Saturday, August 20, 2016

ಹೆಂಗಸು ಕಾಣೆ:

       ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದ ನಿವಾಸಿ ಜ್ಯೋತಿ (35) ಎಂಬವರು ದಿನಾಂಕ 13-8-2016 ರಂದು ಬೆಳಿಗ್ಗೆ 07:00 ಗಂಟೆಗೆ ಕೂಡುಮಂಗಳೂರು ಕಾಫಿ ಕ್ಯೂರಿಂಗ್ ಕೆಲಸಕ್ಕೆ ಹೋಗಿದ್ದು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ:

     ವಿರಾಜಪೇಟೆ ತಾಲೋಕು ಕಂಡಂಗಾಲ ಗ್ರಾಮದ ನಿವಾಸಿ ವಿ.ಎನ್. ಜೀವನ್ ಎಂಬವರು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವ ಉದ್ದೇಶದಿಂದ ತಮ್ಮ ಬಾಪ್ತು ಲಾರಿಯಲ್ಲಿ ತುಂಬಿಸಿ ಇಟ್ಟಿದ್ದನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಪಿ.ಎಸ್.ಐ. ಹಾಗು ಸಿಬ್ಬಂದಿಯವರು ದಾಳಿ ಮಾಡಿ ಲಾರಿ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೀಗ ಮುರಿದು ಕರಿಮೆಣಸು ಕಳವು:

     ಅಂಗಡಿಯೊಂದರ ಬೀಗ ಮುರಿದು 1.62 ಲಕ್ಷ ರೂಪಾಯಿ ಬೆಲೆಬಾಳುವ ಕರಿಮೆಣಸನ್ನು ಕಳ್ಳತನ ಮಾಡಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ನೆಲಜಿ ಗ್ರಾಮದಲ್ಲಿ ನಡೆದಿದೆ. ಮುರ್ನಾಡು ನಿವಾಸಿ ಎಂ.ಎಂ. ಸೈದು ಎಂಬವರು ನೆಲಜಿ ಗ್ರಾಮದ ಮುಂಡಂಡ ಪಟ್ಟು ನಾಣಯ್ಯರವರ ಕಟ್ಟಡದಲ್ಲಿ ಅಂಗಡಿ ಇಟ್ಟುಕೊಂಡು ಕಾಫಿ, ಕರಿಮೆಣಸು ವ್ಯಾಪಾರ ಮಾಡಿಕೊಂಡಿದ್ದು, ದಿನಾಂಕ 19-08-16 ರಂದು 243 ಕೆಜಿ(5 ಬ್ಯಾಗ್‌) ಕರಿಮಣಸನ್ನು ಖರೀದಿಸಿ ರೂಂನಲ್ಲಿಟ್ಟಿದ್ದನ್ನು ಯಾರೋ ಕಳ್ಳರು ದಿನಾಂಕ 19-8-2016ರ ರಾತ್ರಿ ಅಂಗಡಿಗೆ ಹಾಕಿದ ಬೀಗವನ್ನು ಮುರಿದು ಅಂದಾಜು 1,62,800 ರೂ ಮೌಲ್ಯದ 243 ಕೆಜಿ ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.