Thursday, August 11, 2016

ವಾಹನ ಕಳ್ಳತನದ ದೊಡ್ಡ ಜಾಲಪತ್ತೆ, ಆರೋಪಿಗಳ ಸಮೇತ 10 ವಾಹನಗಳು ಪೊಲೀಸ್ ವಶಕ್ಕೆ:    
     ವಾಹನ ಕಳ್ಳತನ ಮಾಡುವ ಜಾಲವೊಂದನ್ನು ಭೇದಿಸಿದ ಪೊಲೀಸರು ಮೂವರು ಆಟೋಪಿಗಳನ್ನು ಹಾಗು ಕೊಡಗು ಮತ್ತು ಕೇರಳ ರಾಜ್ಯದಲ್ಲಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

          ಕೊಡಗು ಜಿಲ್ಲಾ ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ರೀ ಬಿ.ಆರ್. ಲಿಂಗಪ್ಪ ಹಾಗು ಸಿಬ್ಬಂದಿಯವರು ದಿನಾಂಕ 10-8-2016 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಮಡಿಕೇರಿ ನಗರದ ಚೈನ್ ಗೇಟ್ ಬಳಿ ಒಂದು ಕಪ್ಪುಬಣ್ಣದ ಕ್ವಾಲೀಸ್ ವಾಹನವನ್ನು ಪರಿಶೀಲಿಸಿ ಸದರಿ ವಾಹನದಲ್ಲಿದ್ದ ಮೂವರು ವ್ಯಕ್ತಿಗಳನ್ನು ಸಂಶಯದ ಮೇಲೆ ವಶಕ್ಕೆ ಪಡೆದು ಅವರನ್ನು ವಿಚಾರಣೆಗೊಳಪಡಿಸಲಾಗಿ ಸದರಿ ವ್ಯಕ್ತಿಗಳಾದ (1) ಮೊಹಮ್ಮದ್ ಸಲೀಂ @ ಅಣಗೂರು ಸಲೀಂ, ತಂದೆ ಲೇಟ್ ಅಬ್ದುಲ್ ಕುಂನ್ನಿ, 50 ವರ್ಷ, ಚಾಲಕ ವೃತ್ತಿ, ಕೊಲ್ಲಂಬಾಡಿ ಹೌಸ್, ಅಣಂಗೂರು, ಕಾಸರಗೋಡು, ಕೇರಳ, ಹಾಲಿ ವಾಸ: ಎನ್ .ಎಸ್.ಆರ್. ಕೇರಳ ಹೊಟೇಲ್, ಶಿರಂಗಾಲ, ಕೊಡಗು ಜಿಲ್ಲೆ, (2) ಸಾಜು ವರ್ಗೀಸ್ @ ಸಾಜು, ತಂದೆ ವರ್ಗೀಸ್, 43 ವರ್ಷ, ಹೊಟೇಲು ಕೆಲಸ, ಕಟ್ಟಕಾಯಿ ಹೌಸ್, ಕೆನಾದಿಮಂಗಲ್ ಗ್ರಾಮ, ಜಾಗೋತ್ ಪೋಸ್ಟ್, ಲತ್ತಣಂತ್ತಿಟ್ಟ ಜಿಲ್ಲೆ, ಕೇರಳ ಮತ್ತು (3) ಮಹಮ್ಮದ್ ಸಾಫಿ ಕೆ, ತಂದೆ ಸೌಕತ್, 20 ವರ್ಷ, ಚಾಲಕ ವೃತ್ತಿ, ಕಪ್ಪಚ್ಚಾಲಿಲ್ ಹೌಸ್, ಭೂದಾನ ಅಂಚೆ, ಮಲಪುರಂ ಜಿಲ್ಲೆ, ಕೇರಳ ಎಂಬುದು ತಿಳಿದು ಬಂದಿದ್ದು, ಅವರುಗಳು ವಾಹನಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದು, ಈ ಹಿಂದೆ ಕೇರಳದ ಕ್ಯಾಲಿಕಟ್ ಬಡಗರದಿಂದ 2 ಟಿಪ್ಪರ್ ವಾಹನಗಳನ್ನು ಮತ್ತು ಕುಶಾಲನಗರದಿಂದ ಒಂದು ಕ್ವಾಲೀಸ್ ವಾಹನವನ್ನು ಕಳವು ಮಾಡಿದ್ದು ತಿಳಿದು ಬಂದಿದ್ದು ಅಲ್ಲದೆ ಸದರಿ ಆರೋಪಿಗಳು ಕೇರಳದ ಕ್ಯಾಲಿಕಟ್ ಮತ್ತು ಇತರೆ ಕಡೆಗಳಿಂದ ವಾಹನಗಳನ್ನು ಕಳ್ಳತನ ಮಾಡಿದ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಟ್ಟು 33,15,000 ರೂ. ಮೌಲ್ಯದ 9 ವಾಹನಗಳನ್ನು ಮತ್ತು ನಗದು ರೂ.20,000/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ದೇವಾಲಯದ ಬಾಗಿಲು ಮುರಿದು ಕಳವು:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಿಗ್ಗಾಲು ಗ್ರಾಮದಲ್ಲಿ ಈಶ್ವರ, ಚಾಮುಂಡೇಶ್ವರಿ, ಗಣಪತಿ, ದೇವಾಲಯಗಳು ಒಂದೇ ಆವರಣದಲಿದ್ದು ಸದರಿ ದೇವಾಲಯದ ಗುಡಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ದೇವಾಲಯದಲ್ಲಿದ್ದ ಅಂದಾಜು 5000 ರೂ.ಗಳಿದ್ದ ಕಾಣಿಕೆ ಪೆಟ್ಟಿಗೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಕಿಗ್ಗಾಲು ಗ್ರಾಮದ ನಿವಾಸಿ ಪಿ.ಎಲ್. ವಿಶ್ವನಾಥ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಕಾರುಗಳು ಮುಖಾಮುಖಿ ಡಿಕ್ಕಿ, ಮಹಿಳೆಗೆ ಗಾಯ:

    ಎರಡು ಕಾರುಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡ ಘಟನೆ ಮೂರ್ನಾಡು ಸಮೀಪದ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕು ಅಮ್ಮತ್ತಿ ಕಾರ್ಮಾಡು ಗ್ರಾಮದ ನಿವಾಸಿ ಮಿಥುನ್ ಬೆಳ್ಳಿಯಪ್ಪ ಎಂಬವರು ದಿನಾಂಕ 10-8-2016 ರಂದು ಬೆಳಿಗ್ಗೆ ತಮ್ಮ ಬಾಪ್ತು ಕಾರ್ ನಂ: ಕೆಎ 12 ಜೆಡ್ 4895 ರ ಶಿಪ್ಟ್ ಕಾರಿನಲ್ಲಿ ತನ್ನ ತಾಯಿಯೊಂದಿಗೆ ಮಡಿಕೇರಿ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಮುರ್ನಾಡು ಎಂ ಬಾಡಗ ಹತ್ತಿರ ವಿರಾಜಪೇಟೆ ಕಡೆಯಿಂದ ಕಾರ್‌ ನಂ ಕೆಎ 12 ಪಿ 6970 ರ ಆಲ್ಟೊ ಕಾರನ್ನು ಅದರ ಚಾಲಕ ಸೂರ್ಯ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದ ಪರಿಣಾಮ ಎರಡು ಕಾರುಗಳು ಪರಸ್ಪರ ಡಿಕ್ಕಿಯಾಗಿ ಮಿಥುನ್ ಬೆಳ್ಳಿಯಪ್ಪನವರ ತಾಯಿ ಕಮಲರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ:

    ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಹೆಚ್.ಕೆ. ನಾರಾಯಣ ಎಂಬವರ ಮಗಳಾದ 21 ವರ್ಷ ಪ್ರಾಯದ ದಿವ್ಯ ಎಂಬಾಕೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 10-8-2016 ರಂದು ರಾತ್ರಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲು:

    ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ವಾಸವಾಗಿರುವ ಶ್ರೀಮತಿ ಚಾಂದಿನಿ ಎಂಬಾಕೆಯನ್ನು ಆಕೆಯ ಗಂಡ ಗಿರಿಶೇಖರ ಮತ್ತು ಮನೆಯವರು ವರದಕ್ಷಿಣೆಗಾಗಿ ಕುರುಕುಳ ನೀಡುತ್ತಿರುವುದಾಗಿ ಆರೋಪಿಸಿ ಸದರಿ ಶ್ರೀ ಮತಿ ಚಾಂದಿನಿರವರು ನೀಡಿದ ದೂದಿನ ಮೇರೆಗೆ ಮಡಿಕೇರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.