Monday, August 22, 2016

ಬೈಕ್ ಗೆ ಜೀಪು ಡಿಕ್ಕಿ ಒಬ್ಬನ ಸಾವು:

      ಪೊನ್ನಂಪೇಟೆ ಠಾಣಾ ಸರಹದ್ದಿನ ದೇವಮಚ್ಚಿ, ತಿತಿಮತಿ ಗ್ರಾಮದ ನಿವಾಸಿ ಜೆ ಅಗಸ್ಟಿನ್ ಎಂಬವರ ಮಗ ಜಯರಾಜ್ ಹಾಗು ಯತೀಶ್ ಎಂಬವರು ದಿನಾಂಕ 21-8-2016 ರಂದು ರಾತ್ರಿ 8-15 ಗಂಟೆಗೆ ತಿತಿಮತಿಯಿಂದ ಗೋಣಿಕೊಪ್ಪದ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಜೀಪಿನ ಚಾಲಕ ಅಫ್ರೋಜ್‌ ಎಂಬವರು ಸದರಿ ಜೀಪನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸರವಾರ ಯತೀಶ್ ಹಾಗು ಹಿಂಬದಿ ಸವಾರ ಜಯರಾಜ್ ರವರು ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಜಯರಾಜ್ ರವರು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ಯಸೇವನೆ ಮಹಿಳೆ ಸಾವು:

     ಸಿದ್ದಾಪುರ ಠಾಣಾ ಸರಹದ್ದಿನ ಹಚ್ಚಿನಾಡು ಗ್ರಾಮದ ನಿವಾಸಿ ಕಾವಲ ಎಂಬವರ ಪತ್ನಿ ಗೌರಿ (45) ಎಂಬವರು ದಿನಾಂಕ 21-8-2016 ರಂದು ವಿಪರೀತ ಮದ್ಯಸೇವನೆ ಮಾಡಿದ್ದು, ಇದರಿಂದ ಪ್ರಜ್ಞೆತಪ್ಪಿ ಮನೆಯಲ್ಲಿ ಬಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಫಲಕಾರಿಯಾಗಿದೆ ಸದರಿ ಗೌರಿ ಸಾವನಪ್ಪಿದ್ದು, ಸಿದ್ದಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜಾನುವಾರು ಸಾಗಾಟ:

     ದಿನಾಂಕ 22.08.2016 ರಂದು ಬೆಳಿಗ್ಗೆ ಸಮಯ 05.00 ಗಂಟೆಗೆ ಕುಟ್ಟ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಫ್ರಭುರವರ ಕಾಫಿ ತೋಟದ ಸಾರ್ವಜನಿಕ ರಸ್ತೆ ಕಡೆಯಿಂದ ಕುಟ್ಟನಗರದ ಕಡೆಗೆ ಮೂಲಕ ಅಕ್ರಮವಾಗಿ ಜಾನುವಾರನ್ನು ಮಾರುತಿ ಓಮಿನಿ ವ್ಯಾನಿನಲ್ಲಿ ಕೇರಳದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ಕುಟ್ಟ ಠಾಣಾ ಎ.ಎಸ್.ಐ ಹಾಗು ಸಿಬ್ಬಂದಿಗಳು ಪತ್ತೆ ಹಚ್ಚಿ ಮಾರುತಿ ವ್ಯಾನಿನೊಳಗೆ ಇದ್ದ ಎಮ್ಮೆ ಮೃತ ಪಟ್ಟಿದ್ದು,ಮೃತ ಪಟ್ಟ ಎಮ್ಮೆ ಹಾಗೂ ಮಾರುತಿ ವ್ಯಾನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮ ಜರುಗಿಸಿರುತ್ತಾರೆ.  

ಹುಡುಗಿ ಕಾಣೆ:

     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಡಗದಾಳು ಗ್ರಾಮದ ಕತ್ತಲೆಕಾಡು ಪೈಸಾರಿ ನಿವಾಸಿ ಶ್ರೀಮತಿ ಲಕ್ಷ್ಮಿ ಎಂಬವರ ಮಗಳು ಪ್ರಾಯ 20 ವರ್ಷದ ಸಿಂಧು ಎಂಬುವಳು ದಿನಾಂಕ 17-08-2016 ರಂದು ಸಮಯ 8-00 ಎಎಂಗೆ ತನ್ನ ಮನೆಯಾದ ಕತ್ತಲೆಕಾಡು ಪೈಸಾರಿ ಕಡಗದಾಳುವಿನಿಂದ ಮಡಿಕೇರಿಗೆ ಹೋಗಿ ಬರುತ್ತೇನೆಂದು ಹೋದವಳು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.