Wednesday, August 24, 2016

ನೀರಿನ ವಿಚಾರದಲ್ಲಿ ಜಗಳ:

     ಸೋಮವಾರಪೇಟೆ ತಾಲೋಕು, ತೊರೆನೂರು ಗ್ರಾಮದ ನಿವಾಸಿ ಟಿ.ಕೆ. ವಸಂತ ಎಂಬವರು ದಿನಾಂಕ 24-8-2016 ರಂದು ತಮ್ಮ ಜಮೀನಿಗೆ ಹೋಗಿದ್ದು, ಪಕ್ಕದ ಜಮೀನಿನವರಾದ ರುದ್ರಪ್ಪ ಹಾಗೂ ಅವರ ಮಗ ಮಧು, ಬಸವರಾಜಪ್ಪ ಇವರು ಟಿ.ಕೆ ವಸಂತರವರ ಅಣ್ಣ ಸುರೇಶನವರೊಂದಿಗೆ ನೀರಿನ ವಿಚಾರದಲ್ಲಿ ಜಗಳವಾಗಿದ್ದು ಅವರನ್ನು ಸಮಾಧಾನ ಪಡಿಸಲು ಹೋದಾಗ ಆಪೋಪಿಗಳಾದ ರುದ್ರಪ್ಪ, ಮಧು, ಬಸವರಾಜಪ್ಪ ಮತ್ತು ವನಜಾಕ್ಷಿರವರುಗಳು ಅವಾಚ್ಯ ಶಬ್ದಗಳಿಂದ ಬೈದು ಕತ್ತಿಯಿಂದ ಮತ್ತು ಗುದ್ದಲಿ ಕಾವಿನಿಂದ ಹಲ್ಲೆನಡೆಸಿ ಗಾಯಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಜೀಪು-ಬೈಕ್ ನಡುವೆ ಅಪಘಾತ, ಸವಾರನ ದುರ್ಮರಣ: 

     ಬೈಕ್ ಮತ್ತು ಪಿಕ್ ಅಪ್ ಜೀಪಿನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಕರಡಿಗೂಡು ಎಂಬಲ್ಲಿ ನಡೆದಿದೆ. ಈ ದಿನ ಬೆಳಗ್ಗೆ 9-15 ಗಂಟೆಯ ಸಮಯದಲ್ಲಿ ಮಾಲ್ದಾರೆ ಗ್ರಾಮದ ನಿವಾಸಿ ಎಸ್.ಜೆ. ಮಂಜು ಎಂಬವರು ತನ್ನ ಮೋಟಾರ್ ಸೈಕಲ್ ನಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಕರಡಿಗೋಡು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಎದುರುಗಡೆಯಿಂದ ಇ.ಸಿ. ಭಾಸ್ಕರ ಎಂಬವರು ಚಾಲಿಸಿಕೊಂಡು ಬರುತ್ತಿದ್ದ ಪಿಕ್ ಜೀಪು ಡಿಕ್ಕಿಯಾದ ಪರಿಣಾಮ ಎಸ್.ಜೆ. ಮಂಜುರವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಗೂಡ್ಸ್ ಆಟೋ ಬೈಕಿಗೆ ಡಿಕ್ಕಿ:

     ಗೂಡ್ಸ್ ಆಟೋ ಬೈಕಿಗೆ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡು ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಜಾಗೇನಹಳ್ಳಿಯಲ್ಲಿ ನಡೆದಿದೆ. ಮುಳ್ಳೂರು ಗ್ರಾಮದ ನಿವಾಸಿ ಶಾಂತರಾಜು ಎಂಬವರ ಪುತ್ರ ಪ್ರತಾಪ ಎಂಬ ವ್ಯಕ್ತಿ ತನ್ನ ಸ್ನೇಹಿತ ಸಂಜಯನೊಂದಿಗೆ ಗುಡುಗಳಲೆ ಕಡೆಗೆ ಹೋಗುತ್ತಿದ್ದಾಗ ಗೂಡ್ಸ್ ಆಟೋವೊಂದರ ಚಾಲಕ ನೋರ್ವ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರಿಬ್ಬರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ಕಳವು:

ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ನೀರುಗುಂದ ಗ್ರಾಮದ ವಾಸಿ ಶ್ರೀ. ಎನ್.ಆರ್ ಸಣ್ಣಪ್ಪ ರವರು ದಿನಾಂಕ 23-08-2016 ರಂದು ಸಮಯ ಬೆಳಿಗ್ಗೆ 09-30 ಗಂಟೆಗೆ ಎಂದಿನಂತೆ ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗಿದ್ದು, ಅವರ ಪತ್ನಿಯು ತಮ್ಮ ಮಗಳ ಮನೆಗೆ ಹೋಗಿದ್ದು, ಫಿರ್ಯಾದಿಯವರು ಮಧ್ಯಾಹ್ನ 01-30 ಗಂಟೆಗೆ ಊಟಕ್ಕೆ ಮನೆಗೆ ಬಂದು ನೋಡುವಾಗ್ಗೆ ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮೀಟಿ ತೆಗೆದು ಒಳ ನುಗ್ಗಿ ಮನೆಯ ಅಟ್ಟದ ಮೇಲೆ ಇಟ್ಟಿದ್ದ ಕಬ್ಬಿಣದ ಟ್ರಂಕ್ ನ ಬೀಗವನ್ನು ಸಹ ಮುರಿದು ಅದರೊಳಗಿದ್ದ ಚಿನ್ನದ ಎರಡು ಉಂಗುರ ಅಂದಾಜು 6 ಗ್ರಾಂ , 2 ಜೊತೆ ಚಿನ್ನದ ಓಲೆ, ಅಂದಾಜು 8 ಗ್ರಾಂ ಇದ್ದು, ನಗದು ಹಣ 2000 ರೂಗಳು ಹಾಗೂ ಕೊಡ್ಲಿಪೇಟೆ ಕೆನರಾ ಬ್ಯಾಂಕಿನ 2 ಎಫ್.ಡಿ ಬಾಂಡ್ ಹಾಗೂ ಕೊಡ್ಲಿಪೇಟೆ ಕರ್ನಾಟಕ ಬ್ಯಾಂಕಿನ 1 ಎಫ್.ಡಿ ಬಾಂಡ್ , ಪುತ್ತೂರು ಕರ್ನಾಟಕ ಬ್ಯಾಂಕಿನ 1 ಎಫ್.ಡಿ ಬಾಂಡ್ ಹಾಗೂ 8861850898 ನಂಬರಿನ ಮೊಬೈಲ್ ಫೋನ್ ಮತ್ತು ಸಿಮ್ ಕಳವು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಲಕ ಕಾಣೆ:

     ಕುಶಾಲನಗರದ ಜನತಾ ಕಾಲೋನಿ ನಿವಾಸಿ ಆರ್. ರಾಮಚಂದ್ರ ಎಂಬವರ ಮೊಮ್ಮಗ 12 ವರ್ಷ ಪ್ರಾಯದ ಶಶಾಂಕ್ ನು ದಿನಾಂಕ 21-8-2016 ರಂದು ಬೆಳಿಗ್ಗೆ ಯಿಂದ ಸಂಜೆಯವರೆಗೂ ಮನೆಯಲ್ಲೆ ಇದ್ದು ನಂತರ ಸಮಯ 5-30 ಪಿ.ಎಂಗೆ ಅಡುಗೆ ಮನೆಯಲ್ಲಿ ಡಬ್ಬಿಯಲ್ಲಿದ್ದ 500/- ರೂಗಳನ್ನು ತೆಗೆದುಕೊಂಡು ಮನೆಯಿಂದ ಹೋದವನು ರಾತ್ರಿಯಾದರು ಮನೆಗೆ ಬಾರದೆ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಆರ್. ರಾಮಚಂದ್ರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.