Saturday, August 6, 2016

ಲಾರಿ ಚಾಲಕನನ್ನು ಲಾರಿ ಸಮೇತ ಅಪಹರಿಸಿ ಸುಲಿಗೆ:

       ತೆಲಂಗಾಣ ರಾಜ್ಯದ ನಲಗೊಂಡ ಜಿಲ್ಲೆಯ ಚೌಟುಪಾಲ ಗ್ರಾಮದ ನಿವಾಸಿ ಕಾಸುಲ ಜಂಗಯ್ಯ ಎಂಬವರು ದಿನಾಂಕ 03-08-16 ರಂದು ರಾತ್ರಿ ಸಮಯ 11.30 ಗಂಟೆಗೆ ಲಾರಿಯನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಯಶವಂತಪುರ ರೈಲ್ವೇ ಕ್ರಾಸಿಂಗ್ ಬಳಿ ಟ್ರಾಪಿಕ್ ಜಾಮ್ ಆಗಿದ್ದ ಸಂದರ್ಭದಲ್ಲಿ ಯಾರೋ 3 ರಿಂದ 4 ಜನರು ಏಕಾಏಕಿ ಅವರ ಲಾರಿಯ ಎಡಬಾಗ ಮತ್ತು ಬಲಭಾಗದಿಂದ ಹತ್ತಿ ಅವರ ಮೈ , ಕೈ , ಮುಖಕ್ಕೆ ಹೊಡೆದು ನೈಲಾನ್ ಹಗ್ಗದಿಂದ ಕಾಲು ಮತ್ತು ಕೈ ಯನ್ನು ಕಟ್ಟಿ ಸದರಿ ಲಾರಿಯನ್ನು ಚಾಲನೆ ಮಾಡಿಕೊಂಡು ಮಡಿಕೇರಿ ಕಡೆಗೆ ಬಂದು ಲಾರಿ ಚಾಲಕರಿಂದ 10,000 ರೂ ಗಳನ್ನು ಸುಲಿಗೆ ಮಾಡಿದ್ದು ಅಲ್ಲದೆ ಸದರಿ ಲಾರಿಯನ್ನು ಸುಂಟಿಕೊಪ್ಪದ ಬಳಿ ನಿಲ್ಲಿಸಿ ಆರೋಪಿಗಳು ಪರಾರಿಯಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಫಿರ್ಯಾದಿ ಕಾಸುಲ ಜಂಗಯ್ಯ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು:

     ಪೊನ್ನಂಪೇಟೆ ಠಾಣಾ ಸರಹದ್ದಿನ ಕೋತೂರು ಗ್ರಾಮದ ನಿವಾಸಿ ನಂಜಪ್ಪಮ್ಮಯ್ಯರವರು ದಿನಾಂಕ 5-8-2016 ರಂದು ಬೆಳಿಗ್ಗೆ 9-30 ಗಂಟೆಗೆ ಧರ್ಮಸ್ಥಳದ ಹರಕೆಯ ಕಾಯಿಯನ್ನು ಲಕ್ಷ್ಮಣತೀರ್ಥ ಹೊಳೆಗೆ ಬಿಟ್ಟು ಬರುತ್ತೇನೆಂದು ಮನೆಯಿಂದ ಹೋಗಿದ್ದು ಹರಕೆಯ ಕಾಯಿಯನ್ನು ಹೊಳೆಗೆ ಬಿಡುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಹೊಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವು:

     ಆಕಸ್ಮಿಕ ಬೆಂಕಿ ತಗುಲಿ ಚಿಕಿತ್ಸೆಗೆ ದಾಖಲಾದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ. ಶ್ರೀಮಂಗಲ ಠಾಣಾ ಸರಹದ್ದಿನ ಬಿರುನಾಣಿ ಗ್ರಾಮದಲ್ಲಿ ವಾಸವಾಗಿರುವ ಪಣಿ ಎರವರ ಸನ್ನಿ ಎಂಬವರ ಮಗಳು ಸುಮಿತ್ರಳನ್ನು ಗಣೇಶ ಎಂಬುವವರಿಗೆ ಒಂದು ವಷF ಹಿಂದೆ ಮದುವೆ ಮಾಡಿ ಕೊಟ್ಟಿದ್ದು, ದಿನಾಂಕ 31-7-2016 ರಂದು ಸದರಿ ಸುಮಿತ್ರಳು ಮನೆಯಲ್ಲಿ ಅಡುಗೆ ಮಾಡುವ ಸಲುವಾಗಿ ಒಲೆಗೆ ಸೌದೆ ಹಾಕಿ ಸೀಮೆಣ್ಣೆ ಸುರಿದು ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆ ಅಕಸ್ಮಿಕವಾಗಿ ಸುಮಿತ್ರಳ ಮುಂಭಾಗದ ಬಟ್ಟೆಗೆ ತಗುಲಿ ಬೆಂಕಿ ಹಿಡಿದು ಸುಟ್ಟ ಗಾಯಾಗಳಾಗಿದ್ದು, ಚಿಕಿತ್ಸೆ ಬಗ್ಗೆ ಅಸ್ಪತ್ರೆಗೆ ದಾಖಲಿಸಿದ್ದು, ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 04-08-2016 ರಂದು ಮೃತ ಪಟ್ಟಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.