Thursday, August 4, 2016

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                          ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ನಗರದಲ್ಲಿ ನಡದಿದೆ. ಪೊನ್ನಂಪೇಟೆ ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿರುವ 'ಡಿ' ದರ್ಜೆ ನೌಕರ 32 ವರ್ಷ ಪ್ರಾಯದ ಮಲ್ಲೇಶ ಎಂಬ ಯುವಕನು ದಿನಾಂಕ 04/08/2016ರಂದು ಪೊನ್ನಂಪೇಟೆ ಬಳಿಯ ನಿಸರ್ಗ ನಗರದಲ್ಲಿ ತಾನು ಬಾಡಿಗೆಗೆ ಇರುವ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ಯುವಕ ರಾಮನಗರ ಜಿಲ್ಲೆಯವನಾಗಿದ್ದು ಪೊನ್ನಂಪೇಟೆಯಲ್ಲಿ ನೌಕರಿ ಮಾಡಿಕೊಂಡಿದ್ದು ಮನೆಯಿಂದ ದೂರವಾಗಿರುವ ಕಾರಣ  ಜೀವನದಲ್ಲಿ ಜುಗುಪ್ಸೆಗೊಂಡಿರಬಹುದೆನ್ನಲಾಗಿದೆ. ಪೊನ್ನಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಸ್ಕೂಟರ್‌ -ಲಾರಿ ಡಿಕ್ಕಿ, ಸಾವು 
                  ಸ್ಕೂಟರ್‌ ಒಂದಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರ ಸಾವಿಗೀಡಾದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 3/08/2016ರಂದು 7ನೇ ಹೊಸಕೋಟೆ ನಿವಾಸಿ ಸಿ.ಪಿ.ಸುನಿಲ್‌ ಎಂಬವರ ಸ್ನೇಹಿತ ದಯಾನಂದ ಎಂಬವರು ಅವರ ಸ್ಕೂಟರ್‌ ಸಂಖ್ಯೆ ಕೆಎ-55-ಹೆಚ್‌-2804 ರಲ್ಲಿ ಕೊಪ್ಪಕ್ಕೆ ಕೆಲಸಕ್ಕೆಂದು ಹೋಗಿ ಮರಳಿ ಬರುತ್ತಿರುವಾಗ ಗುಡ್ಡೆಹೊಸೂರು ಬಳಿಯ ಪೆಟ್ರೋಲ್‌ ಬಂಕ್‌ ಸಮೀಪ ಮಡಿಕೇರಿ ಕಡೆಯಿಂದ ಕೆಎ-16-ಎ-6473ರ ಲಾರಿಯನ್ನು ಅದರ ಚಾಲಕ ದಾಸು ಎಂಬಾತ ಚಾಲಿಸಿಕೊಂಡು ಬರುತ್ತಿದ್ದು ಸದ್ರಿ ಲಾರಿಗೆ ಸ್ಕೂಟರ್‌ ಡಿಕ್ಕಿಯಾಗಿ ಸ್ಕೂಟರ್‌ ಸವಾರ ದಯಾನಂದ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.