗುತ್ತಿದ್ದ ರಿಕ್ಷಾ ತಾಗಿದೆ ಎಂದು ಹೇಳಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 22-8-2016 ರಂದು ನದಿಮುಲ್ಲಾ, ರಿಕ್ಷಾ ಚಾಲಕ ಇವರು ಗೋಣಿಕೊಪ್ಪ ನಗರದ ಮೀನುಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ ತನ್ನ ಆಟೋದಲ್ಲಿ ಹೋಗುತ್ತಿದ್ದಾಗ ಆರೋಪಿ ಜೀವನ್ ಕೆ. ಎಂಬಾತ ತನ್ನ ಮಾರುತಿ-800ರ ಕಾರಿನಲ್ಲಿ ಬಂದು ನದಿಮುಲ್ಲಾರವರ ದಾರಿ ತಡೆದು ತನ್ನ ಕಾರಿಗೆ ಆಟೋ ರಿಕ್ಷಾವನ್ನು ಡಿಕ್ಕಿಪಡಿಸಿ ಹೋಗಿರುವೆ ಎಂದು ಹೇಳಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, August 22, 2016

ಬೈಕ್ ಗೆ ಜೀಪು ಡಿಕ್ಕಿ ಒಬ್ಬನ ಸಾವು:

      ಪೊನ್ನಂಪೇಟೆ ಠಾಣಾ ಸರಹದ್ದಿನ ದೇವಮಚ್ಚಿ, ತಿತಿಮತಿ ಗ್ರಾಮದ ನಿವಾಸಿ ಜೆ ಅಗಸ್ಟಿನ್ ಎಂಬವರ ಮಗ ಜಯರಾಜ್ ಹಾಗು ಯತೀಶ್ ಎಂಬವರು ದಿನಾಂಕ 21-8-2016 ರಂದು ರಾತ್ರಿ 8-15 ಗಂಟೆಗೆ ತಿತಿಮತಿಯಿಂದ ಗೋಣಿಕೊಪ್ಪದ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಜೀಪಿನ ಚಾಲಕ ಅಫ್ರೋಜ್‌ ಎಂಬವರು ಸದರಿ ಜೀಪನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸರವಾರ ಯತೀಶ್ ಹಾಗು ಹಿಂಬದಿ ಸವಾರ ಜಯರಾಜ್ ರವರು ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಜಯರಾಜ್ ರವರು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯಸೇವನೆ ಮಹಿಳೆ ಸಾವು:

     ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ನಿವಾಸಿ ಕಾವಲ ಎಂಬವರ ಪತ್ನಿ ಗೌರಿ (45) ಎಂಬವರು ದಿನಾಂಕ 21-8-2016 ರಂದು ವಿಪರೀತ ಮದ್ಯಸೇವನೆ ಮಾಡಿದ್ದು, ಇದರಿಂದ ಪ್ರಜ್ಞೆತಪ್ಪಿ ಮನೆಯಲ್ಲಿ ಬಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗಿದೆ ಸದರಿ ಗೌರಿ ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜಾನುವಾರು ಸಾಗಾಟ:

     ದಿನಾಂಕ 22.08.2016 ರಂದು ಬೆಳಿಗ್ಗೆ ಸಮಯ 05.00 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಫ್ರಭುರವರ ಕಾಫಿ ತೋಟದ ಸಾರ್ವಜನಿಕ ರಸ್ತೆ ಕಡೆಯಿಂದ ಕುಟ್ಟನಗರದ ಕಡೆಗೆ ಮೂಲಕ ಅಕ್ರಮವಾಗಿ ಜಾನುವಾರನ್ನು ಮಾರುತಿ ಓಮಿನಿ ವ್ಯಾನಿನಲ್ಲಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಠಾಣಾ ಎ.ಎಸ್.ಐ ಹಾಗು ಸಿಬ್ಬಂದಿಗಳು ಪತ್ತೆ ಹಚ್ಚಿ ಮಾರುತಿ ವ್ಯಾನಿನೊಳಗೆ ಇದ್ದ ಎಮ್ಮೆ ಮೃತ ಪಟ್ಟಿದ್ದು,ಮೃತ ಪಟ್ಟ ಎಮ್ಮೆ ಹಾಗೂ ಮಾರುತಿ ವ್ಯಾನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.  

ಹುಡುಗಿ ಕಾಣೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ಕತ್ತಲೆಕಾಡು ಪೈಸಾರಿ ನಿವಾಸಿ ಶ್ರೀಮತಿ ಲಕ್ಷ್ಮಿ ಎಂಬವರ ಮಗಳು ಪ್ರಾಯ 20 ವರ್ಷದ ಸಿಂಧು ಎಂಬುವಳು ದಿನಾಂಕ 17-08-2016 ರಂದು ಸಮಯ 8-00 ಎಎಂಗೆ ತನ್ನ ಮನೆಯಾದ ಕತ್ತಲೆಕಾಡು ಪೈಸಾರಿ ಕಡಗದಾಳುವಿನಿಂದ ಮಡಿಕೇರಿಗೆ ಹೋಗಿ ಬರುತ್ತೇನೆಂದು ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  

Sunday, August 21, 2016

ದಾರಿ ತಡೆದು ಕೊಲೆ ಬೆದರಿಕೆ:

     ದಿನಾಂಕ 19/08/2016 ರಂದು ಸಮಯ 10.30 ಗಂಟೆಗೆ ಪಿರ್ಯಾದಿ ಮೋಹನ.ಎಂ.ಎನ್. ರವರು ಅವರ ಸ್ನೇಹಿತರಾದ ಸುರೇಶ್ ರವರು ವಾಲ್ನೂರು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿರುವಾಗ ಆರೋಪಿ ಕೃಷ್ಣಪ್ಪ ರವರು ಪಿರ್ಯಾದಿ ಹಾಗೂ ಸುರೇಶ್ ರವರನ್ನು ದಾರಿಯಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಆರೋಪಿಸಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅತಿಯಾದ ಮದ್ಯಸೇವನೆ, ವ್ಯಕ್ತಿ ಸಾವು:

     ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಪರೀತ ಮದ್ಯ ಸೇವಿಸಿದ ಪರಿಣಾಮ ಸಾವನಪ್ಪಿದ ಘಟನೆ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ಐಗೂರು ಗ್ರಾಮದ ನಿವಾಸಿ ಗುರಪ್ಪ ಎಂಬವರ ಮಗ ಕೆ.ಜಿ. ಗಣೇಶ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಪ್ರತಿ ದಿನ ಮದ್ಯ ಸೇವಿಸುತ್ತಿದ್ದು, ದಿನಾಂಕ 20-8-2016 ರಂದು ಸಹ ವಿಪರೀತ ಮದ್ಯ ಸೇವಿಸಿ ಐಗೂರು ಗ್ರಾಮದಲ್ಲಿರುವ ಹೊಳೆಯ ಬದಿ ಬಂಡೆಯಲ್ಲಿ ಮಲಗಿದ್ದು, ಅಲ್ಲಿಯೇ ಸಾವನಪ್ಪಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿಯ ವಿಚಾರದಲ್ಲಿ ಜಗಳ, ಕೊಲೆ ಬೆದರಿಕೆ:

     ವಿರಾಜಪೇಟೆ ತಾಲೋಕು ಕಾವಾಡಿ ಗ್ರಾಮದ ನಿವಾಸಿ ಮಾಚಿಮಂಡ ಎಸ್.ಚಂಗಪ್ಪ ಹಾಗು ನೆಲ್ಲಮಕ್ಕಡ ಸುರೇಶ ಪೂಣಚ್ಚ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ವಿವಾದವಿದ್ದು, ಅದೇ ವಿಚಾರದಲ್ಲಿ ದಿನಾಂಕ 20-8-2016 ರಂದು ಇಬ್ಬರ ನಡುವೆ ಜಗಳವಾಗಿದ್ದು, ಆರೋಪಿ ಸರೇಶ ಪೂಣಚ್ಚನವರು ಎಸ್. ಚಂಗಪ್ಪನವರ ಮೇಲೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೈಕ್ ಕಳವು ಪ್ರಕರಣ ದಾಖಲು:

     ಮಡಿಕೇರಿ ತಾಲೋಕು ನಾಪೋಕ್ಲು ನಗರದ ನಿವಾಸಿ ಉಮ್ಮರ್ ಫಾರೂಕ್ ಎಂಬವರು ದಿನಾಂಕ 20-08-2016 ರಂದು ಕೆ.ಇ.ಬಿಯಲ್ಲಿ ಕೆಲಸ ಮುಗಿಸಿ ರಾತ್ರಿ ಸುಮಾರು 8-00 ಗಂಟೆಗೆ ಅವರ ಬಾಪ್ತು ಬೈಕ್‌ ನಂ ಕೆಎ-01-ಕ್ಯು-9164 ನ್ನು ನಾಪೋಕ್ಲುವಿನ ಕೂರ್ಗ್‌ ಟ್ರೇಡರ್ಸ್‌ ರವರ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿದ್ದು ಸದರಿ ಬೈಕ್ ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Saturday, August 20, 2016

ಹೆಂಗಸು ಕಾಣೆ:

       ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದ ನಿವಾಸಿ ಜ್ಯೋತಿ (35) ಎಂಬವರು ದಿನಾಂಕ 13-8-2016 ರಂದು ಬೆಳಿಗ್ಗೆ 07:00 ಗಂಟೆಗೆ ಕೂಡುಮಂಗಳೂರು ಕಾಫಿ ಕ್ಯೂರಿಂಗ್ ಕೆಲಸಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ:

     ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ನಿವಾಸಿ ವಿ.ಎನ್. ಜೀವನ್ ಎಂಬವರು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವ ಉದ್ದೇಶದಿಂದ ತಮ್ಮ ಬಾಪ್ತು ಲಾರಿಯಲ್ಲಿ ತುಂಬಿಸಿ ಇಟ್ಟಿದ್ದನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ. ಹಾಗು ಸಿಬ್ಬಂದಿಯವರು ದಾಳಿ ಮಾಡಿ ಲಾರಿ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೀಗ ಮುರಿದು ಕರಿಮೆಣಸು ಕಳವು:

     ಅಂಗಡಿಯೊಂದರ ಬೀಗ ಮುರಿದು 1.62 ಲಕ್ಷ ರೂಪಾಯಿ ಬೆಲೆಬಾಳುವ ಕರಿಮೆಣಸನ್ನು ಕಳ್ಳತನ ಮಾಡಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ಮುರ್ನಾಡು ನಿವಾಸಿ ಎಂ.ಎಂ. ಸೈದು ಎಂಬವರು ನೆಲಜಿ ಗ್ರಾಮದ ಮುಂಡಂಡ ಪಟ್ಟು ನಾಣಯ್ಯರವರ ಕಟ್ಟಡದಲ್ಲಿ ಅಂಗಡಿ ಇಟ್ಟುಕೊಂಡು ಕಾಫಿ, ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 19-08-16 ರಂದು 243 ಕೆಜಿ(5 ಬ್ಯಾಗ್‌) ಕರಿಮಣಸನ್ನು ಖರೀದಿಸಿ ರೂಂನಲ್ಲಿಟ್ಟಿದ್ದನ್ನು ಯಾರೋ ಕಳ್ಳರು ದಿನಾಂಕ 19-8-2016ರ ರಾತ್ರಿ ಅಂಗಡಿಗೆ ಹಾಕಿದ ಬೀಗವನ್ನು ಮುರಿದು ಅಂದಾಜು 1,62,800 ರೂ ಮೌಲ್ಯದ 243 ಕೆಜಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, August 19, 2016

ದ್ವೇಷದ ಹಿನ್ನೆಲೆ  ವ್ಯಕ್ತಿಯ ಕೊಲೆಗೆ ಯತ್ನ:
       ಶನಿವಾರಸಂತೆ ಠಾಣಾ ಸರಹದ್ದಿನ ತೋಯಳ್ಳಿ ಗ್ರಾಮದ ನಿವಾಸಿ ಟಿ.ಎಂ. ಪ್ರದೀಪ ಎಂಬವರು ದಿನಾಂಕ 17-8-2016 ರಂದು ಶನಿವಾರಸಂತೆ ಯಿಂದ ತಮ್ಮ ಮನೆಗೆ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ಇಂದ್ರಜಿತ್, ತಾರೇಶ್ ಮತ್ತು ದಿಲೀಪ ಎಂಬವರು ಟಿ,ಎಂ. ಪ್ರದೀಪರವರ ಕಾರನ್ನು ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿದ್ಯುತ್ ಸ್ಪರ್ಷಗೊಂಡು ಯುವಕ ಸಾವು:
      ಸಿದ್ದಾಪುರ ಠಾಣೆ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಪಿ.ಕೆ. ರಾಜು ಎಂಬವರ ಮಗ 21 ವರ್ಷ ಪ್ರಾಯದ ವಿನು ಎಂಬವರು ದಿನಾಂಕ 17-8-2016 ರಂದು ಕಟ್ಟಡ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, August 16, 2016

ಭಾರೀ ಹಣ ಮತ್ತು ಕಾರು ಲೂಟಿ
                      ಅಪರಾತ್ರಿ ವೇಳೆಯಲ್ಲಿ ಕಾರನ್ನು ತಡೆದು ಭಾರೀ ಮೊತ್ತದ ನಗದು ಹಣ ಮತ್ತು ಕಾರನ್ನು ಲೂಟಿ ಮಾಡಿದ ಘಟನೆ ಶ್ರೀಮಂಗಲ ಸಮೀಪದ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 16/08/2016ರ ಅಪರಾತ್ರಿ 12:45 ಗಮಟೆಯ ವೇಳೆಯಲ್ಲಿ ಕೇರಳ ರಾಜ್ಯದ ಕಲ್ಲಿಕೋಟೆ ಜಿಲ್ಲೆಯ ನಿವಾಸಿ ಆಸಿಫ್‌ ಎಂಬವರು ಅವರ ಸ್ನೇಹಿತರೊಡನೆ ಮೈಸೂರಿನಿಂದ ಕೆಎಲ್‌-57-ಎಂ-2587ರ ಇನ್ನೋವಾ ಕಾರಿನಲ್ಲಿ ಅವರ ಮಾಲೀಕ ಅಶ್ರಫ್‌ ಎಂಬವರಿಗೆ ನೀಡಲೆಂದು ಸೆಲ್ವರಾಜ್‌ ಎಂಬವರು ನೀಡಿದ ರೂ. 38 ಲಕ್ಷಗಳಷ್ಟು ನಗದು ಹಣವನ್ನು ತೆಗೆದುಕೊಂಡು ಗೋಣಿಕೊಪ್ಪ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿರುವಾಗ ಟಿ.ಶೆಟ್ಟಿಗೇರಿ ಗ್ರಾಮದ ಬಳಿ ಹಿಂದಿನಿಂದ ಒಂದು ಬಿಳಿ ಬಣ್ಣದ ಮಹೀಂದ್ರಾ ಕ್ಝೈಲೋ ವಾಹನದಲ್ಲಿ ಬಂದ ಸುಮಾರು 8-10 ಅಪರಿಚಿತ ಯುವಕರು ಪಿಸ್ತೂಲ್‌, ರಾಡ್‌ ಮತ್ತು ದೊಣ್ಣೆಗಳೊಂದಿಗೆ ಆಸಿಫ್‌ರವರ ಕಾರನ್ನು ಅಡ್ಡಗಟ್ಟಿ  ಆಸಿಫ್‌ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿ ಇನ್ನೋವಾ ಕಾರು ಮತ್ತು 38 ಲಕ್ಷ ರೂ ನಗದನ್ನು ತೆಗೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                    ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಸಿದ್ದಾಪುರ ಬಳಿಯ ಪಾಲಿಬೆಟ್ಟದಲ್ಲಿ ನಡೆದಿದೆ. ದಿನಾಂಕ 15/08/2016ರಂದು ಹೊಸೂರು ಬೆಟ್ಟಗೇರಿ ಗ್ರಾಮದ ರೆಸಾರ್ಟ್‌ ಒಂದರಲ್ಲಿ ಕೆಲಸ ಮಾಡಿಕೊಂಡಿರುವ ಲೋಹಿತ್‌ ಎಂಬವರು ಪಾಲಿಬೆಟ್ಟದಿಂದ ಟವರ ಮನೆಗೆ ಬೈಕಿನಲ್ಲಿ ಹೋಗುತ್ತಿರುವಾಗ ಪುಲಿಯಂಡ ಬೋಪಣ್ಣ ಎಂಬವರು ಲೋಹಿತ್‌ರವರನ್ನು ತಡೆದು ನಿಲ್ಲಿಸಿ ಹಳೆ ದ್ವೇಷದಿಂದ ಲೋಹಿತ್‌ರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, August 15, 2016

ಮಹಿಳೆಗೆ ವಂಚನೆ
                 ಚಿನ್ನ ಪಾಲಿಷ್‌ ಮಾಡಿಕೊಡುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ವಂಚನೆ ಮಾಡಿದ ಘಟನೆ ಶನಿವಾರಸಂತೆ ಬಳಿಯ ಕಣ್ಣಾರಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 14/08/2016ರಂದು ಕಣ್ಣಾರಳ್ಳಿ ನಿವಾಸಿ ಹೇಮಾ ಎಂಬ ಮಹಿಳೆಯು ಅವರ ಮನೆಯಲ್ಲಿರುವಾಗ ಅಲ್ಲಿಗೆ ಬಿಹಾರ ರಾಜ್ಯದ ಇಬ್ಬರು ವ್ಯಕ್ತಿಗಳು ಬಂದು ಅವರನ್ನು ಓರ್ವ ವಿಪಿನ್‌ ಸಾಹು ಮತ್ತು ಇನ್ನೋರ್ವ ರಣವೀರ್‌ ಸಾಹು ಎಂಬುದಾಗಿ ಪರಿಚಯಿಸಿಕೊಂಡು ಅವರು ಚಿನ್ನಕ್ಕೆ ಪಾಲಿಷ್‌ ಹಾಕಿ ಕೊಡುವುದಾಗಿ ನಂಬಿಸಿ ಹೇಮಾರವರ ಬಳಿಯಿದ್ದ 39 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಪಡೆದುಕೊಂಡು ಯಾವುದೋ ದ್ರಾವಣದಲ್ಲಿ ಮುಳುಗಿಸಿ ಮರಳಿ ನೀಡಿದ್ದು ನಂತರ ಹೇಮಾರವರು ಸಂಶಯಬಂದು ಮಾಂಗಲ್ಯ ಸರವನ್ನು ತೂಗಿಸಿ ನೋಡಿದಾಗ ಅದರಲ್ಲಿ ಸುಮಾರು 8 ಗ್ರಾಂನಷ್ಟು ಚಿನ್ನವು ಕಡಿಮೆಯಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಡಾನೆ ತುಳಿದು ವ್ಯಕ್ತಿ ಸಾವು
                  ಕಾಡಾನೆ ತುಳಿತಕ್ಕೊಳಗಾಗಿ ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಸೋಮವಾರಪೇಟೆ ಬಳಿಯ ಬಾಣಾವರ ಎಂಬಲ್ಲಿ ನಡೆದಿದೆ. ದಿನಾಂಕ 14/08/2016ರಂದು ಬೆಸೂರು ನಿವಾಸಿ ರಾಜಾಚಾರ್‌ ಎಂಬವರು ಕುಶಾಲನಗರದಲ್ಲಿ ವ್ಯಾಸಂಗ ಮಾಡುತ್ತಿರುವ ಅವರ ಮಕ್ಕಳನ್ನು ನೋಡಿಕೊಂಡು ಬರಲೆಂದು ಅಪರಾಹ್ನ ಅವರ ಬೈಕಿನಲ್ಲಿ ಹೋಗಿದ್ದು ನಂತರ ಸುಮಾರು ಅರ್ದ ಗಂಟೆಯ ಬಳಿಕ ನಾಗರಾಜು ಎಂಬವರು ರಾಜಾಚಾರ್‌ರ ಸೋದರ ಅಮೃತಾಚಾರ್‌ರವರಿಗೆ ಮೊಬೈಲ್‌ ಮೂಲಕ ಕರೆ ಮಾಡಿ ಬಾಣಾವರ ಗ್ರಾಮದ ಸಂಗಯ್ಯನಪುರದ ಬಳಿ ರಾಜಾಚಾರ್‌ರವರನ್ನು ಕಾಡಾನೆ ತುಳಿದು ಸಾಯಿಸಿರುವುದಾಗಿ ಮಾಹಿತಿ ನೀಡಿದ್ದು, ನಂತರ ಅಮೃತಾಚಾರ್‌ರವರು ಸ್ಥಳಕ್ಕೆ ಧಾವಿಸಿ ನೋಡಿದಾಗ ರಾಜಾಚಾರ್‌ರವರು ಕಾಡಾನೆ ತುಳಿತದಿಂದ ಸಾವಿಗೀಡಾಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ದ್ವೇಷ, ಕೊಲೆ ಯತ್ನ 
                      ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಕಾರು ಡಿಕ್ಕಿ ಪಡಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಕುಶಾಲನಗರ ಬಳಿಯ ಚಿಕ್ಕತ್ತೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14/08/2014ರಂದು ಚಿಕ್ಕತ್ತೂರು ನಿವಾಸಿ ಚೇತನಾ ಎಂಬಾಕೆಯು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅದೇ ಗ್ರಾಮದ ಸುಬ್ಬ ಯಾನೆ ಸುಬ್ರಮಣಿ ಎಂಬಾತನು ಆತನ ಕೆಎ-04-ಎಂಬಿ-6421ರ ಮಾರುತಿ ಕಾರಿನಲ್ಲಿ ಚೇತನಾರವರಿಗೆ ಡಿಕ್ಕಿ ಪಡಿಸಿ ಸಾಯಿಸಲು ಯತ್ನಿಸಿರುವುದಾಗಿಯೂ ಆಗ ಸಮೀಪದ ಇಟ್ಟಿಗೆ ಫ್ಯಾಕ್ಟರಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನಾರವರ ಮಗ ಯತೀನ್‌ ಓಡಿ ಬಂದಿರುವುದಾಗಿ ದೂರು ನೀಡಿದ್ದು ಹಳೆ ವೈಷಮ್ಯವೇ ಕೃತ್ಯಕ್ಕೆ ಕಾರಣವೆನ್ನಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Sunday, August 14, 2016

ಹಳೆ ವೈಷಮ್ಯ, ಹಲ್ಲೆ
                  ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆ ಬಳಿಯ ಕಟ್ಟೇಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ರಾತ್ರಿ ವೇಳೆ ಕಟ್ಟೇಪುರ ನಿವಾಸಿ ಹನುಮೇಗೌಡ ಎಂಬವರು ಅವರ ಪತ್ನಿಗೆ ಮಾತ್ರೆ ತರಲೆಂದು ಅಂಗಡಿಗೆ ಹೋಗಿ ವಾಪಾಸು ಮನೆಗೆ ಬರುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ದರ್ಶನ್‌, ಪ್ರಜ್ವಲ್‌ ಮತ್ತು ಗೋಪಾಲಕೃಷ್ಣ ಎಂಬವರು ಸೇರಿಕೊಂಡು ಹಳೆ ದ್ವೇಷದಿಂದ ಹನುಮೇಗೌಡರವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದು ಹನುಮೇಗೌಡರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಲಾಟರಿ ಮಾರಾಟ, ಓರ್ವನ ಬಂಧನ
                      ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಓರ್ವನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ದಿನಾಂಕ 13/08/2016 ರಂದು ಪೊನ್ನಂಪೇಟೆ ನಗರದ  ಬಸ್‌ ನಿಲ್ದಾಣದ ಬಳಿ ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿದ್ದ ಅಪ್ಪು ಎಂಬಾತನನ್ನು ಬಂಧಿಸಿದ ಪೊನ್ನಂಪೇಟೆ ಪೊಲೀಸರು ಆತನಿಂದ ಲಾಟರಿ ಮತ್ತು ರೂ. 2430/- ನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Saturday, August 13, 2016

ಮಹಿಳೆ ಮತ್ತು ಮಗು ಕಾಣೆ
                       ಮಗುವಿನೊಂದಿಗೆ ಮಹಿಳೆ ನಾಪತ್ತೆಯಾದ ಘಟನೆ ನಾಪೋಕ್ಲು ಬಳಿಯ ಹೊದವಾಡ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ಹೊದವಾಡ ಗ್ರಾಮದ ನಿವಾಸಿ ಬಿ.ಯು.ಅಬ್ದುಲ್ಲಾ ಎಂಬವರು ಅವರ ನೆರೆಮನೆಯ ಶಮೀರ್‌ ಎಂಬವರೊಂದಿಗೆ ಅವರ ಭಾವ ಫೈಸಲ್‌ ಎಂಬವರ ಮನೆಗೆಂದು ಮೇಕೇರಿ ಗ್ರಾಮಕ್ಕೆ ಹೋಗಿ ವಾಪಾಸು ಮನೆಗೆ ಬಂದು ನೋಡುವಾಗ ಮನೆಯಲ್ಲಿದ್ದ ಅಬ್ದುಲ್ಲಾರವರ ಪತ್ನಿ ಕದೀಜಾ ಎಂಬಾಕೆ ಹಾಗೂ ಮೂರು ವರ್ಷ ಪ್ರಾಯದ ಮಗು ಶಾನಿದ್‌ ಇಬ್ಬರೂ ಮನೆಯಲ್ಲಿ ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ
                     ಕಾರಿಗೆ ಲಾರಿ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಮೊಣ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂತೆಕಟ್ಟೆ ನಿವಾಸಿ ಸತೀಶ್‌ ರಾವ್‌ ಎಂಬವರು ಅವರ ತಾಯಿ, ತಂದೆ ಮತ್ತು ಸ್ನೇಹಿತ ಸುಗೇಂದ್ರ ಎಂಬವರೊಂದಿಗೆ ಕೆಎ-19-ಎಂಬಿ-4036ರ ಕಾರಿನಲ್ಲಿ ಮೈಸೂರಿನಲ್ಲಿ ಅವರ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿ ವಾಪಾಸು ಊರಿಗೆ ಹೋಗುತ್ತಿರುವಾಗ ಮೊಣ್ಣಂಗೇರಿ ಬಳಿ ಮಂಗಳೂರು ಕಡೆಯಿಂದ ಕೆಎ-05-ಎಸಿ-4059ರ ಒಂದು ಲಾರಿಯನ್ನು ಅದರ ಚಾಲಕ ರಘು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಗೇಂದ್ರರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಾರಿಗೆ ಹಾನಿ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಜೀಪು ಡಿಕ್ಕಿ
                  ಕಾರಿಗೆ ಪಿಕ್‌ಅಪ್‌ ಜೀಪೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 12/08/2016ರಂದು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ನಿತ್ಯಾ ಸೋಮಯ್ಯ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಜೆಡ್‌-7040ರಲ್ಲಿ ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯ ಬಳಿ ಬರುತ್ತಿರುವಾಗ ಅಲ್ಲಿ ರಸ್ತೆಯ ಮದ್ಯಭಾಗದಲ್ಲಿ ನಿಲ್ಲಿಸಿದ್ದ ಕೆಎ-12-ಬಿ-2977ರ ಪಿಕ್‌ಅಪ್‌ ವಾಹನವನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ ಏಕಾ ಏಕಿ ಚಾಲಿಸಿಕೊಂಡು ಬಂದು ನಿತ್ಯಾ ಸೋಮಯ್ಯನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿತ್ಯಾ ಸೋಮಯ್ಯನವರ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Friday, August 12, 2016

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

      ವಿರಾಜಪೇಟೆ ತಾಲೂಕು, ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಹೆಚ್.ಸಿ. ಭರತ ಎಂಬವರ ಪತ್ನಿ ಶ್ರೀಮತಿ ಹೆಚರ. ಸಂದ್ಯಾ (32) ಎಂಬವರು ದಿನಾಂಕ 10-8-2016 ರಂದು ಚೆಂಬೆಬೆಳ್ಳೂರು ಗ್ರಾಮದ ಚೇಂದಂಡ ತಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದ್ದೆಗೆ ನೀರು ಹರಿಸಿದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:
     ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕಣಗಾಲು ಗ್ರಾಮದ ನಿವಾಸಿ ಕೆ.ಎಸ್. ದೋರೇಶ ಎಂಬವರು ದಿನಾಂಕ 11-8-2016 ರಂದು 11-00 ಗಂಟೆಗೆ ತಮ್ಮ ಗದ್ದೆಗೆ ಗುಬ್ಬರ ಹಾಕುತ್ತಿದ್ದಾಗ ಸದರಿ ಗದ್ದೆಗೆ ಎ,ಎಂ, ಪೂವಯ್ಯ ಎಂಬವರು ತಮ್ಮ ಗದ್ದೆಯಿಂದ ನೀರನ್ನು ಬಿಟ್ಟಿದ್ದು ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಆರೋಪಿ ಪೂವಯ್ಯನವರು ಗುದ್ದಲಿನ ಕಾವಿನಿಂದ ದೋರೇಶನವರ ಮೇಲೆ ಹಲ್ಲೆನಡೆಸಿದ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಗಳ ಮುಖಾಮುಖಿ ಡಿಕ್ಕಿ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸೀಗೆಹೊಸೂರು ಗ್ರಾಮದ ನಿವಾಸಿ ಕೆ.ಜಿ. ಲೊಕೇಶ್ ರವರು ದಿನಾಂಕ 9-8-2016 ರಂದು ಗುಡ್ಡೆಹೊಸೂರು –ಸಿದ್ದಾಪುರ ರಸ್ತೆಯಲ್ಲಿ ತಮ್ಮ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾದ ಅದೇ ಗ್ರಾಮದ ಗುರುಪ್ರಸಾದ್ ಎಂಬವರು ತಮ್ಮ ಮೋಟಾರ್ ಸೈಕಲ್ ನಲ್ಲಿ ಎದುರುಗಡೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಜಿ.ಲೋಕೇಶ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಲೋಕೇಶ್ ರವರು ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರಿಗೆ ಕಾರು ಡಿಕ್ಕಿ, ಸವಾರನಿಗೆ ಗಾಯ:

     ಮಡಿಕೇರಿ ತಾಲೂಕು ಬಲಮುರಿ ಗ್ರಾಮದ ನಿವಾಸಿ ಎಂ ಎಸ್ ಮಂಜುರವರು ದಿನಾಂಕ 11-08-2016 ರಂದು ಅವರ ಬಾಪ್ತು ಕೆಎ-12-ಕೆ-9474 ರ ಡಿಯೋ ಸ್ಕೂಟರ್‌ನಲ್ಲಿ ಅವರ ಮನೆಯಿಂದ ಯೋಗೇಶ್‌ರವರೊಂದಿಗೆ ಮೂರ್ನಾಡುವಿಗೆ ಹೋಗುತ್ತಿರುವಾಗ ಬಲಮುರಿ ಸಾರ್ವಜನಿಕ ರಸ್ತೆಯಲ್ಲಿ ಮೂರ್ನಾಡು ಕಡೆಯಿಂದ ಬಂದ ಕೆಎ-12-ಎನ್-7054 ರ ಆಲ್ಟೋ ಕಾರನ್ನು ಅದರ ಚಾಲಕ ಮಹೇಶರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಂ ಎಸ್ ಮಂಜುರವರು ಚಾಲನೆ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಂಜುರವರ ತಲೆ ಹಾಗೂ ಬಲ ಕಣ್ಣು, ಬಲ ಕಾಲಿಗೆ ಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೀಗ ಮುರಿದು ತಾಮ್ರದ ಹಂಡೆ ಕಳವು:

    ಪಿರ್ಯಾದಿ ಜಾನ್ ಎಂಬವರು ಯಡವನಾಡು ಗ್ರಾಮದಲ್ಲಿ ಪಳಂಗಪ್ಪರವರಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 07.08.16 ರಂದು ತೋಟ ಲೈನ್ ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ 08.08.2016 ರಂದು ಸಂಜೆ 17:00 ಗಂಟೆಗೆ ವಾಪಾಸ್ಸು ಲೈನ್ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಬಾತ್ ರೂಮಿನ ಬೀಗವನ್ನು ಮೀಟಿ,ರೂಮಿನ ಹಿಂದುಗಡೆ ಇಟ್ಟಿಗೆ ಗೋಡೆಯನ್ನು ಒಡೆದು,ಮನೆಯಲ್ಲಿ ಸ್ನಾನ ಮಾಡಲು ಅಳವಡಿಸಿದ್ದ ತಾಮ್ರದ ಹಂಡೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Thursday, August 11, 2016

ವಾಹನ ಕಳ್ಳತನದ ದೊಡ್ಡ ಜಾಲಪತ್ತೆ, ಆರೋಪಿಗಳ ಸಮೇತ 10 ವಾಹನಗಳು ಪೊಲೀಸ್ ವಶಕ್ಕೆ:    
     ವಾಹನ ಕಳ್ಳತನ ಮಾಡುವ ಜಾಲವೊಂದನ್ನು ಭೇದಿಸಿದ ಪೊಲೀಸರು ಮೂವರು ಆಟೋಪಿಗಳನ್ನು ಹಾಗು ಕೊಡಗು ಮತ್ತು ಕೇರಳ ರಾಜ್ಯದಲ್ಲಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

          ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪ ಹಾಗು ಸಿಬ್ಬಂದಿಯವರು ದಿನಾಂಕ 10-8-2016 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಮಡಿಕೇರಿ ನಗರದ ಚೈನ್ ಗೇಟ್ ಬಳಿ ಒಂದು ಕಪ್ಪುಬಣ್ಣದ ಕ್ವಾಲೀಸ್ ವಾಹನವನ್ನು ಪರಿಶೀಲಿಸಿ ಸದರಿ ವಾಹನದಲ್ಲಿದ್ದ ಮೂವರು ವ್ಯಕ್ತಿಗಳನ್ನು ಸಂಶಯದ ಮೇಲೆ ವಶಕ್ಕೆ ಪಡೆದು ಅವರನ್ನು ವಿಚಾರಣೆಗೊಳಪಡಿಸಲಾಗಿ ಸದರಿ ವ್ಯಕ್ತಿಗಳಾದ (1) ಮೊಹಮ್ಮದ್ ಸಲೀಂ @ ಅಣಗೂರು ಸಲೀಂ, ತಂದೆ ಲೇಟ್ ಅಬ್ದುಲ್ ಕುಂನ್ನಿ, 50 ವರ್ಷ, ಚಾಲಕ ವೃತ್ತಿ, ಕೊಲ್ಲಂಬಾಡಿ ಹೌಸ್, ಅಣಂಗೂರು, ಕಾಸರಗೋಡು, ಕೇರಳ, ಹಾಲಿ ವಾಸ: ಎನ್ .ಎಸ್.ಆರ್. ಕೇರಳ ಹೊಟೇಲ್, ಶಿರಂಗಾಲ, ಕೊಡಗು ಜಿಲ್ಲೆ, (2) ಸಾಜು ವರ್ಗೀಸ್ @ ಸಾಜು, ತಂದೆ ವರ್ಗೀಸ್, 43 ವರ್ಷ, ಹೊಟೇಲು ಕೆಲಸ, ಕಟ್ಟಕಾಯಿ ಹೌಸ್, ಕೆನಾದಿಮಂಗಲ್ ಗ್ರಾಮ, ಜಾಗೋತ್ ಪೋಸ್ಟ್, ಲತ್ತಣಂತ್ತಿಟ್ಟ ಜಿಲ್ಲೆ, ಕೇರಳ ಮತ್ತು (3) ಮಹಮ್ಮದ್ ಸಾಫಿ ಕೆ, ತಂದೆ ಸೌಕತ್, 20 ವರ್ಷ, ಚಾಲಕ ವೃತ್ತಿ, ಕಪ್ಪಚ್ಚಾಲಿಲ್ ಹೌಸ್, ಭೂದಾನ ಅಂಚೆ, ಮಲಪುರಂ ಜಿಲ್ಲೆ, ಕೇರಳ ಎಂಬುದು ತಿಳಿದು ಬಂದಿದ್ದು, ಅವರುಗಳು ವಾಹನಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದು, ಈ ಹಿಂದೆ ಕೇರಳದ ಕ್ಯಾಲಿಕಟ್ ಬಡಗರದಿಂದ 2 ಟಿಪ್ಪರ್ ವಾಹನಗಳನ್ನು ಮತ್ತು ಕುಶಾಲನಗರದಿಂದ ಒಂದು ಕ್ವಾಲೀಸ್ ವಾಹನವನ್ನು ಕಳವು ಮಾಡಿದ್ದು ತಿಳಿದು ಬಂದಿದ್ದು ಅಲ್ಲದೆ ಸದರಿ ಆರೋಪಿಗಳು ಕೇರಳದ ಕ್ಯಾಲಿಕಟ್ ಮತ್ತು ಇತರೆ ಕಡೆಗಳಿಂದ ವಾಹನಗಳನ್ನು ಕಳ್ಳತನ ಮಾಡಿದ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಟ್ಟು 33,15,000 ರೂ. ಮೌಲ್ಯದ 9 ವಾಹನಗಳನ್ನು ಮತ್ತು ನಗದು ರೂ.20,000/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದೇವಾಲಯದ ಬಾಗಿಲು ಮುರಿದು ಕಳವು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಿಗ್ಗಾಲು ಗ್ರಾಮದಲ್ಲಿ ಈಶ್ವರ, ಚಾಮುಂಡೇಶ್ವರಿ, ಗಣಪತಿ, ದೇವಾಲಯಗಳು ಒಂದೇ ಆವರಣದಲಿದ್ದು ಸದರಿ ದೇವಾಲಯದ ಗುಡಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ದೇವಾಲಯದಲ್ಲಿದ್ದ ಅಂದಾಜು 5000 ರೂ.ಗಳಿದ್ದ ಕಾಣಿಕೆ ಪೆಟ್ಟಿಗೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಿಗ್ಗಾಲು ಗ್ರಾಮದ ನಿವಾಸಿ ಪಿ.ಎಲ್. ವಿಶ್ವನಾಥ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕಾರುಗಳು ಮುಖಾಮುಖಿ ಡಿಕ್ಕಿ, ಮಹಿಳೆಗೆ ಗಾಯ:

    ಎರಡು ಕಾರುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಮೂರ್ನಾಡು ಸಮೀಪದ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಮಿಥುನ್ ಬೆಳ್ಳಿಯಪ್ಪ ಎಂಬವರು ದಿನಾಂಕ 10-8-2016 ರಂದು ಬೆಳಿಗ್ಗೆ ತಮ್ಮ ಬಾಪ್ತು ಕಾರ್ ನಂ: ಕೆಎ 12 ಜೆಡ್ 4895 ರ ಶಿಪ್ಟ್ ಕಾರಿನಲ್ಲಿ ತನ್ನ ತಾಯಿಯೊಂದಿಗೆ ಮಡಿಕೇರಿ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಮುರ್ನಾಡು ಎಂ ಬಾಡಗ ಹತ್ತಿರ ವಿರಾಜಪೇಟೆ ಕಡೆಯಿಂದ ಕಾರ್‌ ನಂ ಕೆಎ 12 ಪಿ 6970 ರ ಆಲ್ಟೊ ಕಾರನ್ನು ಅದರ ಚಾಲಕ ಸೂರ್ಯ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದ ಪರಿಣಾಮ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಮಿಥುನ್ ಬೆಳ್ಳಿಯಪ್ಪನವರ ತಾಯಿ ಕಮಲರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ:

    ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಹೆಚ್.ಕೆ. ನಾರಾಯಣ ಎಂಬವರ ಮಗಳಾದ 21 ವರ್ಷ ಪ್ರಾಯದ ದಿವ್ಯ ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10-8-2016 ರಂದು ರಾತ್ರಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

    ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ವಾಸವಾಗಿರುವ ಶ್ರೀಮತಿ ಚಾಂದಿನಿ ಎಂಬಾಕೆಯನ್ನು ಆಕೆಯ ಗಂಡ ಗಿರಿಶೇಖರ ಮತ್ತು ಮನೆಯವರು ವರದಕ್ಷಿಣೆಗಾಗಿ ಕುರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸದರಿ ಶ್ರೀ ಮತಿ ಚಾಂದಿನಿರವರು ನೀಡಿದ ದೂದಿನ ಮೇರೆಗೆ ಮಡಿಕೇರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Wednesday, August 10, 2016

ಅಕ್ರಮ ಜಾನುವಾರು ಸಾಗಾಟ ಪ್ರಕರಣ ದಾಖಲು:

         ಕುಟ್ಟ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ  ಸಿಬ್ಬಂದಿಯೊಂದಿಗೆ ದಿನಾಂಕ: 10-08-2016 ರಂದು ಬೆಳಿಗ್ಗೆ 6-00 ಎ.ಎಂ ಗೆ ಕುಟ್ಟ ಠಾಣಾ ಸರಹದ್ದಿನ ಬೊಳ್ಳೇರ ಗೇಟ್ ಸಮೀಪ ಹೇರ್ಮಾಡು ದೇವಸ್ಥಾನದ ರಸ್ತೆಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಪಿಕ್ ಆಪ್ ಜೀಪಿನಲ್ಲಿ ಅಕ್ರಮವಾಗಿ ಕೇರಳದ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದುದ್ದನ್ನು ಪತ್ತಹಚ್ಚಿ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು 60,000/- ಮೌಲ್ಯದ 9 ಜಾನುವಾರುಗಳನ್ನು ಮತ್ತು ಮಹೇಂದ್ರ ಮ್ಯಾಕ್ಸ್ ಪಿಕ್ ಅಪ್‌ ವಾಹನ ನಂ- ಕೆಎಲ್ -10 ಎಎ-9605 ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಅನಾರೋಗ್ಯದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ:
        ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಟ್ಟೆಮಾಡು ಗ್ರಾಮದ ನಿವಾಸಿ ಗಣೇಶ ಎಂಬವರು ಹೊಟ್ಟೆನೋವು ಕಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 9-8-2016 ರಂದು ತಮ್ಮ ಮನೆಯ ಹತ್ತಿರ ಇರುವ ಪಂಪ್ ಹೌಸ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಸೆ ಆತ್ಮಹತ್ಯೆ, ಮನನೊಂದ ಅತ್ತೆಯ ಸಾವು: 
       ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ನಲ್ಲೂರು ಕೊಪ್ಪಲು ಶಿರಂಗಾಲ ಗ್ರಾಮದ ನಿವಾಸಿ ಗಣೇಶ ಎಂಬವರ ಪತ್ನಿ ಶ್ರುತಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 8-8-2016 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ವಿಚಾರದಲ್ಲಿ ಮೃತೆ ಶ್ರುತಿಯವರ ಅತ್ತೆ 55 ಪ್ರಾಯದ ಪಾರ್ವತಮ್ಮ ಎಂಬವರು ಚಿಂತೆಗೀಡಾಗಿ ಆಹಾರ ಸೇವಿಸದೆ ನಿತ್ರಾಣಗೊಂಡು ದಿನಾಂಕ 9-8-2016 ರಂದು ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Monday, August 8, 2016

ವಾಸದ ಮನೆಯ ವಿಚಾರದಲ್ಲಿ ವ್ಯಕ್ತಿಯಿಂದ ಹಲ್ಲೆ:

ದಿನಾಂಕ 8-8-2016 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮರೂರು ಗ್ರಾಮದ ನಿವಾಸಿ ಹೆಚ್. ಎಸ್. ಶಿವರಾಜು ಮತ್ತು ಅವರ ಸಹೋದರ ದಿನೇಶ ರವರ ನಡುವೆ ವಾಸದ ಮನೆಯ ವಿಚಾರದಲ್ಲಿ ಜಗಳವಾಗಿದ್ದು, ಅಣ್ಣ ದಿನೇಶ ಮತ್ತು ಅವರ ಪತ್ನಿ ಜ್ಯೋತಿ ರವರು ಸೇರಿ ಶಿವರಾಜುರವರಿಗೆ ಸೇರಿದ ಮನೆಗೆ ಅಳವಡಿಸಿದ ವಿದ್ಯುತ್ ಸಂಪರ್ಕವನ್ನು ಹಾನಿ ಪಡಿಸಿದ್ದು ಅಲ್ಲದೆ ಚಾಚುವಿನಿಂದ ಕೈಗೆ ಗಾಯಪಡಿಸಿದ್ದು ಕೊಲೆ ಬೆದರಿಕೆ ಒಡ್ಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ:

     ದಿನಾಂಕ 5/8/2016 ರಂದು ಸಂಜೆ ಸಮಯ 6.45 ಗಂಟೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಇಬ್ನಿವಳವಾಡಿ ಗ್ರಾಮದ ನಿವಾಸಿ ಎಂ.ಆರ್. ನಿತಿನ್ ಎಂಬವರು ಸುಂಟಿಕೊಪ್ಪನಗರದ ಸುರ್ಯ ಕ್ಯಾಂಟಿನ ಪಕ್ಕ ರಸ್ತೆಬದಿಯಲ್ಲಿ ನಿಂತಿರುವಾಗ ಕುಶಾಲನಗರ ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ ಸಿಪ್ಟ್ ಕಾರಿನ ಚಾಲಕ ತನ್ನ ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಿತಿನ್ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಲಕಾಲಿಗೆ ಗಾಯವಾಗಿದ್ದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
P.Rajendra Prasad, IPS

Sunday, August 7, 2016


ಆಸ್ತಿ ವಿವಾದ, ವ್ಯಕ್ತಿ ಹಲ್ಲೆ:

      ದಿನಾಂಕ 05-08-2016 ರಂದು ಸಮಯ ಸಂಜೆ 4-00 ಗಂಟೆಗೆ ಶನಿವಾರಸಂತೆ ಪೊಲೀಸ್ ಠಾಣ ಸರಹದ್ದಿನ ಮೆಣಸ ಗ್ರಾಮದ ವಾಸಿ ಶ್ರೀಮತಿ ಭಾಗ್ಯರವರು ತಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿ ಮೆಣಸ ಗ್ರಾಮದ ನಿವಾಸಿ ಸುರೇಶ ಎಂಬ ವ್ಯಕ್ತಿ ಅದೇ ಗದ್ದೆಗೆ ಟಿಲ್ಲರ್ ನಲ್ಲಿ ಊಳುಮೆ ಮಾಡಲು ಬಂದಿದ್ದು, ಈ ಬಗ್ಗೆ ಆರೋಪಿಯನ್ನು ವಿಚಾರಿಸಿದ್ದ ಕಾರಣ್ಕಕ್ಕೆ ಸದರಿ ಆರೋಪಿ ಸುರೇಶನವರು ಫಿರ್ಯಾದಿ ಶ್ರೀಮತಿ ಭಾಗ್ಯರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯತ್ ಸ್ಪರ್ಷಗೊಂಡು ವ್ಯಕ್ತಿ ಸಾವು:

     ಸಿದ್ಧಾಪುರ ಠಾಣಾ ಸರಹದ್ದಿಗೆ ಸೇರಿದ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಫಿರ್ಯಾದಿ ಎ.ಜಿ. ನಿತಿನ್ ಎಂಬವರ ತಮ್ಮ ಪ್ರಾಯ 25 ವರ್ಷದ ಎ.ಜಿ. ನಿಶಾಂತ್ ಎಂಬ ವ್ಯಕ್ತಿ ಪಿ.ಸಬೀರ್ ಎಂಬುವವರು ಹೊಸದಾಗಿ ಕಟ್ಟುತ್ತಿದ್ದ ಮನೆಯ ಸೆಂಟ್ರಿಂಗ್ ಕೆಲಸವನ್ನು ಅವರ ಜೊತೆಗಾರರೊಂದಿಗೆ ಮಾಡುತ್ತಿದ್ದಾಗ ಹಲಗೆ ಬಿಚ್ಚುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಕ್ಕದ ಮನೆಯಲ್ಲಿ ಹಾದುಹೋದ ವಿದ್ಯುತ್ ತಂತಿಯು ನಿಶಾಂತ್ ರವರಿಗೆ ತಗುಲಿ ಸುಟ್ಟಗಾಯಗಳಾಗಿದ್ದು, ಸದರಿಯರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಲ್ಲಿ ಆತ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Saturday, August 6, 2016

ಲಾರಿ ಚಾಲಕನನ್ನು ಲಾರಿ ಸಮೇತ ಅಪಹರಿಸಿ ಸುಲಿಗೆ:

       ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಚೌಟುಪಾಲ ಗ್ರಾಮದ ನಿವಾಸಿ ಕಾಸುಲ ಜಂಗಯ್ಯ ಎಂಬವರು ದಿನಾಂಕ 03-08-16 ರಂದು ರಾತ್ರಿ ಸಮಯ 11.30 ಗಂಟೆಗೆ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಯಶವಂತಪುರ ರೈಲ್ವೇ ಕ್ರಾಸಿಂಗ್ ಬಳಿ ಟ್ರಾಪಿಕ್ ಜಾಮ್ ಆಗಿದ್ದ ಸಂದರ್ಭದಲ್ಲಿ ಯಾರೋ 3 ರಿಂದ 4 ಜನರು ಏಕಾಏಕಿ ಅವರ ಲಾರಿಯ ಎಡಬಾಗ ಮತ್ತು ಬಲಭಾಗದಿಂದ ಹತ್ತಿ ಅವರ ಮೈ , ಕೈ , ಮುಖಕ್ಕೆ ಹೊಡೆದು ನೈಲಾನ್ ಹಗ್ಗದಿಂದ ಕಾಲು ಮತ್ತು ಕೈ ಯನ್ನು ಕಟ್ಟಿ ಸದರಿ ಲಾರಿಯನ್ನು ಚಾಲನೆ ಮಾಡಿಕೊಂಡು ಮಡಿಕೇರಿ ಕಡೆಗೆ ಬಂದು ಲಾರಿ ಚಾಲಕರಿಂದ 10,000 ರೂ ಗಳನ್ನು ಸುಲಿಗೆ ಮಾಡಿದ್ದು ಅಲ್ಲದೆ ಸದರಿ ಲಾರಿಯನ್ನು ಸುಂಟಿಕೊಪ್ಪದ ಬಳಿ ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಫಿರ್ಯಾದಿ ಕಾಸುಲ ಜಂಗಯ್ಯ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ ನಂಜಪ್ಪಮ್ಮಯ್ಯರವರು ದಿನಾಂಕ 5-8-2016 ರಂದು ಬೆಳಿಗ್ಗೆ 9-30 ಗಂಟೆಗೆ ಧರ್ಮಸ್ಥಳದ ಹರಕೆಯ ಕಾಯಿಯನ್ನು ಲಕ್ಷ್ಮಣತೀರ್ಥ ಹೊಳೆಗೆ ಬಿಟ್ಟು ಬರುತ್ತೇನೆಂದು ಮನೆಯಿಂದ ಹೋಗಿದ್ದು ಹರಕೆಯ ಕಾಯಿಯನ್ನು ಹೊಳೆಗೆ ಬಿಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು:

     ಆಕಸ್ಮಿಕ ಬೆಂಕಿ ತಗುಲಿ ಚಿಕಿತ್ಸೆಗೆ ದಾಖಲಾದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ. ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದಲ್ಲಿ ವಾಸವಾಗಿರುವ ಪಣಿ ಎರವರ ಸನ್ನಿ ಎಂಬವರ ಮಗಳು ಸುಮಿತ್ರಳನ್ನು ಗಣೇಶ ಎಂಬುವವರಿಗೆ ಒಂದು ವಷF ಹಿಂದೆ ಮದುವೆ ಮಾಡಿ ಕೊಟ್ಟಿದ್ದು, ದಿನಾಂಕ 31-7-2016 ರಂದು ಸದರಿ ಸುಮಿತ್ರಳು ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಒಲೆಗೆ ಸೌದೆ ಹಾಕಿ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆ ಅಕಸ್ಮಿಕವಾಗಿ ಸುಮಿತ್ರಳ ಮುಂಭಾಗದ ಬಟ್ಟೆಗೆ ತಗುಲಿ ಬೆಂಕಿ ಹಿಡಿದು ಸುಟ್ಟ ಗಾಯಾಗಳಾಗಿದ್ದು, ಚಿಕಿತ್ಸೆ ಬಗ್ಗೆ ಅಸ್ಪತ್ರೆಗೆ ದಾಖಲಿಸಿದ್ದು, ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04-08-2016 ರಂದು ಮೃತ ಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Thursday, August 4, 2016

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                          ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ನಗರದಲ್ಲಿ ನಡದಿದೆ. ಪೊನ್ನಂಪೇಟೆ ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿರುವ 'ಡಿ' ದರ್ಜೆ ನೌಕರ 32 ವರ್ಷ ಪ್ರಾಯದ ಮಲ್ಲೇಶ ಎಂಬ ಯುವಕನು ದಿನಾಂಕ 04/08/2016ರಂದು ಪೊನ್ನಂಪೇಟೆ ಬಳಿಯ ನಿಸರ್ಗ ನಗರದಲ್ಲಿ ತಾನು ಬಾಡಿಗೆಗೆ ಇರುವ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಯುವಕ ರಾಮನಗರ ಜಿಲ್ಲೆಯವನಾಗಿದ್ದು ಪೊನ್ನಂಪೇಟೆಯಲ್ಲಿ ನೌಕರಿ ಮಾಡಿಕೊಂಡಿದ್ದು ಮನೆಯಿಂದ ದೂರವಾಗಿರುವ ಕಾರಣ  ಜೀವನದಲ್ಲಿ ಜುಗುಪ್ಸೆಗೊಂಡಿರಬಹುದೆನ್ನಲಾಗಿದೆ. ಪೊನ್ನಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್‌ -ಲಾರಿ ಡಿಕ್ಕಿ, ಸಾವು 
                  ಸ್ಕೂಟರ್‌ ಒಂದಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 3/08/2016ರಂದು 7ನೇ ಹೊಸಕೋಟೆ ನಿವಾಸಿ ಸಿ.ಪಿ.ಸುನಿಲ್‌ ಎಂಬವರ ಸ್ನೇಹಿತ ದಯಾನಂದ ಎಂಬವರು ಅವರ ಸ್ಕೂಟರ್‌ ಸಂಖ್ಯೆ ಕೆಎ-55-ಹೆಚ್‌-2804 ರಲ್ಲಿ ಕೊಪ್ಪಕ್ಕೆ ಕೆಲಸಕ್ಕೆಂದು ಹೋಗಿ ಮರಳಿ ಬರುತ್ತಿರುವಾಗ ಗುಡ್ಡೆಹೊಸೂರು ಬಳಿಯ ಪೆಟ್ರೋಲ್‌ ಬಂಕ್‌ ಸಮೀಪ ಮಡಿಕೇರಿ ಕಡೆಯಿಂದ ಕೆಎ-16-ಎ-6473ರ ಲಾರಿಯನ್ನು ಅದರ ಚಾಲಕ ದಾಸು ಎಂಬಾತ ಚಾಲಿಸಿಕೊಂಡು ಬರುತ್ತಿದ್ದು ಸದ್ರಿ ಲಾರಿಗೆ ಸ್ಕೂಟರ್‌ ಡಿಕ್ಕಿಯಾಗಿ ಸ್ಕೂಟರ್‌ ಸವಾರ ದಯಾನಂದ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, August 3, 2016

ಕಾಣೆಯಾದ ಮಹಿಳೆಯ ಶವ ಪತ್ತೆ
                       ಕಾಣೆಯಾದ ಮಹಿಳೆಯೊಬ್ಬರ ಶವ ವಿರಾಜಪೇಟೆ ಬಳೀಯ ಹೆಗ್ಗಳ ಗ್ರಾಮದ ಕೊರತಿಕಾಡು ಎಂಬಲ್ಲಿ ಪತ್ತೆಯಾಗಿದೆ. ಹೆಗ್ಗಳ ಗ್ರಾಮದ ಕೊರತಿ ಕಾಡು ನಿವಾಸಿ ದಿಲೀಪ್‌ ಎಂಬವರ ಪತ್ನಿ ಭವ್ಯ ಎಂಬವರು ಇತ್ತೀಚೆಗೆ ಮನೆಯಿಂದ ಕೆಲಸಕ್ಕೆಂದು ಹೋಗಿದ್ದವರು ಮನೆಗೆ ವಾಪಾಸು ಬಾರದೆ ಕಾಣೆಯಾಗಿರುವುದಾಗಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಇದೀಗ ದಿನಾಂಕ 02/08/2016ರಂದು ಕೋದಂಡ ಅಜಿತ್‌ ಎಂಬವರು ಭವ್ಯರವರ ತಂದೆ ಕೆ.ಬಿ.ಉತ್ತಪ್ಪನವರಿಗೆ ದೂರವಾಣಿ ಮೂಲಕ ಉತ್ತಪ್ಪನವರ ಮಗಳು ಭವ್ಯರವರ ಶವವು ಅವರ ತೋಟದಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದು, ಉತ್ತಪ್ಪನವರು ಸ್ಥಳಕ್ಕೆ ಹೋಗಿ ನೋಡಿದಾಗ ಒಂದು ಮೃತ ಶರೀರದ ಅಸ್ಥಿಪಂಜರ ಕಂಡು ಬಂದಿದ್ದು ಅದರ ಮೇಲೆ ಭವ್ಯಳು ಧರಿಸಿದ್ದ ಬಟ್ಟೆಗಳನ್ನು ಗುರುತಿಸಿ ಸದ್ರಿ ಶವವು ಅವರ ಮಗಳದ್ದಾಗಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Tuesday, August 2, 2016

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ,
                 ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಶನಿವಾರಸಂತೆ  ಬಳಿಯ  ಹುಲುಸೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 02/08/2016ರಂದು ಹುಲುಸೆ ಗ್ರಾಮದ ನಿವಾಸಿ ಡಿ.ಜೆ.ಈರಪ್ಪ ಎಂಬವರು ಬೆಳ್ಳಾರಳ್ಳಿ ಗ್ರಾಮಕ್ಕೆ ಹೋಗಿ ವಾಪಾಸು ಬರುತ್ತಿರುವಾಗ ಹುಲುಸು ಗ್ರಾಮದ ನಿವಾಸಿಗಳಾದ ರಾಮ ಮತ್ತು ಇತರೆ ಮೂವರು ಸೇರಿಕೊಂಡು ಹಳೆ ದ್ವೇಷದಿಂದ ಈರಪ್ಪನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮನೆ ನುಗ್ಗಿ ಚಿನ್ನಾಭರಣ ಕಳವು
                      ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ ಘಟನೆ ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 01/08/2016ರಂದು ಕೈಕಾಡು ನಿವಾಸಿ ಎನ್‌.ಟಿ.ಜೂಬಿ ಎಂಬವರ ಪತಿ ತಿಮ್ಮಯ್ಯನವರು ನಾಪೋಕ್ಲು ಸಂತೆಗೆ ಹೋಗಿದ್ದು ಮನೆಯಲ್ಲಿ ಒಬ್ಬರೇ ಇದ್ದ ಜೂಬಿಯವರು ಮದ್ಯಾಹ್ನ ವೇಳೆ ಮನೆಗೆ ಬೀಗ ಹಾಕಿಕೊಂಡು ಹಸುವನ್ನು ಕಟ್ಟಲೆಂದು ಗದ್ದೆಗೆ ಹೋಗಿ ವಾಪಾಸು ಬರುವಾಗ ಮನೆಯ ಬಾಗಿಲು ತೆರೆದಿದ್ದು, ಒಳಗೆ ಆಲ್ಮೆರಾ ಒಡೆಯುವ ಶಬ್ದ ಕೇಳಿ ಜೂಬಿಯವರು ಒಳಗೆ ಹೋದಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅವರನ್ನು ತಳ್ಳಿ ಹಾಕಿ ಓಡಿ ಹೋಗಿದ್ದು, ಜೂಬಿಯವರು ಹೋಗಿ ಆಲ್ಮೆರಾವನ್ನು ಪರಿಶೀಲಿಸಿದಾಗ ಆ ವ್ಯಕ್ತಿಯು ಸುಮಾರು ರೂ. 85,000/- ಬೆಲೆ ಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದು ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್‌ ರಿಕ್ಷಾ ಡಿಕ್ಕಿ
                    ಮೋಟಾರು ಬೈಕೊಂದಕ್ಕೆ ರಿಕ್ಷಾ ಡಿಕ್ಕಿಯಾದ ಘಟನೆ ಕುಶಾಲನಗರದ ಗಂಧದ ಕೋಟೆಯಲ್ಲಿ ನಡೆದಿದೆ. ದಿನಾಂಕ 01/08/2016ರಂದು ಗುಮ್ಮನಕೊಲ್ಲಿ ನಿವಾಸಿ ನೂತನ್‌ ಎಂಬವರು ಅವರ ಮೋಟಾರು ಸೈಕಲ್‌ ಸಂಖ್ಯೆ ಕೆಎ-12-ಕ್ಯು-0231 ರಲ್ಲಿ ಅವರ ಸ್ನೇಹಿತ ಸಿಜುರವರೊಂದಿಗೆ ಚಿಕ್ಕಬೆಟ್ಟಗೇರಿಯಿಂದ ಕುಶಾಲನಗರದ ಕಡೆ ಬರುತ್ತಿರುವಾಗ ಗಂಧದ ಕೋಟೆಯ ಬಳಿ ಎದುರುಗಡೆಯಿಂದ ಕೆಎ-12-ಬಿ-0449ರ ಆಟೋ ರಿಕ್ಷಾವನ್ನು ಅದರ ಚಾಲಕ ಅರುಣ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನೂತನ್‌ರವರು ಚಾಲಿಸುತ್ತಿದ್ದ ಮೋಟಾರು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ನೂತನ್‌ ಹಾಗೂ ಸಿಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Monday, August 1, 2016

ಹಳೆ ವೈಷಮ್ಯ, ಕತ್ತಿಯಿಂದ ಹಲ್ಲೆ
                     ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆ ಸಿದ್ದಾಪುರ ಬಳಿಯ ಪುಲಿಯೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 01/08/2016ರಂದು ಪುಲಿಯೇರಿ ಗ್ರಾಮದ ಸಮರ್ಥ್‌ಸುಶಾಂತ್‌ ಎಂಬವರು ಅವರ ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ಡಾಲ್ಟಎಂಬವರು ಬಂದು ಹಳೆ ದ್ವೇಷದಿಂದ ಜಗಳವಾಡಿ ಸಮರ್ಥ್‌ ಸುಶಾಂತ್‌ರವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕತ್ತಿಯಿಂದ ಮಹಿಳೆಯರ ಮೇಲೆ ಹಲ್ಲೆ
                 ಕತ್ತಿಯಿಂದ ಕಡಿದು ಮಹಿಳೆಯರ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರಪೇಟೆ ಬಳಿಯ ಇನಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 30/07/2016ರಂದು ಇನಕನಹಳ್ಳಿ ನಿವಾಸಿ ಚಿಣ್ಣಪ್ಪ ಮತ್ತು ನಾಗರತ್ನ ಎಂಬವರು ಮನೆಯಲ್ಲಿರುವಾಗ ಅದೇ ಮನೆಯ ಮತ್ತೊಂದು ಭಾಗದಲ್ಲಿ ವಾಸಿಸುತ್ತಿರುವ ದೇವಕಿ ಮತ್ತು ಗಿರಿಜಾ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ನಾಗರತ್ನ  ಮತ್ತು ಚಿಣ್ಣಪ್ಪನವರ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.