Friday, September 2, 2016

             -ಪೊಲೀಸ್ ಪ್ರಕಟಣೆ-

        ದಿನಾಂಕ 03/09/2016 ರಂದು ಕೈಲ್ ಮುಹೂರ್ತ , ದಿನಾಂಕ 04-05/09/2016 ರಂದು ಗೌರಿ ಗಣೇಶ ಹಬ್ಬದ ಸಂಬಂಧ ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ, ತದನಂತರ ಗಣೇಶ ವಿಸರ್ಜನಾ ಕಾರ್ಯಕ್ರಮವಿದ್ದು, ದಿನಾಂಕ 12/09/2016 ರಂದು ಬಕ್ರೀದ್ ಹಬ್ಬ ಆಚರಣೆ ಇದ್ದು ಈ ಸಂಬಂಧ ಎಲ್ಲಾ ಗಣಪತಿ ಸಮಿತಿಯವರ ಮತ್ತು ವಿವಿಧ ಕೋಮಿನ ಮುಖಂಡರುಗಳ ಸಭೆಗಳನ್ನು ನಡೆಸಿದ್ದು, ಸಾರ್ವಜನಿಕ ಶಾಂತಿ ಭಂಗವುಂಟಾಗದಂತೆ ಹಬ್ಬ ಆಚರಣೆ ಮಾಡುವಂತೆ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಕೈಲು ಮುಹೂರ್ತ, ಗೌರಿ-ಗಣೇಶ, ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಬಂಟಿಂಗ್ಸ್ ಮತ್ತು ಬ್ಯಾನರ್ ಗಳನ್ನು ಕಟ್ಟುವ ಬಗ್ಗೆ ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸದರಿ ಹಬ್ಬಗಳ ಆಚರಣೆಗಳ ವೇಳೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಕೊಡಗಿನ ಜನತೆಯಲ್ಲಿ ಮನವಿ ಮಾಡಲಾಗಿದೆ.



-----------------------------------------------------------------------------------------------------------------------

ಚಿನ್ನ ಪಾಲಿಶ್ ಮಾಡುವುದಾಗಿ ಹೇಳಿ ಮೋಸ:


ವಿರಾಜಪೇಟೆ ತಾಲೂಕು ಕಾವಾಡಿ ಗ್ರಾಮದ ನಿವಾಸಿ ನೆಲ್ಲಮಕ್ಕಡ ನಾಣಯ್ಯ @ ದಿನು ಎಂಬವರ ಮನೆಗೆ ದಿನಾಂಕ 01-09-16ರಂದು ಅಪರಾಹ್ನ 2-30 ಗಂಟೆಗೆ ಯಾರೋ ಇಬ್ಬರು ಅಪರಿಚಿತ ಹುಡುಗರು ಬಂದು ನಾವು ಚಿನ್ನ ಪಾಲಿಷ್ ಮಾಡುವುದಾಗಿಯೂ, ನಿಮ್ಮ ಮನೆಯಲ್ಲಿ ಚಿನ್ನ ಇದ್ದರೆ ಚಿನ್ನ ಪಾಲಿಷ್ ಮಾಡಿಕೊಡುವುದಾಗಿ ತಿಳಿಸಿದ ಮೇರೆ ಪಿರ್ಯಾದಿ ನೆಲ್ಲಮಕ್ಕಡ ನಾಣಯ್ಯ ನವರ ಪತ್ನಿ ಆಕೆಯ ಕುತ್ತಿಗೆಯಲ್ಲಿದ್ದ ಮುಕ್ಕಾಲು ಪವನಿನ ಚಿನ್ನದ ಕರಿಮಣಿ ಸರವನ್ನು ಅವರುಗಳಿಗೆ ಬಿಚ್ಚಿಕೊಟ್ಟಿದ್ದು, ಸದರಿಯವರು ಅದರ ಮೇಲೆ ರಾಯನಿಕ ಪದಾರ್ಥವನ್ನು ಹಾಕಿ ಚಿನ್ನದ ಸರದ ಬಣ್ಣ ಬದಲಾಯಿಸಿ ನಂತರ ಸರವನ್ನು ತೆಗೆದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳ ಪೈಕಿ ಒಬ್ಬಾತ ಸಿಕಂದರ್ ಕುಮಾರ್ ಎಂಬವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ,