Monday, August 29, 2016

ಸ್ಕೂಟಿಗೆ ಬಸ್ಸು ಡಿಕ್ಕಿ, ಸವಾರನಿಗೆ ಗಾಯ:
     ದಿನಾಂಕ 28-8-2016 ರಂದು ಕುಶಾಲನಗರ ಠಾಣಾ ಸರದಹದ್ದಿನ ಕೊಪ್ಪಗ್ರಾಮದ ನಿವಾಸಿ ಪ್ರಭು ಎಂಬುವರು ತಮ್ಮ ಸ್ಕೂಟಿಯಲ್ಲಿ ಕುಶಾಲನಗರದಿಂದ ಕೊಪ್ಪ ಕಡೆ ಹೋಗುತ್ತಿದ್ದಾಗ ಕುಶಾಲನಗರ ಪಟ್ಟಣಕಡೆಗೆ ಹೋಗುತ್ತಿದ್ದ ಬಸ್ಸೊಂದು ಡಿಕ್ಕಿ ಯಾದ ಪರಿಣಾಮ ಪ್ರಭುರವರು ಗಾಯಗೊಂಡಿದ್ದು, ಅವರನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಬಗ್ಗೆ ಮಡಿಕೇರಿಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗಿ ಕಾಣೆ, ಪ್ರಕರಣ ದಾಖಲು:
     ದಿನಾಂಕ 28-8-2016 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಶನಿವಾರಸಂತೆ ನಗರದ ನಿವಾಸಿ ಸಾದಿಕ್ ರವರ ತಂಗಿಯಾದ ರಜಿಯಾಸುಲ್ತಾನ್ @ ಚಾಂದು @ ಚಾಂದಿನಿ ಪ್ರಾಯ 24 ವರ್ಷರವರು ಮನೆಯಲ್ಲಿ ಯಾರಿಗೂ ಹೇಳದೇ ಎಲ್ಲಿಗೋ ಹೊರಟು ಹೋಗಿದ್ದು ನಂತರ ಕಾಣೆಯಾಗಿದ್ದು, ಫಿರ್ಯಾದಿ ಸಾದಿಕ್ ರವರ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಬಸ್ಸಿಗೆ ಕಾರು ಡಿಕ್ಕಿ:

     ಮಡಿಕೇರಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಕೆ.ಜೆ ಅನಂತ ಕುಮಾರ್ ರವರು ದಿನಾಂಕ 28-08-2016 ರಂದು ಕೆ.ಎಸ್.ಆರ್.ಟಿ.ಸಿ.ಯ ಕೆಎ-09-ಎಫ್-5247 ರಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ಬೋಯಿಕೇರಿಯಲ್ಲಿ ಸಮಯ 6.20 ಪಿ.ಎಂ ಗೆ ಎದುರಿನಿಂದ ಒಂದು ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿ ಬಂದು ಬಸ್ಸಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಸ್ಸು ಹಾಗೂ ಕಾರು ಜಖಂಗೊಂಡು ಕಾರಿನಲ್ಲಿ ಇದ್ದವರಿಗೆ ರಕ್ತಗಾಯವಾಗಿದ್ದು, ಈ ಸಂಬಂಧ ಫಿರ್ಯಾದಿ ಕೆ.ಜೆ. ಅನಂತಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಡಾನೆ ದಾಳಿ ವ್ಯಕ್ತಿ ಬಲಿ:

     ಸಿದ್ಧಾಪುರ ಠಾಣಾ ಸರಹದ್ದಿಗೆ ಸೇರಿದ ಕರಡಿಗೋಡು ಗ್ರಾಮದ ಅವರೆಗುಂದ ಬಸವನಹಳ್ಳಿಯಿಂದ 1 ಕಿ.ಮೀ ದೂರದಲ್ಲಿ ಮಾಲ್ದಾರೆ ಕಡೆಗೆ ಹೋಗುವ ರಸ್ತೆಯ ಅರಣ್ಯದ ಬಳಿ ಕರಡಿಗೋಡು ಗ್ರಾಮದ ನಿವಾಸಿ ಮಾದ, ಅವರ ದೊಡ್ಡಪ್ಪನ ಮಗ ಪಂಜರಿ ಎರವರ ಚೆಲುವ, ಪ್ರಾಯ 35 ವರ್ಷ ಹಾಗೂ ಪಕ್ಕದ ನಿವಾಸಿ ಪಾಪುರವರೊಂದಿಗೆ ಸಿದ್ಧಾಪುರಕ್ಕೆ ಸಂತೆಗೆಂದು ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾಡಿನೊಳಗಿಂದ ದಿಢೀರನೆ ಬಂದ ಒಂದು ಕಾಡಾನೆಯು ಏಕಾಏಕಿ ಅವರ ಮೇಲೆ ಧಾಳಿ ಮಾಡಿದ್ದು, ಆ ದಾಳಿಯಲ್ಲಿ ಕಾಡಾನೆಯು ಚೆಲುವನನ್ನು ಕಾಲಿನಿಂದ ಮೆಟ್ಟಿ ತೀವ್ರವಾಗಿ ಗಾಯಗೊಂಡ ಚೆಲುವನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದು. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.