Saturday, August 13, 2016

ಮಹಿಳೆ ಮತ್ತು ಮಗು ಕಾಣೆ
                       ಮಗುವಿನೊಂದಿಗೆ ಮಹಿಳೆ ನಾಪತ್ತೆಯಾದ ಘಟನೆ ನಾಪೋಕ್ಲು ಬಳಿಯ ಹೊದವಾಡ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ಹೊದವಾಡ ಗ್ರಾಮದ ನಿವಾಸಿ ಬಿ.ಯು.ಅಬ್ದುಲ್ಲಾ ಎಂಬವರು ಅವರ ನೆರೆಮನೆಯ ಶಮೀರ್‌ ಎಂಬವರೊಂದಿಗೆ ಅವರ ಭಾವ ಫೈಸಲ್‌ ಎಂಬವರ ಮನೆಗೆಂದು ಮೇಕೇರಿ ಗ್ರಾಮಕ್ಕೆ ಹೋಗಿ ವಾಪಾಸು ಮನೆಗೆ ಬಂದು ನೋಡುವಾಗ ಮನೆಯಲ್ಲಿದ್ದ ಅಬ್ದುಲ್ಲಾರವರ ಪತ್ನಿ ಕದೀಜಾ ಎಂಬಾಕೆ ಹಾಗೂ ಮೂರು ವರ್ಷ ಪ್ರಾಯದ ಮಗು ಶಾನಿದ್‌ ಇಬ್ಬರೂ ಮನೆಯಲ್ಲಿ ಇಲ್ಲದೇ ಇದ್ದು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಲಾರಿ ಡಿಕ್ಕಿ
                     ಕಾರಿಗೆ ಲಾರಿ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಮೊಣ್ಣಂಗೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/08/2016ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಂತೆಕಟ್ಟೆ ನಿವಾಸಿ ಸತೀಶ್‌ ರಾವ್‌ ಎಂಬವರು ಅವರ ತಾಯಿ, ತಂದೆ ಮತ್ತು ಸ್ನೇಹಿತ ಸುಗೇಂದ್ರ ಎಂಬವರೊಂದಿಗೆ ಕೆಎ-19-ಎಂಬಿ-4036ರ ಕಾರಿನಲ್ಲಿ ಮೈಸೂರಿನಲ್ಲಿ ಅವರ ಸಂಬಂಧಿಕರ ಮದುವೆ ಸಮಾರಂಭಕ್ಕೆ ಹೋಗಿ ವಾಪಾಸು ಊರಿಗೆ ಹೋಗುತ್ತಿರುವಾಗ ಮೊಣ್ಣಂಗೇರಿ ಬಳಿ ಮಂಗಳೂರು ಕಡೆಯಿಂದ ಕೆಎ-05-ಎಸಿ-4059ರ ಒಂದು ಲಾರಿಯನ್ನು ಅದರ ಚಾಲಕ ರಘು ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಗೇಂದ್ರರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಾರಿಗೆ ಹಾನಿ ಉಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಜೀಪು ಡಿಕ್ಕಿ
                  ಕಾರಿಗೆ ಪಿಕ್‌ಅಪ್‌ ಜೀಪೊಂದು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 12/08/2016ರಂದು ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ನಿತ್ಯಾ ಸೋಮಯ್ಯ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಜೆಡ್‌-7040ರಲ್ಲಿ ವಿರಾಜಪೇಟೆ ನಗರದ ಮೂರ್ನಾಡು ರಸ್ತೆಯ ಬಳಿ ಬರುತ್ತಿರುವಾಗ ಅಲ್ಲಿ ರಸ್ತೆಯ ಮದ್ಯಭಾಗದಲ್ಲಿ ನಿಲ್ಲಿಸಿದ್ದ ಕೆಎ-12-ಬಿ-2977ರ ಪಿಕ್‌ಅಪ್‌ ವಾಹನವನ್ನು ಅದರ ಚಾಲಕನು ಯಾವುದೇ ಸೂಚನೆ ನೀಡದೆ ಏಕಾ ಏಕಿ ಚಾಲಿಸಿಕೊಂಡು ಬಂದು ನಿತ್ಯಾ ಸೋಮಯ್ಯನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿತ್ಯಾ ಸೋಮಯ್ಯನವರ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.