Tuesday, August 23, 2016

ಅಕ್ರಮ ಮರಳು ಸಾಗಾಟ:

     ಅಕ್ರಮವಾಗಿ ಲಾರಿಗಳಲ್ಲಿ ಮರಳು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಠಾಣಾಧಿಕಾರಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಪಾಲಿಬೆಟ್ಟ-ತಿತಿಮತಿಯ ರಸ್ತೆಯ ಕೋಟೆಬೆಟ್ಟ ಕಾಫಿ ತೋಟದ ಬಳಿ ಒಂದು ಟಿಪ್ಪರ್ ಮತ್ತು ಒಂದು ಸ್ವರಾಜ್ ಮಜ್ದಾ ವಾಹನಗಳಲ್ಲಿ ಅಕ್ರಮವಾಗಿ ಮರಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ಸುರೇಶ್, ಮತ್ತು ಮಣಿ ಎಂಬವರು ಬಂಧಿಸಿ ಮರಳು ತುಂಬಿದ 2 ಲಾರಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

    ಚಲಿಸುತ್ತಿದ್ದ ಕಾರಿಗೆ ಹೋಗುತ್ತಿದ್ದ ರಿಕ್ಷಾ ತಾಗಿದೆ ಎಂದು ಹೇಳಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 22-8-2016 ರಂದು ನದಿಮುಲ್ಲಾ, ರಿಕ್ಷಾ ಚಾಲಕ ಇವರು ಗೋಣಿಕೊಪ್ಪ ನಗರದ ಮೀನುಮಾರ್ಕೆಟ್ ಮುಂಭಾಗದ ರಸ್ತೆಯಲ್ಲಿ ತನ್ನ ಆಟೋದಲ್ಲಿ ಹೋಗುತ್ತಿದ್ದಾಗ ಆರೋಪಿ ಜೀವನ್ ಕೆ. ಎಂಬಾತ ತನ್ನ ಮಾರುತಿ-800ರ ಕಾರಿನಲ್ಲಿ ಬಂದು ನದಿಮುಲ್ಲಾರವರ ದಾರಿ ತಡೆದು ತನ್ನ ಕಾರಿಗೆ ಆಟೋ ರಿಕ್ಷಾವನ್ನು ಡಿಕ್ಕಿಪಡಿಸಿ ಹೋಗಿರುವೆ ಎಂದು ಹೇಳಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.