Friday, August 12, 2016

ನೇಣುಬಿಗಿದುಕೊಂಡು ಮಹಿಳೆ ಆತ್ಮಹತ್ಯೆ:

      ವಿರಾಜಪೇಟೆ ತಾಲೂಕು, ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಹೆಚ್.ಸಿ. ಭರತ ಎಂಬವರ ಪತ್ನಿ ಶ್ರೀಮತಿ ಹೆಚರ. ಸಂದ್ಯಾ (32) ಎಂಬವರು ದಿನಾಂಕ 10-8-2016 ರಂದು ಚೆಂಬೆಬೆಳ್ಳೂರು ಗ್ರಾಮದ ಚೇಂದಂಡ ತಮ್ಮಯ್ಯ ಎಂಬವರ ಕಾಫಿ ತೋಟದಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದ್ದೆಗೆ ನೀರು ಹರಿಸಿದ ವಿಚಾರ, ವ್ಯಕ್ತಿ ಮೇಲೆ ಹಲ್ಲೆ:
     ಶನಿವಾರಸಂತೆ ಠಾಣಾ ವ್ಯಾಪ್ತಿಯ ದೊಡ್ಡಕಣಗಾಲು ಗ್ರಾಮದ ನಿವಾಸಿ ಕೆ.ಎಸ್. ದೋರೇಶ ಎಂಬವರು ದಿನಾಂಕ 11-8-2016 ರಂದು 11-00 ಗಂಟೆಗೆ ತಮ್ಮ ಗದ್ದೆಗೆ ಗುಬ್ಬರ ಹಾಕುತ್ತಿದ್ದಾಗ ಸದರಿ ಗದ್ದೆಗೆ ಎ,ಎಂ, ಪೂವಯ್ಯ ಎಂಬವರು ತಮ್ಮ ಗದ್ದೆಯಿಂದ ನೀರನ್ನು ಬಿಟ್ಟಿದ್ದು ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಆರೋಪಿ ಪೂವಯ್ಯನವರು ಗುದ್ದಲಿನ ಕಾವಿನಿಂದ ದೋರೇಶನವರ ಮೇಲೆ ಹಲ್ಲೆನಡೆಸಿದ ಸಂಬಂಧ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಗಳ ಮುಖಾಮುಖಿ ಡಿಕ್ಕಿ:

     ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಸೀಗೆಹೊಸೂರು ಗ್ರಾಮದ ನಿವಾಸಿ ಕೆ.ಜಿ. ಲೊಕೇಶ್ ರವರು ದಿನಾಂಕ 9-8-2016 ರಂದು ಗುಡ್ಡೆಹೊಸೂರು –ಸಿದ್ದಾಪುರ ರಸ್ತೆಯಲ್ಲಿ ತಮ್ಮ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಾದ ಅದೇ ಗ್ರಾಮದ ಗುರುಪ್ರಸಾದ್ ಎಂಬವರು ತಮ್ಮ ಮೋಟಾರ್ ಸೈಕಲ್ ನಲ್ಲಿ ಎದುರುಗಡೆಯಿಂದ ಚಾಲನೆ ಮಾಡಿಕೊಂಡು ಬಂದು ಕೆ.ಜಿ.ಲೋಕೇಶ್ ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಲೋಕೇಶ್ ರವರು ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟರಿಗೆ ಕಾರು ಡಿಕ್ಕಿ, ಸವಾರನಿಗೆ ಗಾಯ:

     ಮಡಿಕೇರಿ ತಾಲೂಕು ಬಲಮುರಿ ಗ್ರಾಮದ ನಿವಾಸಿ ಎಂ ಎಸ್ ಮಂಜುರವರು ದಿನಾಂಕ 11-08-2016 ರಂದು ಅವರ ಬಾಪ್ತು ಕೆಎ-12-ಕೆ-9474 ರ ಡಿಯೋ ಸ್ಕೂಟರ್‌ನಲ್ಲಿ ಅವರ ಮನೆಯಿಂದ ಯೋಗೇಶ್‌ರವರೊಂದಿಗೆ ಮೂರ್ನಾಡುವಿಗೆ ಹೋಗುತ್ತಿರುವಾಗ ಬಲಮುರಿ ಸಾರ್ವಜನಿಕ ರಸ್ತೆಯಲ್ಲಿ ಮೂರ್ನಾಡು ಕಡೆಯಿಂದ ಬಂದ ಕೆಎ-12-ಎನ್-7054 ರ ಆಲ್ಟೋ ಕಾರನ್ನು ಅದರ ಚಾಲಕ ಮಹೇಶರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಂ ಎಸ್ ಮಂಜುರವರು ಚಾಲನೆ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಂಜುರವರ ತಲೆ ಹಾಗೂ ಬಲ ಕಣ್ಣು, ಬಲ ಕಾಲಿಗೆ ಗಾಯವಾಗಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೀಗ ಮುರಿದು ತಾಮ್ರದ ಹಂಡೆ ಕಳವು:

    ಪಿರ್ಯಾದಿ ಜಾನ್ ಎಂಬವರು ಯಡವನಾಡು ಗ್ರಾಮದಲ್ಲಿ ಪಳಂಗಪ್ಪರವರಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 07.08.16 ರಂದು ತೋಟ ಲೈನ್ ಮನೆಗೆ ಬೀಗ ಹಾಕಿಕೊಂಡು ಹೋಗಿ ದಿನಾಂಕ 08.08.2016 ರಂದು ಸಂಜೆ 17:00 ಗಂಟೆಗೆ ವಾಪಾಸ್ಸು ಲೈನ್ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಬಾತ್ ರೂಮಿನ ಬೀಗವನ್ನು ಮೀಟಿ,ರೂಮಿನ ಹಿಂದುಗಡೆ ಇಟ್ಟಿಗೆ ಗೋಡೆಯನ್ನು ಒಡೆದು,ಮನೆಯಲ್ಲಿ ಸ್ನಾನ ಮಾಡಲು ಅಳವಡಿಸಿದ್ದ ತಾಮ್ರದ ಹಂಡೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.