Wednesday, August 10, 2016

ಅಕ್ರಮ ಜಾನುವಾರು ಸಾಗಾಟ ಪ್ರಕರಣ ದಾಖಲು:

         ಕುಟ್ಟ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ ರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ  ಸಿಬ್ಬಂದಿಯೊಂದಿಗೆ ದಿನಾಂಕ: 10-08-2016 ರಂದು ಬೆಳಿಗ್ಗೆ 6-00 ಎ.ಎಂ ಗೆ ಕುಟ್ಟ ಠಾಣಾ ಸರಹದ್ದಿನ ಬೊಳ್ಳೇರ ಗೇಟ್ ಸಮೀಪ ಹೇರ್ಮಾಡು ದೇವಸ್ಥಾನದ ರಸ್ತೆಯಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಂದು ಪಿಕ್ ಆಪ್ ಜೀಪಿನಲ್ಲಿ ಅಕ್ರಮವಾಗಿ ಕೇರಳದ ಕಸಾಯಿ ಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದುದ್ದನ್ನು ಪತ್ತಹಚ್ಚಿ ವಾಹನದಲ್ಲಿ ಸಾಗಿಸುತ್ತಿದ್ದ ಅಂದಾಜು 60,000/- ಮೌಲ್ಯದ 9 ಜಾನುವಾರುಗಳನ್ನು ಮತ್ತು ಮಹೇಂದ್ರ ಮ್ಯಾಕ್ಸ್ ಪಿಕ್ ಅಪ್‌ ವಾಹನ ನಂ- ಕೆಎಲ್ -10 ಎಎ-9605 ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಅನಾರೋಗ್ಯದ ಹಿನ್ನೆಲೆ ವ್ಯಕ್ತಿ ಆತ್ಮಹತ್ಯೆ:
        ಅನಾರೋಗ್ಯದ ಕಾರಣದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಟ್ಟೆಮಾಡು ಗ್ರಾಮದ ನಿವಾಸಿ ಗಣೇಶ ಎಂಬವರು ಹೊಟ್ಟೆನೋವು ಕಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 9-8-2016 ರಂದು ತಮ್ಮ ಮನೆಯ ಹತ್ತಿರ ಇರುವ ಪಂಪ್ ಹೌಸ್ ನಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊಸೆ ಆತ್ಮಹತ್ಯೆ, ಮನನೊಂದ ಅತ್ತೆಯ ಸಾವು: 
       ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ನಲ್ಲೂರು ಕೊಪ್ಪಲು ಶಿರಂಗಾಲ ಗ್ರಾಮದ ನಿವಾಸಿ ಗಣೇಶ ಎಂಬವರ ಪತ್ನಿ ಶ್ರುತಿ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 8-8-2016 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೇ ವಿಚಾರದಲ್ಲಿ ಮೃತೆ ಶ್ರುತಿಯವರ ಅತ್ತೆ 55 ಪ್ರಾಯದ ಪಾರ್ವತಮ್ಮ ಎಂಬವರು ಚಿಂತೆಗೀಡಾಗಿ ಆಹಾರ ಸೇವಿಸದೆ ನಿತ್ರಾಣಗೊಂಡು ದಿನಾಂಕ 9-8-2016 ರಂದು ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.