Tuesday, September 6, 2016

ಆನೆ ದಾಳಿ ಬೈಕ್ ಸವಾರ ಸಾವು:
    ದಿನಾಂಕ: 05/09/2016 ರಂದು ಸಮಯ ಬೆಳಗ್ಗೆ 10.00 ಗಂಟೆ ಸಮಯದಲ್ಲಿ ಸೋಮವಾರಪೇಟೆ ತಾಲೂಕು ಕೂಡ್ಲೂರು ಚೆಟ್ಟಳ್ಳಿ ಗ್ರಾಮದ ನಿವಾಸಿ ಅರುಳ್ ಜೋಸೇಫ್ @ ಮಣಿ ಎಂಬುವವರು ಪಾಲಿಬೆಟ್ಟದಿಂದ ಸಿದ್ದಾಪುರದ ಕಡೆಗೆ KA12-J8365 ರ ಮೋಟಾರು ಸೈಕಲಿನಲ್ಲಿ ಮೇಕೂರು ಹೊಸ್ಕೇರಿ ಗ್ರಾಮದ ಉಡ್ ಲ್ಯಾಂಡ್ ಕಾಫಿ ತೋಟದ ಪಕ್ಕದಲ್ಲಿ ಹಾದು ಹೋಗುವ ತಾರು ರಸ್ತೆಗೆ ತಲುಪುವಾಗ್ಗೆ ತೋಟದೊಳಗಿಂದ ಬಂದ ಕಾಡಾನೆಯೊಂದು ಬೈಕ್ ಸವಾರ ಅರುಳ್ ಜೋಸೆಫ್ ರವರ ಮೇಲೆದಾಳಿ ಮಾಡಲು ಬೆನ್ನಟ್ಟಿದಾಗ ಬೈಕ್ ಸವಾರನು ಬೈಕನ್ನು ಬಿಟ್ಟು ಉಡ್ ಲ್ಯಾಂಡ್ ಕಾಫಿ ತೋಟದೊಳಗೆ ಓಡಿದಾಗ ಕಾಡಾನೆಯು ಬೈಕ್ ಸವಾರನನ್ನು ಬೆನ್ನಟ್ಟಿ ಕಾಳಿನಿಂದ ಮೆಟ್ಟಿ ಗಾಯಗೊಳಿಸಿದ್ದು, ಸದರಿಯವರನ್ನು ಚಿಕಿತ್ಸೆಗೆ ಸಿದ್ದಾಪುರ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಳೆಗೆ ಬಿದ್ದು ವ್ಯಕ್ತಿಯ ಆತ್ಮಹತ್ಯೆ:

ಮಡಿಕೇರಿ ತಾಲೋಕು ಕೊಂಡಂಗೇರಿ ಗ್ರಾಮದ ನಿವಾಸಿ ಮಹಮ್ಮದ್ ಶರೀಫ್ ಎಂಬವರ ಸಹೋದರನಾದ 47 ವರ್ಷ ಪ್ರಾಯದ ಹಸೈನಾರ್ ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು ದಿನಾಂಕ 4-9-2016 ರಂದು ಸ್ವಂತ ಮನೆಯಿಂದ ಬಾಡಿಗೆ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಬಲಮುರಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಹೋದರ ಮಹಮ್ಮದ್ ಶರೀಫ್ ರವರು ನೀಡಿದ ದೂರಿನ ಮೇರೆಗೆ ನಾಪೋಕಲ್ಉ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.