Friday, September 30, 2016

ದರೋಡೆ ಯತ್ನ ಪ್ರಕರಣ, ಆರೋಪಿಗಳ ಬಂಧನ
                ಇತ್ತೀಚೆಗೆ ಕುಶಾಲನಗರ ಬಳಿ ಆಟೋ ಚಾಲಕರೊಬ್ಬರನ್ನು ಕೊಲೆ ಮಾಡಲೆತ್ನಿಸಿ, ರಿಕ್ಷಾ ದರೋಡೆ ಮಾಡಲು ಯತ್ನಿಸಿದ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

                 ದಿನಾಂಕ 07/09/2016ರಂದು ಕುಶಾಲನಗರ ಗಂಧದಕೋಟೆ ನಿವಾಸಿ ಆಟೋ ರಿಕ್ಷಾ ಚಾಲಕರಾದ ಎಂ.ಎಂ. ಮಹಮದ್ ಎಂಬವರ ರಿಕ್ಷಾವನ್ನು ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಿಂದ ಮುಸ್ಸಂಜೆ ವೇಳೆ ಕೆಲವು ಅಪರಿಚಿತರು ಬಾಡಿಗೆಗೆ ಪಡೆದು ಹಾರಂಗಿ ರಸ್ತೆಯ ಚಿಕ್ಕತ್ತೂರು ಬಳಿ ಆಟೋ ನಿಲ್ಲಿಸಿ ಚಾಲಕ ಮಹಮದ್ ರವರ ಮೇಲೆ ಕತ್ತಿ ಹಾಗೂ ಚಾಕುವಿನಿಂದ ತೀವ್ರತರ ಹಲ್ಲೆ ನಡೆಸಿ 500 ರೂಪಾಯಿ ನಗದು ಹಾಗೂ ರಿಕ್ಷಾವನ್ನು ಕಿತ್ತುಕೊಂಡು ಹೋಗಿರುವುದಾಗಿ ಮಹಮದ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

                 ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಡಿಸಿಐಬಿ ವಿಭಾಗಕ್ಕೆ ವಹಿಸಿ ವಿವಿಧ ತಂಡಗಳನ್ನು ರಚಿಸಿ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಅದರಂತೆ ಡಿಸಿಐಬಿ ನಿರೀಕ್ಷಕರಾದ ಬಿ.ಆರ್.ಲಿಂಗಪ್ಪನವರ ನೇತೃತ್ವದಲ್ಲಿ ಪತ್ತೆ ಕಾರ್ಯ ಕೈಗೊಂಡ ತಂಡವು ಈ ಪ್ರಕರಣದಲ್ಲಿ ಸುಮಾರು ಏಳು ಜನರು ಭಾಗಿಯಾಗಿರುವುದನ್ನು ಪತ್ತೆ ಹಚ್ಚಿ ಆರೋಪಿಗಳಾದ ಕುಶಾಲನಗರದ ಹಿಂದೂ ಜಾಗರಣಾ ವೇದಿಕೆಯ ಪದಾಧಿಕಾರಿಗಳಾದ ಹೆಚ್.ಆರ್.ಪಿ.ಕಾಲೋನಿ ಯ ಸಿ.ಎಸ್.ಮಧು, ಗುಡ್ಡೆಹೊಸೂರು ನಿವಾಸಿ ಉಮೇಶ್ ಮತ್ತು ಅವರ ಸಹಚರರಾದ ಕುಶಾಲನಗರದ ರವಿ ಆರ್, ಆಕಾಶ್ ಬಿ ಆರ್ ಮತ್ತು ಕೆ.ಆರ್.ಪೇಟೆಯ ಯೋಗೇಶ್ ಎಂಬವರನ್ನು ಡಿಸಿಐಬಿ ತಂಡವು ದಿನಾಂಕ 28/09/2016ರಂದು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕು ಹಾಗೂ ಕತ್ತಿಯನ್ನು ಆರೋಪಿಗಳಿಂದ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆ ಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಾದ ಚನ್ನಪಟ್ಟಣದ ಸೋಮಶೇಖರ ಮತ್ತು ಕೆ.ಆರ್.ಪೇಟೆಯ ನಟರಾಜ ಎಂಬವರನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.

                 ಬಂಧಿತ ಆರೋಪಿಗಳ ವಿಚಾರಣೆ ನಡೆಸಿದಾಗ ಮಧು ಹಾಗೂ ಉಮೇಶ್ ರವರು ಪ್ರಚೋದನೆ ನೀಡಿ ಉಳಿದ ಆರೋಪಿಗಳಿಗೆ ಹತ್ಯಾರುಗಳನ್ನು ಒದಗಿಸಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ತಿಳಿದು ಬಂದಿರುತ್ತದೆ. ಈ ರೀತಿ ಪ್ರಚೋದಿಸಿ ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯ ಕದಡುವ ವ್ಯಕ್ತಿಗಳನ್ನು ಬಂಧಿಸಿ ಪೊಲೀಸ್ ಇಲಾಖೆಯು ಈಗಾಗಲೇ ಕಠಿಣ ಕಾನೂನು ಕ್ರಮ ಜರುಗಿಸಿದ್ದು ಇನ್ನು ಮುಂದೆಯೂ ಈ ರೀತಿಯಾಗಿ ಸಮಾಜದ ಶಾಂತಿ ಕದಡುವ ವ್ಯಕ್ತಿಗಳ ಬಗ್ಗೆ ತಿಳಿದು ಬಂದಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಪೊಲೀಸ್ ಇಲಾಖೆಯು ಅಂತಹ ವ್ಯಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಜೇಂದ್ರ ಪ್ರಸಾದ್ ರವರು ಕೋರಿಕೊಂಡಿದ್ದಾರೆ.

               ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಬಿ.ಆರ್.ಲಿಂಗಪ್ಪನವರ ನೇತೃತ್ವದಲ್ಲಿ ಎಎಸ್ಐ ಹಮೀದ್, ಎನ್.ಟಿ.ತಮ್ಮಯ್ಯ, ಅನಿಲ್ ಕುಮಾರ್, ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ಕೆ.ಆರ್.ವಸಂತ, ಶಶಿಕುಮಾರ್, ಮಹೇಶ್, ರಾಜೇಶ್ ಮತ್ತು ಗಿರೀಶ್ ರವರು ಭಾಗವಹಿಸಿದ್ದು ತನಿಖಾ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ರೂ. 20,000/- ಬಹುಮಾನ ಘೋಷಿಸಿರುತ್ತಾರೆ. 

ಪೊಲೀಸ್ ದಾಳಿ ಅಕ್ರಮ ಗಾಂಜಾ ವಶ:

       ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ರವರ ಮಾರ್ಗದರ್ಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗ ಪೊಲೀಸ್ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪನವರು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಅಕ್ರಮವಾಗಿ ವಾಹನಗಳಲ್ಲಿ ಗಂಜಾವನ್ನು ಸಾಗಾಟ ಮಾಡುತ್ತಿದ್ದವನ್ನು ಪತ್ತೆಹಚ್ಚಿರುತ್ತಾರೆ.

      ವಿರಾಜಪೇಟೆಯಿಂದ ಮೂರ್ನಾಡಿಗೆ ಅಕ್ರಮವಾಗಿ ಮಾದಕ ವಸ್ತುವಾದ ಗಂಜಾವನ್ನು ಮಾಟಾಟ ಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ವಾಹನಗಳಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಆದಾರದ ಮೇರೆಗೆ ದಿನಾಂಕ 29-9-2016 ರಂದು ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ಬಿ.ಆರ್. ಲಿಂಗಪ್ಪ ಹಾಗು ಸಿಬ್ಬಂದಿಗಳು ಮೂರ್ನಾಡಿನ ಗೌಡ ಸಮಾಜದ ಬಳಿ ದಾಳಿ ಮಾಡಿ ಆರೋಪಿಗಳಿಂದ ಸುಮಾರು ರೂ.3,50,000/- ದಷ್ಟು ಭಾರೀ ಮಾರುಕಟ್ಟೆ ಬೆಲೆಯ  3 ಕೆ.ಜಿ. 900 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ 1 ಲಕ್ಷ ರೂ ಮೌಲ್ಯದ  ಮಾರುತಿ-800 ಕಾರು ಸಂಖ್ಯೆ:ಕೆಎ-05 ಎಂಎ-4862, ಮತ್ತು ರೂ 50 ಸಾವಿರ ಮೌಲ್ಯದ ಮೋಟಾರ್ ಸೈಕಲ್ ಸಂಖ್ಯೆ:ಕೆಎ-12 ಜೆ-203ರನ್ನು ವಶಕ್ಕೆ ಪಡೆದು ಆರೋಪಿಗಳಾದ    ವಿರಾಜಪೇಟೆ ನಗರದ ನಿವಾಸಿಗಳಾದ ಇಲಿಯಾಜ್ ಆಹಮ್ಮದ್, ಕೆ.ಹೆಚ್. ಸತ್ತಾರ್, ಉದಯ @ ಉಮ್ಮರ್, ಸಮೀರ್, ಎಸ್.ಎಂ. ಮಹಮ್ಮದ್ ತಾರೀಫ್ ಮತ್ತು ಹೊಳೆನರಸಿಪುರದ ಹಮೀರ್ ಪಾಶಾ ರವರುಗಳನ್ನು ರವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

       ಕಾರ್ಯಾಚರಣೆಯಲ್ಲಿ ಡಿಸಿಐಬಿ ವಿಭಾಗದ ಪೊಲೀಸ್ ನಿರೀಕ್ಷಕರ ಬಿ.ಆರ್. ಲಿಂಗಪ್ಪ, ಎಎಸ್ಐ ಹಮೀದ್, ಸಿಬ್ಬಂದಿಗಳಾದ ಎನ್.ಟಿ. ತಮ್ಮಯ್ಯ, ಬಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಎಂ.ಎನ್, ನಿರಂಜನ್ ಮತ್ತು ಕೆ.ಆರ್. ವಸಂತರವರುಗಳು ಭಾಗಿಯಾಗಿದ್ದು ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ರವರು ನಗದು ಬಹುಮಾನ ಘೋಷಿಸಿರುತ್ತಾರೆ. 
 
              ಇತ್ತೀಚೆಗೆ  ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು ಆರೋಗ್ಯ ಮತ್ತು ವಿದ್ಯಾಭ್ಯಾಸಗಳಲ್ಲಿ ನಿರುತ್ಸಾಹ ತೋರುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಿ ಧಾಳಿಗಳನ್ನು ನಡೆಸಿ ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದ್ದು,  ಸಾರ್ವಜನಿಕರೂ ಸಹಾ ಅಕ್ರಮ ಮಾದಕ ವಸ್ತುಗಳ ಸಂಗ್ರಹಣೆ ಮತ್ತು ಮಾರಾಟದ ಬಗ್ಗೆ ಯಾವುದಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪಿ.ರಾಜೇಂದ್ರ ಪ್ರಸಾದ್ ರವರು ಮನವಿ ಮಾಡಿಕೊಂಡಿರುತ್ತಾರೆ.

 ಮನೆ ಕಳ್ಳತನ

                       ಮನೆಯ ಬಾಗಿಲು ಮುರಿದು ನಗದು ಹಣವನ್ನು ಕಳವು ಮಾಡಿದ ಪ್ರಕರಣ ವಿರಾಜಪೇಟೆ ಬಳಿಯ ಪೆರುಂಬಾಡಿಯಲ್ಲಿ ನಡೆದಿದೆ. ದಿನಾಂಕ 27-09-2016 ರಂದು ಪೆರುಂಬಾಡಿ ನಿವಾಸಿ ಸಾಜಿದಾ ಪಿ ಎಂ ಎಂಬ ಮಹಿಳೆಯು ಮಕ್ಕಳೊಂದಿಗೆ ಮನೆಗೆ ಬೀಗ ಹಾಕಿಕೊಂಡು ಅಮ್ಮತ್ತಿಗೆ ಹೋಗಿದ್ದು ದಿನಾಂಕ 29-09-2016 ರಂದು ಮನೆಗೆ ಬಂದಾಗ ಮನೆಯ ಹಿಂಬಾಗಿಲು ತೆರೆದಿದ್ದು ಸಂಶಯ ಬಂದು ಒಳಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯೊಳಗೆ ಪ್ರವೇಶಿಸಿ ಮಲಗುವ ಕೋಣೆಯಲ್ಲಿ ಕುರಾನ್ ಪುಸ್ತಕದೊಳಗೆ ಇಟ್ಟಿದ್ದ ರೂ 10 ಸಾವಿರ ನಗದನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

                 ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಬಳಿಯ ನಾಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 29-09-2016 ರಂದು ನಾಂಗಾಲ ನಿವಾಸಿ ಲಕ್ಷ್ಮಿ ಎಂಬುವವರ ತಂದೆ ನಂಜುಂಡೇಗೌಡ ಎಂಬವರು ರಾತ್ರಿ ವೇಳೆ ಮನೆಯ ಹೊರಗಡೆ ಕಟ್ಟೆಯಲ್ಲಿ ವಿಷ ಪದಾಥಱವನ್ನು ಸೇವಿಸಿದ್ದು ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ನಂಜುಂಡೇಗೌಡರು ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದ್ದು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

Thursday, September 29, 2016

ಯುವತಿ ಕಾಣೆ, ಪ್ರಕರಣ ದಾಖಲು:

     ಮಡಿಕೇರಿ ತಾಲೋಕು ಕೆ.ನಿಡುಗಣೆ ಗ್ರಾಮದ ನಿವಾಸಿ ನಾಪಂಡ ಪಿ. ತಿಮ್ಮಯ್ಯ ಎಂಬವರ ಮಗಳು ಪ್ರಾಯ 24 ವರ್ಷದ ಕುಮಾರಿ ಪೂನಂ ಎಂಬ ಯುವತಿ ದಿನಾಂಕ 28-9-2016 ರಂದು ತಮ್ಮ ಮನೆಯಲ್ಲಿದ್ದು, ರಾತ್ರಿ ಸಮಯ 11-00 ಗಂಟೆ ಸಮಯದಲ್ಲಿ ಮನೆಯಿಂದ ಹೋರಗೆ ಹೋಗಿದ್ದು ಕಾಣೆಯಾಗಿರುವುದಾಗಿ ಫಿರ್ಯಾದಿ ನಾಪಂಡ ಪಿ. ತಿಮ್ಮಯ್ಯರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, September 28, 2016


ಮರಳು ಕಳ್ಳತನ
                ನಾಪೋಕ್ಲು ಪೊಲೀಸ್ ಠಾಣಾಧಿಕಾರಿಯವರಾದ ಬಿ. ಎಸ್. ವೆಂಕಟೇಶ್ ಮತ್ತು ಸಿಬ್ಬಂದಿಯವರು ದಿನಾಂಕ 27-08-2016 ರಂದು ಕಕ್ಕಬ್ಬೆ ಹೊಳೆಯಿಂದ ಕಬ್ಬಿಣದ ತೆಪ್ಪ ಬಳಸಿ ಕುಂಜಿಲ ಗ್ರಾಮದ ಮಹಮ್ಮದಾಲಿ ಎಂಬುವವರು ಮರಳು ತೆಗೆದು ಕಳ್ಳತನ ಮಾಡುತ್ತಿರುವಾಗ ದಾಳಿ ನಡೆಸಿದಾದ ಆರೋಪಿಯು ಓಡಿ ಹೋಗಿದ್ದು ಮರಳು ತೆಗೆಯಲು ಉಪಯೋಗಿಸಿದ ತೆಪ್ಪವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಿಷ ಸೇವಿಸಿ ವಿಧ್ಯಾರ್ಥಿ ಆತ್ಮಹತ್ಯೆ 
                 ತ್ಯಾಗತ್ತೂರು ಗ್ರಾಮದ ರಾಜೇಶ್ವರಿ ಎಂಬುವವರ ಮಗನಾದ 15 ವರ್ಷ ರಾಜಪಾಂಡಿ ಎಂಬುವವನು ಹೊಟ್ಟೆ ನೋವಿನಿಂದ ನರಳುತ್ತಿದ್ದು ದಿನಾಂಕ 19-08-2016 ವಿಷ ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಈ ದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಕಾರಿಗೆ ಬಸ್ಸು ಡಿಕ್ಕಿ
                  ಚಿರಾಟ್ಟ ಚಿಟ್ಟಾರಿ ಕಡವು ಕಣ್ಣೂರು ಜಿಲ್ಲೆ, ಕೇರಳ ರಾಜ್ಯದ ಜಂಶೀರ್‌ ಎಂಬುವವರು ತನ್ನ ಸ್ನೇಹಿತರಾದ ಮುಫ್‌ಶೀರ್‌, ಸಾಜೀರ್‌ , ಇಸ್ಮಾಹಿಲ್‌, ಅಸ್ಕರ್‌ ಎಂಬುವವರೊಂದಿಗೆ ಕೊಡಗಿಗೆ ಪ್ರವಾಸ ಬಂದಿದ್ದು ಈ ದಿನ ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಟೈಗರ್‌ ಹಿಲ್‌ ರೆಸಾರ್ಟ್‌ ಬಳಿ ಎದುರುಗಡೆಯಿಂದ ಕೆಎ-18-ಎಫ್‌-493 ರ ಕೆ.ಎಸ್‌.ಆರ್‌.ಟಿ.ಸಿ ಬಸ್ಸನ್ನು ಅದರ ಲಕ್ಷ್ಮಿಶ್‌ರವರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದವರಿಗೆಲ್ಲರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ
                       ಕುಶಾಲನಗರದ ಒಂಕಾರ ಬಡಾವಣೆಯ ನಿವಾಸಿಯಾದ ಪುಟ್ಟಸ್ವಾಮಿ ಎಂಬುವವರು ತನ್ನ ಸ್ನೇಹಿತ ಸತೀಶ ಎಂಬವರನ್ನು ಕುಶಾಲನಗರದಿಂದ ಅವರ ಮನೆಗೆ ಸೋಮವಾರಪೇಟೆಗೆ ಬಿಟ್ಟು ಬರಲು ತಮ್ಮ ಬಾಪ್ತು ಮೋಟಾರು ಸೈಕಲಿನಲ್ಲಿ ಕೂಡಿಗೆ ಮಾರ್ಗವಾಗಿ ಹೋಗುತ್ತಿರುವಾಗ ಮದಲಾಪುರದ 5ನೇ ಮೈಲ್ ಕಲ್ಲು ಸರ್ಕಲ್ ಬಳಿ ತಲುಪುವಾಗ್ಗೆ ಸಮಯ ರಾತ್ರಿ ಸುಮಾರು 10.00 ಗಂಟೆಗೆ ಮೋಟಾರು ಸೈಕಲಿನಲ್ಲಿ ಪೆಟ್ರೋಲ್ ಖಾಲಿಯಾಗಿ ನಿಂತು ಹೋಗಿ ರಸ್ತೆ ಬದಿಯಲ್ಲಿ ನಿಂತಿರುವಾಗ್ಗೆ ಸೋಮವಾರಪೇಟೆ ಕಡೆಯಿಂದ KA12 Q 3129 ರ ಸ್ಕೂಟರಿನಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ರವಿ ಎಂಬವರೊಂದಿಗೆ ಮದಲಾಪುರದ ವಾಸಿ ಲೋಕೇಶ್ ಎಂಬವರು ಪುಟ್ಟಸ್ವಾಮಿಯವರೊಂದಿಗೆ ಜಗಳ ತೆಗೆದು ಸೂಳೆ ಮಕ್ಕಳೆ ರಾತ್ರಿ ನಿಮಗೇನು ಕೆಲಸ ಎಂದು ಅವ್ಯಾಚ್ಯ ಶಬ್ಧಗಳಿಂದ ಬೈಯ್ದು ಕೈಯ್ಯಲ್ಲಿದ್ದ ಕತ್ತಿಯಿಂದ ಸತೀಶ್ ರವರ ಮೇಲೆ ಹಲ್ಲೆ ಮಾಡಿ ಪುಟ್ಟಸ್ವಾಮಿಯವರನ್ನು ಕಾಲಿನಿಂದ ಒದ್ದು ನೋವುಂಟುಪಡಿಸಿದ್ದು ಈ ಬಗ್ಗೆ ನೀಡಿದ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಪಾದಾಚಾರಿಗೆ ಬೈಕ್ ಡಿಕ್ಕಿ
                    ಹೆಬ್ಬಾಲೆ ಗ್ರಾಮದ ಶ್ರೀಮತಿ ವೃಷಭಾವತಿ ಎಂಬವರು ಬೆಳಿಗ್ಗೆ 05.30 ಗಂಟೆಗೆ ತಮ್ಮ ಸಂಗಡಿಗರೊಂದಿಗೆ ಮುಖ್ಯ ರಸ್ತೆಯಲ್ಲಿ ಹೆಬ್ಬಾಲೆ ಕಡೆಯಿಂದ ಕೂಡಿಗೆ ಕಡೆಗೆ ವಾಕಿಂಗ್ ಹೋಗುತ್ತಿದ್ದಾಗ ಹುಲುಸೆ ಗ್ರಾಮದ ಹತ್ತಿರ ತಲುಪುವಾಗ ಹಿಂಬಾಗದಿಂದ ಬಂದ ಕೆಎ 13 ಇಬಿ 2616 ರ ಮೋಟಾರು ಸೈಕಲಿನ ಸವಾರನು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ವೃಷಭಾವತಿಯವರಿಗೆ ಡಿಕ್ಕಿಪಡಿಸಿ ತಲೆಗೆ ಜಖಂಪಡಿಸಿ ನಿಲ್ಲಿಸದೆ ಹೊರಟು ಹೋಗಿದ್ದು ನಂತರ ತಿಳಿಯಲಾಗಿ ಡಿಕ್ಕಿಪಡಿಸಿದ ಮೋಟಾರು ಸೈಕಲ್ ಸವಾರ ಕೊಣನೂರಿನ ಕಾಡನೂರು ಗ್ರಾಮದ ಕೆ.ಕೆ.ಜಗಧೀಶ್ ಎಂಬುವವರಾಗಿದ್ದು ಪಿರ್ಯಾದಿಯವರ ತಮ್ಮ ಸತೀಶ್ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Tuesday, September 27, 2016

ಸಾಂಸಾರಿಕ ಜಗಳ ವ್ಯಕ್ತಿ ಮೇಲೆ ಹಲ್ಲೆ:
 
    ಕುಶಾಲನಗರ ಠಾಣಾ ಸರಹದ್ದಿನ ಕಾಳಮ್ಮ ಕಾಲೋನಿಯಲ್ಲಿ ವಾಸವಾಗಿರುವ ಫಿರ್ಯಾದಿ ಶ್ರೀನಿವಾಸ  ಎಂಬವರ ಸಂಸಾರದಲ್ಲಿ ಜಗಳವಾಗಿದ್ದು, ಇದಕ್ಕೆ ಅವರ ಪಕ್ಕದ ಮನೆಯವರಾದ ವೆಂಕಟೇಶ ಮತ್ತು ಕಾರಣವಾಗಿದ್ದು ಶ್ರೀನಿವಾಸ ಮತ್ತು ವೆಂಕಟೇಶನವರ ನಡುವೆ ಮನಸ್ತಾಪವಿದ್ದು, ದಿನಾಂಕ 24-9-2016  ರಂದು ಟಿ.ವಿ. ವಿಚಾರದಲ್ಲಿ  ಇಬ್ಬರ ನಡುವೆ ಜಗಳವಾಗಿದ್ದು ಆರೋಪಿಗಳಾದ ವೆಂಕಟೇಶ, ದರ್ಮರಾಜ್, ಸಂಜಯ, ತಿಮ್ಮ ಮತ್ತು ಸಣ್ಣಿ ಸೇರಿ ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಮನೆ ಬೀಗ ಮುರಿದು ಕಳವು:
 
     ಮನೆಯ ಬಾಗಿಲಿನ ಲಾಕ್ ನ್ನು ಮುರಿದು ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.  ಕುಶಾಲನಗರ ಠಾಣಾ ಸರದದ್ದಿನ ಶಿವರಾಮಕಾರಂತ ಬಡಾವಣೆಯ ನಿವಾಸಿ ವಿ.ಎನ್. ಗಿರೀಶ್ ಎಂಬವರು ದಿನಾಂಕ 24-9-2016 ರಂದು ಕೂಡಿಗೆ ಗ್ರಾಮಕ್ಕೆ ಶುಂಠಿ ಕೆಲಸಕ್ಕೆಂದು ಹೋಗಿದ್ದು ಅದೇ ಸಂದರ್ಭದಲ್ಲಿ ಯಾರೋ ಕಳ್ಳರು ಅವರ ಮನೆಯ ಮುಂದಿನ ಬಾಗಿಲಿಗೆ ಹಾಕಿದ ಸೆಂಟರ್ ಲಾಕ್ ನ್ನು ಮುರಿದು ಮನೆಯೊಳಗಿಂದ ಻ಂದಾಜು 24,000 ರೂ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿಯ ಸಾಮಾಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಮಹಿಳೆಗೆ ಬೈಕ್ ಡಿಕ್ಕಿ:
 
     ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ.  ಶನಿವಾರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ಶನಿವಾರಸಂತೆ ನಗರದಲ್ಲಿ ಶ್ರೀಮತಿ ಕಾಳಮ್ಮ ಎಂಬವರು ತಳ್ಳುಗಾಡಿಯಲ್ಲಿ ತರಕಾರಿ ಮತ್ತು ತಿಂಡಿಯನ್ನು ವ್ಯಾಪಾರಮಾಡಿಕೊಂಡಿದ್ದು, ದಿನಾಂಕ 26-9-2016 ರಂದು  ತಮ್ಮ ಅಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ವಾಸು ಎಂಬ ವ್ಯಕ್ತಿ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶ್ರೀಮತಿ ಕಾಳಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿಯವರು ಗಾಯಗೊಂಡಿದ್ದು, ಶನಿವಾರಸಂತೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
 
 
 
 

Monday, September 26, 2016


ಸರಕಳ್ಳತನ ಪ್ರಕರಣ
                   ಬಸ್‌ ಹತ್ತುತ್ತಿದ್ದ ಮಹಿಳೆಯೊಬ್ಬರ ಕುತ್ತಿಗೆಯಿಂದ ಅಪರಿಚಿತನೊಬ್ಬ ಚಿನ್ನದ ಸರವನ್ನು ಕಿತ್ತುಕೊಂಡಿರುವ ಪ್ರಕರಣ ಸಿದ್ದಾಪುರದಲ್ಲಿ ನಡೆದಿದೆ. ದಿನಾಂಕ 25/09/2016ರಂದು ಇಂಜಿಲಗೆರೆ ನಿವಾಸಿ ಕೌಸಲ್ಯ ವಿ.ಕೆ. ಎಂಬವರು ಸಿದ್ದಾಪುರ ನಗರಕ್ಕೆ ಬಂದು ಸಂತೆಯಲ್ಲಿ ವ್ಯಾಪಾರ ಮುಗಿಸಿ ಮರಳಿ ಇಂಜಿಲಗೆರೆಗೆ ಹೋಗಲು ಸಿದ್ದಾಪುರ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತುತ್ತಿರುವಾಗ ಹಿಂಬದಿಯಿಂದ ಯಾರೋ ಅಪರಿಚಿತ ವ್ಯಕ್ತಿ ಕೌಸಲ್ಯರವರ ಕುತ್ತಿಗೆಯಲ್ಲಿದ್ದ ಸುಮಾರು ರೂ.70,000/- ಬೆಲೆ ಬಾಳುವ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಲಹ; ಶಾಂತಿ ಭಂಗ
                 ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಜಗಳವಾಡಿ ಶಾಂತಿ ಭಂಗ ಮಾಡುತ್ತಿದ್ದ ಪ್ರಕರಣ ಗೋಣಿಕೊಪ್ಪ ನಗರದಲ್ಲಿ ನಡೆದಿದೆ. ದಿನಾಂಕ 25/09/2016ರಂದು ಗೋಣಿಕೊಪ್ಪ ಠಾಣಾ ಪಿಎಸ್‌ಐ ಗೋವಿಂದರಾಜುರವರು ನಗರ ಗಸ್ತು ಕರ್ತವ್ಯದಲ್ಲಿರುವಾಗ ನಗರದ ಪ್ಯಾರಗಾನ್‌ ಬೇಕರಿ ಬಳಿ ಗೋಣಿಕೊಪ್ಪ ನಿವಾಸಿ ನೈಜು ಪಿ.ಕೆ. , ಟಿ.ಎ.ಜೋಯಿ ಮತ್ತು ಭದ್ರಗೊಳ ನಿವಾಸಿ ಟಿ.ಎ.ಸಾಜಿ ಥೋಮಸ್‌ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಕೈ ಮಿಲಾಯಿಸಿಕೊಂಡು ಜಗಳವಾಡುತ್ತಾ ಸಾರ್ವಜನಿಕ ಶಾಂತಿ ಭಂಗ ಉಂಟು ಮಾಡುತ್ತಿದ್ದುದಾಗಿ ಅವರುಗಳ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

                     ತೋಟದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ಬಳಿಯ ಅಮ್ಮತ್ತಿ ಕಾರ್ಮಾಡು ಗ್ರಾಮದಲ್ಲಿ ನಡೆದಿದೆ. ಅಮ್ಮತ್ತಿ ಕಾರ್ಮಾಡು ನಿವಾಸಿ ತಿಮ್ಮಯ್ಯ ಯಾನೆ ಪಟ್ಟು ಎಂಬ ವ್ಯಕ್ತಿಯು ವಿಪರೀತ ಮದ್ಯಪಾನ ಮಾಡುವ ಚಟವಿದ್ದು ಅದನ್ನು ಪತ್ನಿ ಶೋಭರವರು ಆಕ್ಷೇಪಿಸುತ್ತಿದ್ದರೆನ್ನಲಾಗಿದ್ದು, ದಿನಾಂಕ 24/09/2016ರಂದು ಮದ್ಯಪಾನ ಮಾಡಿ ಬಂದ ಕಾರಣಕ್ಕೆ ಪತ್ನಿ ಆಕ್ಷೇಪಿಸಿದ್ದು ತಿಮ್ಮಯ್ಯನವರು ಸಂಜೆ ಮನೆಯಿಂದ ಹೋದವರು ಮರಳಿ ಬಾರದಿದ್ದು ದಿನಾಂಕ 25/09/2016ರಂದು ನೆರೆಯವರಾದ ಮಿಟ್ಟು ತಿಮ್ಮಯ್ಯ ಎಂಬವರ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸ್ಕೂಟರ್‌ಗೆ ಕಾರು ಡಿಕ್ಕಿ
                 ಸ್ಕೂಟರ್‌ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್‌ ಸವಾರನಿಗೆ ಗಾಯಗಳಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 25/09/2016ರಂದು ವಿರಾಜಪೇಟೆಯ ಸಿಲ್ವ ನಗರದ ನಿವಾಸಿ ಮೊಹಮದ್ ಸಫ್ವಾನ್‌ ಎಂಬವರು ಅವರ ಸ್ಕೂಟರ್‌ ಸಂಖ್ಯೆ ಕೆಎ-12-ಕ್ಯು-6589ರಲ್ಲಿ ಸ್ನೇಹಿತ ಫೈರೋಜ್‌ ಎಂಬವರೊಂದಿಗೆ ಬಿಟ್ಟಂಗಾಲ ಕಡೆಗೆ ಹೋಗುತ್ತಿರುವಾಗ ನಗರದ ಪಂಜರ್‌ಪೇಟೆಯ ನಿಸರ್ಗ ಲೇಔಟ್‌ ಬಳಿ ಎದುರುಗಡೆಯಿಂದ ಕೆಎ-21-ಎಂ-3026ರ ಮಾರುತಿ ಕಾರನ್ನು ಅದರ ಚಾಲಕ ಫೈರೋಜ್‌ ಬಾಷಾ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಮೊಹಮದ್ ಸಫ್ವಾನ್‌ರವರ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್‌ ಜಖಂಗೊಂಡಿದ್ದು ಮೊಹಮದ್ ಸಫ್ವಾನ್‌ ಹಾಗೂ ಹಿಂಬದಿ ಸವಾರ ಫೈರೋಜ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
                  ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ನಡೆದಿದೆ. ದಿನಾಂಕ 25/09/2016ರಂದು ಸಂಜೆ ಮಂಗಳಾ ದೇವಿ ನಗರದ ನಿವಾಸಿ ಬಾಲಕೃಷ್ಣ ಎಂಬವರು ಮನೆಯ ಹಾಲ್‌ನಲ್ಲಿ ಫ್ಯಾನಿಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಪತ್ನಿ ತೀರಿಕೊಂಡ ವಿಚಾರಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ನೀಡಲಾದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ, ಕೊಲೆ ಯತ್ನ
                          ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಘಟನೆ ಕುಶಾಲನಗರ ಬಳಿಯ ಬಾಳುಗೋಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 25/09/2016ರಂದು ಸಿದ್ದಾಪುರ ನಿವಾಸಿ ಲಾರೆನ್ಸ್‌ ಎಂಬವರು ಅವರ ತಮ್ಮನ ಪತ್ನಿ ಮತ್ತು ಮಕ್ಕಳೊಂದಿಗೆ ಅವರ ರಿಕ್ಷಾದಲ್ಲಿ ಪಾಂಡವಪುರದಿಂದ ಸಿದ್ದಾಪುರಕ್ಕೆ ಬರುತ್ತಿರುವಾಗ ರಾತ್ರಿ ವೇಳೆ ಬಾಳುಗೋಡು ಬಳಿ ರಿಕ್ಷಾ ಕೆಟ್ಟಿದ್ದು ಈ ಬಗ್ಗೆ ಲಾರೆನ್ಸ್‌ರವರು ಅವರ ಅಣ್ಣನಿಗೆ ಫೋನ್‌ ಮೂಲಕ ತಿಳಿಸಿ ಕಾಯುತ್ತಿರುವಾಗ ಸಿಎಪಿ 5756ರ ಮಾರುತಿ ವ್ಯಾನಿನಲ್ಲಿ ಬಂದ ಸುಜ, ಚೇತನ್‌, ಮಣಿ, ಅಪ್ಪು ಮತ್ತು ಇತರರು ವ್ಯಾನನ್ನು ನಿಲ್ಲಿಸಿ ರಿಕ್ಷಾದಲ್ಲಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು ಲಾರೆನಸ್‌ರವರು ಅವರನ್ನು ಆಕ್ಷೇಪಿಸಿದ್ದು ಆ ಸಮಯಕ್ಕೆ ಅಲ್ಲಿಗೆ ಎರಡು ಬೈಕುಗಳಲ್ಲಿ ಕೆಲವು ವ್ಯಕ್ತಿಗಳು ಬಂದರೆನ್ನಲಾಗಿದೆ. ಅಷ್ಟರಲ್ಲಿ ಸಿದ್ದಾಪುರ ಕಡೆಯಿಂದ ಆಗಸ್ಟಿನ್‌ ಮತ್ತು ಫ್ರಾನ್ಸಿಸ್ ಎಂಬವರು ಬೊಲೆರೋ ಜೀಪಿನಲ್ಲಿ ಬಂದು ಲಾರೆನ್ಸ್‌ರವರ ಬಳಿ ಬರುತ್ತಿರುವಾಗ ಆರೋಪಿಗಳು ಅವರುಗಳ ಮೇಲೆ ಕಬ್ಬಿಣದ ರಾಡು ಮತ್ತು ಮರದ ದೊಣ್ಣೆಗಳಿಂದ ತೀವ್ರವಾಗಿ ಹೊಡೆದು ಕೊಲೆಯತ್ನ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, September 25, 2016

ಆತ್ಮಹತ್ಯೆ ಪ್ರಕರಣ

                  ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಠಾಣೆ ವ್ಯಾಪ್ತಿಯಲ್ಲಿ ದಂಪತಿಗಳ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿದ್ದು ಮೃತರ ಪೈಕಿ ಮಹಿಳೆಗೆ ಸಂಬಂಧಿಸಿದ ವಾರೀಸುದಾರರು ಯಾರಾದರೂ ಜಿಲ್ಲೆಯಲ್ಲಿದ್ದರೆ ಹೊಸೂರು ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಪ್ರಕರಣದ ವಿವರ ಇಂತಿದೆ. ಹೊಸೂರು ನಗರದ ಅಣ್ಣಾನಗರದ ನಿವಾಸಿಯಾಗಿದ್ದ ನಂದಕುಮಾರ್‌ ಮತ್ತು ಅವರ ಪತ್ನಿ ಸುಶೀಲಾ ಯಾನೆ ಗೌರಮ್ಮ ಎಂಬ ದಂಪತಿಗಳು ದಿನಾಂಕ 16/09/2016ರಂದು ಹೊಸೂರಿನ ಕೃಷ್ಣಪ್ಪನಗರದ ಬಳಿ ರೈಲ್ವೇ ಹಳಿಯ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪೈಕಿ ಸುಶೀಲಾರವರ ವಾರೀಸುದಾರರು ಪತ್ತೆಯಾಗಿರುವುದಿಲ್ಲವೆಂದು ತಿಳಿದು ಬಂದಿರುತ್ತದೆ. ಆದ್ದರಿಂದ ಸದ್ರಿ ಮಹಿಳೆಯ ಸಂಬಂಧಿಕರು ಯಾರಾದರೂ ಕೊಡಗು ಜಿಲ್ಲೆಯಲ್ಲಿದ್ದಲ್ಲಿ ಹೊಸೂರು ಠಾಣಾಧಿಕಾರಿಗಳನ್ನು ದೂರವಾಣಿ ಸಂಖ್ಯೆ 04344222634  ರಲ್ಲಿ ಸಂಪರ್ಕಿಸುವಂತೆ  ಕೋರಲಾಗಿದೆ. 

ಮರಕ್ಕೆ ಜೀಪು ಡಿಕ್ಕಿ
                     ಚಾಲಕನ ನಿಯಂತ್ರಣ ತಪ್ಪಿ ಜೀಪೊಂದು ಮರಕ್ಕೆ ಡಿಕ್ಕಿಯಾದ ಘಟನೆ ಮಡಿಕೇರಿ ಬಳಿಯ ಕತ್ತಲೆ ಕಾಡು ಎಂಬಲ್ಲಿ ನಡೆದಿದೆ. ಮರಗೋಡು ನಿವಾಸಿ ಪುರುಷೋತ್ತಮ ಎಂಬವರ ಪಿಕ್‌ಅಪ್‌ ಜೀಪು ಸಂಖ್ಯೆ ಕೆಎ-12-ಬಿ-0074ರ ಚಾಲಕ ಹೇಮಂತ್‌ ಎಂಬಾತನು ದಿನಾಂಕ 22/09/2016ರಂದು ಕಡಗದಾಳು ಬಳಿಯ ಕತ್ತಲೆಕಾಡಿಗೆ ಜೀಪನ್ನು ತೆಗೆದುಕೊಂಡು ಹೋಗಿದ್ದು  ಕತ್ತಲೆಕಾಡಿನ ಬಳಿ ದನ ಅಡ್ಡ ಬಂತೆಂದು ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೀಪು ಆತನ ನಿಯಂತ್ರಣ ತಪ್ಪಿ ರಸ್ತೆ ಬದಿ ಇದ್ದ ಸಿಲ್ವರ್‌ ಮರದ ದಿಮ್ಮಿಗೆ ಡಿಕ್ಕಿಯಾದ ಪರಿಣಾಮ ಜೀಪಿಗೆ  ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಪಾದಚಾರಿಗೆ ಕಾರು ಡಿಕ್ಕಿ
                     ಪಾದಚಾರಿ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿಯಾದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 24/09/2016ರಂದು ವಿರಾಜಪೇಟೆಯ ಶಾಂತಿನಗರ ನಿವಾಸಿ ಶ್ರೀಮತಿ ಸಪೂರಾ ಎಂಬಾಕೆಯು ನಗರದ ಸರ್ಕಾರಿ ಬಸ್‌ ನಿಲ್ದಾನದ ಬಳಿ ರಸ್ತೆಯನ್ನು ದಾಟುತ್ತಿರುವಾಗ ದೊಡ್ಡಟ್ಟಿ ಚೌಕಿಯ ಕಡೆಯಿಂದ ಕೆಎ-03-ಎಂಡಿ-2301ರ ಆಲ್ಟೋ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಸಪೂರಾರವರಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೆ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 24, 2016

ಲಾರಿ ಡಿಕ್ಕಿ ವ್ಯಕ್ತಿ ದುರ್ಮರಣ: 
 
     ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಡಿಕ್ಕಿಯಾಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ದಿನಾಂಕ 23-09-2016 ರಂದು ಮಯ 12-35 ಪಿಎಂ ಗೆ ಕುಶಾಲನಗರದ ನಿವಾಸಿ ತಮ್ಮಯ್ಯ ಎಂಬವರು ಕುಶಾಲನಗರದ ಐಬಿ ಜಂಕ್ಷನ್ ನಿಂದ ಟಾಪ್ಕೊ ಜ್ಯೂವೆಲರಿ ಅಂಗಡಿ ಕಡೆ ರಸ್ತೆ ದಾಟುತ್ತಿರುವಾಗ ಮೈಸೂರು ಕಡೆಯಿಂದ ಒಂದು ಈಚರ್ ಮಿನಿ ಲಾರಿ ನಂ ಕೆ 12 ಎ 553 ಲಾರಿಯನ್ನು ಅದರ ಚಾಲಕ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ತಮ್ಮಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ತಮ್ಮಯ್ಯನವರು ಗಂಬೀರವಾಗಿ ಗಾಯಗೊಂಡು ಅವರನ್ನು ಚಿಕಿತ್ಸೆ ಬಗ್ಗೆ ಕುಶಾಲನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕತ್ಸೆ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದು ಸದರಿಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಕುಶಾಲನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಸ್ಕೂಟರಿಗೆ ಜೀಪು ಡಿಕ್ಕಿ ಮಹಿಳೆಗೆ ಗಾಯ:

     ಮಹಿಳೆಯೊಬ್ಬರು ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ಜೀಪೊಂದು ಡಿಕ್ಕಿಯಾಗಿ ಮಹಿಳೆ ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕ್ಲಬ್ ಮಹೇಂದ್ರ ಗೇಟಿನ ಮುಂದುಗಡೆ ದಿನಾಂಕ 23-9-2016 ರಂದು ರಾತ್ರಿ 8-50 ಗಂಟೆಗೆ ಕ್ಲಬ್ ಮಹೇಂದ್ರದ ಉದ್ಯೋಗಿಯಾಗಿರುವ ದಿಶಾ ರೈ ಎಂಬವರು ಕೆಲಸ ಮುಗಿಸಿಕೊಂಡು ತಮ್ಮ ಬಾಪ್ತು ಕೆಎ-12ಎಲ್-8518 ರ ಸ್ಕೂಟರ್ ನಲ್ಲಿ ಮಡಿಕೇರಿ ಕಡೆಗೆ ಹೋಗುವಾಗ ಕ್ಲಬ್ ಮಹೇಂದ್ರ ಗೇಟಿನ ಎದುರು ಮಡಿಕೇರಿ ಕಡೆಯಿಂದ ಕೆಎ-12ಝಡ್-4854 ರ ಜೀಪನ್ನು ಅದರ ಚಾಲಕನ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ದಿಶಾ ರೈ ರವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಅಕ್ರಮ ಲಾಟರಿ ಮಾಟಾಟ:
 
     ವ್ಯಕ್ತಿಯೊಬ್ಬರು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಆದಾರದ ಮೇರೆಗೆ ವಿರಾಜಪೇಟೆ ನಗರ ಠಾಣಾಧಿಕಾರಿಯವರು  ವಿರಾಜಪೇಟೆ ನಗರದ ತಾಲೋಕು ಕಚೇರಿ ಬಳಿ ಪರಿಶೀಲಿಸಿ ಅಪರಾಧವನ್ನು ಪತ್ತೆಹಚ್ಚುವ ಸಲುವಾಗಿ  ಮುಂಚಿತವಾಗಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 
ಬೈಕ್ ಕಳವು ಪ್ರಕರಣ ದಾಖಲು:
 
     ಮನೆಯ ಮುಂದೆ ನಿಲ್ಲಿಸಿದ್ದ ಬೈಕೊಂದನ್ನು ಕಳ್ಳರು ಕಳವು ಮಾಡಿದ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದಿದೆ.   ಫಿರ್ಯಾದಿ ಸಿ.ವಿ. ರಂಜಿತ್ ಎಂಬವರು ಎಮ್ಮೆಮಾಡು ಗ್ರಾಮದ ಹುಸೇನ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು  ದಿನಾಂಕ 22-9-2016 ರಂದು  ರಾತ್ರಿ ತಾನು ವಾಸವಾಗಿರುವ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದ್ದು, ಮಾರನೇ ದಿನ ಬೆಳಗ್ಗೆ  6-00 ಗಂಟೆ ಸಮಯದಲ್ಲಿ  ನೋಡಿದಾಗ ನಿಲ್ಲಿಸಿದ್ದ ಬೈಕ್ ಇಲ್ಲದೆ ಇದ್ದು, ರಾತ್ರಿ ರಯಾರೋ ಕಳ್ಳರು ಸದರಿ ಬೈಕನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Friday, September 23, 2016

ಚೀಟಿ  ವ್ಯವಹಾರ, ಸೈಟು ಕೊಡಿಸುವುದಾಗಿ ವಂಚನೆ: 

     ಚೀಟಿ ಹಣದ ವ್ಯವಹಾರದಲ್ಲಿ ಮನೆ ಸೈಟು ಕೊಡಿಸುವುದಾಗಿ ನಂಬಿಸಿ ವಂಚಿಸಿದ ಘಟನೆ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆ. ಬೋಯಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಎನ್. ಶಾಂತ ಎಂಬವರು ಅದೇ ಗ್ರಾಮದ ನಿವಾಸಿ ಗೌರಮ್ಮ ಎಂಬವರು ನಡೆಸುತ್ತಿದ್ದ ಚೀಟಿಗೆ ಸೇರಿದ್ದು, ಸದರಿ ಗೌರಮ್ಮನವರು ಚೀಟಿ ಹಣದಲ್ಲಿ ಸೈಟು ಕೊಡಿಸುವುದಾಗಿ ನಂಬಿಸಿ ಹಣ ಮತ್ತು ಚಿನ್ನಾಭರಣವನ್ನು ಪಡೆದು ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
    
     ಸಾರ್ವಜನಿಕರು ಯಾವುದೇ ಅನಧಿಕೃತ ಚೀಟಿ ವ್ಯವಹಾರ ಮತ್ತು ಯಾವುದೇ ರೀತಿಯ ಸ್ಕೀಂ ನಂತಹ ಹಣದ ವ್ಯವಹಾರದಲ್ಲಿ ತೊಡಗಿ ಮೋಸಹೋಗುವ ಸಾಧ್ಯತೆಗಳು ಇರುವುದರಿಂದ ಅಂತಹ ವಿಚಾರಗಳಲ್ಲಿ ಎಚ್ಚರಿಕೆಯಿಂದ ವ್ಯವಹರಿಸುವುದರಿಂದ ವಂಚನೆಗೊಳಗಾಗುವುದನ್ನು ತಪ್ಪಿಸಬಹುದಾಗಿದೆ.

ಹೆಂಗಸು ಕಾಣೆ:  

     ಆಸ್ಪತ್ರೆಗೆ  ಹೋದ ವೃದ್ದ ಮಹಿಳೆಯೊಬ್ಬರು ಕಾಣೆಯಾದ ಘಟನೆ ನಡೆದಿದೆ. ಶನಿವಾರಂತೆ ಠಾಣಾ ಸರಹದ್ದಿನ ಕೊಡ್ಲಪೇಟೆ ಗ್ರಾಮದ ದೇವರಾಜು ಎಂಬವರ ಅತ್ತೆ 70 ವರ್ಷ ಪ್ರಾಯದ ರುದ್ರಮ್ಮ ಎಂಬವರು ದಿನಾಂಕ 23-9-2016 ರಂದು ಮಂಡಿ ನೋವಿನ ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದು, ಮತ್ತೆ ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಫಿರ್ಯಾದಿ ದೇವರಾಜುರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಕಳ್ಳಬಟ್ಟಿ ತಯಾರಿಕೆ:

     ಅಕ್ರಮ ಕಳ್ಳಬಟ್ಟಿ ತಯಾರಿಕೆ ಮಾಡುತ್ತಿದ್ದ ವ್ಯಕ್ತಿ ಮನೆಗೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ ಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯೊಂದಿಗೆ ಈ ದಿನ ದಿನಾಂಕ 23-9-2016 ರಂದು 2-30 ಗಂಟೆಗೆ ಹೊಸಗುತ್ತಿ ಹೊಸಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ ಆಚಾರಿ ರವರ ಮನೆಗೆ ದಾಳಿ ಮಾಡಿ ವೆಂಕಟೇಶ್ ರವರು ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸುತ್ತಿದ್ದುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾರ್ ನಲ್ಲಿ ದಾಂದಲೆ:

     ಮದ್ಯ ಸೇವಿಸಲು ಬಂದ ಮೂವರು ವ್ಯಕ್ತಿಗಳು ಬಾರ್ ನಲ್ಲಿ ದಾಂದಲೆ ನಡೆಸಿ ಒಬ್ಬಾತನ  ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.  ಸೋಮವಾರಪೇಟೆ ನಗರದ ನಿವಾಸಿ ನಿಂಗರಾಜ್ ಎಂಬವರು ಟೆಕ್ಮಾಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವಾಗ್ಗೆ  ಸಂಜೆ 7-30 ಪಿ.ಎಂ.ಗೆ  ನೇಗಳ್ಳೆ ಗ್ರಾಮದ ಸಂತು ಹಾಗು ಕಂಬಳ್ಳಿ ಗ್ರಾಮದ ರವಿ ಮತ್ತು  ಚೌಡ್ಲು ಗ್ರಾಮದ ವಿನೋದ್ ರವರುಗಳು  ಮದ್ಯ ಸೇವನೆಗೆ ಬಾರ್ ಗೆ ಬಂದು  ಅವರ ನಡುವೆ ಜಗಳವಾಗಿ  ಸಂತು ಎಂಬವನು ವಿನೋದ್ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಬಾರ್ ನಲ್ಲಿದ್ದ ಮದ್ಯದ ಬಾಟಲಿಗಳನ್ನು ಮತ್ತು ಕುಡಿಯುವ ಗ್ಲಾಸ್ ಗಳನ್ನು ಒಡೆದುಹಾಕಿ ಅಂದಾಜು 12000 ರೂ.ಗಳಷ್ಟು ನಷ್ಟಪಡಿಸಿರುತ್ತಾರೆಂದು ಫಿರ್ಯಾದಿ ನಿಂಗರಾಜ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Thursday, September 22, 2016


ಕಾರಿಗೆ ಪಿಕ್‌ಅಪ್‌ ಡಿಕ್ಕಿ
                 ಕಾರಿಗೆ ಪಿಕ್‌ ಅಪ್‌ ಜೀಪೊಂದು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶನಿವಾರಸಂತೆ ಬಳಿಯ ಮಾಲಂಬಿಯಲ್ಲಿ ನಡೆದಿದೆ. ದಿನಾಂಕ 19/09/2016ರಂದು ಬೆಂಗಳೂರಿನ ನಾಯಂಡಹಳ್ಳಿ ನಿವಾಸಿ ಅಭಿXಷೇಕ್‌ ಎಂಬವರು ಅವರ ಕಾರು ಸಂಖ್ಯೆ ಕೆಎಲ್‌-58-ಕ್ಯು-1002 ರಲ್ಲಿ ಅವರ ಸ್ನೇಹಿತರಾದ ಪದ್ಮನಾಭ, ಶೀಲಾ, ಮಣಿ ಮತ್ತು ಗಣೇಶ ಎಂಬವರೊಂದಿಗೆ ಕೇರಳದಿಂದ ಶನಿವಾರಸಂತೆ ನಗರಕ್ಕೆ ಹೋಗುತ್ತಿರುವಾಗ ಮಾಲಂಬಿ ಬಳಿ ಎದುರುಗಡೆಯಿಂದ ಕೆಎ-05-ಎಡಿ-9668 ರ ಪಿಕ್‌ ಅಪ್‌ ಚಾಲಕ ಸುನಿಲ್‌ ಎಂಬಾತನು ಪಿಕ್‌ ಅಪ್‌ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಅಭಿಷೇಕ್‌ ರವರು ಚಾಲಿಸುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

                      ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಗರ್ವಾಲೆ ಗ್ರಾಮದಲ್ಲಿ ನಡೆದಿದೆ. ದಿನಾಂಕಲ 21/09/2016ರಂದು ಗರ್ವಾಲೆ ನಿವಾಸಿ ಸುಬ್ಬಯ್ಯ ಎಂಬವರು ಮನೆಯಲ್ಲಿರುವಾಗ ಅದೇ ಗ್ರಾಮದ ನಿವಾಸಿ ಚಂಗಪ್ಪ ಎಂಬವರು ಬಂದು ಕ್ಷುಲ್ಲಕ ಕಾರಣಕ್ಕೆ ಸುಬ್ಬಯ್ಯನವರೊಂದಿಗೆ ಜಗಳವಾಡಿ ಕೈಯಲ್ಲಿದ್ದ ಗುದ್ದಲಿಯಿಂದ ಸುಬ್ಬಯ್ಯನವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                      ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಪೊನ್ನಂಪೇಟೆ ಬಳಿಯ ಬೆಸಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 21/09/2016ರಂದು ಬೆಸಗೂರು ನಿವಾಸಿ ಬಾಚಮಾಡ ವಸಂತ ಎಂಬವರು ಮನೆಯ ಹಿಂಬದಿಯಲ್ಲಿರುವ ಕಾಫಿ ಗಿಡಕ್ಕೆ ನಾರಿನ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವಸಂತರವರಿಗೆ ವಿಪರೀತ ಮದ್ಯಪಾನ ಮಾಡುವ ಅಭ್ಯಾಸವಿದ್ದು ಇತ್ತೀಚೆಗೆ ಮದ್ಯಪಾನ ತ್ಯಜಿಸಿದ್ದು ಯಾವುದೋ ಕಾರಣಕ್ಕೆ ಖಿನ್ನತೆಗೆ ಒಳಗಾಗಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಳೆ ವೈಷಮ್ಯ, ವ್ಯಕ್ತಿಯ ಮೇಲೆ ಹಲ್ಲೆ
                  ಹಳೆ ದ್ವೇಷದಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಟ್ಟ ನಗರದಲ್ಲಿ ನಡೆದಿದೆ. ದಿನಾಂಕ 20/09/2016ರಂದು ಕುಟ್ಟ ಬಳಿಯ ಸಿಂಕೋನ ಫಾರ್ಮ್‌ನ ನಿವಾಸಿ ಜೆ.ಎಂ.ಚಂದ್ರ ಎಂಬವರು ಕುಟ್ಟ ನಗರದಲ್ಲಿ ಸ್ನೇಹಿತರೊಂದಿಗೆ ಮಾತನಾಡಿಕೊಂಡಿರುವಾಗ ಅಲ್ಲಿಗೆ ಬಂದ ನಾಲ್ಕೇರಿ ನಿವಾಸಿ ಮುರುಳಿ ಎಂಬಾತನು ಯಾವುದೋ ಹಳೆ ದ್ವೇಷದಿಂದ ಚಂದ್ರನೊಂದಿಗೆ ಜಗಳವಾಡಿ ಕೈಯಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ, ಮೂವರಿಗೆ ಗಾಯ
                     ಪರಸ್ಪರ ಕಾರು ಡಿಕ್ಕಿಯಾದ ಪರಿಣಾಮ ಮೂವರಿಗೆ ಗಾಯಗಳಾದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 21/09/2016ರಂದು ಗುಡ್ಡೆಹೊಸೂರು ನಿವಾಸಿ ಜನಾರ್ಧನ ಎಂಬವರು ಅವರ ಕೆಎ-12-ಪಿ-4820ರ ಮಾರುತಿ ವ್ಯಾನಿನಲ್ಲಿ ಶಿವಮೂರ್ತಿ, ಸಿದ್ದರಾಮಪ್ಪ ಮತ್ತು ಗೀತ ಎಂಬವರೊಂದಿಗೆ ಮಡಿಕೇರಿಗೆ ಬರುತ್ತಿರುವಾಗ ನಗರದ ಕಾಮಧೇನು ಪೆಟ್ರೋಲ್‌ ಬಂಕ್‌ ಬಳಿ ಎದುರುಗಡೆಯಿಂದ ಕೆಎ-19-ಎಂಇ-7909ರ ಕಾರನ್ನು ಅದರ ಚಾಲಕ ಸುನಿಲ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜನಾರ್ಧನರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದವರಿಗೆ ಗಾಯಗಳಾಗಿ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗೂಡ್ಸ್ ವಾಹನಕ್ಕೆ ಲಾರಿ ಡಿಕ್ಕಿ.
                 ಗೂಡ್ಸ್ ವಾಹನವೊಂದಕ್ಕೆ ಲಾರಿಯೊಂದು ಡಿಕ್ಕಿಯಾದ ಪರಿಣಾಂ ಪಾದಚಾರಿ ಸೇರಿದಂತೆ ನಾಲ್ವರಿಗೆ ಗಾಯಗಳಾದ ಘಟನೆ ಸಿದ್ದಾಪುರ ಬಳಿಯ ಪಾಲಿಬೆಟ್ಟದಲ್ಲಿ ನಡೆದಿದೆ. ದಿನಾಂಕ 21/09/2016ರಂದು ಬಿಟ್ಟಂಗಾಲ ಗ್ರಾಮದ ತೆಕ್ಕೆರ ನಾಣಯ್ಯ ಎಂಬವರು ಅವರ ಕೆಎ-12-ಎ-8609ರ ಗೂಡ್ಸ್‌ ವಾಹನದಲ್ಲಿ ವಿವಿಧ ಉತ್ಪನ್ನಗಳನ್ನು ಅಮ್ಮತ್ತಿ ಮತ್ತು ಪಾಲಿಬೆಟ್ಟದ ಅಂಗಡಿಗಳಿಗೆ ವಿತರಿಸಿ ತಿತಿಮತಿ ಕಡೆಗೆ ಹೋಗುತ್ತಿರುವಾಗ ಪಾಲಿಬೆಟ್ಟ ನಗರದ ತಿತಿಮತಿ ಜಂಕ್ಷನ್‌ ಬಳಿ ತಿತಿಮತಿ ಕಡೆಯಿಂದ ಕೆಎ-40-6514ರ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಣಯ್ಯನವರ ಗೂಡ್ಸ್‌ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ನಾಣಯ್ಯ್ಯ, ಪುನೀತ್‌ ಎಂಬವರು ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಿರಣ್‌ ಮತ್ತು ಮಂಜುನಾಥ್‌ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, September 21, 2016


ಅಕ್ರಮ ಮರಳು ಸಾಗಾಟ, 6 ಲಾರಿಗಳು ಪೊಲೀಸ್ ವಶಕ್ಕೆ:


     ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಶ್ರೀ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರ ಮಾರ್ಗದರ್ಶನದಂತೆ  ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸರು ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಗಳ ಮೇಲೆ ದಾಳಿ ಮಾಡಿ 6 ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಶ್ರೀ ಬಿ.ಆರ್. ಪ್ರದೀಪ್ ನವರಿಗೆ ದಿನಾಂಕ 18-9-2016 ರಂದು ಬೆಳಗಿನ ಜಾವ ದೊರೆತ ಮಾಹಿತಿ ಆದಾರದ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಸಿಬ್ಬಂದಿಯೊಂದಿಗೆ  ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಸಂಪಾಜೆ ಬಳಿಯ ಅರೆಕಲ್ಲು ರಸ್ತೆಯ ಬದಿಯಲ್ಲಿರುವ ದೇವಿಪ್ರಸಾದ್ ಎಂಬರಿಗೆ ಸೇರಿದ ಜಾಗದಲ್ಲಿ ಟಿಪ್ಪರ್ ಲಾರಿ ನಂ. ಕೆಎ-21 ಬಿ-2947,  ಕೆಎ-21 ಬಿ-347,  ಕೆಎ-21 ಬಿ-448,  ಕೆಎ-21 ಬಿ-2567,  ಕೆಎ-21 ಬಿ-3379 ಮತ್ತು  ಕೆಎ-12 ಬಿ-3706 ಗಳಲ್ಲಿ  ಅಕ್ರಮವಾಗಿ ಮರಳನ್ನು ತುಂಬಿಸಿ  ಸಾಗಾಟ ಮಾಡಲು ನಿಲ್ಲಿಸಿದ್ದನ್ನು ಪತ್ತೆ ಹಚ್ಚಿ ಲಾರಿಗಳನ್ನು  ಸುತ್ತುವರಿಯುವಷ್ಟರಲ್ಲಿ  ಲಾರಿ ಚಾಲಕರು ಸ್ಥಳದಿಂದ ತಪ್ಪಿಸಿಕೊಂಡು ಹೋಗಿದ್ದು,  ಅಕ್ರಮವಾಗಿ ಮರಳು ತುಂಬಿದ 6 ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
      ಹಾಗೆಯೇ ದಿನಾಂಕ 20-09-2016 ರಂದು 3.30 ಪಿ.ಎಂ.ಗೆ ಮಡಿಕೇರಿ ಗ್ರಾಮಾಂತರ ಠಾಣಾ  ಕ್ರೈಂ ಪಿ.ಎಸ್.ಐ. ರವರಿಗೆ  ದೊರೆತ ಮಾಹಿತಿಯ ಮೇರೆಗೆ ಸಂಪಾಜೆ ಉಪಠಾಣಾ ಸಿಬ್ಬಂದಿಯೊಂದಿಗೆ ಸಂಪಾಜೆಯ ಅರಣ್ಯ  ತಪಾಸಣಾ ಗೇಟ್ ಬಳಿ ವಾಹನಗಳನ್ನು ಪರಿಶೀಲನೆ ಮಾಡುತ್ತಿರುವಾಗ ಸುಳ್ಯದ ಕಡೆಯಿಂದ  ಬಂದ  ಕೆಎ-21-ಬಿ-0567 ರ ಲಾರಿಯನ್ನು ಪರಿಶೀಲಿಸಿ, ಸದ್ರಿ ಲಾರಿಯಲ್ಲಿ  ಸರಕಾರ ಪರವಾನಗಿ ಇಲ್ಲದೇ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಹೋಗುತ್ತಿದ್ದುದನ್ನು ಪತ್ತೆಹಚ್ಚಿ, ಮರಳು ತುಂಬಿದ ಲಾರಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.   
     ಜಿಲ್ಲೆಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿರುವುದು ನಡೆಯುತ್ತಿದ್ದು,  ಜಿಲ್ಲೆಯಲ್ಲಿ ಈ ರೀತಿಯ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಈ ಕೆಳಕಾಣಿಸಿದ  ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ತಿಳಿಸಲಾಗಿದೆ.
                              ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ: 9480804901.

 
 

Tuesday, September 20, 2016

ಕಳವು ಪ್ರಕರಣ ಭೇದಿಸಿದ ಪೊಲೀಸರು, ಮಾಲು ಸಮೇತ ಆರೋಪಿಗಳ ಬಂಧನ:
 

     ವಿರಾಜಪೇಟೆ ತಾಲೋಕು, ಗೋಣಿಕೊಪ್ಪ ನಗರದ 8ನೇ ಬ್ಲಾಕ್ ನಿವಾಸಿಯಾದ ಸಪ್ತಗಿರಿ ಮೆಡಿಕಲ್ಸ್ ನ ಮಾಲೀಕರಾದ ಹೆಚ್.ವಿ ಕೃಷ್ಣಪ್ಪ ರವರು ದಿನಾಂಕ:26/08/2015 ರಂದು ರಾತ್ರಿ ಮನೆಯ ಬಾಗಿಲನ್ನು ಹಾಕಿ ಮಲಗಿದ್ದು, ಮನೆಯ ಮೇಲ್ಬಾಗದ ಸಿಟ್ ಔಟ್ ನ ಬಾಗಿಲನ್ನು ಮುಚ್ಚಿದ್ದು ಚಿಲಕ ಹಾಕದೇ ಇದ್ದು, ಮರುದಿನ ಬೆಳಗಿನ ಜಾವ 5-00 ಗಂಟೆ ಮನೆ ಒಳಗಡೆ ನೋಡಿದಾಗ ಮನೆಯ ಮೇಲ್ಗಡೆ ಬಾಗಿಲಿನ ಮೂಲಕ ಯಾರೋ ಕಳ್ಳರು ಒಳಗೆ ಬಂದು ದೇವರ ಗುಡಿಯಿಂದ ಚಿಕ್ಕ ಪುಟ್ಟ ದೇವರ ವಿಗ್ರಹಗಳನ್ನು ಹಾಗೂ ಹಾಲಿನ ಪಕ್ಕದಲ್ಲಿರುವ ಕೊಣೆಯ ಒಳಗೆ ಮರದ ಬೀರನ್ನು ಅಲ್ಲೇ ಇಟ್ಟಿದ್ದ ಕೀ ಮೂಲಕ ತೆರೆದು ಅದರಲ್ಲಿದ್ದ ನಗದು ರೂ 50 ಸಾವಿರ ಮತ್ತು ಬೀರುವಿನಲ್ಲಿದ್ದ ಲಾಕರ್ ಕೀ ಯಿಂದ ಲಾಕರ್ ತೆರೆದು ಒಳಗಡೆ ಇಟ್ಟಿದ್ದ 4.50 ಲಕ್ಷ ರೂ ಮೌಲ್ಯದ ಚಿನ್ನದ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿರುವ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದರು.


     ಪ್ರಕರಣದ ತನಿಖೆ ಬಗ್ಗೆ ಶ್ರೀ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್‌, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮತ್ತು ಡಿವೈ.ಎಸ್.ಪಿ ವಿರಾಜಪೇಟೆ ಉಪ ವಿಭಾಗ ರವರಮಾರ್ಗದರ್ಶನದಂತೆ ಗೋಣಿಕೊಪ್ಪ ಸಿಪಿಐ ಶ್ರೀ ಪಿ.ಕೆ.ರಾಜು ಮತ್ತು ಅವರ ತಂಡ ಪ್ರಕರಣವನ್ನು ಭೇದಿಸಿ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

1). ಮನು ವಿ.ಎಂ.@ ರವಿ @ ಶೂಟಿಂಗ್ ಮನು@ ಗೋವಾ ತಂದೆ ಮಣಿ ವಿ.ಎಂ.ಪ್ರಾಯ: 31 ವರ್ಷ, ಕೂಲಿ ಕೆಲಸ,ವಾಸ ಗೊಟ್ಟಡ ಪೈಸಾರಿ, ಕಳತ್ಮಾಡು ಗ್ರಾಮ ವಿರಾಜಪೇಟೆ ತಾಲ್ಲೂಕು.
2) ಎಂ.ಎಸ್‌.ಮೂರ್ತಿ ತಂದೆ:ಸುಂದರ ಪ್ರಾಯ 28 ವರ್ಷ,ಕೂಲಿ ಕೆಲಸ,ವಾಸ:ಗೊಟ್ಟಡ ಪೈಸಾರಿ,ಕಳತ್ಮಾಡು ಗ್ರಾಮ
3) ಅಲೆಕ್ಸ್ @ ಚೋಟು ತಂದೆ:ಥೋಮಸ್ ಮೈಕಲ್ ಪ್ರಾಯ 24 ವರ್ಷ,ಪೈಟಿಂಗ್ ಕೆಲಸ ಮನೆ ನಂ.317, ನೆಹರು ನಗರ, ಮೀನ್ ಜಮಾಲ್ ಮನೆ ಹತ್ತಿರ, ವಿರಾಜಪೇಟೆ.

     ಮೇಲ್ಕಂಡ ಆರೋಪಿತರಿಂದ ಒಟ್ಟು 5 ಲಕ್ಷ ಮೌಲ್ಯದ 136 ಗ್ರಾಂ ಚಿನ್ನಾಭರಣಗಳನ್ನು, 6 ಹಿತ್ತಾಳೆಯ ದೇವರ ವಿಗ್ರಹಗಳು, ರೂ. 10,000/- ನಗದು ಹಣ ಹಾಗೂ ಸುಜುಕಿ ಬೈಕ್ ಅನ್ನು ವಶಪಡಿಸಿಕೊಂಡಿರುತ್ತಾರೆ.

     1ನೇ ಆರೋಪಿತನು ಪ್ರಕರಣ ದಾಖಲಾದ ನಂತರ ಸುಮಾರು ಒಂದು ವರ್ಷ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದು, ಈತನನ್ನು ದಿನಾಂಕ: 16/09/2016 ರಂದು ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡಿದ್ದು, ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಈತನ ಮೇಲೆ ಮಾಡಲಾಗಿ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಯತ್ನ ಪ್ರಕರಣ, ಬೆಂಗಳೂರಿನ ಶೇಷಾದ್ರಿಪುರಂ ಠಾಣೆಯಲ್ಲಿ ಕಳ್ಳತನ ಪ್ರಕರಣ, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನ ಪ್ರಕರಣ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ಈತನು ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡ ನಂತರ ಗೋಣಿಕೊಪ್ಪಲಿಗೆ ಬಂದು ಕೃತ್ಯ ಎಸಗಿರುವುದಾಗಿದೆ. 1ನೇ ಆರೋಪಿಯು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು 3ನೇ ಆರೋಪಿಯು ಸಹಕರಿಸಿ ಆತನಿಂದ 15,000/- ರೂ ಕಮೀಷನ್ ಹಣ ಪಡೆದುಕೊಂಡಿದ್ದು ಈತನನ್ನು ಕೂಡ ದಸ್ತಗಿರಿ ಮಾಡಲಾಗಿರುತ್ತದೆ.

        ಪ್ರಕರಣದ ಪತ್ತೆ ಕಾರ್ಯದಲ್ಲಿ ಶ್ರೀ ಪಿ.ಕೆ.ರಾಜು, ಸಿಪಿಐ, ಗೋಣಿಕೊಪ್ಪ, ಗೋಣಿಕೊಪ್ಪ ಪೊಲೀಸ್‌ ಠಾಣೆ ಅಪರಾಧ ವಿಭಾಗದ ಪಿಎಸ್‌ಐ ಶ್ರೀ.ಹೆಚ್.ವೈ.ರಾಜು, ಎಎಸ್ಐ ಶ್ರೀ.ಹೆಚ್.ವೈ.ಹಮೀದ್, ಸಿಬ್ಬಂದಿಯವರಾದ ಹೆಚ್.ಕೆ.ಕೃಷ್ಣ, ಟಿ.ಕೆ.ಮೋಹನ್, ಬಿ.ಎಸ್.ನಾಗೇಶ್, ಜಿ.ಕುಮಾರ, ಬಿ.ವಿ.ಹರೀಶ್‌, ಎಂ.ಯು.ಅಬ್ದುಲ್‌ಮಜೀದ್‌ ಪಿ.ಎ.ಮಹಮದ್‌ಅಲಿ ಹಾಗೂ ಮಹಿಳಾ ಸಿಬ್ಬಂದಿ ಪೂರ್ಣಿಮರವರು ಭಾಗವಹಿಸಿದ್ದರು.


ಸರಗಳ್ಳತನ, ಪ್ರಕರಣ ದಾಖಲು:      ದಿನಾಂಕ 19-09-2016 ರಂದು ಪಿರ್ಯಾದಿ ಶ್ರೀಮತಿ ಯು.ಜೆ ಸಿ.ಸುದಾ ರವರು ಕೂಡಿಗೆ ಗ್ರಾಮದ ತಮ್ಮ ಮನೆಯಲ್ಲಿದ್ದಾಗ ಸಮಯ ಸಂಜೆ 04-00 ಗಂಟೆಗೆ ಮನೆಯ ಬಳಿ ಯಾರೋ ಒಬ್ಬ ವ್ಯಕ್ತಿ ಕಪ್ಪು ಹೆಲ್ಮೆಟ್ ಧರಿಸಿಕೊಂಡು ಬಂದು ನಿಮ್ಮ ಗಂಡನ ಪೊನ್ ನಂಬರ್ ಬೇಕು, ನಾನು ಶುಂಠಿ ತೆಗೆದುಕೊಂಡಿದ್ದೇನೆ. ಲಾರಿ ಬಾಡಿಗೆಗೆ ಬೇಕು ಎಂದು ಕೇಳಿ, ಫಿರ್ಯಾದಿ ಪೋನ್ ನಂಬರ್ ನೀಡಿದ್ದು, ಸದರಿ ವ್ಯಕ್ತಿ ಪೊನ್ ಮಾಡುವಂತೆ ನಟನೆಮಾಡಿ ನೀವು ಪೋನ್ ನಂಬರ್ ಕೊಡಲಿಲ್ಲ ಸುಳ್ಳು ಹೇಳಿದ್ದಿರಿ ಎಂದು ಫಿರ್ಯಾದಿಯೊಂದಿಗೆ ಜಗಳವಾಡಿ ಮನೆಯ ಪಕ್ಕದಲ್ಲಿ ಇಟ್ಟಿದ್ದ ಕಬ್ಬಿಣದ ಪೈಪು ತುಂಡನ್ನು ತೆಗೆದು ಫಿರ್ಯಾದಿಯವರ ಮೇಲೆ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿ ಇದ್ದ ಚಿನ್ನದ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಳ್ಳಲು ಯತ್ನಿಸಿದಾಗ ಫಿರ್ಯಾದಿಯವರು ಮಾಗಲ್ಯ ಸರವನ್ನು ಹಿಡಿದುಕೊಳ್ಳುವಷ್ಟರಲ್ಲಿ ಮಾಂಗಲ್ಯ ಸರದ ಒಂದು ತುಂಡನ್ನು ಎಳೆದು ತುಂಡರಿಸಿಕೊಂಡು ಸ್ಥಳದಿಂದ ಮೊಟಾರ್ ಸೈಕಲ್ ನಲ್ಲಿ ಹೆಬ್ಬಾಲೆ ಕಡೆ ಹೊರಟು ಹೋಗಿತುತ್ತಾನೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Monday, September 19, 2016

ಬೈಕ್ ಗಳ ಮುಖಾಮುಖಿ ಡಿಕ್ಕಿ ಒಬ್ಬನ ಸಾವು:

      ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಒಬ್ಬಾತ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾಪನಪ್ಪಿದ ಘಟನೆ ನಡೆದಿದೆ. ಸುಂಟಿಕೊಪ್ಪ ಠಾಣಾ ಸರಹದ್ದಿನ ಕೆದಕಲ್ ಗ್ರಾಮದ ನಿವಾಸಿ ಎನ್. ಎ. ರಾಜೀವ ಎಂಬವರು ತನ್ನ ಸ್ನೇಹಿತ ಮಣಿಮುತ್ತು ನವರೊಂದಿಗೆ ಬೈಕಿನಲ್ಲಿ ಕೆದಕಲ್ ಕಡೆಗೆ ಹೋಗುತ್ತಿದ್ದಾಗ ಎದುಗುಗಡೆಯಿಂದ ಬಂದ ಮೋಟಾರ್ ಸೈಕಲನ್ನು ಅದರ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಫಿರ್ಯಾದಿ ರಾಜೀವನವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಎರಡೈ ಬೈಕುಗಳು ರಸ್ತೆಯಲ್ಲಿ ಬಿದ್ದು, ಫಿರ್ಯಾದಿ ಚಲಾಯಿಸುತ್ತಿದ್ದ ಬೈಕಿನ ಹಿಂಬದಿಯಲ್ಲಿ ಕುಳಿತ್ತಿದ್ದ ಮಣಿಮುತ್ತು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನಪ್ಪಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯ ಹಿನ್ನೆಲೆ ವ್ಯಕ್ತಿ ಸಾವು:

      ನಾಪೋಕ್ಲು ಠಾಣಾ ಸರಹದ್ದಿನ ಕೋನಂಜಗೇರಿ ಗ್ರಾಮದ ನಿವಾಸಿ ಪ್ರಜ್ವಲ್‌ ಬಿ.ಆರ್. ಎಂಬವರ ತಂದೆ ದಿನಾಂಕ 13-09-2016 ರಂದು ರಾತ್ರಿ ಹೊಟ್ಟೆನೋವೆಂದು ವಾಂತಿ ಮಾಡುತ್ತಿದ್ದು ಮರುದಿನ ಮೂರ್ನಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಮತ್ತೆ ದಿನಾಂಕ 17-09-2016 ರಂದು ಮಧ್ಯಾಹ್ನ 3-00 ಗಂಟೆಗೆ ತಂದೆ ರವಿಯವರಿಗೆ ಹೊಟ್ಟೆನೋವು ಜಾಸ್ತಿಯಾದ್ದರಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋಗಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ತಂದೆ ರವಿ ಮೃತಪಟ್ಟಿರುವುದಾಗಿ ತಿಳಿಸಿದ್ದು ರವಿಯವರಿಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದು , ಸಾವಿನ ಬಗ್ಗೆ ಸಂಶಯವಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಣದ ವಿಚಾರ, ಮಗನಿಂದ ತಾಯಿಯ ಕೊಲೆಗೆ ಯತ್ನ:

    ಮದ್ಯ ಸೇವಿಸಲು ಹಣ ನೀಡಲಿಲ್ಲ ವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿ ಕಲ್ಲು ಎಸೆದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿಯ ನಿವಾಸಿ ಫಿರ್ಯಾದಿ ಶ್ರೀಮತಿ ರೋಸ ಎಂಬವರನ್ನು ಆಕೆಯ ಮಗ ಸಲೀಶ್ ಎಂಬುವವನು ಮದ್ಯಪಾನ ಸೇವಿಸಲು ಹಣ ಕೇಳಿ ಜಗಳವಾಡಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ಕಲ್ಲು ಎಸೆದು ಕೊಲೆಗೆ ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಪತಿಯಿಂದ ಪತ್ನಿ ಮೇಲೆ ಹಲ್ಲೆ ಕೊಲೆ ಬೆದರಿಕೆ:

     ವಿನಾ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದೆ. ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್ ಮಂಗಲ ಗ್ರಾಮದನಿವಾಸಿ ಶ್ರೀಮತಿ ಜಯಂತಿ ಎಂಬವರ ಮೇಲೆ ಆಕೆಯ ಗಂಡ ವಿನಾಕಾರಣ ಕತ್ತಿಯಿಂದ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, September 18, 2016

ಕ್ಷುಲ್ಲಕ ಕಾರಣಕ್ಕೆ ಜಗಳ, ಹಲ್ಲೆ
                     ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಬಳಿಯ ಕಿಬ್ಬೆಟ್ಟ ಗ್ರಾಮದಲ್ಲಿ ನಡೆದಿದೆ. ದಿನಾಂಕ 12/09/2016ರಂದು ಕಿಬ್ಬೆಟ್ಟ ಕಾಫಿ ತೋಟದ ಪಕ್ಕದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಸ್ಥಳದ ಬಳಿ ಅದೇ ಗ್ರಾಮದ ನಿವಾಸಿ ಗಗನ್‌ ಎಂಬವರು ನಿಂತಿರುವ ಸಮಯದಲ್ಲಿ ಅಲ್ಲಿ ಕಿಬ್ಬೆಟ್ಟ ಗ್ರಾಮದ ಮಧು ಮತ್ತು ಗೌಡಳ್ಳಿ ಗ್ರಾಮದ ವಸಂತ ಎಂಬವರುಗಳು ಪರಸ್ಪರ ಜಗಳವಾಡುತ್ತಿದ್ದುದನ್ನು ಕಂಡು ಬಿಡಿಸಲು ಹೋದಾಗ ಮಧು ಗಗನ್‌ರವರ ಮೇಲೆ ಏಕಾ ಏಕಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 17, 2016


ಮಹಿಳೆಗೆ ಬೈಕ್ ಡಿಕ್ಕಿ, ಗಾಯ:

     ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಬೈಕೊಂಡಿ ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ. ಸೋಮವಾರಪೇಟೆ ತಾಲೋಕು ಕಲ್ಕಂದೂರು ಗ್ರಾಮದ ನಿವಾಸಿ ಶ್ರೀಮತಿ ಗೌರಿ ಎಂಬವರು ದಿನಾಂಕ 17-09-2016 ರಂದು ಸಮಯ ಬೆಳಿಗ್ಗೆ 09.00 ಗಂಟೆಗೆ ಯಡೂರು ಶಾಲೆಯ ಹತ್ತಿರ ನಡೆದುಕೊಂಡು ಕೆಲಸಕ್ಕೆ ಹೋಗುತ್ತಿರುವಾಗ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಕ್ಯೂ- 8038 ರ ಮೋಟಾರ್ ಸೈಕಲ್ ಸವಾರ ಸದರಿ ಮೋಟಾರ್ ಸೈಕಲನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿ ಶ್ರೀಮತಿ ಗೌರಿಯವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಗೌರಿಯವರು ಗಾಯಗೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನುಷ್ಯ ಕಾಣೆ:

ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ವರದಿಯಾಗಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ದೇವರಪುರ ಗ್ರಾಮದಲ್ಲಿರುವ ಹೊಸಳ್ಳಿ ಟಾಟಾ ಎಸ್ಟೇಟ್ ನಲ್ಲಿ ವಾಸವಾಗಿರುವ ಶ್ರೀಮತಿ ಅಮಲ ಎಂಬವರ ಗಂಡ ಸುಂದರ್ ರಾಜ್ (38) ಎಂಬವರು ಕೆಲವು ಸಮಯದಿಂದ ಬದ್ದಿ ಭ್ರಮಣೆಗೊಂಡು ಆಗಿಂದಾಗ್ಗೆ ಯಾರಿಗೂ ಹೇಳದೆ ಮನೆಯಿಂದ ಹೊರಗಡೆ ಹೋಗಿ ವಾಪಾಸ್ಸು ಬರುತ್ತಿದ್ದು ಹಾಗೆಯೇ ದಿನಾಂಕ 14-9-2016 ರಂದು ಸದರಿ ವ್ಯಕ್ತಿ ಮನೆಯಿಂದ ಹೋಗಿದ್ದು ಮತ್ತೆ ಹಿಂತಿರುಗಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Friday, September 16, 2016

ವ್ಯಕ್ತಿಯ ಕೊಲೆ, ಪತಿ ಪತ್ನಿ ಬಂಧನ:

      ಕುಡಿದ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಜಗಳವಾಗಿ ಒಬ್ಬಾತನು ಸಾವನಪ್ಪಿದ ಘಟನೆ ವಿರಾಜಪೇಟೆ ಹತ್ತಿರದ ರಾಮನಗರದಲ್ಲಿ ನಡೆದಿದೆ. ದಿನಾಂಕ 14-9-2016 ರಂದು ರಾತ್ರಿ ಸಮಯದಲ್ಲಿ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಬೇಟೋಳಿ ಗ್ರಾಮದ ರಾಮನಗರ ಎಂಬಲ್ಲಿ ವಾಸವಾಗಿರುವ ಬಿ.ಯು. ಪ್ರಸನ್ನ ಎಂಬವರ ತಂದೆ ಬಿ.ಟಿ. ಉಪೇಂದ್ರ ಹಾಗು ಅದೇ ಗ್ರಾಮದಲ್ಲಿ ವಾಸವಾಗಿರುವ ವೆಂಕಟೇಶ ಗೌಡ ಹಾಗು ಅವರ ಪತ್ನಿ ಸಣ್ಣಮ್ಮ ರವರುಗಳ ನಡುವೆ ಮದ್ಯ ಕುಡಿದ ವಿಚಾರದಲ್ಲಿ ಜಗಳ ಏರ್ಪಟ್ಟು, ವೆಂಕಟೇಶ ಹಾಗು ಆತನ ಪತ್ನಿ ಸಣ್ಣಮ್ಮ ರವರುಗಳು ಸೇರಿ ಉಪೇಂದ್ರರವರನ್ನು ಹೊಡೆದು ಕೊಲೆ ಮಾಡಿ ಪಕ್ಕದ ಕಾಫಿ ತೋಟದಲ್ಲಿ ಮೃತ ಶರೀರವನ್ನು ಎಸೆದಿರುವುದಾಗಿ ಆರೋಪಿಸಿ ಮೃತ ವ್ಯಕ್ತಿಯ ಮಗ ಪ್ರಸನ್ನ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Thursday, September 15, 2016

ಹಣದ ವಿಚಾರದಲ್ಲಿ ವಂಚನೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಗದ್ದೆಹಳ್ಳ ಗ್ರಾಮದ ನಿವಾಸಿ ಶ್ರೀಮತಿ ಕಮುರುನ್ನಿಸಾ ರವರು ಹಣದ ಅವಶ್ಯಕತೆ ಇದ್ದುದರಿಂದ ದಿನಾಂಕ 28.05.2016ರ ಹಿಂದಿನ ದಿನಗಳಲ್ಲಿ ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ಶ್ರೀಮತಿ ಹೇಮಾವತಿ ಎಂಬವರಿಂದ ರೂ.1,00,000 ಗಳನ್ನು ಪಡೆದುಕೊಂಡಿದ್ದು ಆ ವೇಳೆ ಒಟ್ಟು 9 ಸಹಿಮಾಡಿದ ಖಾಲಿ ಚೆಕ್ ಗಳನ್ನು ಸದರಿಯವರಿಗೆ ನೀಡಿದ್ದು , ಪಿರ್ಯಾದಿ ಶ್ರೀಮತಿ ಕಮುರುನ್ನಿಸಾ ತಾನು ಪಡೆದ ಬಡ್ಡಿಸಮೇತವಾಗಿ ಶ್ರೀಮತಿ ಹೇಮಾವತಿಯವರಿಗೆ ಹಣವನ್ನು ಹಿಂತಿರುಗಿಸಿದ್ದು, ಫಿರ್ಯಾದಿಯವರು ಹಣ ಪಡೆಯುವ ಸಂದರ್ಭದಲ್ಲಿ ನೀಡಿದ ಚೆಕ್ ಗಳನ್ನು ಫಿರ್ಯಾದಿಗೆ ನೀಡದೇ ಶ್ರೀಮತಿ ಹೇಮಾವತಿಯರು ಇನ್ನು 4 ಮಂದಿಯೊಂದಿಗೆ ಸೇರಿ ಚೆಕ್ ಗಳನ್ನು ಬ್ಯಾಂಕ್ ಗೆ ನೀಡಿ ಬೌನ್ಸ್ ಮಾಡಿ ಪಿರ್ಯಾದಿಯ ಮೇಲೆ ಅಪವಾದ ಹೊರಿಸಿದ್ದಲ್ಲದೆ ಪಿರ್ಯಾದಿಯವರ ಒಪ್ಪಂದ ಪತ್ರಕ್ಕೆ ವಿರುದ್ದವಾಗಿ ವರ್ತಿಸಿ ಮೋಸ ಮಾಡಿರುವುದಾಗಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಮೇರೆಗೆ ಮಾನ್ಯ ನ್ಯಾಯಾಲಯದ ನಿರ್ದೇಶನದಂತೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಜೂಜು ಪೊಲೀಸ್ ದಾಳಿ:

    ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹೇಶ್ ರವರು ದಿನಾಂಕ 14/09/2016 ರಂದು ಹಗಲು ರೌಂಡ್ಸ್ ಕರ್ತವ್ಯದಲ್ಲಿರುವಾಗ್ಗೆ ಕೂಡ್ಲೂರು ಗ್ರಾಮದ ಪ್ರೌಡಶಾಲೆಯ ಹಿಂಭಾಗ ಮೈದಾನದಲ್ಲಿ ಇಸ್ಪಿಟು ಜೂಜಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಕೂಡ್ಲೂರು ಗ್ರಾಮದ ಪ್ರೌಡಶಾಲೆಯ ಹಿಂಭಾಗ ಮೈದಾನಕ್ಕೆ ದಾಳಿ ಮಾಡಿ 8 ಜನರು ಅಕ್ರಮವಾಗಿ ಇಸ್ಪೀಟು ಎಲೆಗಳನ್ನು ಬಳಸಿ ಹಣವನ್ನು ಪಣವನ್ನಾಗಿಟ್ಟು ಜೂಜಾಡುತ್ತಿದ್ದುದನ್ನು ಪತ್ತೆಹಚ್ಚಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು, ಜೂಜಾಟಕ್ಕೆ ಬಳಸಿದ ಸಾಮಾಗ್ರಿಗಳನ್ನು ಮತ್ತು ನಗದು ರೂ.3,700/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ರಸ್ತೆ ಅಪಘಾತ ಬೈಕ್ ಸವಾರನ ದುರ್ಮರಣ:

    ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಜೆ. ಗವಿಸ್ವಾಮಿ ಎಂಬವರು ದಿನಾಂಕ 14-9-2016 ರಂದು 16-30 ಗಂಟೆಗೆ ಅವರ ಸ್ನೇಹಿತ ಬಸವರಾಜು ರವರೊಂದಿಗೆ ಬೈಕ್ ನಂಬರ್ ಕೆಎ-45-ಯು-8535 ರ ಬಜಾಜ್ ಡಿಸ್ಕವರ್ ನಲ್ಲಿ ಸ್ನೇಹಿತ ಪೆರಂಬಾಡಿಯ ಪ್ರಕಾಶ್ ರವರ ಮನೆಗೆ ಹೋಗಿ ಓಣಂ ಹಬ್ಬ ಮುಗಿಸಿಕೊಂಡು ಅದೇ ಬೈಕಿನಲ್ಲಿ ವಾಪಾಸ್ಸು ವಿರಾಜಪೇಟೆಗೆ ಕಡೆಗೆ ಬರುತ್ತಿರುವಾಗ್ಗೆ, ಪೆರಂಬಾಡಿ ಸೇತುವೆಯ ಪಕ್ಕ ಬಸವರಾಜು ರವರು ಬೈಕನ್ನು ಚಾಲಿಸಿಕೊಂಡು ಬರುತ್ತಿದ್ದಾಗ, ಎದುರುಗಡೆಯಿಂದ ಆಟೋ ರಿಕ್ಷಾ ನಂಬರ್ ಕೆಎ-12-ಬಿ-1887 ರ ಚಾಲಕ ಕೇಶವ ಎಂಬುವರು ಆಟೋವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಓಡಿಸಿಕೊಂಡು ಬಂದು ರಸ್ತೆಯ ಬಲಬದಿಗೆ ತಿರುಗಿಸಿದ ಪರಿಣಾಮ ಬಸವರಾಜು ರವರು ಗಾಬರಿಯಿಂದ ದಿಡೀರನೇ ಬೈಕ್ ಗೆ ಬ್ರೇಕ್ ಹಾಕಿ ನಿಲ್ಲಿಸಲು ಪ್ರಯತ್ನಿಸಿದಾಗ ಬೈಕ್ ಆಯಾ ತಪ್ಪಿ ರಸ್ತೆ ಬಿದ್ದ ಪರಿಣಾಮ ಫಿರ್ಯಾದು ಗವಿಸ್ವಾಮಿಯವರಿಗೆ ಗಾಯವಾಗಿದ್ದು ಬೈಕ್ ಸವಾರ ಬಸವರಾಜುರವರ ತಲೆಗೆ, ಮುಖಕ್ಕೆ ಹಾಗೂ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಅವರು ಮೃತಪಟ್ಟಿದ್ದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Wednesday, September 14, 2016


ನಗದು ದರೋಡೆ ಪ್ರಕರಣ ಪತ್ತೆ.
                     ಇತ್ತೀಚೆಗೆ ಶ್ರೀಮಂಗಲ ವ್ಯಾಪ್ತಿಯಲ್ಲಿ ಅಪರಾತ್ರಿ ವೇಳೆ ನಡೆದ ಭಾರೀ ನಗದು ಹಾಗೂ ಕಾರು ದರೋಡೆ ಪ್ರಕರಣವನ್ನು ಯಶಸ್ವಿಯಾಗಿ ಪತ್ತೆ ಹ್ಚ್ಇದ ಪೊಲೀಸರು ಆರೋಪಿಗಳನ್ನು ಬಂಧಿಸಿ ದರೋಡಯಾದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

                      ದಿನಾಂಕ 16-08-2016 ರಂದು ರಾತ್ರಿ ಮೈಸೂರಿನಿಂದ ಶ್ರೀಮಂಗಲ ಮಾರ್ಗವಾಗಿ ಕೇರಳದ ತಾಮರಚೇರಿ ಕಡೆಗೆ ಕೆಎಲ್-57-ಎಂ-2587 ರ ಇನೋವಾ ಕಾರಿನಲ್ಲಿ ಅಸೀಫ್ ಎಂಬವರು ಅವರ ಇಬ್ಬರು ಸ್ನೇಹಿತರೊಂದಿಗೆ 38 ಲಕ್ಷ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನಡು ರಾತ್ರಿ 12.45 ಗಂಟೆಗೆ ಟಿ.ಶೆಟ್ಟಿಗೇರಿ ಗ್ರಾಮದ ನಾಲ್ಕೇರಿ ಜಂಕ್ಷನ್ ಬಳಿ ಇನೋವಾ ಕಾರನ್ನು ಹಿಂಬಾಲಿಸಿಕೊಂಡು ಬಂದ ಒಂದು ಜೈಲೋ ಕಾರಿನಲ್ಲಿದ್ದ 8-10 ಜನ ಅಪರಿಚಿತ ಯುವಕರು ಇನೋವಾ ಕಾರನ್ನು ಹಿಂದಿಕ್ಕಿ ಅಡ್ಡಗಟ್ಟಿ ನಿಲ್ಲಿಸಿ ಕಾರಿನಲ್ಲಿದ್ದ ಆಸಿಫ್ ಮತ್ತು ಇನ್ನಿಬ್ಬರನ್ನು ಹೊರಗೆ ಎಳೆದು, ಕಬ್ಬಿಣದ ರಾಡಿನಿಂದ ಥಳಿಸಿ ಇನೋವಾ ಕಾರು ಸಮೇತ, ಕಾರಿನಲ್ಲಿದ್ದ 38 ಲಕ್ಷ ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದು ಶ್ರೀಮಂಗಲ ಪೊಲೀಸ್ ಠಾಣೆ ಮೊ.ಸಂ 65/2016 ಕಲಂ 397 ಐಪಿಸಿ ರಂತೆ ಪ್ರಕರಣ ನೊಂದಾಯಿಸಿ ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳಿಂದ ವಶಪಡಿಸಿಕೊಂಡನಗದುಹಣ

                       ಪ್ರಕರಣಕ್ಕೆ ಸಂಬಂಧಿಸಿದಂತೆ ಕಳುವಾದ ಹಣ, ಕಾರು ಹಾಗೂ ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರಾದ ಶ್ರೀ ರಾಜೇಂದ್ರ ಪ್ರಸಾದ್‌, ಐಪಿಎಸ್‌ರವರು ವಿರಾಜಪೇಟೆ ಡಿಎಸ್‌ಪಿ ನಾಗಪ್ಪರವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಕಾರ್ಯಾಚರಣೆ ಕೈಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇರಳದ ಇರಿಟ್ಟಿಯ ನಿವಾಸಿ ಚೀನಿಕಾಡ್‌ ಅಜಿತ್‌ ಎಂಬಾತನನ್ನು ತಮಿಳು ನಾಡಿನ ಸೇಲಂನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕೃತ್ಯದಲ್ಲಿ ಸುಮಾರು 16 ಜನರು ಭಾಗಿಯಾಗಿರುವುದನ್ನು ತಿಳಿದು ಬಂದಿದ್ದು ಈ ಆರೋಪಿಗಳ ಪೈಕಿ ಕೇರಳ ರಾಜ್ಯದ ಕಣ್ಣನೂರು, ತಲಚೇರಿ ಮತ್ತು ಮಾನಂದವಾಡಿಗಳಲ್ಲಿ ಕಾರ್ಯಾಚರಣೆ ನಡೆಸಿ ವಿಶಾಖ್‌, ಶರಣುಕುಮಾರ್‌, ಅರುಣ್‌ ಕುಮಾರ್, ನಿಖಿಲ್‌ ಕುಮಾರ್, ಮುನಾಫ್‌ ಮತ್ತು ಶೌಕತ್‌ ಎಂಬವರನ್ನು ವಶಕ್ಕೆ ಪಡೆದು ಬಂಧಿಸಲಾಗಿರುತ್ತದೆ.
ಕಾರ್ಯಾಚರಣೆ ನಡೆಸಿದ ಪೊಲೀಸ್‌ ತಂಡ

                 ವಿಚಾರಣೆಯ ಸಮಯದಲ್ಲಿ ಆರೋಪಿಗಳು ಪ್ರಕರಣದ ಫಿರ್ಯಾದಿ ಆಸಿಫ್‌ರವರಿಂದ ದರೋಡೆ ಮಾಡಿದ ರೂ,29,73,000/- ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ ಒಂದು ಝೈಲೋ ಕಾರು, ವ್ಯಾಗನ್‌-ಆರ್‌ ಕಾರು ಮತ್ತು ಎರಡು ಪಲ್ಸರ್‌ ಮೋಟಾರು ಬೈಕ್‌ಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಎಲ್ಲಾ ಆರೋಪಿಗಳು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇನ್ನೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದು ಪ್ರಸ್ತುತ ವಶಪಡಿಸಿಕೊಂಡಿರುವ ಹಣ ಮತ್ತು ವಾಹನಗಳ ಒಟ್ಟು ಮೌಲ್ಯ ರೂ.50 ಲಕ್ಷಗಳಾಗಿರುತ್ತದೆಂದು ಅಂದಾಜಿಸಲಾಗಿದೆ.

                    ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್‌ರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಡಿ.ವೈ.ಎಸ್.ಪಿ. ನಾಗಪ್ಪರವರ ನೇತೃತ್ವದಲ್ಲಿ ಗೋಣಿಕೊಪ್ಪ ಸಿಪಿಐ ಪಿ.ಕೆ. ರಾಜು, ಕುಟ್ಟ ಸಿಪಿಐ ಸಿ.ಎನ್‌. ದಿವಾಕರ, ವಿರಾಜಪೇಟೆ ಸಿಪಿಐ ಶಾಂತ ಮಲ್ಲಪ್ಪ, ಶ್ರೀಮಂಗಲ ಪಿಎಸ್ಐ ಬಿ.ಎಸ್‌. ಶ್ರೀಧರ್, ಕುಟ್ಟ ಪಿಎಸ್ಐ ಎಸ್‌.ಎಸ್‌. ರವಿಕಿರಣ್‌ ಮತ್ತು ಸಿಬ್ಬಂದಿಗಳಾದ ದೊಡ್ಡಯ್ಯ, ಟಿ.ಕೆ. ರವಿ, ಪಿ.ಜಿ. ದೇವರಾಜು, ಎಂ.ಎಸ್.ರಂಜಿತ್, ಶರತ್, ಗಣೇಶ, ಗಣಪತಿ, ಸಿದ್ದಾರ್ಥ, ಮನು, ದಿನೇಶ್, ಹಸೈನಾರ್, ತಮ್ಮಯ್ಯ, ಧನುಂಜಯ, ಮಧು, ಮಜೀದ್, ಕೃಷ್ಣಮೂರ್ತಿ, ಸುಕುಮಾರ್, ರಮೇಶ, ವೀರೇಶ್ ಮತ್ತು ರಾಮಕೃಷ್ಣ ಮುಂತಾದವರು ಪಾಲ್ಗೊಂಡಿದ್ದರು.

ಜೀಪಿಗೆ ಬಸ್ ಡಿಕ್ಕಿ ಇಬ್ಬರಿಗೆ ಗಾಯ:
                     ದಿನಾಂಕ 13-09-2016 ರಂದು ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದ ನಿವಾಸಿ ದರ್ಶನ್‌ ಎಂ.ಎಂ ರವರು ತಮ್ಮ ಬಾಪ್ತು ಕೆಎ-12-ಎನ್‌-2925 ರ ಮಹೇಂದ್ರ ಜೀಪಿಲ್ಲಿ ಚಾಲಕ ಪವನ್‌ರವರೊಂದಿಗೆ ಕಡಗದಾಳುವಿನಿಂದ ಮಡಿಕೇರಿ ನಗರದ ಕಡೆಗೆ ಬರುತ್ತಿರುವಾಗ ಸಮಯ 2-20 ಪಿಎಂಗೆ ಇಬ್ನಿವಳವಾಡಿ ಗ್ರಾಮದ ಇಬ್ನಿರೆಸಾರ್ಟ್‌ ನ ಸ್ವಲ್ಪ ಮುಂದೆ ತಿರುವು ರಸ್ತೆಯಲ್ಲಿ ಕೆಎ-18-ಎಫ್‌-439 ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಜೀಪಿಗೆ ಡಿಕ್ಕಿ ಪಡಿಸಿದ ಪರಿಣಾಮ ಜೀಪು ಜಖಂಗೊಂಡು ಜೀಪು ಚಾಲಕ ಪವನ್‌, ಮೇದಪ್ಪ ಗೌರವ ಶೆಟ್ಟಿ ಹಾಗೂ ಪಿರ್ಯಾದಿ ದರ್ಶನ್ ರವರಿಗೆ ಗಾಯಗಳಾಗಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಶವ ಪತ್ತೆ:
                      ಅಪರಿಚಿತ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಸಿದ್ದಾಪುರ ಠಾಣಾ ಸರಹದ್ದಿನ ದುಬಾರೆ ಇ ಎಸ್ಟೇಟ್ ನಲ್ಲಿ ಅಪರಿಚಿತ ಅಂದಾಜು 40 ವರ್ಷ ಪ್ರಾಯದ ವ್ಯಕ್ತಿಯು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತ್ತೆಯಾಗಿದ್ದು, ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಅಪಘಾತ ಇಬ್ಬರಿಗೆ ಗಾಯ:
                       ದಿನಾಂಕ: 11.09.2016ರಂದು ಸಮಯ ರಾತ್ರಿ 08.30 ಗಂಟೆಗೆ ಜಗ ಮತ್ತು ಅಶೋಕ್ ಕುಮಾರ್ ಎಂಬವರು ಮೋಟಾರ್ ಸೈಕಲ್ ನಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದು ಕೊಡಗರ ಹಳ್ಳಿಯ ಮಾರುತಿ ನಗರದ ಹತ್ತಿರ ಸದರಿ ಮೋಟಾರ್ ಸೈಕಲ್ ಗೆ ದನವೊಂದು ಅಡ್ಡಲಾಗಿ ಬಂದು ಅದನ್ನು ತಪ್ಪಿಸಲು ಹೋದ ಮೋಟಾರ್ ಸೈಕಲ್ ಸವಾರ ಜಗ ನಿಯಂತ್ರಣ ಕಳೆದುಕೊಂಡು ಮೋಟಾರ್ ಸೈಕಲ್ ರಸ್ತೆಗೆ ಬಿದ್ದ ಕಾರಣ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದ ಜಗ ಹಾಗು ಅಶೋಕ್ ಕುಮಾರ್ ರವರು ಗಾಯಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Tuesday, September 13, 2016

ಪಾದಚಾರಿಗೆ ಬೈಕ್ ಡಿಕ್ಕಿ:     ವಾಕಿಂಗ್ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೈಕೊಂದು ಡಿಕ್ಕಿಯಾಗಿ ಸದರಿ ವ್ಯಕ್ತಿ ಗಾಯಗೊಂಡ ಘಟನೆ ನಡೆದಿದೆ. ಮಡಿಕೇರಿ ತಾಲೋಕು ಮುರ್ನಾಡು ನಿವಾಸಿ ಪಿ.ಎಂ. ಮೋಹನ್ ರವರು ದಿನಾಂಕ 12-9-2016 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಮುರ್ನಾಡು ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರಶಾಂತ್ ಎಂಬ ವ್ಯಕ್ತಿ ಮೋಟಾರ್ ಸೈಕಲ್ ನಲ್ಲಿ ಹಿಂಬದಿಯಿಂದ ಬಂದು ಡಿಕ್ಕಿಪಡಿಸಿದ ಪರಿಣಾಮ ಪಿ.ಎಂ. ಮೋಹನ್ ರವರು ಗಾಯಗೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ:


      ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ವಳಗುಂದ ಗ್ರಾಮದ ನಿವಾಸಿ ಜೇನುಕುರುಬರ ರಾಜು ಎಂಬವರ ಪತ್ನಿ 60 ವರ್ಷದ ಮಹಿಳೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-9-2016 ರಂದು ವಳಗುಂದ ಗ್ರಾಮದಲ್ಲಿ ಒಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಬಸ್ ಚಾಲಕನ ಮೇಲೆ ಹಲ್ಲೆ:

     ವಾಹನ ಹೋಗುವ ದಾರಿಯ ವಿಚಾರದಲ್ಲಿ ಕೆಎಸ್ಆರ್ ಟಿಸಿ ಬಸ್ ಚಾಲಕನ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಕರ್ವವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ದೂರು ದಾಖಲಾಗಿದೆ. ಡಿ.ಎ. ವೆಂಕಟೇಶ್ ಎಂಬವರು ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಚಾಲಕನಾಗಿದ್ದು ದಿನಾಂಕ 12-9-2016 ರಂದು ಮಡಿಕೇರಿ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಬಸ್ಸನ್ನು ಚಾಲಿಸಿಕೊಂಡು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಮೂವರು ವ್ಯಕ್ತಿಗಳು ಎದುರುಗಡೆಯಿಂದ ಕಾರಿನಲ್ಲಿ ಬಂದು ಬಸ್ ನ್ನು ತಡೆದು ನಿಲ್ಲಿಸಿ ದಾರಿಗಾಗಿ ಜಗಳ ಮಾಡಿದ್ದು, ನಂತರ ಸಮಯ 16-30 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣಕ್ಕೆ ಬಂದು ಫಿರ್ಯಾದಿ ಡಿ.ಎ. ವೆಂಕಟೇಶ್ ರವರ ಮೇಲೆ ಹಲ್ಲೆ ಮಾಡಿ ಕರ್ವವ್ಯಕ್ಕೆ ಅಡ್ಡಿಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Monday, September 12, 2016


ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಥಂಗಾಲ ಗ್ರಾಮದ ನಿವಾಸಿ ಬೆಟ್ಟಕುರುಬರ ಕಾಳ ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 11-9-2016 ರಂದು ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟ್ಟ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Sunday, September 11, 2016

ಅಕ್ರಮ ಮರಳು ಸಾಗಾಟ ಪತ್ತೆ.
                    ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದುದನ್ನು ವಿರಾಜಪೇಟೆ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ದಿನಾಂಕ 10/09/2016ರಂದು ವಿರಾಜಪೇಟೆ ಬಳಿಯ ರಾಮನಗರದಿಂದ ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ವಿರಾಜಪೇಟೆ ನಗರ ಪಿಎಸ್‌ಐ ಜಿ.ಕೆ.ಸುಬ್ರಮಣ್ಯರವರು ರಾಮನಗರ ರಸ್ತೆಯ ಬಳಿ ಕೆಎ-12-9830ರ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿರುವ ಲಾರಿಯೊಂದನ್ನು ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ 
                     ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದಲ್ಲಿ ನಡೆದಿದೆ. ಗುಹ್ಯ ಗ್ರಾಮದ ನಿವಾಸಿ ಅನಿಲ್‌ ಸುಬ್ಬಯ್ಯ ಎಂಬವರು ಸಿದ್ದಾಪುರ ನಗರದಲ್ಲಿ ಆಟೋ ರಿಕ್ಷಾವನ್ನು ಬಾಡಿಗೆಗೆ ಚಾಲಿಸಿಕೊಂಡಿದ್ದು ಕೆಲವು ಸಮಯದಿಂದ ಎದೆನೋವು ಮತ್ತು ತಲೆನೋವು ಇದ್ದು ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೆ ಇದ್ದ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 09/09/2016ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಜೀಪು ಮಗುಚಿ ವ್ಯಕ್ತಿಯ ಸಾವು 
                  ಜೀಪೊಂದು ಮಗುಚಿಕೊಂಡು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ಮಡಿಕೇರಿ ಸಮೀಪದ ಹೆರವನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 10/09/2016ರಂದು ಹೆರವನಾಡು ನಿವಾಸಿ ವೆಂಕಟೇಶ್ವರ ಎಂಬವರು ಅವರ ಜೀಪಿನಲ್ಲಿ ಸಿಲ್ವರ್‌ ಗಿಡಗಳನ್ನು ತುಂಬಿಕೊಂಡು ತೋಟಕ್ಕೆ ಹೋಗಿದ್ದು ಸಂಜೆಯಾದರೂ ವಾಪಾಸು ಬಾರದ ಕಾರಣ ಅವರ ಪತ್ನಿ ರೇವತಿರವರು ಪತಿಯನ್ನು ಹುಡುಕಿಕೊಂಡು ತೋಟಕ್ಕೆ ಹೋದಾಗ ತೋಟಕ್ಕೆ ಹೋಗುವ ರಸ್ತೆಯಲ್ಲಿ ಜೀಪು ಮಗುಚಿಕೊಂಡು ವೆಂಕಟೇಶ್ವರರವರು ಜೀಪಿನ ಕೆಳಗೆ ಸಿಲುಕಿಕೊಂಡು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                ಜೀವನದಲ್ಲಿ ಜುಗುಪ್ಸೆಗೊಂಡ ವ್ಯಕ್ತಿಯೊಬ್ಬ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ  ಸೋಮವಾರಪೇಟೆ ಬಳಿಯ ಮಾದಾಪುರದಲ್ಲಿ ನಡೆದಿದೆ. ಮಾದಾಪುರ ಬಳಿಯ ಜಂಬೂರು ಬಾಣೆ ನಿವಾಸಿ ಗಣೇಶ ಎಂಬ ವ್ಯಕ್ತಿಯು ಅಲ್ಸರ್‌ ಕಾಯಿಲೆಯಿಂದ ನರಳುತ್ತಿದ್ದು ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 09/09/2016ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, September 10, 2016

ಆಟೋ ರಿಕ್ಷಾ ಅವಘಡ, ನಾಲ್ವರಿಗೆ ಗಾಯ:

      ಚಲಿಸುತ್ತಿದ್ದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿಕೊಂಡ ಪರಿಣಾಮ ರಿಕ್ಷಾದಲ್ಲಿದ್ದ ಮೂವರು ಮಹಿಳೆಯರು ಗಾಯಗೊಂಡು ಇದೇ ವೇಳೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಸವಾರ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ದಿನಾಂಕ 04.09.2016 ರಂದು ಹುದುಗೂರು ಗ್ರಾಮದ ನಿವಾಸಿ ಶ್ರೀಮತಿ ಬೋಜಮ್ಮ, ನಾಗರತ್ನ ಮತ್ತು ಪುಟ್ಟತಾಯಿ ಎಂಬವರು ಕುಶಾಲನಗರದಿಂದ ಕೆಎ 12 ಬಿ 1235 ರ ಆಟೋರಿಕ್ಷಾದಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ದೊಡ್ಡತ್ತೂರಿನ ಕೃಷ್ಣ ಎಂಬವರ ಮನೆಯ ಬಳಿ ಆಟೋ ರಿಕ್ಷಾವನ್ನು ಚಾಲಕ ಅತೀ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದಾಗ ಮುಂಭಾಗದಿಂದ ಕೆಎ 12 ಹೆಚ್ 9336 ರ ಟಿವಿಎಸ್‌ ಬೈಕ್ ಬರುತ್ತಿದ್ದುದನ್ನು ಕಂಡ ಆಟೋ ರಿಕ್ಷಾ ಚಾಲಕ ನಿಯಂತ್ರಣ ಕಳೆದುಕೊಂಡು ರಿಕ್ಷಾ ಮಗುಚಿಕೊಂಡಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಬೋಜಮ್ಮ, ನಾಗರತ್ನ ಮತ್ತು ಪುಟ್ಟತಾಯಿ, ಚಾಲಕ ಹಾಗೂ ಅದೇ ವೇಳೆಗೆ ಟಿವಿಎಸ್ ಬೈಕು ಬಿದ್ದು ಅದರ ಸವಾರನಿಗೂ ಗಾಯಗಳಾಗಿದ್ದು ಅವರೆಲ್ಲಾ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ದಿನಾಂಕ 9-9-2016 ರಂದು ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಜೀವನದಲ್ಲಿ ಜಿಗುಪ್ಸೆ, ವ್ಯಕ್ತಿ ಆತ್ಮಹತ್ಯೆ: 

     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಾಪುರ ಠಾಣಾ ಸರಹದ್ದಿನ ಗುಹ್ಯ ಗ್ರಾಮದ ಬಿದ್ದಂಡ ಮಧು ಎಂಬವರ ಕಾಫಿ ತೋಟದ ಲೈನುಮನೆಯಲ್ಲಿ ವಾಸವಾಗಿದ್ದ 35 ವರ್ಷ ಪ್ರಾಯದ ಅನಿಲ್ ಸುಬ್ಬಯ್ಯ ಎಂಬವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 9-9-2016 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗುಹ್ಯ ಗ್ರಾಮದ ಸುನಿಲ್ ಕಾರ್ಯಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ದಾಖಲಾದ ಅಪರಿಚಿತ ವ್ಯಕ್ತಿಯ ಸಾವು:  

     ಅನಾರೋಗ್ಯದ ಕಾರಣ ಅಪರಿಚಿತ ವ್ಯಕ್ತಿಯೊಬ್ಬರು ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಸಾವನಪ್ಪಿದ ಘಟನೆ ನಡೆದಿದೆ. ದಿನಾಂಕ 08.09.2016 ರಂದು ಸಮಯ 16:00 ಗಂಟೆಗೆ ಒಬ್ಬ ಅಪರಿಚಿತ ವ್ಯಕಿ ಸುಮಾರು 45 ವರ್ಷ ಪ್ರಾಯದ ಲೋಕೇಶ್ ಎಂಬುವರನ್ನು ಕರೆದುಕೊಂಡು ಬಂದು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು ಲೋಕೇಶ್ ಮದ್ಯಪಾನ ಮಾಡಿಕೊಂಡಿದ್ದು ಹೊಟ್ಟೆ ನೋವು ಎಂದು ಹೇಳುತ್ತಿದ್ದು ನಂತರ ಲೋಕೇಶ್ ರವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ದಿನಾಂಕ 9-9-2016 ರಂದು ಬೆಳಿಗ್ಗೆ 8-00 ಗಂಟೆಗೆ ಸದರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು ಈತನ ವಾರಿಸುದಾರರು ಯಾರೂ ಇಲ್ಲದೆ ಇದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಕಳ್ಳಬಟ್ಟಿ ಸಾಗಾಟ:

      ಅಕ್ರಮ ಕಳ್ಳಬಟ್ಟಿ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶನಿವಾರಸಂತೆ ಠಾಣಾಧಿಕಾರಿ ಹೆಚ್ ಎಂ ಮರಿಸ್ವಾಮಿಯವರು ದಿನಾಂಕ 09.09.2016ರಂದು ರಾತ್ರಿ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಕೊಡ್ಲಿಪೇಟೆ ನಗರದಲ್ಲಿ ಗಸ್ತು ಕರ್ತವ್ಯದಲ್ಲಿರುವಾಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಕೊಡ್ಲಿಪೇಟೆ ಖ್ಯಾತೆ ಗ್ರಾಮಕ್ಕೆ ತೆರಳಿ ಸದರಿ ಗ್ರಾಮದಲ್ಲಿ ಆರೋಪಿ ಮೋಹನ ಎಂಬಾತ ಒಂದು ಬ್ಯಾಗಿನಲ್ಲಿ ಎರಡು ಬಾಟಲಿಗಳಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ತೆಗೆದುಕೊಂಡು ಕೊಡ್ಲಿಪೇಟೆ ನಗರಕ್ಕೆ ಮಾರಾಟ ಮಾಡಲು ಹೋಗುತ್ತಿದ್ದುದನ್ನು ಪತ್ತೆ ಹಚ್ಚಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.