Saturday, September 3, 2016

ಕಾರುಗಳ ಮುಖಾಮುಖಿ ಡಿಕ್ಕಿ:


     ವಿರಾಜಪೇಟೆ ತಾಲೂಕು,  ಅಮ್ಮತ್ತಿ ಗ್ರಾಮದ ನಿವಾಸಿ ಬುದ್ದಪಂಡ ಅಪ್ಪಣ್ಣಪ್ಪ ಎಂಬವರು ದಿನಾಂಕ 02.09.2016 ರಂದು ಸಮಯ 06.15 ಪಿ.ಎಂ. ಸಮಯದಲ್ಲಿ ವಿರಾಜಪೇಟೆ ನಗರದಿಂದ ಅಮ್ಮತ್ತಿ ಕಡೆಗೆ ತಮ್ಮ ಭಾಫ್ತು ಕೆ.ಎ.12 ಜಡ್.7849 ರಲ್ಲಿ ಹೋಗುತ್ತಿರುವಾಗ್ಗೆ ಅಮ್ಮತ್ತಿ ಕಡೆಯಿಂದ ಬಂದ ನ್ಯಾನೋ ಕಾರು ನಂ ಕೆ.ಎ.12 ಪಿ 7836  ಚಾಲಕನು ದುಡುಕಿನಿಂದ ಎದುರುಗಡೆಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಬುದ್ದಪಂಡ ಅಪ್ಪಣ್ಣಪ್ಪನವರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.