Saturday, August 27, 2016

ವ್ಯಕ್ತಿಯಿಂದ ತಾಯಿ, ತಂಗಿ ಮೇಲೆ ಹಲ್ಲೆ:

      ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರು ತನ್ನ ತಾಯಿ ಮತ್ತು ತಂಗಿಯ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಅಳಿಲುಗುಪ್ಪೆ ಸಿದ್ದಲಿಂಗಪುರ ಗ್ರಾಮದ ನಿವಾಸಿ ಕವಿತರವರು ದಿನಾಂಕ 25-8-2016 ರಂದು ತನ್ನ ತಾಯಿಯವರ ಮನೆಯಲ್ಲಿ ಇರುವಾಗ್ಗೆ ತನ್ನ ಅಣ್ಣನಾದ ಗಣೇಶ ಅಲ್ಲಿಗೆ ಬಂದು ಕವಿತ ಮತ್ತು ತಾಯಿ ಕಾಮವ್ವನವರ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಗಾಯ:

     ವ್ಯಕ್ತಿಯೊಬ್ಬರು ಮರ ಕೆಲಸ ಮಾಡುತ್ತಿದ್ದ ವೇಳೆ ಮರವು ಎದೆಯ ಮೇಲೆ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಸಕಲೇಶಪುರ, ದೊಡ್ಡನಗರ ಗ್ರಾಮದ ನಿವಾಸಿ ಪ್ರದೀಪ ಎಂಬವರು ಸುಂಟಿಕೊಪ್ಪ ಗ್ರಾಮದ ನಿವಾಸಿ ತಿಮ್ಮಯ್ಯ ನವರಿಗೆ ಸೇರಿದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿರುವ ಕಾಫಿ ತೋಟದ ಟಿಂಬರ್ ಸಾಗಿಸುವ ಕೆಲಸಕ್ಕೆ ಹೋಗಿದ್ದು ಮರ ಸಾಗಿಸುವ ವೇಳೆ ಪ್ರದೀಪನವರ ಎದೆಗೆ ಮರ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.